ಮುಖಪುಟ ಇಲ್ಲ, ಭಾರತವು ಯು. ಎನ್. ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಪಡೆದಿಲ್ಲ

ಇಲ್ಲ, ಭಾರತವು ಯು. ಎನ್. ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಪಡೆದಿಲ್ಲ

ಮೂಲಕ: ಪ್ರಭಾನು ದಾಸ್

ಅಕ್ಟೋಬರ್ 14 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಭಾರತವು ಯು. ಎನ್. ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಪಡೆದಿದೆ ಎಂದು ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್ ಅನ್ನು ಈ ಚಿತ್ರವು ತೋರಿಸುತ್ತದೆ. ಎಕ್ಸ್ ನಲ್ಲಿನ ಪೋಷ್ಟ ಗಳು ಭಾರತವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರನ್ನಾಗಿ ಮಾಡಲಾಗಿದೆ ಎಂದು ಹೇಳುತ್ತದೆ. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಯುಎನ್‌ಎಸ್‌ಸಿ ಯ ವೆಬ್‌ಸೈಟ್‌ನ ಪ್ರಕಾರ, ಈಗಿನಂತೆ, ಕೇವಲ ಐದು ಖಾಯಂ ಸದಸ್ಯ ರಾಷ್ಟ್ರಗಳಿವೆ - ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್, ಯುನೈಟೆಡ್ ಕಿಂಗ್‌ಡಮ್, ಚೀನಾ ಮತ್ತು ರಷ್ಯಾ.

ಹೇಳಿಕೆ ಏನು?

ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿನ ಹಲವಾರು ಪೋಷ್ಟ್ ಗಳು, ಭಾರತವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು (ಯುಎನ್‌ಎಸ್‌ಸಿ) ಖಾಯಂ ಸದಸ್ಯರನ್ನಾಗಿ ಮಾಡಲಾಗಿದೆ ಎಂದು ಹಂಚಿಕೊಂಡಿವೆ. ಪೋಷ್ಟ್ ಗಳ ಶೀರ್ಷಿಕೆಯು "ಭಾರತ್ ಯುಎನ್‌ಎಸ್‌ಸಿಯಲ್ಲಿ ಖಾಯಂ ಸದಸ್ಯತ್ವವನ್ನು ಪಡೆದಿದೆ ಎಂದು ಘೋಷಿಸುತ್ತದೆ ಮತ್ತು ಅದಕ್ಕಾಗಿ ದೇಶವನ್ನು ಅಭಿನಂದಿಸುತ್ತೇನೆ. ಯುಎನ್‌ಎಸ್‌ಸಿಯಲ್ಲಿ ಭಾರತವು ಈಗ ವೀಟೋ ಅಧಿಕಾರವನ್ನು ಹೊಂದಿದೆ ಮತ್ತು ಈ ಹಿಂದೆ ಖಾಯಂ ಸದಸ್ಯತ್ವದೊಂದಿಗೆ ಐದು ದೇಶಗಳು ಇದ್ದವು ಮತ್ತು ಈಗ ಭಾರತ ಸೇರಿದಂತೆ ಆರು ದೇಶಗಳು ಇವೆ," ಎಂದು ಹೇಳಲಾಗಿದೆ. ಪೋಷ್ಟ್ ಗಳು ವಿಶ್ವಸಂಸ್ಥೆಯ (ಯು.ಎನ್.) ಸಭೆಗಳ ಮಾಂಟೇಜ್‌ಗಳೊಂದಿಗೆ ಭಾರತವು ಈಗ ಯುಎನ್‌ಎಸ್‌ಸಿಯ ಖಾಯಂ ಸದಸ್ಯ ಎಂದು ಘೋಷಿಸುವ ಅಶರೀರವಾಯ ನಿರೂಪಣೆಯನ್ನೂ ಸಹ ಒಳಗೊಂಡಿದೆ. ಪೋಷ್ಟ್ ಗಳ ಆರ್ಕೈವ್ ಲಿಂಕ್‌ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.


ಸಾಮಾಜಿಕ ಮಾಧ್ಯಮದಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. 
(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)


ಭಾರತ ಸೇರಿದಂತೆ ಹೆಚ್ಚಿನ ಖಾಯಂ ಸದಸ್ಯರನ್ನು ಸೇರಿಸಲು ಯುಎನ್‌ಎಸ್‌ಸಿ ಸುಧಾರಣೆಗೆ ಅಂತರರಾಷ್ಟ್ರೀಯ ಬೆಂಬಲ ಹೆಚ್ಚುತ್ತಿದೆ ಆದರೆ ಭಾರತವನ್ನು ಇನ್ನೂ ಖಾಯಂ ಸದಸ್ಯರನ್ನಾಗಿ ಮಾಡಲಾಗಿಲ್ಲ.

ಯುಎನ್‌ಎಸ್‌ಸಿ, ಖಾಯಂ ಸದಸ್ಯರು ಮತ್ತು ವೀಟೋ ಮತ

ಯುಎನ್‌ಎಸ್‌ಸಿ ಯು.ಎನ್.ನ ಆರು ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಸದಸ್ಯ ರಾಷ್ಟ್ರಗಳಿಗೆ ಬದ್ಧ ನಿರ್ಣಯಗಳನ್ನು ಹೊರಡಿಸುವ ಮತ್ತು ಹೊಸ ಸದಸ್ಯ ರಾಷ್ಟ್ರಗಳನ್ನು ವಿಶ್ವಸಂಸ್ಥೆಗೆ ಶಿಫಾರಸು ಮಾಡುವ ಏಕೈಕ ಅಂಗವಾಗಿದೆ. ಅದರ ಆದೇಶದ ಪ್ರಕಾರ, ಇದು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆ, ಸಂಘರ್ಷದ ಮಧ್ಯಸ್ಥಿಕೆ, ಯುಎನ್ ಚಾರ್ಟರ್‌ಗೆ ಬದಲಾವಣೆಗಳನ್ನು ಅನುಮೋದಿಸುವುದು, ಶಾಂತಿಪಾಲನಾ ಕಾರ್ಯಾಚರಣೆಗಳು, ಮಿಲಿಟರಿ ಕ್ರಮವನ್ನು ಅಧಿಕೃತಗೊಳಿಸುವುದು ಮತ್ತು ಅಂತರರಾಷ್ಟ್ರೀಯ ನಿರ್ಬಂಧಗಳನ್ನು ಜಾರಿಗೊಳಿಸಲು ಪ್ರಮುಖವಾಗಿ ಕಾರಣವಾಗಿದೆ.

ಯುಎನ್‌ಎಸ್‌ಸಿ ಯ ಸದಸ್ಯತ್ವವು ಐದು ಖಾಯಂ ಸದಸ್ಯರು ಮತ್ತು ೧೦ ಶಾಶ್ವತವಲ್ಲದ ಸದಸ್ಯರನ್ನು ಒಳಗೊಂಡಿದೆ. ಐದು ಖಾಯಂ ಸದಸ್ಯರನ್ನು ೧೯೪೫ ರಲ್ಲಿ ಆಯ್ಕೆ ಮಾಡಲಾಯಿತು ಮತ್ತು ಇನ್ನೂ ಬದಲಾಗಿಲ್ಲ. ಅವುಗಳೆಂದರೆ ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್, ಯುನೈಟೆಡ್ ಕಿಂಗ್‌ಡಮ್, ಚೀನಾ ಮತ್ತು ರಷ್ಯಾ. ೧೦ ಶಾಶ್ವತವಲ್ಲದ ಸದಸ್ಯರನ್ನು ಎರಡು ವರ್ಷಗಳ ಅವಧಿಗೆ ಜನರಲ್ ಅಸೆಂಬ್ಲಿಯಲ್ಲಿ ರಹಸ್ಯ ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಪ್ರಸ್ತುತ ಶಾಶ್ವತವಲ್ಲದ ಸದಸ್ಯರು ಅಲ್ಜೀರಿಯಾ, ಈಕ್ವೆಡಾರ್, ಗಯಾನಾ, ಜಪಾನ್, ಮಾಲ್ಟಾ, ಮೊಜಾಂಬಿಕ್, ರಿಪಬ್ಲಿಕ್ ಆಫ್ ಕೊರಿಯಾ, ಸಿಯೆರಾ ಲಿಯೋನ್, ಸ್ಲೊವೇನಿಯಾ ಮತ್ತು ಸ್ವಿಟ್ಜರ್ಲೆಂಡ್. 

ಇವೆರಡರ ನಡುವಿನ ಮತ್ತೊಂದು ವ್ಯತ್ಯಾಸವೆಂದರೆ ವೀಟೋ ಅಧಿಕಾರ. ಖಾಯಂ ಸದಸ್ಯರು ಯಾವುದೇ ನಿರ್ಣಯವನ್ನು ಬಹುಮತದ ಅನುಮೋದನೆಯನ್ನು ಹೊಂದಿದ್ದರೂ ಅದನ್ನು ವೀಟೋ ಮಾಡಬಹುದು. ಉದಾಹರಣೆಗೆ, ಇತರ ೧೪ ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದರೂ, ಖಾಯಂ ಸದಸ್ಯ ಅದನ್ನು ವೀಟೋ ಮಾಡಿದರೆ ಅದನ್ನು ಅಂಗೀಕರಿಸಲಾಗುವುದಿಲ್ಲ. ಖಾಯಂ ಸದಸ್ಯರು ತಮ್ಮ ಮತ್ತು ತಮ್ಮ ಮಿತ್ರಪಕ್ಷಗಳ ವಿರುದ್ಧ ನಿರ್ಣಯಗಳನ್ನು ನಿಲ್ಲಿಸಲು ಇದನ್ನು ಹೆಚ್ಚಾಗಿ ಬಳಸುತ್ತಾರೆ.

ಭಾರತವನ್ನು ಖಾಯಂ ಸದಸ್ಯರನ್ನಾಗಿ ಮಾಡಲಾಗಿದೆಯೇ?

ಇಲ್ಲ, ಯುಎನ್‌ಎಸ್‌ಸಿ ಯ ಇತ್ತೀಚಿನ ಸಭೆಗಳು ಮತ್ತು ನಿರ್ಣಯಗಳ ಪ್ರಕಾರ ಭಾರತವನ್ನು ಯುಎನ್‌ಎಸ್‌ಸಿ ಯ ಖಾಯಂ ಸದಸ್ಯರನ್ನಾಗಿ ಮಾಡಲಾಗಿಲ್ಲ. ಯುಎನ್‌ಎಸ್‌ಸಿ ವೆಬ್‌ಸೈಟ್ ಪ್ರಕಾರ, ಪ್ರಸ್ತುತ ಐದು ಖಾಯಂ ಸದಸ್ಯರಿದ್ದಾರೆ, ಮೇಲೆ ತಿಳಿಸಿದ ಹಾಗೆ. ಕೊನೆಯ ಬಾರಿಗೆ ಭಾರತವು ೨೦೨೧-೨೦೨೨ ಅವಧಿಗೆ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿತ್ತು.

ಕೌನ್ಸಿಲ್ ಸದಸ್ಯತ್ವ ಸುಧಾರಣೆ ಮತ್ತು ಭಾರತ ಸೇರಿದಂತೆ ಹೊಸ ಖಾಯಂ ಸದಸ್ಯರ ಸೇರ್ಪಡೆಗಾಗಿ ಚರ್ಚೆಗಳು ಮತ್ತು ಬೆಂಬಲಗಳು ನಡೆದಿವೆಯಾದರೂ, ಸುಧಾರಣೆಯತ್ತ ಯಾವುದೇ ಕಾಂಕ್ರೀಟ್ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ.

ತೀರ್ಪು

ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರಾಗಿಲ್ಲ. ಸಾಮಾಜಿಕ ಮಾಧ್ಯಮ ಬಳಕೆದಾರರ ಹೇಳಿಕೆ ತಪ್ಪಾಗಿದೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ) 

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ