ಮುಖಪುಟ ಇಲ್ಲ, ಬಿಎಸ್ಎನ್ಎಲ್ ೨೦೧೩ ರಲ್ಲಿ 'ದೊಡ್ಡ ಲಾಭ' ವನ್ನು ಹೊಂದು ೨೦೨೪ ರಲ್ಲಿ 'ದೊಡ್ಡ ನಷ್ಟ' ವನ್ನು ಅನುಭವಿಸಿಲ್ಲ

ಇಲ್ಲ, ಬಿಎಸ್ಎನ್ಎಲ್ ೨೦೧೩ ರಲ್ಲಿ 'ದೊಡ್ಡ ಲಾಭ' ವನ್ನು ಹೊಂದು ೨೦೨೪ ರಲ್ಲಿ 'ದೊಡ್ಡ ನಷ್ಟ' ವನ್ನು ಅನುಭವಿಸಿಲ್ಲ

ಮೂಲಕ: ರಾಹುಲ್ ಅಧಿಕಾರಿ

ಜುಲೈ 17 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಬಿಎಸ್ಎನ್ಎಲ್ ೨೦೧೩ ರಲ್ಲಿ 'ದೊಡ್ಡ ಲಾಭ' ವನ್ನು ಹೊಂದು ೨೦೨೪ ರಲ್ಲಿ 'ದೊಡ್ಡ ನಷ್ಟ' ವನ್ನು ಅನುಭವಿಸಿಲ್ಲ ಬಿಎಸ್ಎನ್ಎಲ್ ೨೦೧೩ ರಲ್ಲಿ ಭಾರಿ ಲಾಭವನ್ನು ಗಳಿಸಿ ೨೦೨೪ ರಲ್ಲಿ ದೊಡ್ಡ ನಷ್ಟವನ್ನು ಅನುಭವಿಸಿದೆ ಎಂದು ಹಂಚಿಕೊಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಬಿಎಸ್ಎನ್ಎಲ್ ೨೦೧೩ ರಲ್ಲಿ ಲಾಭವನ್ನು ವರದಿ ಮಾಡಲಿಲ್ಲ, ಅದು ನಂತರ ೨೦೨೪ ರ ವೇಳೆಗೆ ದೊಡ್ಡ ನಷ್ಟಕ್ಕೆ ತಿರುಗಿತು; ಅದು ಎರಡೂ ವರ್ಷಗಳಲ್ಲಿ ನಿವ್ವಳ ನಷ್ಟವನ್ನು ಅನುಭವಿಸಿದೆ.

ಹೇಳಿಕೆ ಏನು?

ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ರೋಶ್ನಿ ಜೈಸ್ವಾಲ್ ಅವರು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಶೇರ್ ಮಾಡಿದ ಪೋಷ್ಟ್ ನಲ್ಲಿ, ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಪೂರೈಕೆದಾರರಾದ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ೨೦೧೩ರಲ್ಲಿ ರೂ. ೧೦,೧೮೩ ಕೋಟಿ (ಭಾರತೀಯ ರೂಪಾಯಿಗಳು) ಲಾಭವನ್ನು ಮಾಡಿತ್ತು ಆದರೆ ೨೦೨೩ರಲ್ಲಿ ೧೩,೩೫೬ ಕೋಟಿ ನಷ್ಟಕ್ಕೆ ತಿರುಗಿತು ಎಂದು ಹೇಳಲಾಗಿದೆ. 

ಜುಲೈ ೧೦ ರ ವೈರಲ್ ಪೋಷ್ಟ್ ನಲ್ಲಿ ಜೈಸ್ವಾಲ್ ಈ ಅಂಕಿಅಂಶಗಳನ್ನು ಪುನರುಚ್ಚರಿಸುವ ವೀಡಿಯೋವನ್ನು ಒಳಗೊಂಡಿದೆ ಮತ್ತು ೨೦೧೩ ರಿಂದ ಬದಲಾವಣೆಗಳನ್ನು ಪರಿಗಣಿಸಲು ವೀಕ್ಷಕರನ್ನು ಪ್ರೇರೇಪಿಸುತ್ತದೆ. ಇದು ೨೦೧೩ ರಲ್ಲಿ ಅಧಿಕಾರದಲ್ಲಿದ್ದ ಯುನೈಟೆಡ್ ಪ್ರೋಗ್ರೆಸಿವ್ ಅಲೈಯನ್ಸ್ (ಯುಪಿಎ) ನಿಂದ ನ್ಯಾಷನಲ್ ಡೆಮಾಕ್ರೆಟಿಕ್ ಅಲಯನ್ಸ್ ಗೆ(ಎನ್‌ಡಿಎ) ಬದಲಾದ ಸರ್ಕಾರವನ್ನು ಸೂಚಿಸಬಹುದು, ಇದು ೨೦೧೪ ರಿಂದ ಆಡಳಿತದಲ್ಲಿದೆ. ಪೋಷ್ಟ್ ನ ಆರ್ಕೈವ್ ಮಾಡಿದ ಲಿಂಕ್ ಇಲ್ಲಿ ಲಭ್ಯವಿದೆ. ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡ ಇತರ ಪೋಸ್ಟ್‌ಗಳ ಲಿಂಕ್ ಅನ್ನು ಇಲ್ಲಿ ಮತ್ತು ಇಲ್ಲಿ ಆರ್ಕೈವ್ ಮಾಡಲಾಗಿದೆ.

ಬಿಎಸ್ಎನ್ಎಲ್ ೨೦೧೩ ರಲ್ಲಿ ಭಾರಿ ಲಾಭವನ್ನು ಮತ್ತು ೨೦೨೩ ರಲ್ಲಿ ದೊಡ್ಡ ನಷ್ಟವನ್ನು ದಾಖಲಿಸಿದೆ ಎಂದು ಹಂಚಿಕೊಂಡ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ನಮ್ಮ ತನಿಖೆಯು ಈ ಸಂಖ್ಯೆಗಳು ತಪ್ಪು ಎಂದು ಬಹಿರಂಗಪಡಿಸುತ್ತದೆ. ಬಿಎಸ್ಎನ್ಎಲ್ ಆರ್ಥಿಕ ವರ್ಷ (FY) ೨೦೧೩-೧೪ ಮತ್ತು FY ೨೦೨೩-೨೪ ರಲ್ಲಿ ಒಟ್ಟಾರೆ ನಿವ್ವಳ ನಷ್ಟವನ್ನು ವರದಿ ಮಾಡಿದೆ. ಭಾರತದಲ್ಲಿ, ಆರ್ಥಿಕ ವರ್ಷವು ಏಪ್ರಿಲ್ ೧ ರಿಂದ ಮುಂದಿನ ವರ್ಷದ ಮಾರ್ಚ್ ೩೧ ರವರೆಗೆ ನಡೆಯುತ್ತದೆ.

೨೦೧೩ ರ ಡೇಟಾ ಏನು ತೋರಿಸುತ್ತದೆ?

ಜೈಸ್ವಾಲ್ ಅವರು FY ೨೦೧೩-೧೪ ಅನ್ನು "೨೦೧೩" ಎಂದು ಉಲ್ಲೇಖಿಸಿದ್ದಾರೆ ಎಂದು ಭಾವಿಸಿ, ನಾವು ಆ ಆರ್ಥಿಕ ವರ್ಷದ ಬಿಎಸ್ಎನ್ಎಲ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ಹಣಕಾಸು ವರದಿಯನ್ನು ಪರಿಶೀಲಿಸಿದ್ದೇವೆ. ವರದಿಯು ಆ ವರ್ಷಕ್ಕೆ ರೂ. ೭,೦೧೯.೭೬ ಕೋಟಿ ನಿವ್ವಳ ನಷ್ಟವನ್ನು ಸೂಚಿಸುತ್ತದೆ.  ಕಂಪನಿಯು ಹಿಂದಿನ ವರ್ಷಗಳಲ್ಲಿಯೂ ನಷ್ಟವನ್ನು ಅನುಭವಿಸಿದೆ, ರೂ. ೧೦,೦೦೦ ಕೋಟಿ ಲಾಭದ ಹಕ್ಕುಗಳಿಗೆ ಈ ವರದಿ ವಿರುದ್ಧವಾಗಿದೆ.

೨೦೧೨-೧೩ ಮತ್ತು ೨೦೧೩-೧೪ ರ ಆರ್ಥಿಕ ವರ್ಷಕ್ಕೆ ಬಿಎಸ್ಎನ್ಎಲ್ ನ ಲಾಭ ಮತ್ತು ನಷ್ಟದ ವರದಿಯ ಸ್ಕ್ರೀನ್‌ಶಾಟ್. (ಮೂಲ: ಬಿಎಸ್ಎನ್ಎಲ್)

ಮಾರ್ಚ್ ೩೧, ೨೦೧೩ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ ರೂ. ೭,೮೮೪.೪೪ ಕೋಟಿ  ನಿವ್ವಳ ನಷ್ಟವನ್ನು ಬಿಎಸ್ಎನ್ಎಲ್  ಅನುಭವಿಸಿದೆ ಎಂದು ಅದೇ ದಾಖಲೆ ತೋರಿಸುತ್ತದೆ.

೨೦೨೪ ರ ಡೇಟಾದ ಬಗ್ಗೆ ಏನು?

ಇದಲ್ಲದೆ, ಬಿಎಸ್ಎನ್ಎಲ್ ನ ೨೦೨೪ ರ ಹಣಕಾಸು ವರದಿಯ ಡೇಟಾ, ವೈರಲ್ ಪೋಷ್ಟ್ ನ ಹೇಳಿಕೆಯೊಂದಿಗೆ ಹೊಂದಿಕೆಯಾಗುವುದಿಲ್ಲ. ಈ ವರದಿಯ ಪ್ರಕಾರ, ಕಂಪನಿಯು FY ೨೦೨೩-೨೪ ರಲ್ಲಿ ೫,೩೬೭.೪೫ ಕೋಟಿ ನಷ್ಟವನ್ನು ಹೊಂದಿದ್ದು, ಪೋಷ್ಟ್ ನಲ್ಲಿ ಹೇಳಿರುವಂತೆ ರೂ ೧೩,೦೦೦ ಕೋಟ ಅಲ್ಲ. ಈ ಮಾಹಿತಿಯನ್ನು ವರದಿಯ ಪುಟ ೪೬ ರಲ್ಲಿ ಪರಿಶೀಲಿಸಬಹುದು.

 FY ೨೦೨೩-೨೦೨೪ ರ ಬಿಎಸ್ಎನ್ಎಲ್ ನ ಹಣಕಾಸು ವರದಿಯ ಸ್ಕ್ರೀನ್‌ಶಾಟ್ ಅನ್ನು ಹೈಲೈಟ್ ಮಾಡಲಾಗಿದೆ.
(ಮೂಲ: ಬಿಎಸ್ಎನ್ಎಲ್)

FY ೨೦೨೨-೨೩ ರ ಡೇಟಾವನ್ನು ಪರಿಶೀಲಿಸಿದಾಗ, ಆ ವರ್ಷ ನಾವು ಹೆಚ್ಚಿನ ನಿವ್ವಳ ನಷ್ಟವನ್ನು ಕಂಡುಕೊಂಡಿದ್ದೇವೆ, ಅದು ರೂ ೮,೧೬೧.೪೧ ಕೋಟಿ . ಇದು FY ೨೦೨೩-೨೪ ರ ನಿವ್ವಳ ನಷ್ಟದಲ್ಲಿನ ಕಡಿತವನ್ನು ಸೂಚಿಸುತ್ತದೆ.

ಈ ಅಂಕಿಅಂಶಗಳನ್ನು ಎರಡೂ ವರ್ಷಗಳ ಸುದ್ದಿ ವರದಿಗಳಿಂದ ದೃಢೀಕರಿಸಲಾಗಿದೆ, ಇದು ಒಂದೇ ರೀತಿಯ ಸಂಖ್ಯೆಗಳನ್ನು ಉಲ್ಲೇಖಿಸುತ್ತದೆ. ಈ ವರದಿಗಳು ಬಿಎಸ್ಎನ್ಎಲ್ ನಷ್ಟವನ್ನು ಹೊಂದಿದೆ ಎಂದು ಸೂಚಿಸುತ್ತದೆ. FY ೨೦೧೩-೧೪ ರಲ್ಲಿ ರೂ. ೭,೦೨೦ ಕೋಟಿ ಮತ್ತು  FY ೨೦೨೩-೨೪ ರಲ್ಲಿ ರೂ. ೫,೩೬೭ ಕೋಟಿ 

ತೀರ್ಪು

ಸಾಮಾಜಿಕ ಮಾಧ್ಯಮ ಪೋಷ್ಟ್ ಗಳಲ್ಲಿ ಉಲ್ಲೇಖಿಸಲಾದ ಸಂಖ್ಯೆಗಳು ಬಿಎಸ್ಎನ್ಎಲ್ ಪ್ರಕಟಿಸಿದ ಹಣಕಾಸು ಹೇಳಿಕೆಗಳೊಂದಿಗೆ ಹೊಂದಿಕೆಯಾಗುವುದಿಲ್ಲ. ಕಂಪನಿಯು ಎರಡೂ ವರ್ಷಗಳಲ್ಲಿ ನಿವ್ವಳ ನಷ್ಟವನ್ನು ವರದಿ ಮಾಡಿದೆ, ಇದು ೨೦೧೩ ಮತ್ತು ೨೦೨೩ ರ ನಡುವೆ ಲಾಭದಿಂದ ನಷ್ಟಕ್ಕೆ ತಿರುಗಿತು ಎಂಬ ಹೇಳಿಕೆಯನ್ನು ನಿರಾಕರಿಸುತ್ತದೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ) 

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ