ಮುಖಪುಟ ಇಲ್ಲ, ಬಿಜೆಪಿ ೧೦೦+ ಲೋಕಸಭಾ ಸ್ಥಾನಗಳನ್ನು '೧೦೦೦ ಕ್ಕಿಂತ ಕಡಿಮೆ ಮತಗಳ ಅಂತರದಿಂದ' ಗೆದ್ದಿಲ್ಲ

ಇಲ್ಲ, ಬಿಜೆಪಿ ೧೦೦+ ಲೋಕಸಭಾ ಸ್ಥಾನಗಳನ್ನು '೧೦೦೦ ಕ್ಕಿಂತ ಕಡಿಮೆ ಮತಗಳ ಅಂತರದಿಂದ' ಗೆದ್ದಿಲ್ಲ

ಮೂಲಕ: ಅಂಕಿತಾ ಕುಲಕರ್ಣಿ

ಜೂನ್ 10 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಬಿಜೆಪಿ ೧೦೦+ ಲೋಕಸಭಾ ಸ್ಥಾನಗಳನ್ನು '೧೦೦೦ ಕ್ಕಿಂತ ಕಡಿಮೆ ಮತಗಳ ಅಂತರದಿಂದ' ಗೆದ್ದಿಲ್ಲ ೨೦೨೪ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ೧೦೦ ಕ್ಷೇತ್ರಗಳಲ್ಲಿ ೧೦೦೦ಕ್ಕಿಂತ ಕಡಿಮೆ ಅಂತರದಲ್ಲಿ ಗೆದ್ದಿದೆ ಎಂಬ ಸಂದೇಶದ ಸ್ಕ್ರೀನ್‌ಶಾಟ್ . (ಮೂಲ: ವಾಟ್ಸ್ ಆಪ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವಿನ ಅತ್ಯಂತ ಕಡಿಮೆ ಅಂತರ ೧,೫೮೭ ಮತಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿದಂತೆ '೫೦೦' ಅಥವಾ '೧೦೦೦' ಅಂತರಕ್ಕಿಂತ ಹೆಚ್ಚು.

ಹೇಳಿಕೆ ಏನು?

ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರತೀಯ ಜನತಾ ಪಕ್ಷವು (ಬಿಜೆಪಿ) "೫೦೦ ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ ೩೦ ಸ್ಥಾನಗಳನ್ನು ಗೆದ್ದಿದೆ" ಮತ್ತು "೧,೦೦೦ ಕ್ಕಿಂತ ಕಡಿಮೆ ಮತಗಳ ಅಂತರದಲ್ಲಿ ೧೦೦ ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ" ಎಂದು ಹೇಳಿಕೊಂಡಿದ್ದಾರೆ. ಈ ಹೇಳಿಕೆಯನ್ನು (ಇಲ್ಲಿ ಮತ್ತು ಇಲ್ಲಿ ಆರ್ಕೈವ್ ಮಾಡಲಾಗಿದೆ) ಇಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ನ (ಇವಿಎಂ)  ಆರೋಪಗಳೊಂದಿಗೆ ತನಿಖೆಗೆ ಕರೆ ನೀಡಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ವಾಟ್ಸ್ ಆಪ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಭಾರತೀಯ ಚುನಾವಣಾ ಆಯೋಗದ (ಇಸಿಐ) ಪ್ರಕಾರ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ೫೪೩ ಸ್ಥಾನಗಳಲ್ಲಿ ೨೪೦ ಸ್ಥಾನಗಳನ್ನು ಗೆದ್ದಿದೆ, ಅದರ ಫಲಿತಾಂಶಗಳನ್ನು ಜೂನ್ ೪, ೨೦೨೪ ರಂದು ಪ್ರಕಟಿಸಲಾಯಿತು. ಆದರೆ, ಆನ್‌ಲೈನ್ ಹೇಳಿಕೆ ತಪ್ಪು ಎಂದು ಇಸಿಐ ಡೇಟಾ ತೋರಿಸುತ್ತದೆ.

ನಾವು ಏನು ಕಂಡುಕೊಂಡಿದ್ದೇವೆ? 

ನಾವು ಇಸಿಐ ನ ವೆಬ್‌ಸೈಟ್‌ನಲ್ಲಿ ಅಧಿಕೃತ ಡೇಟಾವನ್ನು ವಿಶ್ಲೇಷಿಸಿದ್ದೇವೆ ಮತ್ತು ೨೦೨೪ ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಬಿಜೆಪಿ ಅಭ್ಯರ್ಥಿಗಳು "೫೦೦ ಕ್ಕಿಂತ ಕಡಿಮೆ ಮತಗಳ" ಅಥವಾ "೧,೦೦೦ ಕ್ಕಿಂತ ಕಡಿಮೆ ಮತಗಳ" ಅಂತರದಿಂದ ಗೆದ್ದಿಲ್ಲ ಎಂದು ಕಂಡುಕೊಂಡಿದ್ದೇವೆ. 

ಒಡಿಶಾದ ಜಾಜ್‌ಪುರದಲ್ಲಿ ಬಿಜೆಪಿಗೆ ಅತ್ಯಂತ ಕಡಿಮೆ ಅಂತರದ ಗೆಲುವಿನ ಅಂತರವಿದ್ದು, ಬಿಜೆಪಿಯ ರವೀಂದ್ರ ನಾರಾಯಣ್ ಬೆಹೆರಾ ಅವರು ೧,೫೮೭ ಮತಗಳ ಅಂತರದಿಂದ ಲೋಕಸಭೆ ಸ್ಥಾನವನ್ನು ಪಡೆದಿದ್ದಾರೆ. ಬೆಹೆರಾ ಅವರು ೫೩೪,೨೩೯ ಮತಗಳನ್ನು ಗಳಿಸಿದರು, ೫೩೨,೬೫೨ ಮತಗಳನ್ನು ಗಳಿಸಿದ ಬಿಜು ಜನತಾ ದಳದಿಂದ (ಬಿಜೆಡಿ) ಸರ್ಮಿಸ್ತಾ ಸೇಥಿ ಅವರನ್ನು ಸೋಲಿಸಿದರು.

ರಾಜಸ್ಥಾನದ ಜೈಪುರ ಗ್ರಾಮಾಂತರದಲ್ಲಿ ಬಿಜೆಪಿ ಅಭ್ಯರ್ಥಿಗೆ ಎರಡನೇ ಹತ್ತಿರದ ಗೆಲುವು, ಅಲ್ಲಿ ಬಿಜೆಪಿಯ ರಾವ್ ರಾಜೇಂದ್ರ ಸಿಂಗ್ ೧,೬೧೫ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ. ಸಿಂಗ್ ಅವರು ೬೧೭,೮೭೭ ಮತಗಳನ್ನು ಪಡೆದರು, ೬೧೬,೨೬೨ ಮತಗಳನ್ನು ಪಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಚೋಪ್ರಾ ಅವರನ್ನು ಹಿಂದಿಕ್ಕಿದ್ದಾರೆ.

ಛತ್ತೀಸಗಢದ ಕಂಕೇರ್ ಕ್ಷೇತ್ರದಲ್ಲಿ ಬಿಜೆಪಿಯ ಭೋಜರಾಜ್ ನಾಗ್ ೧,೮೮೪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ೫೯೭,೬೨೪ ಮತಗಳೊಂದಿಗೆ ಅವರು ೫೯೫,೭೪೦ ಮತಗಳನ್ನು ಪಡೆದ ಕಾಂಗ್ರೆಸ್‌ನ ಬೀರೇಶ್ ಠಾಕೂರ್ ಅವರನ್ನು ಸೋಲಿಸಿದರು.

ಈ ನಿದರ್ಶನಗಳನ್ನು ಹೊರತುಪಡಿಸಿ ಉಳಿದೆಲ್ಲ ಬಿಜೆಪಿ ಅಭ್ಯರ್ಥಿಗಳು ೨,೦೦೦ ಕ್ಕೂ ಹೆಚ್ಚು  ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ.

೫,೦೦೦ಕ್ಕಿಂತ ಕಡಿಮೆ ಮತಗಳ ಅಂತರದಿಂದ ತಮ್ಮ ಸ್ಥಾನಗಳನ್ನು ಗೆದ್ದ ಬಿಜೆಪಿ ಅಭ್ಯರ್ಥಿಗಳು.
(ಮೂಲ: results.eci.gov.in/Screenshot)

 ಇದಲ್ಲದೆ, ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಮುಂಬೈ ನ ನಾರ್ತ್ ವೆಸ್ಟ್ ಕ್ಷೇತ್ರದಲ್ಲಿ ಕಡಿಮೆ ಗೆಲುವಿನ ಅಂತರವು ಸಂಭವಿಸಿದೆ, ಅಲ್ಲಿ ಬಿಜೆಪಿ ವಿಜಯಶಾಲಿಯಾಗಲಿಲ್ಲ. ಶಿವಸೇನಾ ಅಭ್ಯರ್ಥಿ ರವೀಂದ್ರ ದತ್ತಾರಾಮ್ ವೈಕರ್ ೪೫೨,೬೪೪ ಮತಗಳನ್ನು ಗಳಿಸಿದರು ಮತ್ತು ಶಿವಸೇನೆಯ ಅಮೋಲ್ ಗಜಾನನ್ ಕೀರ್ತಿಕರ್ ಅವರನ್ನು (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಕೇವಲ ೪೮ ಮತಗಳಿಂದ ಸೋಲಿಸಿದರು.

ತೀರ್ಪು

ಭಾರತೀಯ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಬಿಜೆಪಿ ಅಭ್ಯರ್ಥಿಯು ೧,೫೮೭ ಮತಗಳ ಅಂತರದಿಂದ ಗೆದ್ದಿದ್ದಾರೆ, ಇದು ೧,೦೦೦ ಅಥವಾ ೫೦೦ ಕ್ಕಿಂತ ಕಡಿಮೆ ಅಂತರದಿಂದ ವಿಜಯದ ಹೇಳಿಕೆಗಳನ್ನು ನಿರಾಕರಿಸುತ್ತದೆ. ಅಧಿಕೃತ ಡೇಟಾ ಆನ್‌ಲೈನ್‌ನಲ್ಲಿ ಮಾಡಿದ ಹೇಳಿಕೆಗಳಿಗೆ ವಿರುದ್ಧವಾಗಿದೆ.

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ