ಮುಖಪುಟ ಡಿಆರ್ ಕಾಂಗೋದ ಕಿವು ಸರೋವರದಲ್ಲಿ ದೋಣಿ ಮಗುಚಿದ ವೀಡಿಯೋ ಗೋವಾದ ಘಟನೆ ಎಂದು ವೈರಲ್

ಡಿಆರ್ ಕಾಂಗೋದ ಕಿವು ಸರೋವರದಲ್ಲಿ ದೋಣಿ ಮಗುಚಿದ ವೀಡಿಯೋ ಗೋವಾದ ಘಟನೆ ಎಂದು ವೈರಲ್

ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ

ಅಕ್ಟೋಬರ್ 8 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಗೋವಾದಲ್ಲಿ ದೋಣಿಯೊಂದು ಓವರ್ ಲೋಡ್ ಆಗಿ ಮಗುಚಿ ಬೀಳುತ್ತಿರುವುದನ್ನು ಈ ವೀಡಿಯೋ ತೋರಿಸುತ್ತದೆ ಎಂದು ಹಂಚಿಕೊಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್. ಗೋವಾದಲ್ಲಿ ಓವರ್ ಲೋಡ್ ಆಗಿ ದೋಣಿಯೊಂದು ಮಗುಚಿ ಬೀಳುತ್ತಿರುವ ದೃಶ್ಯವನ್ನು ವೀಡಿಯೋ ಚಿತ್ರಿಸುತ್ತದೆ ಎಂದ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು False

ಮಗುಚಿ ಬೀಳುತ್ತಿರುವ ದೋಣಿಯ ಈ ವೀಡಿಯೋ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿರುವ ಕಿವು ಸರೋವದಲ್ಲಿ ಚಿತ್ರೀಕರಿಸಲಾಗಿದೆ, ಗೋವಾದಲ್ಲಿ ಅಲ್ಲ.

ಹೇಳಿಕೆ ಏನು?

ಭಾರತದ ಕರಾವಳಿ ರಾಜ್ಯವಾದ ಗೋವಾದಲ್ಲಿ ದೋಣಿ ಮುಳುಗಿದ ಘಟನೆಯನ್ನು ಚಿತ್ರಿಸುತ್ತದೆ ಎಂಬ ಹೇಳಿಕೆಯೊಂದಿಗೆ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ೫೩-ಸೆಕೆಂಡ್‌ಗಳ ಕ್ಲಿಪ್ ನಲ್ಲಿ, ತೋರಿಕೆಯಲ್ಲಿ ಇನ್ನೊಂದು ಹಡಗಿನಿಂದ ಚಿತ್ರೀಕರಿಸಲಾಗಿದೆ, ದೂರದಲ್ಲಿ ಸಮೀಪಿಸುತ್ತಿರುವ ಪ್ರಯಾಣಿಕರಿಂದ ತುಂಬಿದ ನೀಲಿ ಮತ್ತು ಬಿಳಿ ದೋಣಿಯನ್ನು ತೋರಿಸುತ್ತದೆ. ಕ್ಷಣಗಳ ನಂತರ, ದೋಣಿಯು ಅಲುಗಾಡಲು ಪ್ರಾರಂಭಿಸುತ್ತದೆ ಮತ್ತು ಅಂತಿಮವಾಗಿ ಮುಳುಗುತ್ತದೆ, ವೀಕ್ಷಿಸುತ್ತಿರುವ ಹಡಗಿನಲ್ಲಿದ್ದವರಿಂದ ಕಿರುಚಾಟಗಳು ಕೇಳಿಸುತ್ತವೆ.

ಫೇಸ್‌ಬುಕ್‌ ಪೋಷ್ಟ್ ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು ಅದರ ಶೀರ್ಷಿಕೆ ಹೀಗಿದೆ, "ಇಂದು ಗೋವಾ ಅಪಘಾತದಲ್ಲಿ 23 ಮೃತದೇಹಗಳು 40 ಜನರನ್ನು ರಕ್ಷಿಸಲಾಗಿದೆ ಮತ್ತು 64 ಮಂದಿ ನಾಪತ್ತೆಯಾಗಿದ್ದಾರೆ.  ಓವರ್ ಲೋಡ್ ಮಾಡುವಲ್ಲಿ ಬೋಟ್ ಮಾಲೀಕರ ದುರಾಸೆ, ಪ್ರಯಾಣಿಕರಿಗೂ ಅತಿಯಾದ ಆತ್ಮವಿಶ್ವಾಸ.  ತುಂಬಾ ದುಃಖ, ದುರಂತ." ಇದೇ ರೀತಿಯ ಹೇಳಿಕೆಯೊಂದಿಗೆ ಹಂಚಿಕೊಂಡ ಇತರ ಪೋಷ್ಟ್ ಗಳ ಆರ್ಕೈವ್ ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ವೀಡಿಯೋವನ್ನು ಹಂಚಿಕೊಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್ .
(ಮೂಲ: ಫೇಸ್‌ಬುಕ್/ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ವೀಡಿಯೋ ಗೋವಾದದ್ದಲ್ಲ. ಈ ಘಟನೆಯು ಅಕ್ಟೋಬರ್ ೩, ೨೦೨೪ ರಂದು ಮಧ್ಯ ಆಫ್ರಿಕಾದ ದೇಶವಾದ ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಸಂಭವಿಸಿದೆ.

ನಾವು ಕಂಡುಕೊಂಡಿದ್ದು ಏನು?

ವೈರಲ್ ವೀಡಿಯೋದ ಮೇಲೆ  ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿನ ಘಟನೆಯ ಕುರಿತು ನಾವು ಹಲವಾರು ಸುದ್ದಿ ವರದಿಗಳನ್ನು ಕಂಡುಕೊಂಡೆವು. ಅಕ್ಟೋಬರ್ ೪, ೨೦೨೪ ರಂದು ಸಿಜಿಟಿಎನ್ ಆಫ್ರಿಕಾದಿಂದ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅಪ್‌ಲೋಡ್ ಮಾಡಲಾದ ಒಂದು ಗಮನಾರ್ಹವಾದ ವರದಿಯು "ಡಿಆರ್ ಕಾಂಗೋದ ಲೇಕ್ ಕಿವುನಲ್ಲಿ ದೋಣಿ ಮುಳುಗಿದ ನಂತರ ಕನಿಷ್ಠ ೭೮ ಮಂದಿ ಸತ್ತರು" ಎಂಬ ಶೀರ್ಷಿಕೆಯನ್ನು ಹೊಂದಿತ್ತು. ಈ ವರದಿಯು ಕ್ಲಿಪ್‌ನ ೨೩-ಸೆಕೆಂಡ್ ಮತ್ತು ೪೨-ಸೆಕೆಂಡ್ ಮಾರ್ಕ್‌ನ ನಡುವೆ ದೋಣಿ ಮಗುಚಿದ ಇದೇ ರೀತಿಯ ತುಣುಕನ್ನು ಒಳಗೊಂಡಿದೆ.

ಅಕ್ಟೋಬರ್ ೩ ರಂದು ೨೫೦ ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿತು, ಇದರ ಪರಿಣಾಮವಾಗಿ ಕನಿಷ್ಠ ೭೮ ಸಾವಿನ ಸಂಖ್ಯೆ ದೃಢೀಕರಿಸಲ್ಪಟ್ಟಿದೆ, ಇನ್ನೂ ಅನೇಕರು ಪತ್ತೆಯಾಗಿಲ್ಲ ಎಂದು ವರದಿ ಸೂಚಿಸಿದೆ. ಪ್ರತ್ಯಕ್ಷದರ್ಶಿಗಳು ಹಡಗನ್ನು ಓವರ್ ಲೋಡ್ ಮಾಡಲಾಗಿತ್ತು ಎಂದು ವಿವರಿಸಿದ್ದರು ಮತ್ತು ಬಲವಾದ ಅಲೆಗಳು ಕೆಲವು ಪ್ರಯಾಣಿಕರು ಹತಾಶೆಯಿಂದ ಮೇಲಕ್ಕೆ ಜಿಗಿಯಲು ಒತ್ತಾಯಿಸಿದವು ಎಂದು ವರದಿ ಮಾಡಲಾಗಿದೆ. 

ಬದುಕುಳಿದವರನ್ನು ಡಿ ಕೆಶೆರೊ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ವರದಿ ಹೇಳಿದೆ. ಮಧ್ಯ ಆಫ್ರಿಕಾದಲ್ಲಿ ಹಡಗುಗಳನ್ನು ಓವರ್ ಲೋಡ್ ಮಾಡುವ ನಡೆಯುತ್ತಿರುವ ಸಮಸ್ಯೆಯನ್ನು ಎತ್ತಿ ತೋರಿಸಿದೆ ಮತ್ತು ಘಟನೆಯ ತನಿಖೆಯು ಪ್ರಸ್ತುತ ನಡೆಯುತ್ತಿದೆ ಎಂದು ಉಲ್ಲೇಖಿಸಲಾಗಿದೆ.

ಹೆಚ್ಚುವರಿಯಾಗಿ, ಅಕ್ಟೋಬರ್ ೩ ರ ಅಲ್ ಜಜೀರಾ ವೀಡಿಯೋ ವರದಿ (ಇಲ್ಲಿ ಆರ್ಕೈವ್ ಮಾಡಲಾಗಿದೆ), ಅಸೋಸಿಯೇಟೆಡ್ ಪ್ರೆಸ್‌ನ ವರದಿಯೊಂದಿಗೆ, ಈ ಘಟನೆಯು  ಕಾಂಗೋದ ಕಿವು ಸರೋವರದಲ್ಲಿ ಸಂಭವಿಸಿದೆ ಎಂದು ದೃಢಪಡಿಸಿದೆ. ನೌಕೆ, ಎಂವಿ ಮೆರ್ಡಿ, ಮಿನೋವಾದಿಂದ ಸರೋವರವನ್ನು ದಾಟಿದ ನಂತರ ಗೋಮಾ ಬಳಿಯ ಕಿಟುಕು ಬಂದರಿನಲ್ಲಿ ಡಾಕ್ ಮಾಡಲು ಹೊರಟಿದ್ದಾಗ ಅಪಘಾತ ಸಂಭವಿಸಿದೆ ಎಂದು ದಿ ಗಾರ್ಡಿಯನ್ ಗಮನಿಸಿದೆ. ದಿ ಗಾರ್ಡಿಯನ್ ಸಂದರ್ಶಿಸಿದ ಬದುಕುಳಿದವರ ಪ್ರಕಾರ, ದೋಣಿ ೨೭೮ ಜನರನ್ನು ಹೊತ್ತೊಯ್ಯುತ್ತಿತ್ತು, ಆದರೆ ಕೇವಲ ೮೦ ಜನರನ್ನು ಹಿಡಿದಿಡಲು ವಿನ್ಯಾಸಗೊಳಿಸಲಾಗಿತ್ತು. 

ವೈರಲ್ ವೀಡಿಯೋ ಗೋವಾದಿಂದಲ್ಲ, ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕ್ಯಾಂಗೋ ದಿಂದ ಬಂದಿದೆ ಎಂದು ಗೋವಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅಕ್ಟೋಬರ್ ೫ ರಂದು, ಅವರು ಎಕ್ಸ್ ನಲ್ಲಿ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪೋಲೀಸರು, “ಅಧಿಕೃತ ಸ್ಪಷ್ಟೀಕರಣ: ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ವೀಡಿಯೋ ಗೋವಾದ ತೀರದಲ್ಲಿ ದೋಣಿಯೊಂದು ಮುಳುಗಿದೆ ಎಂದು ಹೇಳುತ್ತದೆ. ಇದು ಸುಳ್ಳು. ಆಫ್ರಿಕಾದ ಕಾಂಗೋದ ಗೋಮಾದಲ್ಲಿ ಈ ಘಟನೆ ನಡೆದಿದೆ. ದಯವಿಟ್ಟು ಪರಿಶೀಲಿಸದ ಸುದ್ದಿಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ.”

ವೈರಲ್ ವೀಡಿಯೋ ಗೋವಾದಿಂದಲ್ಲ, ಆದರೆ ಆಫ್ರಿಕಾದ ಕಾಂಗೋದಲ್ಲಿ ನಡೆದ ಘಟನೆ ಎಂದು ಸ್ಪಷ್ಟಪಡಿಸುವ ಗೋವಾ ಪೊಲೀಸರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್)


ಓ ಹೆರಾಲ್ಡೊ ಗೋವಾ (ಇಲ್ಲಿ ಆರ್ಕೈವ್ ಮಾಡಲಾಗಿದೆ), ಗೋವಾದ ಸುದ್ದಿವಾಹಿನಿ, ಕೋಸ್ಟ್ ಗಾರ್ಡ್ ಮತ್ತು ಗೋವಾ ಪೊಲೀಸರೊಂದಿಗೆ ಮಾತನಾಡಿ ವೀಡಿಯೋ ನಕಲಿ ಎಂದು ದೃಢಪಡಿಸಿದೆ. ಅಕ್ಟೋಬರ್ ೨೦೨೪ ರ ಹೊತ್ತಿಗೆ, ಈ ಪ್ರದೇಶಕ್ಕೆ ತಪ್ಪಾಗಿ ಕಾರಣವಾದ ವೈರಲ್ ವೀಡಿಯೋ ಘಟನೆಯನ್ನು ಹೊರತುಪಡಿಸಿ, ಗೋವಾದಲ್ಲಿ ದೋಣಿ ಅಪಘಾತಗಳ ಯಾವುದೇ ವರದಿಗಳಿಲ್ಲ.

ತೀರ್ಪು

ವೈರಲ್ ವೀಡಿಯೋವನ್ನು ಗೋವಾದಲ್ಲಿ ದೋಣಿ ಅಪಘಾತವನ್ನು ಚಿತ್ರಿಸುವಂತೆ ತಪ್ಪಾಗಿ ನಿರೂಪಿಸಲಾಗಿದೆ; ಆದರೆ, ಈ ಘಟನೆಯು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಸಂಭವಿಸಿದೆ. ಕಿವು ಸರೋವರದಲ್ಲಿ ಓವರ್ ಲೋಡ್ ದೋಣಿಯೊಂದು ಮಗುಚಿ ಬೀಳುವುದನ್ನು ತುಣುಕಿನಲ್ಲಿ ತೋರಿಸಲಾಗಿದೆ, ಇದರ ಪರಿಣಾಮವಾಗಿ ಕನಿಷ್ಠ ೭೮ ಮಂದಿ ಸಾವನ್ನಪ್ಪಿದ್ದಾರೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ