ಮುಖಪುಟ ಸಂಸತ್ತಿನಲ್ಲಿ ಅನುರಾಗ್ ಠಾಕೂರ್ ಅವರ ಪ್ರಶ್ನೆಗೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ ಎಂದು ಹೇಳುವ ವೀಡಿಯೋ ಎಡಿಟ್ ಮಾಡಲಾಗಿದೆ

ಸಂಸತ್ತಿನಲ್ಲಿ ಅನುರಾಗ್ ಠಾಕೂರ್ ಅವರ ಪ್ರಶ್ನೆಗೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ ಎಂದು ಹೇಳುವ ವೀಡಿಯೋ ಎಡಿಟ್ ಮಾಡಲಾಗಿದೆ

ಜುಲೈ 5 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಸಂಸತ್ತಿನಲ್ಲಿ ಅನುರಾಗ್ ಠಾಕೂರ್ ಅವರ ಪ್ರಶ್ನೆಗೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ ಎಂದು ಹೇಳುವ ವೀಡಿಯೋ ಎಡಿಟ್ ಮಾಡಲಾಗಿದೆ ಸಂಸತ್ತಿನಲ್ಲಿ ಅನುರಾಗ್ ಠಾಕೂರ್ ಅವರ ಪ್ರಶ್ನೆಗೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ ಎಂದು ಹೇಳುವ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ.)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೈರಲ್ ಕ್ಲಿಪ್ ಅನ್ನು ಎಡಿಟ್ ಮಾಡಲಾಗಿದೆ. ಬಿಜೆಪಿಯ ಅನುರಾಗ್ ಠಾಕೂರ್ ಅವರು ಭಾರತೀಯ ಸಂವಿಧಾನದ ಬಗ್ಗೆ ಪ್ರತಿಪಕ್ಷಗಳನ್ನು ಪ್ರಶ್ನಿಸಿದಾಗ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಇರಲಿಲ್ಲ.

ಹೇಳಿಕೆ ಏನು?

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೋ ಒಂದರಲ್ಲಿ  ಹಿಮಾಚಲ ಪ್ರದೇಶದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ (ಎಂಪಿ) ಅನುರಾಗ್ ಠಾಕೂರ್ ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ಸಂವಿಧಾನದ ಬಗ್ಗೆ ಪ್ರಶ್ನೆಯನ್ನು ಕೇಳುತ್ತಿರುವುದನ್ನು ಚಿತ್ರಿಸುತ್ತದೆ.

ವೀಡಿಯೋದಲ್ಲಿ, ಠಾಕೂರ್ ಅವರು ಸವಾಲು ಹಾಕುತ್ತಾರೆ: "ಸಂವಿಧಾನದಲ್ಲಿ ಎಷ್ಟು ಪುಟಗಳಿವೆ? ಅಂದಾಜು ಮಾಡಬೇಡಿ-ನನಗೆ ನಿಖರವಾದ ಸಂಖ್ಯೆಯನ್ನು ನೀಡಿ. ನೀವು ಅದನ್ನು ಪ್ರತಿದಿನ ಒಯ್ಯುತ್ತೀರಿ, ಆದರೆ ನೀವು ಅದನ್ನು ಎಂದಾದರೂ ಓದುತ್ತೀರಾ?  ಅಥವಾ ನೀವು ಅದನ್ನು ತೆಗೆದುಕೊಂಡು ಬರಿ  ಅಲೆಯುತ್ತಿದ್ದೀರಾ? ಅದನ್ನು ಹೊರತೆಗೆಯಿರಿ ಈಗ (ಹಿಂದಿಯಿಂದ ಅನುವಾದಿಸಲಾಗಿದೆ)." ಕ್ಲಿಪ್ ನಂತರ ರಾಹುಲ್ ಗಾಂಧಿ ಮತ್ತು ವಿರೋಧ ಪಕ್ಷದ ಬೆಂಚ್‌ಗಳಲ್ಲಿ ನಿಂತಿರುವ ಇತರ ನಾಯಕರನ್ನು ತೋರಿಸುತ್ತದೆ. 

ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡ ಪೋಷ್ಟ್ ಒಂದರ  ಶೀರ್ಷಿಕೆ ಹೀಗಿದೆ: "ರಾಹುಲ್ ಗಾಂಧಿಯವರು ಸಂವಿಧಾನದಲ್ಲಿ ಎಷ್ಟು ಪುಟಗಳಿವೆ ಎಂದು ಹೇಳಲು ಸಾಧ್ಯವಿಲ್ಲ... ಇದನ್ನು ರಾಹುಲ್ ಬಾಬಾ ಅವರ ಭಾಷೆಯಲ್ಲಿ ಉತ್ತರಿಸುವುದು ಎಂದು ಕರೆಯಲಾಗುತ್ತದೆ... ಅನುರಾಗ್ ಠಾಕೂರ್ (sic). " ಈ ಪೋಷ್ಟ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ೨೩೭,೦೦೦ ವೀಕ್ಷಣೆಗಳನ್ನು ಗಳಿಸಿದೆ. ಇದೇ ರೀತಿಯ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್‌ಗಳು .
(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ.)

ಆದರೆ, ವೈರಲ್ ವೀಡಿಯೋವನ್ನು ಎಡಿಟ್ ಮಾಡಲಾಗಿದೆ. ಸಂವಿಧಾನದ ಬಗ್ಗೆ ಠಾಕೂರ್‌ ಅವರು ಕೇಳಿದ ಪ್ರಶ್ನೆಯ ಸಂದರ್ಭದಲ್ಲಿ ಗಾಂಧಿ ಇರಲಿಲ್ಲ.

ನಾವು ಕಂಡುಕೊಂಡದ್ದು ಏನು?  

ಜುಲೈ ೧, ೨೦೨೪ ರಂದು ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಸಂದರ್ಭದಲ್ಲಿ ಠಾಕೂರ್ ಅವರ ಭಾಷಣದ ಸಂಪೂರ್ಣ ವೀಡಿಯೋವನ್ನು ನಾವು ವಿಶ್ಲೇಷಿಸಿದ್ದೇವೆ, ಇದು ಸಂಸದ್ ಟಿವಿಯ ಯೂಟ್ಯೂಬ್ ಚಾನಲ್‌ನಲ್ಲಿ ಲಭ್ಯವಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ). ಪ್ರಶ್ನಾರ್ಹ ವಿಭಾಗವು ೫೬:೪೬ ರಲ್ಲಿ ಸಂಭವಿಸುತ್ತದೆ, ಅಲ್ಲಿ ಠಾಕೂರ್ ಅವರು ವಿರೋಧ ಪಕ್ಷದ ಸಂಸದರನ್ನು ಸಂವಿಧಾನದ ಬಗ್ಗೆ ಪ್ರಶ್ನಿಸುತ್ತಾರೆ.

ಠಾಕೂರ್ ಕೇಳುತ್ತಾರೆ (ಹಿಂದಿಯಿಂದ ಅನುವಾದಿಸಲಾಗಿದೆ), "ನಾನು ನಿಮ್ಮೆಲ್ಲರಿಗೂ ಒಂದು ಪ್ರಶ್ನೆಯನ್ನು ಕೇಳುತ್ತೇನೆ: ನಮ್ಮ ಸಂವಿಧಾನವು ಎಷ್ಟು ಪುಟಗಳನ್ನು ಒಳಗೊಂಡಿವೆ? ನೀವು ಅದನ್ನು ಪ್ರತಿದಿನ ಒಯ್ಯುತ್ತೀರಿ-ಬಹುಶಃ  ಈಗ ಅದನ್ನು ನೀವು ತೆರೆದು ಓದುವ ಸಮಯ."

ಠಾಕೂರ್ ಅವರು ಈ ಪ್ರಶ್ನೆಯನ್ನು ಕೇಳಿದಾಗ, ಕ್ಯಾಮೆರಾ ವಿರೋಧ ಪಕ್ಷದ ಬೆಂಚುಗಳನ್ನು ತೋರಿಸುತ್ತದೆ, ಆದರೆ ಗಾಂಧಿ ಅವರು ಗೈರುಹಾಜರಾಗಿದ್ದಾರೆ.

ಠಾಕೂರ್ ಭಾಷಣದ ಸಮಯದಲ್ಲಿ ವಿರೋಧ ಪಕ್ಷದ ಬೆಂಚುಗಳ ಸ್ಕ್ರೀನ್‌ಶಾಟ್. (ಮೂಲ: ಸಂಸದ್ ಟಿವಿ)

ಅಧಿವೇಶನದ ಆರಂಭದಲ್ಲಿ ಠಾಕೂರ್ ಅವರು ಭಾಷಣ ಆರಂಭಿಸಲು ಎದ್ದು ನಿಂತಾಗ ಗಾಂಧಿಯವರು ಲೋಕಸಭೆಯಲ್ಲಿ ಹಾಜರಿದ್ದರು. ೨೫ ಸೆಕೆಂಡುಗಳಲ್ಲಿ, ಗಾಂಧಿ ಎದ್ದುನಿಂತು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ರಾಷ್ಟ್ರಪತಿಗಳ ಭಾಷಣದ ನಂತರ ನೀಟ್ ಪರೀಕ್ಷೆಯ ಕುರಿತು ಚರ್ಚೆಗೆ ಒಂದು ದಿನವನ್ನು ನಿಗದಿಪಡಿಸಬೇಕು ಎಂದು ಸೂಚಿಸುವುದನ್ನು ಕಾಣಬಹುದು.

ಇದರ ನಂತರ, ಠಾಕೂರ್ ತಮ್ಮ ಭಾಷಣವನ್ನು ಪ್ರಾರಂಭಿಸಿದರು, ಮತ್ತು ವೀಡಿಯೋದಲ್ಲಿ ೩:೧೬ ನಿಮಿಷಗಳಲ್ಲಿ, ವಿರೋಧ ಪಕ್ಷದ ಸಂಸದರು ಸಂಸತ್ತಿನಿಂದ ಹೊರನಡೆಯುವುದನ್ನು ಕಾಣಬಹುದು. ನಂತರ, ಠಾಕೂರ್ ಅವರ ಭಾಷಣದ ಸಮಯದಲ್ಲಿ ಕೆಲವು ವಿರೋಧ ಪಕ್ಷದ ಸಂಸದರು ಸದನಕ್ಕೆ ಹಿಂತಿರುಗುತ್ತಾರೆ, ಆದರೆ ವೀಡಿಯೋದಲ್ಲಿ  ಗಾಂಧಿಯವರು ಲೋಕಸಭೆಯಲ್ಲಿ ಕಾಣಿಸುವುದಿಲ್ಲ. ಠಾಕೂರ್ ಅವರು ಸಂವಿಧಾನದ ಪುಟಗಳ ಬಗ್ಗೆ ಹೇಳಿದಾಗ,ಗಾಂಧಿ ಇನ್ನೂ ಸದನಕ್ಕೆ ಹಾಜರಾಗಿರಲಿಲ್ಲ.

ವಿರೋಧ ಪಕ್ಷದ ನಾಯಕರಾಗಿ, ಗಾಂಧಿಯವರು ಸ್ಪೀಕರ್‌ನ ಎಡಭಾಗದಲ್ಲಿ ಮೊದಲ ಸಾಲಿನಲ್ಲಿ ಗೊತ್ತುಪಡಿಸಿದ ಆಸನವನ್ನು ಪಡೆಯುತ್ತಾರೆ. ಆದರೆ, ಠಾಕೂರ್ ಹೇಳಿಕೆಯ ಸಂದರ್ಭದಲ್ಲಿ ಆ ಸೀಟು ಖಾಲಿಯಾಗಿದೆ.

ವೈರಲ್ ವೀಡಿಯೋದಲ್ಲಿ ಗಾಂಧಿಯವರ ಕ್ಲಿಪ್ ನ  ಬಗ್ಗೆ

ವೈರಲ್ ವೀಡಿಯೋದಲ್ಲಿ ಗಾಂಧಿಯನ್ನು ಒಳಗೊಂಡ ಫ್ರೇಮ್‌ಗಳ ಮೇಲೆ ರೆವೆರಿಸೆ ಇಮೇಜ್ ಸರ್ಚ್ ಅನ್ನು ನಡೆಸಿದೆವು ಮತ್ತು ಆ ಕ್ಲಿಪ್‌ಗಳು ಜುಲೈ ೧, ೨೦೨೪ ರಂದು ಅವರು ನೀಡಿದ ವಿಭಿನ್ನ ಭಾಷಣದಿಂದ ಬಂದಿವೆ ಎಂದು ಕಂಡುಬಂದಿದೆ. ಗಾಂಧಿಯವರ ಹೇಳಿಕೆಗಳು ಸಂಸದ್ ಟಿವಿಯ ಯೂಟ್ಯೂಬ್ ಚಾನಲ್‌ನಲ್ಲಿಯೂ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಸಹ ಲಭ್ಯವಿವೆ. ವೈರಲ್ ಕ್ಲಿಪ್‌ನಲ್ಲಿ ಸಂಪಾದಿಸಲಾದ ನಿಖರವಾದ ಭಾಗವನ್ನು ೧೯:೦೩-೧೯:೦೮ ಮಾರ್ಕ್‌ನಲ್ಲಿ ಕಾಣಬಹುದು.

ಠಾಕೂರ್‌ ಅವರ ಟೀಕೆಗಳನ್ನು ಒಳಗೊಂಡ ಕ್ಲಿಪ್‌ಗೆ ಗಾಂಧಿಯವರ ಭಾಷಣದ ಒಂದು ಸಣ್ಣ ಭಾಗವನ್ನು ಈ ತಪ್ಪಾದ ಹೇಳಿಕೆಯನ್ನು ಸೃಷ್ಟಿಸಲು ಸೇರಿಸಲಾಗಿದೆ ಎಂಬುದನ್ನು ಈ ಸಾಕ್ಷ್ಯವು ಸ್ಪಷ್ಟವಾಗಿ ತೋರಿಸುತ್ತದೆ.

ತೀರ್ಪು 

ವೈರಲ್ ವೀಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ನಮ್ಮ ತನಿಖೆ ದೃಢಪಡಿಸಿದೆ. ಸಂಸತ್ತಿನಲ್ಲಿ ಸಂವಿಧಾನದ ಬಗ್ಗೆ ಅನುರಾಗ್ ಠಾಕೂರ್ ಹೇಳಿಕೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಇರಲಿಲ್ಲ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ