ಮುಖಪುಟ ಆಂಧ್ರಪ್ರದೇಶದಲ್ಲಿ ವ್ಯಕ್ತಿಯನ್ನು ಥಳಿಸಿದ ವೀಡಿಯೋಗೆ ತಪ್ಪಾದ ಕೋಮು ನಿರೂಪಣೆ ನೀಡಲಾಗಿದೆ

ಆಂಧ್ರಪ್ರದೇಶದಲ್ಲಿ ವ್ಯಕ್ತಿಯನ್ನು ಥಳಿಸಿದ ವೀಡಿಯೋಗೆ ತಪ್ಪಾದ ಕೋಮು ನಿರೂಪಣೆ ನೀಡಲಾಗಿದೆ

ಮೂಲಕ: ರಾಜೇಶ್ವರಿ ಪರಸ

ನವೆಂಬರ್ 8 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಮುಸ್ಲಿಂ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಜೈ ಶ್ರೀ ರಾಮ್ ಎಂದು ಜಪಿಸುವಂತೆ ಒತ್ತಾಯಿಸಿದ್ದನ್ನು ವೀಡಿಯೋ ತೋರಿಸುತ್ತದೆ ಎಂದು ಹಂಚಿಕೊಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್. ವ್ಯಕ್ತಿಯೊಬ್ಬನನ್ನು ಹೊಡೆದು ಬಲವಂತವಾಗಿ ಜೈ ಶ್ರೀ ರಾಮ್' ಎಂದು ಕೂಗಿಸಿದ ವೈರಲ್ ವೀಡಿಯೋಗೆ ತಪ್ಪಾದ ಕೋಮು ಹೇಳಿಕೆ ನೀಡಲಾಗಿದೆ. (ಮೂಲ: ಇನ್‌ಸ್ಟಾಗ್ರಾಮ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೀಡಿಯೋದಲ್ಲಿ ಥಳಿಸಿಕೊಂಡ ವ್ಯಕ್ತಿ ಪೋಲುಮತಿ ದಿಲೀಪ್ ಮತ್ತು ಆತ ಪರಿಶಿಷ್ಟ ಜಾತಿಗೆ ಸೇರಿದವನು ಎಂದು ಸಬ್ ಇನ್ಸ್‌ಪೆಕ್ಟರ್ ಇಸ್ರೇಲ್ ಖಚಿತಪಡಿಸಿದ್ದಾರೆ.

ಹೇಳಿಕೆ ಏನು?

ಆಂಧ್ರಪ್ರದೇಶದಲ್ಲಿ ವ್ಯಕ್ತಿಯೊಬ್ಬನು 'ಜೈ ಶ್ರೀ ರಾಮ್' ಎಂದು ಜಪಿಸುತ್ತಿರುವುದನ್ನು ಮತ್ತು ಜನರು ಅವನನ್ನು ಥಳಿಸುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಘೋಷಣೆಯನ್ನು ಹೇಳುತ್ತಲೇ ಇರುವಾಗ ಆ ವ್ಯಕ್ತಿಗೆ ಜನಸಮೂಹ ಪದೇ ಪದೇ ಪ್ರಶ್ನೆಗಳನ್ನು ಕೇಳುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದು. 

"ಆಂಧ್ರಪ್ರದೇಶದ ಭೀಮಾವರಂನಲ್ಲಿ ಹಿಂದುತ್ವದ ಗುಂಪೊಂದು ಮುಸ್ಲಿಂ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಜೈ ಶ್ರೀ ರಾಮ್ ಎಂದು ಕೂಗುವಂತೆ ಒತ್ತಾಯಿಸಲಾಯಿತು. #ಭಾರತ (sic)" ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ. ವೀಡಿಯೋ ಪ್ರಕಟಿಸುವ ಸಮಯದಲ್ಲಿ ೧೫,೭೫೭ ಲೈಕ್ ಗಳನ್ನು ಹೊಂದಿತ್ತು. ಅದೇ ರೀತಿಯ ಹೇಳಿಕೆಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಎಕ್ಸ್ (ಹಿಂದೆ ಟ್ವಿಟರ್) ನಲ್ಲಿಯೂ ಕೂಡಾ ಕೋಮು ನಿರೂಪಣೆಯೊಂದಿಗೆ ಈ ವೀಡಿಯೋ ವೈರಲ್ ಆಗಿದೆ.

ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ ನಲ್ಲಿನ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಇನ್‌ಸ್ಟಾಗ್ರಾಮ್/ಫೇಸ್‌ಬುಕ್‌/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ವೀಡಿಯೋದಲ್ಲಿರುವ ವ್ಯಕ್ತಿ ಹಿಂದೂ, ಮುಸ್ಲಿಂ ಅಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಭೀಮಾವರಂ ೨ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಆತನ ಹೆಸರು ಪರಿಶಿಷ್ಟ ಜಾತಿಗೆ ಸೇರಿದ ಪೋಲುಮತಿ ದಿಲೀಪ್ ಎಂದು ನಮೂದಿಸಲಾಗಿದೆ. 

ನಾವು ಕಂಡುಕೊಂಡದ್ದು ಏನು? 

ನವೆಂಬರ್ ೧, ೨೦೨೪ ರಂದು ಇಂಗ್ಲಿಷ್ ಸುದ್ದಿ ವಾಹಿನಿ ಎನ್‌ಡಿಟಿವಿ ಅಪ್‌ಲೋಡ್ ಮಾಡಿದ ಅದೇ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂ ನಗರದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೇವಾಲಯದ ಅಪವಿತ್ರತೆಯ ಶಂಕೆಯ ಮೇಲೆ ಸ್ಥಳೀಯರು ವ್ಯಕ್ತಿಯೊಬ್ಬನನ್ನು ಥಳಿಸಿದ್ದಾರೆ ಎಂದು ಅದು ಸೇರಿಸಿದೆ.

ಭೀಮಾವರಂ ೨ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಶ್ಚಿಮ ಗೋದಾವರಿ ಪೊಲೀಸರು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಎಕ್ಸ್ ಪೋಷ್ಟ್ ಅನ್ನು ಸಹ ನಾವು ಕಂಡುಕೊಂಡಿದ್ದೇವೆ. ನಾವು ಎಫ್‌ಐಆರ್ ಅನ್ನೂ ಸಹ ಕಂಡುಕೊಂಡಿದ್ದೇವೆ (ಇಲ್ಲಿ ಆರ್ಕೈವ್ ಮಾಡಲಾಗಿದೆ), ಇದು ವೈರಲ್ ವೀಡಿಯೋದಲ್ಲಿ ಥಳಿಸಲಾದ  ವ್ಯಕ್ತಿಯನ್ನು ಮಾಲಾ ಪರಿಶಿಷ್ಟ ಜಾತಿಗೆ (ಎಸ್‌ಸಿ) ಸೇರಿದ ೩೫ ವರ್ಷದ ಪೊಲುಮತಿ ದಿಲೀಪ್ ಎಂದು ಹೆಸರಿಸಿದೆ. ಅಕ್ಟೋಬರ್ ೩೧ ರಂದು ದಿಲೀಪ್ ರಾಮಾಲಯದ ದೇವಸ್ಥಾನದ ಬಳಿ ಬಂದು ಜನರ ಮೇಲೆ ನಿಂದನೆ ಮಾಡಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಎಫ್‌ಐಆರ್‌ನಲ್ಲಿ ದೇವಸ್ಥಾನದ ಅರ್ಚಕರನ್ನು ದೂರುದಾರ ಎಂದು ಹೆಸರಿಸಲಾಗಿದೆ. 

ಲಾಜಿಕಲಿ ಫ್ಯಾಕ್ಟ್ಸ್ ಗೆ ಹೆಸರು ಹೇಳಲು ಇಚ್ಛಿಸದ ಅರ್ಚಕರೊಂದಿಗೆ ಮಾತನಾತು. ಮುಸ್ಲಿಂ ಅಲ್ಲದ ದಿಲೀಪ್ ದೇವಸ್ಥಾನದ ಬಳಿ ತ್ಯಾಜ್ಯ ಕಾಗದ ಮತ್ತು ಬಾಟಲಿಗಳನ್ನು ಸಂಗ್ರಹಿಸುತ್ತಿದ್ದ ಎಂದು ವಿವರಿಸಿದರು. ಅಕ್ಟೋಬರ್ ೩೧ ರಂದು, ಅಪರಿಚಿತ ವ್ಯಕ್ತಿಗಳಿಂದ ಹಲ್ಲೆಗೊಳಗಾದ ನಂತರ, ದಿಲೀಪ್ ದೇವಸ್ಥಾನದ ದೇವರಿಗೆ "ನಿಂದನೆಯ ಟಿಪ್ಪಣಿ" ಅನ್ನು ಬಿಟ್ಟರು. ಆತನ ನಡವಳಿಕೆಯು ಅನುಮಾನಾಸ್ಪದವಾಗಿ ಕಂಡುಬಂದಿತು ಮತ್ತು ಪ್ರಶ್ನಿಸಿದಾಗ, ಅವನು "ಅಹಂಕಾರದಿಂದ" ಪ್ರತಿಕ್ರಿಯಿಸಿದ್ದನು. ಆಗ ಸ್ಥಳೀಯರು ಆತನ ಮೇಲೆ ಹಲ್ಲೆ ನಡೆಸಿದ್ದು, ಘಟನೆ ವೀಡಿಯೋದಲ್ಲಿ ಸೆರೆಯಾಗಿದೆ. ದಿಲೀಪ್  ಟಿಪ್ಪಣಿಯನ್ನು ಬರೆದಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಅರ್ಚಕರು ಹೇಳಿದರು. ಅಲ್ಲದೆ ದಿಲೀಪ್ ದೇವಸ್ಥಾನ ಪ್ರವೇಶಿಸಿಲ್ಲ ಎಂದು ಖಚಿತಪಡಿಸಿದ್ದಾರೆ. ದಿಲೀಪ್‌  ಮಾನಸಿಕ ಆರೋಗ್ಯದ ಸ್ಥಿತಿಯನ್ನು ಹೊಂದಿದ್ದಾರೆಂದು ಆತನ ಸಹೋದರನು ಹೇಳಿದರು ಮತ್ತು ನಂತರ ಅವರನ್ನು ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು ಎಂದು ಅವರು ತಿಳಿಸಿದರು.

ನಂತರ ನಾವು ಭೀಮಾವರಂ ೨ ಪಟ್ಟಣದ ಸಬ್ ಇನ್ಸ್‌ಪೆಕ್ಟರ್ (ಎಸ್ಐ) ಇಸ್ರೇಲ್ ಅವರನ್ನು ಸಂಪರ್ಕಿಸಿದ್ದೇವೆ, ಅವರು ದಿಲೀಪ್ ಮುಸ್ಲಿಂ ಎಂಬ ಹೇಳಿಕೆಯನ್ನು ತಳ್ಳಿಹಾಕಿದರು. ಈತ ಹಿಂದೂ ಆಗಿದ್ದು, ರಾವುಲಪಾಲೆಂ ಮೂಲದವನಾಗಿದ್ದು, ಭೀಮಾವರಂನಲ್ಲಿ (ತ್ಯಾಜ್ಯ) ಪೇಪರ್ ಎತ್ತಿಕೊಂಡು ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಈತ ಧರ್ಮದ ಬಗ್ಗೆ ವಿಚಾರಿಸಿದಾಗ ಆತ ಹಿಂದೂ ಎಂದು ತಿಳಿದು ಬಂದಿದೆ.

ಆರಂಭದಲ್ಲಿ ದಿಲೀಪ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎಂದು ಎಸ್‌ಐ ಇಸ್ರೇಲ್ ತಿಳಿಸಿದ್ದಾರೆ. ವೈದ್ಯರ ತಪಾಸಣೆ ಮತ್ತು ವರದಿಗಳ ನಂತರ, ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ದಿಲೀಪ್‌ನನ್ನು ವಿಶಾಕಪಟ್ಟಣಂನ ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಎಸ್‌ಐ ಹೇಳಿದರು.

ತೀರ್ಪು 

ಸ್ಪಷ್ಟವಾಗಿ, ವೈರಲ್ ವೀಡಿಯೋದಲ್ಲಿರುವ ವ್ಯಕ್ತಿಯನ್ನು ಪೋಲುಮತಿ ದಿಲೀಪ್ ಎಂದು ಗುರುತಿಸಲಾಗಿದೆ, ಅವರು ಪರಿಶಿಷ್ಟ ಜಾತಿಗೆ ಸೇರಿದವರು ಮತ್ತು ಮುಸ್ಲಿಂ ಅಲ್ಲ. 

(ವನಿತಾ ಗಣೇಶ್ ಅವರ ಇನ್ಪುಟ್ಸ್ ನೊಂದಿಗೆ)

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ) 

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ