ಮೂಲಕ: ತಾಹಿಲ್ ಅಲಿ
ನವೆಂಬರ್ 19 2024
ಬಿಹಾರ್ ನ ಪಾಟ್ನಾದಲ್ಲಿ ಚಲನಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ವೈರಲ್ ವೀಡಿಯೋ ತೋರಿಸುತ್ತದೆ, ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ರಾಜಕೀಯ ಸಭೆಯಲ್ಲ.
ಹೇಳಿಕೆ ಏನು?
ತೆರೆದ ಜಾಗದಲ್ಲಿ ದೊಡ್ಡ ವೇದಿಕೆಯ ಮುಂದೆ ಪರದೆಯನ್ನು ತೋರಿಸುವ ೪೫ ಸೆಕೆಂಡ್‌ಗಳ ವೀಡಿಯೋ ವೈರಲ್ ಆಗಿದೆ, ಇದು ಮಹಾ ವಿಕಾಸ್ ಅಘಾಡಿ (ಎಂವಿಎ) - ೨೦೧೯ ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ನಂತರ-ಮಹಾರಾಷ್ಟ್ರದ ಮುಂಬೈನಲ್ಲಿರುವ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ )- ರಾಜ್ಯ ಮಟ್ಟದ ರಾಜಕೀಯ ಒಕ್ಕೂಟದ ಸಭೆಯನ್ನು ಚಿತ್ರಿಸುತ್ತದೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗಿದೆ.
ವೈರಲ್ ವೀಡಿಯೋದಲ್ಲಿನ ವೈಮಾನಿಕ ಚಿತ್ರಗಳು, ಡ್ರೋನ್‌ನಿಂದ ಚಿತ್ರೀಕರಿಸಲಾಗಿದೆ ಎಂದು ತೋರುತ್ತಿದೆ, ಜನರು ಹಿನ್ನೆಲೆಯಲ್ಲಿ ಜೋರಾಗಿ ಸಂಗೀತದೊಂದಿಗೆ ಗೋಪುರದಂತಹ ರಚನೆಗಳನ್ನು ಏರುತ್ತಿರುವುದನ್ನು ತೋರಿಸುತ್ತದೆ.
ಎಕ್ಸ್ ಬಳಕೆದಾರರು ಮರಾಠಿ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ, ಅದರ ಅನುವಾದ ಹೀಗಿದೆ, “ಬಿಕೆಸಿ ಯಲ್ಲಿನ ಮಹಾ ವಿಕಾಸ್ ಅಘಾಡಿ ಸಭೆಯಲ್ಲಿ ಲಕ್ಷಗಟ್ಟಲೆ ಜನಸಮೂಹವನ್ನು ನೋಡಿ! ಜನರು ನಂಬಿಕೆಯನ್ನು ತೋರಿಸುತ್ತಿದ್ದಾರೆ, ಒಗ್ಗೂಡುತ್ತಿದ್ದಾರೆ ಮತ್ತು ಮಹಾರಾಷ್ಟ್ರದ ಉಜ್ವಲ ಭವಿಷ್ಯದತ್ತ ದೃಢ ಹೆಜ್ಜೆ ಇಡುತ್ತಿದ್ದಾರೆ."
ಮತ್ತೊಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ, "ಮುಂಬೈನ ಬಿಕೆಸಿ ನಲ್ಲಿ ಎಂವಿಎ ರ‍್ಯಾಲಿಯಲ್ಲಿ ಜನಸಂದಣಿ | ಡ್ರೋನ್ ಮೂಲಕ ರೆಕಾರ್ಡ್ ಮಾಡಿದ ಸಭೆಯ ಅವಲೋಕನ." ಈ ಪೋಷ್ಟ್ ಮತ್ತು ಇತರ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಲಭ್ಯವಿವೆ.
ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳನ್ನು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಮುಂಬರುವ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ ಈ ಹೇಳಿಕೆಗಳು ಹೊರಹೊಮ್ಮಿದೆ, ನವೆಂಬರ್ ೨೦ ರಂದು ಮತದಾನ ನಡೆಯಲಿದೆ, ನಂತರ ನವೆಂಬರ್ ೨೩ ರಂದು ಮತಗಳ ಎಣಿಕೆ ನಡೆಯಲಿದೆ.
ಆದರೆ, ಮುಂಬರುವ ಭಾರತೀಯ ತೆಲುಗು ಭಾಷೆಯ ಚಲನಚಿತ್ರವಾದ 'ಪುಷ್ಪ ೨: ದಿ ರೂಲ್' ನ ಟ್ರೇಲರ್ ಲಾಂಚ್ ಅನ್ನು ವೀಕ್ಷಿಸಲು ಭಾರತದ ಬಿಹಾರದ ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಸಭೆಯ ದೃಶ್ಯಗಳು ತೋರಿಸುತ್ತವೆ ಎಂದು ನಮ್ಮ ತನಿಖೆಯು ಕಂಡುಹಿಡಿದಿದೆ.
ವಾಸ್ತವಾಂಶಗಳೇನು?
ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಭಾರತೀಯ ನಟ ಅಲ್ಲು ಅರ್ಜುನ್ ನಟಿಸಿದ 'ಪುಷ್ಪಾ ೨: ದಿ ರೂಲ್' ನ ಟ್ರೈಲರ್ ಲಾಂಚ್ ನ ತುಣುಕನ್ನು ತೋರಿಸುತ್ತದೆ ಎಂದು ದೃಢೀಕರಿಸುವ ಬಹು ಸುದ್ದಿ ವರದಿಗಳು ಮತ್ತು ವೀಡಿಯೋಗಳು ಕಂಡುಬಂದವು.
"ಪುಷ್ಪ ೨ - ದಿ ರೂಲ್ ಮಾಸಿವ್ ಟ್ರೇಲರ್ ಲಾಂಚ್ ಈವೆಂಟ್ ಲೈವ್" ಎಂಬ ಶೀರ್ಷಿಕೆಯ ಚಲನಚಿತ್ರ ಪ್ರಚಾರ ಏಜೆನ್ಸಿ YouWe Media ದಿಂದ ನವೆಂಬರ್ ೧೭, ೨೦೨೪ ರಂದು ನೇರ ಪ್ರಸಾರ ಮಾಡಿದ ಯೂಟ್ಯೂಬ್ ವೀಡಿಯೋ (ಇಲ್ಲಿ ಆರ್ಕೈವ್ ಮಾಡಲಾಗಿದೆ), ವೈರಲ್ ತುಣುಕನ್ನು ಹೋಲುವ ದೃಶ್ಯಗಳನ್ನು ಒಳಗೊಂಡಿದೆ.
ವೈರಲ್ ವೀಡಿಯೋದ ಆರಂಭಿಕ ೮ ಸೆಕೆಂಡುಗಳನ್ನು ೫:೨೫ ಮತ್ತು ೫:೩೩ ಟೈಮ್‌ಸ್ಟ್ಯಾಂಪ್‌ಗಳ ನಡುವೆ YouWe Media ವೀಡಿಯೋದಲ್ಲಿ ವೀಕ್ಷಿಸಬಹುದು, ಇದು ಕೆಲವು ವ್ಯಕ್ತಿಗಳು ಗೋಪುರದಂತಹ ರಚನೆಗಳ ಮೇಲೆ ಏರುವ ವೈಮಾನಿಕ ನೋಟವನ್ನು ತೋರಿಸುತ್ತದೆ.
ಪಾಟ್ನಾದಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮದ ಲೈವ್-ಸ್ಟ್ರೀಮ್ ಮಾಡಿದ ವೀಡಿಯೋ ಮತ್ತು ವೈರಲ್ ವೀಡಿಯೋದ ಹೋಲಿಕೆ. (ಮೂಲ: ಯೂಟ್ಯೂಬ್/YouWe Media/ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಹೆಚ್ಚುವರಿಯಾಗಿ, ೯ ರಿಂದ ೨೩ ಸೆಕೆಂಡುಗಳ ವೈರಲ್ ವೀಡಿಯೋದ ವಿಭಾಗ, ಇದರಲ್ಲಿ ಕ್ಯಾಮೆರಾ ಸ್ಥಳದ ಹಿಂಭಾಗದಿಂದ ಮುಂಭಾಗದ ಕಡೆಗೆ ಚಲಿಸುತ್ತದೆ, ಅಲ್ಲಿ ಮಧ್ಯದಲ್ಲಿರುವ ದೊಡ್ಡ ಪರದೆಯು "ಭಾರತದ ನಂ. ೧" ಪಠ್ಯವನ್ನು ಬಿಳಿ ಬಣ್ಣದಲ್ಲಿ ತೋರಿಸುತ್ತದೆ. ೬:೪೪ ಮತ್ತು ೬:೫೪ ಟೈಮ್‌ಸ್ಟ್ಯಾಂಪ್‌ಗಳ ನಡುವೆ ಲೈವ್-ಸ್ಟ್ರೀಮ್ ಮಾಡಿದ ಯೂಟ್ಯೂಬ್ ವೀಡಿಯೋದಲ್ಲಿ ಅದನ್ನು ನೋಡಬಹುದು.
ಪಾಟ್ನಾದಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮದ ಲೈವ್-ಸ್ಟ್ರೀಮ್ ವೀಡಿಯೋ ಮತ್ತು ವೈರಲ್ ವೀಡಿಯೋ ಹೋಲಿಕೆ. (ಮೂಲ: ಯೂಟ್ಯೂಬ್/YouWe Media/ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
೭:೪೬ -೭ :೫೨ ಮತ್ತು ೮:೧೭-೮:೩೦ ಟೈಮ್‌ಸ್ಟ್ಯಾಂಪ್‌ಗಳ ನಡುವಿನ ಯೂಟ್ಯೂಬ್ ವೀಡಿಯೋಗೆ ವೈರಲ್ ವೀಡಿಯೋದ ೨೩-ಸೆಕೆಂಡ್ ಮಾರ್ಕ್ ನ ದೃಶ್ಯಗಳು ಹೊಂದಾಣಿಕೆಯಾಗುತ್ತವೆ, ಅದು ಸ್ಥಳದ ವೈಮಾನಿಕ ನೋಟವನ್ನು ತೋರಿಸುತ್ತದೆ, ಮೇಲಿರುವ ವ್ಯಕ್ತಿಗಳು, ಗೋಪುರದಂತಹ ರಚನೆಗಳು ಮತ್ತು ಮುಂಭಾಗದಲ್ಲಿ ಒಂದು ವೇದಿಕೆಯನ್ನು ತೋರುತ್ತವೆ.
ಹೆಚ್ಚುವರಿಯಾಗಿ, YouWe Media ವೀಡಿಯೋದ ಆರಂಭಿಕ ಕ್ಷಣಗಳಲ್ಲಿ, ಆಂಕರ್ ಹಿಂದಿಯಲ್ಲಿ ಹೀಗೆ ಹೇಳುವುದನ್ನು ಕೇಳಬಹುದು (ಅನುವಾದಿಸಲಾಗಿದೆ), "ಪುಷ್ಪಾ ಜೀವಂತವಾಗಿದೆ ಇಂದು ರಾತ್ರಿ ಪಾಟ್ನಾದಲ್ಲಿ." ವೀಡಿಯೋದ ಎಡ ಮೂಲೆಯಲ್ಲಿ "ಟ್ರೇಲರ್" ಪಠ್ಯದೊಂದಿಗೆ 'ಪುಷ್ಪಾ ೨' ಸ್ಟಿಕ್ಕರ್ ಅನ್ನು ಸಹ ಒಳಗೊಂಡಿದೆ.
ವೈರಲ್ ವೀಡಿಯೋ ಬಿಕೆಸಿ ಯಲ್ಲಿ ಎಂವಿಎ ಅಥವಾ ಮಹಾರಾಷ್ಟ್ರ ಚುನಾವಣೆಗಳಿಗೆ ಸಂಬಂಧಿಸಿದ ಯಾವುದೇ ರಾಜಕೀಯ ಸಭೆಯನ್ನು ತೋರಿಸುವುದಿಲ್ಲ ಆದರೆ ಚಲನಚಿತ್ರ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ತೋರಿಸುತ್ತದೆ ಎಂದು ಇದು ಖಚಿತಪಡಿಸುತ್ತದೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಇಂಡಿಯಾ ಟುಡೇ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಸೇರಿದಂತೆ ಸುದ್ದಿ ಸಂಸ್ಥೆಗಳ ಬಹು ವರದಿಗಳು ಇದನ್ನು ಮತ್ತಷ್ಟು ದೃಢಪಡಿಸಿವೆ, 'ಪುಷ್ಪ ೨' ಟ್ರೈಲರ್ ಬಿಡುಗಡೆ ಸಮಾರಂಭದಿಂದ ಇದೇ ರೀತಿಯ ದೃಶ್ಯಗಳನ್ನು ಒಳಗೊಂಡಿದೆ. ಪಾಟ್ನಾದ ಗಾಂಧಿ ಮೈದಾನದಲ್ಲಿ ಕಾರ್ಯಕ್ರಮ ನಡೆದಿರುವುದನ್ನು ಈ ವರದಿಗಳು ದೃಢಪಡಿಸಿವೆ.
ತೀರ್ಪು
ಬಿಹಾರದ ಪಾಟ್ನಾದಲ್ಲಿ ಅಲ್ಲು ಅರ್ಜುನ್ ಅಭಿನಯದ ಭಾರತೀಯ ಚಲನಚಿತ್ರ 'ಪುಷ್ಪ ೨: ದಿ ರೂಲ್' ನ ಟ್ರೇಲರ್ ಬಿಡುಗಡೆಯನ್ನು ವೈರಲ್ ವೀಡಿಯೋ ಚಿತ್ರಿಸುತ್ತದೆ. ಇದು ಮಹಾರಾಷ್ಟ್ರದ ಯಾವುದೇ ಎಂವಿಎ ಅಥವಾ ರಾಜಕೀಯ ಸಭೆಗೆ ಸಂಬಂಧಿಸಿಲ್ಲ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here.