ಮುಖಪುಟ ೨೦೧೯ ರ ಗೋರಖ್‌ಪುರದ ಸಿಎಎ ವಿರೋಧಿ ಪ್ರತಿಭಟನೆಗಳ ವೀಡಿಯೋ ಸಂಭಾಲ್‌ನ ಗಲಭೆಗೆ ಎಂದು ವೈರಲ್

೨೦೧೯ ರ ಗೋರಖ್‌ಪುರದ ಸಿಎಎ ವಿರೋಧಿ ಪ್ರತಿಭಟನೆಗಳ ವೀಡಿಯೋ ಸಂಭಾಲ್‌ನ ಗಲಭೆಗೆ ಎಂದು ವೈರಲ್

ಮೂಲಕ: ತಾಹಿಲ್ ಅಲಿ

ನವೆಂಬರ್ 26 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಗಲಭೆಕೋರರ ವಿರುದ್ಧ ಪೊಲೀಸ್ ಕ್ರಮವನ್ನು ವೀಡಿಯೋ ತೋರಿಸುತ್ತದೆ ಎಂದು ಹಂಚಿಕೊಂಡ ಪೋಷ್ಟ್ ಅನ್ನು ಈ ಚಿತ್ರವು ತೋರಿಸುತ್ತದೆ. ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದ ದಂಗೆಗಳು ಎಂದು ಗೋರಖ್‌ಪುರದ ಸಿಎಎ ವಿರೋಧಿ ಪ್ರತಿಭಟನೆಯ ತುಣುಕನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ೨೦೧೯ ರ ಸಿಎಎ ವಿರೋಧಿ ಪ್ರತಿಭಟನೆಯನ್ನು ವೀಡಿಯೋ ತೋರಿಸುತ್ತದೆ. ಇದು ಸಂಭಾಲ್‌ನ ಹಿಂಸಾಚಾರಕ್ಕೆ ಸಂಬಂಧಿಸಿಲ್ಲ.

ಹೇಳಿಕೆ ಏನು?

ದೊಡ್ಡ ಜನಸಮೂಹವನ್ನು ಪೊಲೀಸರು ಬೆನ್ನಟ್ಟಿ ಥಳಿಸುತ್ತಿರುವುದನ್ನು ತೋರಿಸುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಉತ್ತರ ಭಾರತದ ಉತ್ತರ ಪ್ರದೇಶದ ಸಂಭಾಲ್ ನಗರದಲ್ಲಿ ಇದನ್ನು ಚಿತ್ರೀಕರಿಸಲಾಗಿದೆ ಎಂಬ ಹೇಳಲಾಗಿದೆ.

ಎಕ್ಸ್ ಬಳಕೆದಾರರು ಈ ವೀಡಿಯೋವನ್ನು ಹಂಚಿಕೊಂಡಿದ್ದು ಅದರ ಶೀರ್ಷಿಕೆ ಹೀಗಿದೆ: “ಯುಪಿ ಪೊಲೀಸರು ಸಂಭಾಲ್‌ನಲ್ಲಿ ಗಲಭೆಕೋರರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಗಲಭೆಕೋರರ ವಿರುದ್ಧ ಪೊಲೀಸ್ ಕ್ರಮವನ್ನು ನೀವು ಬೆಂಬಲಿಸಿದರೆ ಮರು ಪೋಷ್ಟ್ ಮಾಡಿ. ” ಇದರ ಆರ್ಕೈವ್ ಮಾಡಿದ ಆವೃತ್ತಿಗಳು ಮತ್ತು ಅಂತಹ ಪೋಷ್ಟ್ ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಅಂತಹ ಒಂದು ಕನ್ನಡದಲ್ಲಿ ಹಂಚಿಕೊಂಡ ಪೋಷ್ಟ್ ಇಲ್ಲಿ ಲಭ್ಯವಿದೆ. 

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ನವೆಂಬರ್ ೨೪ ರಂದು ಸಂಭಾಲ್‌ನಲ್ಲಿ ಪ್ರತಿಭಟನಾಕಾರರು ಮತ್ತು ಅಧಿಕಾರಿಗಳ ನಡುವಿನ ಘರ್ಷಣೆಯ ನಂತರ ವೈರಲ್ ವೀಡಿಯೋ ಹರಡಲು ಪ್ರಾರಂಭಿಸಿತು, ಇದು ಐತಿಹಾಸಿಕ ಮೊಘಲ್-ಯುಗದ ಶಾಹಿ ಜಾಮಾ ಮಸೀದಿಯ ಸಮೀಕ್ಷೆಯಿಂದ ಪ್ರಚೋದಿಸಲ್ಪಟ್ಟಿದೆ. ಹಿಂಸಾಚಾರವು ಕನಿಷ್ಠ ನಾಲ್ಕು ವ್ಯಕ್ತಿಗಳ ಸಾವಿಗೆ ಕಾರಣವಾಯಿತು ಮತ್ತು ಸುಮಾರು ೨೦ ಪೊಲೀಸ್ ಅಧಿಕಾರಿಗಳಿಗೆ ಗಾಯಗಳಾಗಿವೆ.

ಆದರೆ, ನಮ್ಮ ತನಿಖೆಯ ಪ್ರಕಾರ ಈ ವೀಡಿಯೋ ಉತ್ತರ ಪ್ರದೇಶದ ಗೋರಖ್‌ಪುರದಿಂದ ಹುಟ್ಟಿಕೊಂಡಿದೆ ಮತ್ತು ೨೦೧೯ ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಯ ಸಮಯದಲ್ಲಿ ಚಿತ್ರೀಕರಿಸಲಾಗಿದೆ.


ವಾಸ್ತವಾಂಶಗಳೇನು?

ವೈರಲ್ ವೀಡಿಯೋದ ಕೀಫ್ರೇಮ್‌ಗಳ ಮೇಲೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಬಳಕೆದಾರರು ರಚಿಸಿದ ಕ್ಲಿಪ್‌ಗಳನ್ನು ಕಂಡುಕೊಂಡೆವು, ಇದು ಡಿಸೆಂಬರ್ ೨೦೧೯ ರಲ್ಲಿ ಗೋರಖ್‌ಪುರದಲ್ಲಿ ನಡೆದ ಸಿಎಎ  ವಿರೋಧಿ ಪ್ರತಿಭಟನೆಯ ದೃಶ್ಯವಾಗಿದೆ ಎಂದು ಸೂಚಿಸುತ್ತದೆ.

ಅಂತಹ ಒಂದು ವೀಡಿಯೋವನ್ನು  (ಇಲ್ಲಿ ಆರ್ಕೈವ್ ಮಾಡಲಾಗಿದೆ) ಎಕ್ಸ್ ಬಳಕೆದಾರ '@imMAK02' ಅವರು ಡಿಸೆಂಬರ್ ೩೧, ೨೦೧೯ ರಂದು ಪೋಷ್ಟ್ ಮಾಡಿದ್ದಾರೆ, "ಈ ವೀಡಿಯೋ ಉತ್ತರ ಪ್ರದೇಶದ ಗೋರಖ್‌ಪುರದಿಂದ ಬಂದಿದೆ. ಯುಪಿ ಪೊಲೀಸರು ನಿರಾಯುಧ ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಕ್ರೂರ ಬಲವನ್ನು ಬಳಸುತ್ತಿದ್ದಾರೆ." ವೈರಲ್ ವೀಡಿಯೋದಲ್ಲಿ ಗೋಚರಿಸುವ ಅದೇ ರಸ್ತೆ ಮತ್ತು ಅಂಗಡಿಗಳ ಪಕ್ಕದಲ್ಲಿ ಪೊಲೀಸರು ವ್ಯಕ್ತಿಗಳನ್ನು ಥಳಿಸುತ್ತಿರುವ ದೃಶ್ಯಗಳು ಸಂಭಾಲ್‌ನಲ್ಲಿನ ಇತ್ತೀಚಿನ ಘಟನೆಗಳಿಗೆ ಸಂಬಂಧಿಸಿಲ್ಲ ಎಂದು ದೃಢಪಡಿಸುತ್ತದೆ.

ಡಿಸೆಂಬರ್ ೨೦೧೯ ರಂದು ಹಂಚಿಕೊಂಡ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್. 
(ಮೂಲ: ಎಕ್ಸ್/@imMAK02/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಜನವರಿ ೨೫, ೨೦೨೦ ರಂದು ಫೇಸ್‌ಬುಕ್‌ನಲ್ಲಿ “ಜಡ್ಜ್ ಅಡ್ವೊಕೇಟ್ಸ್ ಪಿಡಿಟ್ ಆರ್ಗನೈಸೇಶನ್ - ಜೆಎಪಿಒ” ಹಂಚಿಕೊಂಡ ಮತ್ತೊಂದು ವೀಡಿಯೋ (ಇಲ್ಲಿ ಆರ್ಕೈವ್ ಮಾಡಲಾಗಿದೆ), ಈ ತುಣುಕನ್ನು ಉತ್ತರ ಪ್ರದೇಶದಲ್ಲಿ ಸಿಎಎ ವಿರೋಧಿ ಪ್ರತಿಭಟನೆಯ ಭಾಗವಾಗಿ ಗುರುತಿಸಲಾಗಿದೆ.

ಈ ಆವಿಷ್ಕಾರಗಳು ಈ ಟಿವಿ ಭಾರತ್ ಮತ್ತು ಯುಪಿ ತಕ್ ಸೇರಿದಂತೆ ಬಹು ಮಾಧ್ಯಮಗಳ ಪ್ರಕಟಿಸಿದ ವೀಡಿಯೋಗಳು ಬೆಂಬಲಿಸುತ್ತವೆ, ಇದು ವಿಭಿನ್ನ ಕೋನಗಳಿಂದ ಒಂದೇ ರೀತಿಯ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ). ಡಿಸೆಂಬರ್ ೨೦, ೨೦೧೯ ರಂದು ಲೈವ್ ಹಿಂದೂಸ್ತಾನ್ ಪೋಷ್ಟ್ ಮಾಡಿದ ವೀಡಿಯೋ ಶೀರ್ಷಿಕೆ (ಇಲ್ಲಿ ಆರ್ಕೈವ್ ಮಾಡಲಾಗಿದೆ), "ಗೋರಖ್‌ಪುರ: ಸಿಎಎ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಕಲ್ಲು ತೂರಾಟ ಮತ್ತು ಲಾಠಿ ಚಾರ್ಜ್‌ನಲ್ಲಿ ಇಬ್ಬರು ಗಾಯಗೊಂಡಿದ್ದಾರೆ (ಹಿಂದಿಯಿಂದ ಅನುವಾದಿಸಲಾಗಿದೆ)," ಎಂದು ಹೇಳುತ್ತದೆ ಮತ್ತು ವೈರಲ್ ಕ್ಲಿಪ್‌ನೊಂದಿಗೆ ಗಮನಾರ್ಹ ಹೋಲಿಕೆಗಳನ್ನು ಹೊಂದಿದೆ. ಇವುಗಳು ನೀಲಿ ಶಟರ್ ಮತ್ತು ಕೆಂಪು ಬ್ಯಾನರ್ ಹೊಂದಿರುವ ಬಿಳಿ ಕಟ್ಟಡವನ್ನು ಒಳಗೊಂಡಿವೆ, ಹಾಗೆಯೇ ಕ್ರಾಸಿಂಗ್‌ನಲ್ಲಿ ಅದೇ ಕಟ್ಟಡವು ಗೋಚರಿಸುವ ಲಂಬ ರಸ್ತೆಯಿಂದ ವೀಡಿಯೋವನ್ನು ಚಿತ್ರೀಕರಿಸಲಾಗಿದೆ.

೨೦೧೯ ರ ಸುದ್ದಿ ಔಟ್‌ಲೆಟ್‌ ನ ವೀಡಿಯೋ ಮತ್ತು ವೈರಲ್ ವೀಡಿಯೋದ ಹೋಲಿಕೆ. 
(ಮೂಲ: ಎಕ್ಸ್/ಲೈವ್ ಹಿಂದೂಸ್ತಾನ್/ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಹೆಚ್ಚಿನ ವಿಶ್ಲೇಷಣೆ ಮತ್ತು ಭೌಗೋಳಿಕ ಸ್ಥಳವನ್ನು ಉತ್ತರ ಪ್ರದೇಶದ ಗೋರಖ್‌ಪುರದ ನಖಾಸ್ ರಸ್ತೆ ಎಂದು ಗುರುತಿಸಲಾಗಿದೆ. "ಮಾ ವೈಷ್ಣೋ ಸ್ಟೇಷನರ್ಸ್ (ಹಿಂದಿಯಿಂದ ಅನುವಾದಿಸಲಾಗಿದೆ)" ಎಂದು ಓದುವ ಅಂಗಡಿಯ ಚಿಹ್ನೆ, ಹತ್ತಿರದ ಕಟ್ಟಡಗಳು, ವಿದ್ಯುತ್ ಕಂಬ ಮತ್ತು "ಮಂಗಳ ವೆಡ್ಡಿಂಗ್ ಕಲೆಕ್ಷನ್" ಬ್ಯಾನರ್ ಅನ್ನು ಪ್ರದರ್ಶಿಸುವ ನೀಲಿ-ಶಟರ್ ಅಂಗಡಿಯೊಂದಿಗೆ ಬಾಗಿದ ರಸ್ತೆಯಂತಹ ವಿಶಿಷ್ಟ ಅಂಶಗಳು ಗೂಗಲ್ ಸ್ಟ್ರೀಟ್ ವ್ಯೂ ಚಿತ್ರಗಳಿಗೆ ವೀಡಿಯೋ ಹೊಂದಾಣಿಕೆಯಾಗುತ್ತವೆ. 

ತೀರ್ಪು

ವೈರಲ್ ವೀಡಿಯೋ ಡಿಸೆಂಬರ್ ೨೦೧೯ ರಂದು ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಸಿ ಎಎ ವಿರೋಧಿ ಪ್ರತಿಭಟನೆಯನ್ನು ಚಿತ್ರಿಸುತ್ತದೆ. ಇದು ಸಂಭಾಲ್‌ನಲ್ಲಿನ ಇತ್ತೀಚಿನ ಹಿಂಸಾಚಾರಕ್ಕೆ ಸಂಬಂಧಿಸಿಲ್ಲ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ