ಮುಖಪುಟ ಎನ್‌ಸಿಪಿ ನಾಯಕರ ರ‍್ಯಾಲಿಯಲ್ಲಿ ಪಾಕಿಸ್ತಾನದ ಧ್ವಜ ಕಂಡುಬಂದಿತ್ತೇ? ಇಲ್ಲ, ಹೇಳಿಕೆ ತಪ್ಪು

ಎನ್‌ಸಿಪಿ ನಾಯಕರ ರ‍್ಯಾಲಿಯಲ್ಲಿ ಪಾಕಿಸ್ತಾನದ ಧ್ವಜ ಕಂಡುಬಂದಿತ್ತೇ? ಇಲ್ಲ, ಹೇಳಿಕೆ ತಪ್ಪು

ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ

ನವೆಂಬರ್ 13 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಶಿವಾಜಿ ನಗರದಲ್ಲಿ ನವಾಬ್ ಮಲಿಕ್ ಅವರ ಪ್ರಚಾರ ರೋಡ್ ಶೋನಲ್ಲಿ ಪಾಕಿಸ್ತಾನದ ಧ್ವಜ ಕಂಡುಬಂದಿತ್ತು ಎಂದು ಹಂಚಿಕೊಂಡ ಪೋಷ್ಟ್. ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರ ಶಿವಾಜಿ ನಗರದ ರೋಡ್‌ಶೋನಲ್ಲಿ ಕಂಡುಬಂದ ಹಸಿರು ಧ್ವಜವು ಇಸ್ಲಾಮಿಕ್ ಧ್ವಜ, ಪಾಕಿಸ್ತಾನದ ಧ್ವಜವಲ್ಲ.(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರ ಶಿವಾಜಿ ನಗರದ ರೋಡ್‌ಶೋನಲ್ಲಿ ಕಂಡುಬಂದ ಹಸಿರು ಧ್ವಜವು ಇಸ್ಲಾಮಿಕ್ ಧ್ವಜ, ಪಾಕಿಸ್ತಾನದ ಧ್ವಜವಲ್ಲ.

ಹೇಳಿಕೆ ಏನು?

ಮುಂಬೈನಲ್ಲಿ ಮಾಜಿ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ರೋಡ್‌ಶೋನಲ್ಲಿ ಕಾಣಿಸಿಕೊಂಡ ಬಿಳಿ ಅರ್ಧಚಂದ್ರಾಕೃತಿ ಮತ್ತು ನಕ್ಷತ್ರದೊಂದಿಗಿನ ಹಸಿರು ಧ್ವಜದ ಫೋಟೋವೊಂದು ಪಾಕಿಸ್ತಾನದ ಧ್ವಜ ಎಂಬ ಹೇಳಿಕೆಯೊಂದಿಗೆ ವೈರಲ್ ಆಗಿದೆ.

ಚಿತ್ರವನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಿಂದಿ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ: “ಪಾಕಿಸ್ತಾನದ ಧ್ವಜವನ್ನು ಹಿಂದೆ ಏಕೆ ಬೀಸಬೇಕು? ಗೆಳೆಯರೇ...” ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ವೈರಲ್ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. 
(ಮೂಲ: ಎಕ್ಸ್/ಇನ್‌ಸ್ಟಾಗ್ರಾಮ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)


ನವೆಂಬರ್ ೨೦ ರಂದು ನಡೆಯಲಿರುವ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಗೆ ಪ್ರಚಾರವು ತಯಾರಿಯಲ್ಲಿದೆ, ನವೆಂಬರ್ ೨೩ ರಂದು ಫಲಿತಾಂಶ ಹೇಳಲಾಗುವುದು.  ಮಲಿಕ್ ಮನ್ಖುರ್ದ್-ಶಿವಾಜಿ ನಗರ ಕ್ಷೇತ್ರಕ್ಕೆ ಎನ್‌ಸಿಪಿ ಅಭ್ಯರ್ಥಿಯಾಗಿದ್ದು, ಅವರ ಪುತ್ರಿ ಸನಾ ಮಲಿಕ್ ಅನುಶಕ್ತಿನಗರ, ಮಹಾರಾಷ್ಟ್ರದ ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಆದರೆ, ಚಿತ್ರದಲ್ಲಿರುವ ಧ್ವಜವು ಪಾಕಿಸ್ತಾನದ ಧ್ವಜವಲ್ಲ, ಇಸ್ಲಾಮಿಕ್ ಧಾರ್ಮಿಕ ಧ್ವಜ ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ.

ನಾವು ಕಂಡುಕೊಂಡಿದ್ದು ಏನು?


ರಿವರ್ಸ್ ಇಮೇಜ್ ಸರ್ಚ್ ಅನ್ನು ಬಳಸಿಕೊಂಡು, ಡೆಕ್ಕನ್ ಹೆರಾಲ್ಡ್ ಪ್ರಕಟಿಸಿದ ಇದೇ ರೀತಿಯ ಫೋಟೋವನ್ನು ನಾವು ಕಂಡುಕೊಂಡಿದ್ದೇವೆ, ಅದರ ಶೀರ್ಹಿಕೆ ಹೀಗಿದೆ, “ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆ ೨೦೨೪ | ಅಜಿತ್ ಪವಾರ್.” ಈ ಫೋಟೋ ವೈರಲ್ ಚಿತ್ರದಲ್ಲಿರುವ ಅದೇ ಉಡುಪಿನಲ್ಲಿ ಮಲಿಕ್, ಅವರ ಮಗಳು ಮತ್ತು ಸಹವರ್ತಿಗಳನ್ನು ತೋರಿಸುತ್ತದೆ. ನವೆಂಬರ್ ೭, ೨೦೨೪ ರಂದು ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ಅಧ್ಯಕ್ಷ ಅಜಿತ್ ಪವಾರ್ ಅವರು ಮಲಿಕ್ ಮತ್ತು ಅವರ ಪುತ್ರಿ ಸನಾ ಮಲಿಕ್ ಅವರ ಪ್ರಚಾರದ ರೋಡ್‌ಶೋಗಳಲ್ಲಿ ಪಾಲ್ಗೊಂಡರು ಎಂದು ವರದಿ ದೃಢಪಡಿಸುತ್ತದೆ.

ಮಲಿಕ್ ಅವರು ತಮ್ಮ ಶಿವಾಜಿ ನಗರ ರೋಡ್‌ಶೋನ ಪ್ರಚಾರದ ಫೋಟೋಗಳನ್ನು ಎಕ್ಸ್ ನಲ್ಲಿ ಪೋಷ್ಟ್ ಮಾಡಿದ್ದಾರೆ (ಇಲ್ಲಿ ಆರ್ಕೈವ್ ಮಾಡಲಾಗಿದೆ), ವೈರಲ್ ಚಿತ್ರ ಸೇರಿದಂತೆ ಅದರ ಹಿಂದಿ ಶೀರ್ಷಿಕೆ ಹೀಗೆ ಅನುವಾದಿಸುತ್ತದೆ: “ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮಹಾರಾಷ್ಟ್ರ ರಾಷ್ಟ್ರೀಯ ಅಧ್ಯಕ್ಷರ ಪ್ರಬಲ ನಾಯಕತ್ವ ಮತ್ತು ಮಹಾರಾಷ್ಟ್ರದ ಪ್ರೀತಿಯ ಉಪ ಮುಖ್ಯಮಂತ್ರಿ ಗೌರವಾನ್ವಿತ. @ajitpawarspeaks ದಾದಾ ಅವರ ಮಂಖುರ್ದ್ ಶಿವಾಜಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಸ್ವಾಗತ” ಮಲಿಕ್ ಜೊತೆಗೆ ಪ್ರಚಾರ ಮಾಡಿದ ಅಜಿತ್ ಪವಾರ್ ಅವರೂ ಸಹ ಎಕ್ಸ್ ನಲ್ಲಿ ಈ ರೋಡ್ ಶೋನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ (ಇಲ್ಲಿ ಆರ್ಕೈವ್ ಮಾಡಲಾಗಿದೆ).

ಮಲಿಕ್ ಅವರು ಪೋಷ್ಟ್ ಮಾಡಿದ ಬದಲಾವಣೆಯಿಲ್ಲದ ಚಿತ್ರವು ಅದೇ ಹಸಿರು ಬಾವುಟವನ್ನು ತೋರಿಸುತ್ತದೆ, ಅದನ್ನು ಎಡಿಟ್ ಮಾಡಲಾಗಿಲ್ಲ ಎಂದು ಸೂಚಿಸುತ್ತದೆ. ಆದರೆ, ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ಈ ಧ್ವಜವನ್ನು ಪಾಕಿಸ್ತಾನಿ ಧ್ವಜ ಎಂದು ತಪ್ಪಾಗಿ ಗ್ರಹಿಸಿವೆ, ಇದು ವಾಸ್ತವವಾಗಿ ಇಸ್ಲಾಮಿಕ್ ಧಾರ್ಮಿಕ ಧ್ವಜವಾಗಿದೆ.

ಪಾಕಿಸ್ತಾನಿ ಧ್ವಜ ಮತ್ತು ಇಸ್ಲಾಮಿಕ್ ಧ್ವಜದ ನಡುವಿನ ವ್ಯತ್ಯಾಸ

ಪ್ರಶ್ನೆಯಲ್ಲಿರುವ ಹಸಿರು ಧ್ವಜವು ಅದರ ಮಧ್ಯದಲ್ಲಿ ಬಿಳಿ ಅರ್ಧಚಂದ್ರಾಕಾರ ಮತ್ತು ನಕ್ಷತ್ರವನ್ನು ಹೊಂದಿದೆ, ಜೊತೆಗೆ ಅದರ ಸುತ್ತಲೂ ಸಣ್ಣ ನಕ್ಷತ್ರಗಳನ್ನು ನೋಡಬಹುದು. ಇದಕ್ಕೆ ವ್ಯತಿರಿಕ್ತವಾಗಿ, ಪಾಕಿಸ್ತಾನಿ ಧ್ವಜವು ಎಡಭಾಗದಲ್ಲಿ ಬಿಳಿ ಲಂಬವಾದ ಪಟ್ಟಿಯೊಂದಿಗೆ ಹಸಿರು ಕ್ಷೇತ್ರವನ್ನು ಒಳಗೊಂಡಿದೆ, ಉಳಿದ ಹಸಿರು ಭಾಗದಲ್ಲಿ ಒಂದೇ ಅರ್ಧಚಂದ್ರಾಕಾರ ಮತ್ತು ನಕ್ಷತ್ರವಿದೆ.

ಹಸಿರು ಧ್ವಜ ಮತ್ತು ಇಸ್ಲಾಮಿಕ್ ಧ್ವಜವನ್ನು ಹೈಲೈಟ್ ಮಾಡುವ ವೈರಲ್ ಚಿತ್ರದ ಸ್ಕ್ರೀನ್‌ಶಾಟ್. 
(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)


ಎಡಭಾಗದಲ್ಲಿ ಬಿಳಿ ಪಟ್ಟಿಯ ಅನುಪಸ್ಥಿತಿಯು ಸ್ಪಷ್ಟವಾಗಿ ಇದು ಪಾಕಿಸ್ತಾನಿ ಧ್ವಜವಲ್ಲ ಆದರೆ ಸಾಮಾನ್ಯ ಇಸ್ಲಾಮಿಕ್ ಧ್ವಜ ಎಂದು ಸೂಚಿಸುತ್ತದೆ, ಸಾಮಾನ್ಯವಾಗಿ ಸಣ್ಣ ನಕ್ಷತ್ರಗಳಂತಹ ಇತರ ವಿನ್ಯಾಸ ಅಂಶಗಳನ್ನು ಒಳಗೊಂಡಿರುತ್ತದೆ.

ವೈರಲ್ ಚಿತ್ರದಲ್ಲಿರುವ ಧ್ವಜದ ಚಿತ್ರ, ಪಾಕಿಸ್ತಾನಿ ಧ್ವಜದೊಂದಿಗೆ ಇಸ್ಲಾಮಿಕ್ ಧ್ವಜದ ಹೋಲಿಕೆ.
 (ಮೂಲ: ಎಕ್ಸ್/ಬ್ರಿಟಾನಿಕಾ/ವಿಕಿಮೀಡಿಯಾ ಕಾಮನ್ಸ್)


ಅರ್ಧಚಂದ್ರ, ನಕ್ಷತ್ರ ಮತ್ತು ಹೆಚ್ಚುವರಿ ಅಂಶಗಳನ್ನು ಒಳಗೊಂಡಿರುವ ಇದೇ ರೀತಿಯ ಇಸ್ಲಾಮಿಕ್ ಧ್ವಜವು ಸ್ಟಾಕ್ ಫೋಟೋ ಸೈಟ್ ಅಲಾಮಿಯಲ್ಲಿ ಲಭ್ಯವಿದೆ ಮತ್ತು ವೈರಲ್ ಚಿತ್ರದಲ್ಲಿ ಧ್ವಜವನ್ನು ಹೋಲುತ್ತದೆ. ಈ ರೀತಿಯ ಧ್ವಜಗಳನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈದ್ ಮಿಲಾದುನ್ನಬಿಗೆ ಇಸ್ಲಾಮಿಕ್ ಧ್ವಜಗಳಾಗಿ ಮಾರಾಟ ಮಾಡಲಾಗುತ್ತದೆ.

ವೈರಲ್ ಚಿತ್ರದಲ್ಲಿ ಕಂಡುಬರುವಂತೆ ಇದೇ ರೀತಿಯ ಧ್ವಜವು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ, ಅಲ್ಲಿ ಅದನ್ನು ಇಸ್ಲಾಮಿಕ್ ಧ್ವಜ ಎಂದು ಗುರುತಿಸಲಾಗಿದೆ. (ಮೂಲ: ಸ್ಕ್ರೀನ್‌ಶಾಟ್/ ಫ್ಲಿಪ್‌ಕಾರ್ಟ್) 

ನವೆಂಬರ್ ೭ ರಂದು ಶಿವಾಜಿ ನಗರ ಮತ್ತು ಮನ್ಖುರ್ದ್‌ನಲ್ಲಿ ನಡೆದ ರೋಡ್‌ಶೋನ ಸುದ್ದಿ ಪ್ರಸಾರವು ಪಾಕಿಸ್ತಾನಿ ಧ್ವಜಗಳ ಯಾವುದೇ ಪ್ರದರ್ಶನವನ್ನು ವರದಿ ಮಾಡಿಲ್ಲ. ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿರುವ ಚಿತ್ರವು ಹಿನ್ನಲೆಯಲ್ಲಿ ಇಸ್ಲಾಮಿಕ್ ಧ್ವಜವನ್ನು ತಪ್ಪಾಗಿ ಪ್ರತಿನಿಧಿಸುತ್ತಿದೆ, ಮಹಾರಾಷ್ಟ್ರದ ಚುನಾವಣೆಯ ನಡುವೆ ತಪ್ಪುದಾರಿಗೆಳೆಯುವ ನಿರೂಪಣೆಯನ್ನು ಪ್ರಚಾರ ಮಾಡುತ್ತಿದೆ.


ಲಾಜಿಕಲಿ ಫ್ಯಾಕ್ಟ್ಸ್ಈ ಹಿಂದೆ ರ‍್ಯಾಲಿಗಳಲ್ಲಿ ಇಸ್ಲಾಮಿಕ್ ಧ್ವಜಗಳನ್ನು 'ಪಾಕಿಸ್ತಾನದ ಧ್ವಜಗಳು' ಎಂದು ತಪ್ಪಾಗಿ ಗುರುತಿಸಿದ ಇದೇ ರೀತಿಯ ಹೇಳಿಕೆಗಳನ್ನು ನಿರಾಕರಿಸಿದೆ.

ತೀರ್ಪು


ಶಿವಾಜಿ ನಗರದಲ್ಲಿ ನವಾಬ್ ಮಲಿಕ್ ಮತ್ತು ಅವರ ಮಗಳ ಪ್ರಚಾರ ರೋಡ್ ಶೋಗಳಲ್ಲಿ ಕಂಡುಬರುವ ಬಿಳಿ ಅರ್ಧಚಂದ್ರಾಕೃತಿ ಮತ್ತು ನಕ್ಷತ್ರವನ್ನು ಹೊಂದಿರುವ ಹಸಿರು ಧ್ವಜವನ್ನು ಪಾಕಿಸ್ತಾನಿ ಧ್ವಜ ಎಂದು ತಪ್ಪಾಗಿ ಗುರುತಿಸಲಾಗಿದೆ. ಇದು ವಾಸ್ತವವಾಗಿ ಇಸ್ಲಾಮಿಕ್ ಧ್ವಜವಾಗಿದ್ದು, ಪಾಕಿಸ್ತಾನಿ ಧ್ವಜದಿಂದ ಭಿನ್ನವಾಗಿದೆ, ಏಕೆಂದರೆ ಇದು ಎಡಭಾಗದಲ್ಲಿ ಬಿಳಿ ಪಟ್ಟಿಯನ್ನು ಹೊಂದಿಲ್ಲ ಮತ್ತು ಹೆಚ್ಚುವರಿ ಸಣ್ಣ ನಕ್ಷತ್ರಗಳನ್ನು ಹೊಂದಿದೆ.


(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ