ರಾಹುಲ್ ಗಾಂಧಿ ತಮ್ಮ ರ್‍ಯಾಲಿಗಳಲ್ಲಿ ಚೀನಾದ ಸಂವಿಧಾನವನ್ನು ಪ್ರದರ್ಶಿಸಿದ್ದಾರೆಯೇ? ಅಸ್ಸಾಂ ಸಿಎಂ ಹೇಳಿಕೆ ತಪ್ಪು

ಮೂಲಕ: ಇಶಿತಾ ಗೋಯಲ್ ಜೆ
ಮೇ 20 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ರಾಹುಲ್ ಗಾಂಧಿ ತಮ್ಮ ರ್‍ಯಾಲಿಗಳಲ್ಲಿ ಚೀನಾದ ಸಂವಿಧಾನವನ್ನು ಪ್ರದರ್ಶಿಸಿದ್ದಾರೆಯೇ? ಅಸ್ಸಾಂ ಸಿಎಂ ಹೇಳಿಕೆ ತಪ್ಪು

ರಾಹುಲ್ ಗಾಂಧಿ ಚೀನಾದ ಸಂವಿಧಾನವನ್ನು ಹಿಡಿದಿದ್ದಾರೆ ಎಂದು ತಪ್ಪಾಗಿ ಸೂಚಿಸುವ ಸಾಮಾಜಿಕ ಮಾಧ್ಯಮ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಗೋಪಾಲ್ ಶಂಕರನಾರಾಯಣನ್ ಅವರು ಬರೆದಿರುವ ಭಾರತದ ಸಂವಿಧಾನದ ಕೆಂಪು ಹೊದಿಕೆಯ ಕೋಟ್ ಪಾಕೆಟ್ ಆವೃತ್ತಿಯನ್ನು ರಾಹುಲ್ ಗಾಂಧಿ ಅವರು ಹಿಡಿದಿರುವುದನ್ನು ಫೋಟೋ ತೋರಿಸುತ್ತದೆ.

ಕ್ಲೈಮ್ ಐಡಿ 1cc10017

ಹೇಳಿಕೆ ಏನು?

ಭಾರತೀಯ ರಾಜಕಾರಣಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೆಂಪು ಕವರ್ ಹೊಂದಿರುವ ಪುಸ್ತಕವನ್ನು ಹಿಡಿದಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ಹಂಚಿಕೊಳ್ಳಲಾಗುತ್ತಿರುವ ಹೇಳಿಕೆ, ಗಾಂಧಿಯವರು 'ಮೂಲ ಚೀನೀ ಸಂವಿಧಾನದ' ಪ್ರತಿಯನ್ನು ಹಿಡಿದಿದ್ದಾರೆ ಎಂದು ಸೂಚಿಸುತ್ತದೆ, ಇದು 'ಕೆಂಪು ಹೊದಿಕೆಯನ್ನು' ಹೊಂದಿದೆ ಆದರೆ 'ಮೂಲ ಭಾರತೀಯ ಸಂವಿಧನದ' ಪ್ರತಿ 'ನೀಲಿ ಹೊದಿಕೆಯನ್ನು' ಹೊಂದಿದೆ ಎಂದು ಹೇಳಲಾಗುತ್ತಿದೆ.

ಮೇ ೧೭ ರಂದು ಬಿಜೆಪಿ ನಾಯಕ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಈ ಹೇಳಿಕೆಯನ್ನು ಮೊದಲು ಎಕ್ಸ್ ನಲ್ಲಿ ಪೋಷ್ಟ್ ಮಾಡಿದ್ದಾರೆ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅದರ ಶೀರ್ಷಿಕೆ, "ಭಾರತದ ಸಂವಿಧಾನದ ಮೂಲ ಪ್ರತಿಯು ನೀಲಿ ಹೊದಿಕೆಯನ್ನು ಹೊಂದಿದೆ. ಮೂಲ ಚೀನೀ ಸಂವಿಧಾನವು ಕೆಂಪು ಹೊದಿಕೆಯನ್ನು ಹೊಂದಿದೆ. ರಾಹುಲ್ ಚೀನಾ ಸಂವಿಧಾನವನ್ನು ಹಿಡಿದಿದ್ದಾರಾ? ನಾವು ಪರಿಶೀಲಿಸಬೇಕಾಗಿದೆ," ಎಂದು ಹೇಳುತ್ತದೆ. 

ಮೇ ೧೮ ರಂದು ಎಕ್ಸ್ ನಲ್ಲಿ ಮತ್ತೊಮ್ಮೆ ಪೋಷ್ಟ್ ಮಾಡಿದಾಗ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಶರ್ಮಾ ಅವರು ತಮ್ಮ ಹೇಳಿಕೆಯನ್ನು ಮತ್ತಷ್ಟು ಸಮರ್ಥಿಸಿಕೊಂಡರು, "ರಾಹುಲ್ ಅವರು ತಮ್ಮ ಸಭೆಗಳಿಗೆ ಹಾಜರಾಗುವ ಜನರಿಗೆ ಕೆಂಪು ಚೀನೀ ಸಂವಿಧಾನವನ್ನು ಪ್ರದರ್ಶಿಸುತ್ತಿದ್ದಾರೆ. ನೀಲಿ ಬಣ್ಣದಲ್ಲಿರುವ ನಮ್ಮ ಸಂವಿಧಾನವು ಒಂದು ಅಧ್ಯಾಯವನ್ನು ಒಳಗೊಂಡಿದೆ ರಾಜ್ಯ ನೀತಿಯ ನಿರ್ದೇಶನ ತತ್ವಗಳು ನಮ್ಮ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದು ಪವಿತ್ರ ಕರ್ತವ್ಯವಾಗಿದೆ, ಅದಕ್ಕಾಗಿಯೇ ಅವರ ಕೈಯಲ್ಲಿರುವ ಸಂವಿಧಾನವು ಚೀನೀ ಆಗಿರಬೇಕು ಎಂದು ನನಗೆ ಖಾತ್ರಿಯಿದೆ," ಎಂದು ಬರೆದಿದ್ದಾರೆ. 

ಶರ್ಮಾ ಅವರ ಮೊದಲ ಪೋಷ್ಟ್ ಎರಡು ವಿಭಿನ್ನ ಚಿತ್ರಗಳನ್ನು ಒಳಗೊಂಡಿತ್ತು: ಒಂದು ಕೆಂಪು ಕವರ್ ಹೊಂದಿರುವ ಚೀನಾದ ಸಂವಿಧಾನ ಮತ್ತು ಇನ್ನೊಂದು ನೀಲಿ ಕವರ್ ಹೊಂದಿರುವ ಭಾರತೀಯ ಸಂವಿಧಾನ. ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು  ಈ ಪೋಷ್ಟ್  ಅನ್ನು ಮರುಹಂಚಿಕೊಂಡಿದ್ದಾರೆ. ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ವಾಸ್ತವಾಂಶಗಳೇನು?

ಕೆಂಪು ಹೊದಿಕೆಯ ಪುಸ್ತಕದೊಂದಿಗೆ ಗಾಂಧಿಯವರ ನಿಖರವಾದ ಚಿತ್ರವು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ವೆಬ್‌ಸೈಟ್‌ನಲ್ಲಿ (ಆರ್ಕೈವ್ ಲಿಂಕ್) ಕಾಣಬಹುದು ಮತ್ತು ಅದರ ಶೀರ್ಷಿಕೆ "ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತೆಲಂಗಾಣದ ಗದ್ವಾಲ್‌ನಲ್ಲಿ ಲೋಕಸಭೆ ಚುನಾವಣೆಯ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದರು, ಭಾನುವಾರ, ಮೇ ೫, ೨೦೨೪. (ಪಿಟಿಐ ಫೋಟೋ)."

ಪಿಟಿಐ ಫೋಟೋಗಳ ವೆಬ್‌ಸೈಟ್‌ನಲ್ಲಿ ರಾಹುಲ್ ಗಾಂಧಿ ಅವರ ಚಿತ್ರ. (ಮೂಲ: ಪಿಟಿಐ ಫೋಟೋಗಳು)

ಇದನ್ನು ಆಧರಿಸಿ, ಗದ್ವಾಲ್‌ನಲ್ಲಿ ಗಾಂಧಿಯವರು ಮಾಡಿದ ಅದೇ ಭಾಷಣದ ವೀಡಿಯೋವನ್ನು ನಾವು ಕಂಡುಕೊಂಡೆವು. ಮೇ ೫, ೨೦೨೪ ರಂದು "ಲೋಕಸಭೆ ೨೦೨೪ ಪ್ರಚಾರ | ಸಾರ್ವಜನಿಕ ಸಭೆ | ಗದ್ವಾಲ್, ತೆಲಂಗಾಣ," ಶೀರ್ಷಿಕೆಯಡಿಯಲ್ಲಿ ಗಾಂಧಿಯವರ ಯೂಟ್ಯೂಬ್ ಚಾನೆಲ್ ನಲ್ಲಿ ಅವರ ಭಾಷಣೆಯ ನೇರ ಪ್ರಸಾರವನ್ನು ಪೋಷ್ಟ್ ಮಾಡಿದ್ದಾರೆ (ಇಲ್ಲಿ ಆರ್ಕೈವ್ ಮಾಡಲಾಗಿದೆ) "ಭಾರತದ ಸಂವಿಧಾನ" ಎಂಬ ಪದಗಳು ಗೋಚರಿಸುತ್ತವೆ.

ಪುಸ್ತಕವನ್ನು ಹಿಡಿದಾಗ, ಗಾಂಧಿಯವರು ಹಿಂದಿಯಲ್ಲಿ ಹೀಗೆ ಹೇಳಿದ್ದಾರೆ, “...ದೇಶದಲ್ಲಿ ಬಡವರು, ಒಬಿಸಿಗಳು, ದಲಿತರು ಮತ್ತು ಬುಡಕಟ್ಟು ಜನಾಂಗದವರು ಏನನ್ನಾದರೂ ಗಳಿಸಿದ್ದರೆ, ಅದು ಈ ಪುಸ್ತಕದಿಂದ, ನಮ್ಮ ಸಂವಿಧಾನದಿಂದ. ನಿಮಗೆ ಉದ್ಯೋಗ, ದಿನಗೂಲಿ, ಸಾರ್ವಜನಿಕ ವಲಯಗಳು ಮತ್ತು ಮೀಸಲಾತಿ ಇದ್ದರೆ, ಅದಕ್ಕೆಲ್ಲ ಈ ಪುಸ್ತಕವೇ ಕಾರಣ. ತನ್ನ ಅಸ್ತಿತ್ವದ ಮೊದಲು, ಭಾರತವು ನಿಮ್ಮೆಲ್ಲರ ಹಕ್ಕುಗಳನ್ನು ಹೊಂದಿರಲಿಲ್ಲ. ಈ ಪುಸ್ತಕವು ಎಲ್ಲಾ ವರ್ಗದ ಜನರ ಹಕ್ಕುಗಳನ್ನು ರಕ್ಷಿಸುತ್ತದೆ: ಓಬಿಸಿ, ಅಲ್ಪಸಂಖ್ಯಾತರು, ಬುಡಕಟ್ಟುಗಳು ಮತ್ತು ಸಾಮಾನ್ಯ ಜಾತಿಗಳು. ಬಿಜೆಪಿ ಈ ಪುಸ್ತಕವನ್ನು ಹರಿದು ಹಾಕಲು ಬಯಸುತ್ತದೆ. ಈ ಪುಸ್ತಕವು ಮಹಾತ್ಮ ಗಾಂಧೀಜಿ, ಬಿ.ಆರ್. ಅಂಬೇಡ್ಕರ್, ಮತ್ತು ಜವಾಹರಲಾಲ್ ನೆಹರು ಅವರ ಸ್ವತ್ತು…” ಇಲ್ಲಿ ಉಲ್ಲೇಖವು ಭಾರತದ ಸಂವಿಧಾನವನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ.


ತೆಲಂಗಾಣ ಯುವ ಕಾಂಗ್ರೆಸ್ ಸಹ ಏಪ್ರಿಲ್ ೨೯, ೨೦೨೪ ರಂದು ಭಾರತೀಯ ಸಂವಿಧಾನದ ಕೆಂಪು ಹೊದಿಕೆಯ ಪ್ರತಿಯನ್ನು ಹಿಡಿದಿರುವ ಗಾಂಧಿಯವರ ಇದೇ ರೀತಿಯ ಫೋಟೋವನ್ನು (ಆರ್ಕೈವ್ ಮಾಡಿದ ಆವೃತ್ತಿ) ಪೋಷ್ಟ್ ಮಾಡಿದೆ.

ಕೆಂಪು ಹೊದಿಕೆಯೊಂದಿಗೆ ಭಾರತದ ಸಂವಿಧಾನ

ಕೆಂಪು-ಹೊದಿಕೆಯ ಭಾರತೀಯ ಸಂವಿಧಾನದ ಪುಸ್ತಕದ ಹುಡುಕಾಟದಲ್ಲಿ, ಈಸ್ಟರ್ನ್ ಬುಕ್ ಕಂಪನಿ (ಇಬಿಸಿ) ಪ್ರಕಟಿಸಿದ 'ಕಾನ್‌ಸ್ಟಿಟ್ಯೂಷನ್ ಆಫ್ ಇಂಡಿಯಾ (ಕೋಟ್ ಪಾಕೆಟ್ ಎಡಿಷನ್)' ಎಂಬ ಶೀರ್ಷಿಕೆಯ ಗೋಪಾಲ್ ಶಂಕರನಾರಾಯಣನ್ ಅವರ ನಿರ್ದಿಷ್ಟ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ಈ ಪುಸ್ತಕವು ಇಬಿಸಿ ವೆಬ್‌ಸ್ಟೋರ್, ಆನ್‌ಲೈನ್ ಕಾನೂನು ಪುಸ್ತಕದಂಗಡಿ ಮತ್ತು ಅಮೆಜಾನ್ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ. ಈ ಇಬಿಸಿ ಆವೃತ್ತಿಯು ವೈರಲ್ ಚಿತ್ರದಲ್ಲಿ ಗಾಂಧಿ ಹಿಡಿದಿದ್ದ ಪ್ರತಿಗೆ ಹೊಂದಿಕೆಯಾಗುವುದನ್ನು ನಾವು ಗಮನಿಸಿದ್ದೇವೆ.

ಕೆಂಪು ಕವರ್ ಪ್ರತಿಯನ್ನು ಹಿಡಿದಿರುವ ಇತರ ನಾಯಕರು

ರಾಜಕಾರಣಿಯೊಬ್ಬರು ಈ ಪ್ರತಿಯನ್ನು ಹಿಡಿದಿರುವುದು ಇದೇ ಮೊದಲಲ್ಲ. ಈ ಹಿಂದೆ, ಭಾರತದ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಈ ಪುಸ್ತಕದ ಪ್ರತಿಯೊಂದಿಗೆ ಕಾಣಿಸಿಕೊಂಡಿದ್ದಾರೆ.

ಅಕ್ಟೋಬರ್ ೨೩, ೨೦೨೩ ರಂದು, ಆನ್‌ಲೈನ್ ಕಾನೂನು ಸಂಶೋಧನಾ ಡೇಟಾಬೇಸ್ ಎಸ್ ಸಿ ಸಿ  ಆನ್‌ಲೈನ್ (ಆರ್ಕೈವ್ ಲಿಂಕ್) (ಇಬಿಸಿ ಪ್ರಕಟಿಸಿದೆ) ಶಾ ಅವರು ಈ  ಪುಸ್ತಕವನ್ನು ಸ್ವೀಕರಿಸುತ್ತಿರುವ ಚಿತ್ರವನ್ನು ಪೋಷ್ಟ್ ಮಾಡಿದೆ ಮತ್ತು "ಇಬಿಸಿ  ನಿರ್ದೇಶಕರು, ಶ್ರೀ ಸುಮೈನ್ ಮಲಿಕ್ ಮತ್ತು ಶ್ರೀ ಸುಮೀತ್ ಮಲಿಕ್, ಪ್ರಸ್ತುತಪಡಿಸಿದ್ದಾರೆ ಕೋಟ್ ಪಾಕೆಟ್ ಸಂವಿಧಾನದ ಪ್ರತಿಯನ್ನು ಶ್ರೀ ಅಮಿತ್ ಶಾ, ಭಾರತದ ಗೃಹ ವ್ಯವಹಾರಗಳ ಸಚಿವರಿಗೆ," ಎಂದು ಬರೆಯಲಾಗಿದೆ. 

ಅದೇ ರೀತಿ, ದಿ ಸ್ಟೇಟ್ಸ್‌ಮನ್ ಜುಲೈ ೨೬, ೨೦೧೭ ರಂದು ವರದಿಯನ್ನು ಪ್ರಕಟಿಸಿದ್ದು, ಅಂದಿನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಇದೇ ರೀತಿಯ ಸಂವಿಧಾನದ ಪ್ರತಿಯನ್ನು ಮೋದಿ ಪ್ರಸ್ತುತಪಡಿಸುತ್ತಿರುವ ಫೋಟೋವನ್ನು ಒಳಗೊಂಡಿದೆ.

ಜುಲೈ ೧೫, ೨೦೨೧ ರಂದು, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (ಆರ್ಕೈವ್ ಲಿಂಕ್) ಅವರು ಮಧ್ಯಪ್ರದೇಶದ ಗವರ್ನರ್ ಶ್ರೀ ಮಂಗುಭಾಯ್ ಛಗನ್‌ಭಾಯ್ ಪಟೇಲ್ ಅವರಿಂದ ಕೋವಿಂದ್ ಅವರು ಈ ಪ್ರತಿಯನ್ನು ಸ್ವೀಕರಿಸುತ್ತಿರುವ ಚಿತ್ರವನ್ನು  ಪೋಷ್ಟ್ ಮಾಡಿದ್ದಾರೆ.

ಭಾರತೀಯ ಸಂವಿಧಾನದ ನೀಲಿ ಕವರ್ ಆವೃತ್ತಿ

ಜನವರಿ ೩೦, ೨೦೨೪ ರ ಟೈಮ್ಸ್ ಆಫ್ ಇಂಡಿಯಾ ವರದಿಯು, "ಭಾರತದ ಸಂವಿಧಾನವು ಯುಗಗಳ ಕಾಲ ಉಳಿಯಲು ಅವರು ಹೇಗೆ ಖಚಿತಪಡಿಸಿಕೊಂಡರು" ಎಂಬ ಶೀರ್ಷಿಕೆಯಡಿಯಲ್ಲಿ, ಈಗ ವೈರಲ್ ಪೋಷ್ಟ್ ಗಳಲ್ಲಿ ಬಳಸಲಾದ  'ಮೂಲ ನೀಲಿ-ಆವರಿಸಿದ ಸಂವಿಧಾನವನ್ನು' ಚಿತ್ರವನ್ನು ಒಳಗೊಂಡಿದೆ. ವರದಿಯ ಪ್ರಕಾರ ಭಾರತದ ಸಂವಿಧಾನದ ಕೈಬರಹದ ಪ್ರತಿಗಳನ್ನು ಪಾರ್ಲಿಮೆಂಟ್ ಲೈಬ್ರರಿಯಲ್ಲಿ ಪ್ರದರ್ಶನ ಸಂದರ್ಭಗಳಲ್ಲಿ ಸಂರಕ್ಷಿಸಲಾಗಿದೆ.

ಸಂವಿಧಾನ ವಿವಾದ

ಗಾಂಧಿಯವರು ಆರಂಭದಲ್ಲಿ ಎಲ್ಲಾ ಪಕ್ಷದ ಅಭ್ಯರ್ಥಿಗಳಿಗೆ ನಾಮನಿರ್ದೇಶನಗಳು ಮತ್ತು ಸಾರ್ವಜನಿಕ ಸಭೆಗಳ ಸಂದರ್ಭದಲ್ಲಿ ಸಂವಿಧಾನದ ಪ್ರತಿಯನ್ನು ಕೊಂಡೊಯ್ಯಲು ಹೇಳಿದ್ದರು, ಮತ್ತು ಅವರು ಸ್ವತಃ ಅದನ್ನು ಮಾಡಲು ಪ್ರಾರಂಭಿಸಿದ್ದರು. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಗಾಂಧಿಯವರು ಸಂವಿಧಾನದ ಪ್ರತಿಯನ್ನು ಮಾತ್ರ ಹೊತ್ತಿದ್ದಾರೆ ಆದರೆ ಅದನ್ನು ಓದುತ್ತಿಲ್ಲ ಎಂದು ಆರೋಪಿಸಿದ್ದರು.

ಮೇ ೧೭, ೨೦೨೪ ರಂದು, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ರ‍್ಯಾಲಿಯಲ್ಲಿ ಗಾಂಧಿಯವರು ಈ ವಿಷಯವನ್ನು ಪ್ರಸ್ತಾಪಿಸಿದರು. ಇಲ್ಲಿ, ನಾಗರಿಕರ ಸಾಂವಿಧಾನಿಕ ಮೌಲ್ಯಗಳು ಮತ್ತು ಹಕ್ಕುಗಳನ್ನು ದುರ್ಬಲಗೊಳಿಸಲು ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದು ಗಾಂಧಿ ಟೀಕಿಸಿದರು. ಇದನ್ನು ಅನುಸರಿಸಿ ಶರ್ಮಾ ಗಾಂಧಿಯವರು ‘ಕೆಂಪು ಹೊದಿಕೆಯಿರುವ ಚೀನೀ ಸಂವಿಧಾನವನ್ನು’ ಹೊತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.

ತೀರ್ಪು 

ವೈರಲ್ ಚಿತ್ರದಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಗೋಪಾಲ್ ಶಂಕರನಾರಾಯಣನ್ (ಇಬಿಸಿ ಪ್ರಕಟಿಸಿದ್ದಾರೆ) ಅವರ ಭಾರತದ ಸಂವಿಧಾನದ ಕೋಟ್ ಪಾಕೆಟ್ ಆವೃತ್ತಿಯನ್ನು ಹಿಡಿದಿದ್ದಾರೆ. ಆದ್ದರಿಂದ, ಗಾಂಧಿಯವರು ಚೀನಾದ ಸಂವಿಧಾನದ ಪ್ರತಿಯನ್ನು ಹಿಡಿದಿದ್ದಾರೆ ಎಂಬ ಹೇಳಿಕೆಯು ತಪ್ಪು.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , অসমীয়া , हिंदी , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.