ಮುಖಪುಟ ಹಳೆಯ ಚಿತ್ರವನ್ನು ಹಂಚಿಕೊಂಡು ಏಕತಾ ಪ್ರತಿಮೆಯಲ್ಲಿ ಕಾಣುವ ಬಿರುಕುಗಳು ಎಂದು ಹೇಳಲಾಗಿದೆ

ಹಳೆಯ ಚಿತ್ರವನ್ನು ಹಂಚಿಕೊಂಡು ಏಕತಾ ಪ್ರತಿಮೆಯಲ್ಲಿ ಕಾಣುವ ಬಿರುಕುಗಳು ಎಂದು ಹೇಳಲಾಗಿದೆ

ಮೂಲಕ: ರಜಿನಿ ಕೆ.ಜಿ

ಸೆಪ್ಟೆಂಬರ್ 10 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಏಕತೆಯ ಪ್ರತಿಮೆಯಲ್ಲಿ ಇತ್ತೀಚಿಗೆ ಕಂಡ ಬಿರುಕುಗಳನ್ನು ಚಿತ್ರವು ತೋರಿಸುತ್ತದೆ ಎಂದು ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್ ಅನ್ನು ಈ ಚಿತ್ರವು ತೋರಿಸುತ್ತದೆ. ಏಕತೆಯ ಪ್ರತಿಮೆಯಲ್ಲಿ ಇತ್ತೀಚಿಗೆ ಕಂಡ ಬಿರುಕುಗಳನ್ನು ಚಿತ್ರವು ತೋರಿಸುತ್ತದೆ ಎಂದು ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

೨೦೧೮ ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯು ಇನ್ನೂ ನಿರ್ಮಾಣ ಹಂತದಲ್ಲಿದ್ದಾಗ ಈ ಚಿತ್ರವನ್ನು ಸೆರೆಹಿಡಿದದ್ದು.

ಹೇಳಿಕೆ ಏನು?

ಭಾರತದ ಗುಜರಾತ್ ರಾಜ್ಯದಲ್ಲಿರುವ ಏಕತೆ ಪ್ರತಿಮೆಯ ಕೆಳಭಾಗದಲ್ಲಿ ನಿರ್ಮಾಣ ಕಾರ್ಯವನ್ನು ಕೈಗೊಳ್ಳುತ್ತಿರುವುದನ್ನು ತೋರಿಸುವ ಚಿತ್ರವನ್ನು ಅದು ಪ್ರತಿಮೆಯ ಮೇಲೆ ಕಂಡ ಬಿರುಕುಗಳನ್ನು ತೋರಿಸುತ್ತದೆ ಎಂದು ಹೇಳಿಕೊಳ್ಳಲಾಗುತ್ತಿದೆ. ಹಾಗು ಅದು ಯಾವಾಗ ಬೇಕಾದರೂ ಬೀಳಬಹುದು ಎಂದು ಪೋಷ್ಟ್ ಗಳಲ್ಲಿ ಹೇಳಲಾಗಿದೆ. ಏಕತೆಯ ಪ್ರತಿಮೆಯು ನರ್ಮದಾ ನದಿಯ ಉದ್ದಕ್ಕೂ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೧೮೩ ಮೀಟರ್ ಪ್ರತಿಮೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ ೩೧, ೨೦೧೮ ರಂದು ಪ್ರತಿಮೆಯನ್ನು ಉದ್ಘಾಟಿಸಿದ್ದರು. 

ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಬಳಕೆದಾರರೊಬ್ಬರು ಈ ಚಿತ್ರವನ್ನು ಹಂಚಿಕೊಂಡಿದ್ದು ಅದರ ಶೀರ್ಷಿಕೆ ಹೀಗಿದೆ: "ಇದು ಯಾವಾಗ ಬೇಕಾದರೂ ಬೀಳಬಹುದು. ಬಿರುಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿವೆ (ಹಿಂದಿಯಿಂದ ಅನುವಾದಿಸಲಾಗಿದೆ)." ಪೋಷ್ಟ್ ಏಕತಾ  ಪ್ರತಿಮೆಯ ಎರಡು ಚಿತ್ರಗಳನ್ನು ಹೊಂದಿದ್ದು; ಒಂದು ಪ್ರತಿಮೆಯ ವೈಮಾನಿಕ ನೋಟವನ್ನು ತೋರಿಸುತ್ತದೆ, ಮತ್ತು ಇನ್ನೊಂದು ಪ್ರತಿಮೆಯ ಪಾದಗಳಲ್ಲಿ ನಿರ್ಮಾಣವನ್ನು ತೋರಿಸುತ್ತದೆ. ಪೋಷ್ಟ್ ಬರೆಯುವ ಸಮಯದಲ್ಲಿ ೮,೪೦೦ ಲೈಕ್ ಗಳನ್ನು ಮತ್ತು ೨,೧೦೦ ಮರು ಪೋಷ್ಟ್ ಗಳನ್ನು ಹೊಂದಿದೆ. ಇದೇ ರೀತಿಯ ಪೋಷ್ಟ್ ಗಳ ಆರ್ಕೈವ್ ಅನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಹೇಳಿಕೆ ತಪ್ಪು. ಈ ಚಿತ್ರವು ಪ್ರತಿಮೆಯ ಉದ್ಘಾಟನೆಯ ಮೊದಲು,  ಇನ್ನೂ ನಿರ್ಮಾಣ ಹಂತದಲ್ಲಿದ್ದಾಗ ಸೆರೆಹಿಡಿಯಲಾಗಿತ್ತು.

ವಾಸ್ತವಾಂಶಗಳು ಇಲ್ಲಿವೆ

ರಿವರ್ಸ್ ಇಮೇಜ್ ಸರ್ಚ್ ಮೂಲಕ, ಅಕ್ಟೋಬರ್ ೩೧, ೨೦೧೮ ರ ನ್ಯೂಯಾರ್ಕ್ ಟೈಮ್ಸ್ ಲೇಖನದಲ್ಲಿ ಪ್ರಕಟವಾದ ಇದೇ ರೀತಿಯ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ. ಚಿತ್ರದ ಶೀರ್ಷಿಕೆಯು, "ನಿರ್ಮಾಣ ಕಾರ್ಮಿಕರು ಅಕ್ಟೋಬರ್ ೧೮ ರಂದು ಅಂತಿಮ ಸ್ಪರ್ಶವನ್ನು ಮಾಡಿದ್ದಾರೆ" ಎಂದು ಓದುತ್ತದೆ. ಈ ಚಿತ್ರವನ್ನು ಯುರೋಪಿಯನ್ ಪ್ರೆಸ್‌ಫೋಟೋ ಏಜೆನ್ಸಿ (ಇಪಿಎ) ಛಾಯಾಗ್ರಾಹಕ ದಿವ್ಯಕಾಂತ್ ಸೋಲಂಕಿ ಅವರಿಗೆ ಕ್ರೆಡಿಟ್ ನೀಡಲಾಗಿದೆ.

ಅಕ್ಟೋಬರ್ ೧೮, ೨೦೧೮ ರಂದು ಇಪಿಎ ಇಮೇಜ್ ವೆಬ್‌ಸೈಟ್‌ನಲ್ಲಿ ಸೋಲಂಕಿ ಅವರು ಸೆರೆಹಿಡಿದ ಮೂಲ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ. ವಿವರಣೆಯು ಹೀಗೆ ಹೇಳುತ್ತದೆ, "ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಚಿತ್ರಿಸುವ 'ಏಕತೆಯ ಪ್ರತಿಮೆ' ನಿರ್ಮಾಣ ಸ್ಥಳದಲ್ಲಿ ಭಾರತೀಯ ಕಾರ್ಮಿಕರು, ಕೆವಾಡಿಯಾದಿಂದ ಸುಮಾರು ೨೦೦ ಕಿಲೋಮೀಟರ್. ಅಹಮದಾಬಾದ್, ಭಾರತ, ೧೮ ಅಕ್ಟೋಬರ್ ೨೦೧೮."

ಏಕತೆ ಪ್ರತಿಮೆಯ ಚಿತ್ರದ ಸ್ಕ್ರೀನ್‌ಶಾಟ್. (ಮೂಲ: ಇಪಿಎ)

ಎಲ್ಎ ಟೈಮ್ಸ್ ಮತ್ತು ಬಿಬಿಸಿ ನ್ಯೂಸ್ ಹಿಂದಿ ಅದೇ ಚಿತ್ರವನ್ನು ಪ್ರಕಟಿಸಿದ್ದು, ಚಿತ್ರದ ಕ್ರೆಡಿಟ್ ಅನ್ನು ಇಪಿಎ ಗೆ ನೀಡಲಾಗಿದೆ. 

ಉದ್ಘಾಟನೆಯ ಮುನ್ನವೇ ಅಂತಿಮ ಸ್ಪರ್ಶದ ಕೆಲಸವನ್ನು ಮುಗಿಸುವ ಮೂಲಕ ಕಾರ್ಮಿಕರು ಅದರ ಸ್ಥಳಗಳಲ್ಲಿ ಪಾದಗಳ ಭಾಗಗಳನ್ನು ಇರಿಸುತ್ತಿರುವುದನ್ನು ವೈರಲ್ ಚಿತ್ರ ತೋರಿಸುತ್ತದೆ. ಇಂಡಿಯಾ ಟುಡೇ ವೀಡಿಯೋ ಕವರೇಜ್ ಪ್ರತಿಮೆಯು ೨೦೧೮ ರಲ್ಲಿ ಅದರ ಉದ್ಘಾಟನೆಯ ದಿನದಂದು ಅದರ ಪಾದಗಳಲ್ಲಿ ಯಾವುದೇ ಬಿರುಕುಗಳನ್ನು ತೋರಿಸುವುದಿಲ್ಲ. ಮೇಲಾಗಿ, ಈ ಆಗಸ್ಟ್‌ನಲ್ಲಿ ಏಕತೆ ಪ್ರತಿಮೆಯ ಪರಿಶೀಲಿಸಿದ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ಇತ್ತೀಚಿನ ಫೋಟೋದಲ್ಲಿ ಪ್ರತಿಮೆಯ ಮೇಲೆ ಯಾವುದೇ ಬಿರುಕುಗಳು ಕಂಡುಬಂದಿಲ್ಲ. 

ಆಗಸ್ಟ್ ೨೬, ೨೦೨೪ ರಂದು ಭಾರೀ ಮಳೆಯಿಂದಾಗಿ ಸಿಂಧುದುರ್ಗ ಜಿಲ್ಲೆಯ ರಾಜ್‌ಕೋಟ್ ಕೋಟೆಯಲ್ಲಿರುವ ಮರಾಠಾ ದೊರೆ ಛತ್ರಪತಿ ಶಿವಾಜಿ ಪ್ರತಿಮೆಯ ಕುಸಿತದ ನಂತರ ಈ ಹೇಳಿಕೆಗಳು ಹೊರಹೊಮ್ಮಿವೆ. ಪ್ರಧಾನಿ ನರೇಂದ್ರ ಮೋದಿ ಅವರು ೩೫ ಅಡಿ ಎತ್ತರದ ಪ್ರತಿಮೆಯನ್ನು ಡಿಸೆಂಬರ್ ೪, ೨೦೨೩ ರಂದು ಉದ್ಘಾಟಿಸಿದ್ದರು. ಭಾರತೀಯ ನೌಕಾಪಡೆ ಮತ್ತು ತಾಂತ್ರಿಕ ತಜ್ಞರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಶಿಲ್ಪಿ-ಗುತ್ತಿಗೆದಾರ ಜಯದೀಪ್ ಆಪ್ಟೆ ಅವರನ್ನು ಬಂಧಿಸಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ.

ತೀರ್ಪು

ಏಕತೆ ಪ್ರತಿಮೆಯ ೨೦೧೮ ರ ಚಿತ್ರವನ್ನು, ನಿರ್ಮಾಣ ಹಂತದಲ್ಲಿದ್ದಾಗ ಸೆರೆಹಿಡಿಯಲಾಗಿದೆ, ಅದನ್ನು ಬಳಸಿಕೊಂಡು ಈಗ ಪ್ರತಿಮೆಯ ಮೇಲೆ ಬಿರುಕುಗಳು ಕಾಣಿಸಿಕೊಂಡಿವೆ ಎಂದು ಹಂಚಿಕೊಂಡ ಹೇಳಿಕೆ ತಪ್ಪು.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ) 

Read this fact-check English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ