ಮುಖಪುಟ ಭಾರತೀಯ ಸಂಸತ್ತಿನ ಹೊರಗೆ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು 'ಚೀನೀ ಸಂವಿಧಾನ'ವನ್ನು ಹಿಂಡಿದುಕೊಂಡಿರಲಿಲ್ಲ

ಭಾರತೀಯ ಸಂಸತ್ತಿನ ಹೊರಗೆ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು 'ಚೀನೀ ಸಂವಿಧಾನ'ವನ್ನು ಹಿಂಡಿದುಕೊಂಡಿರಲಿಲ್ಲ

ಮೂಲಕ: ಪ್ರಭಾನು ದಾಸ್

ಜೂನ್ 26 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಭಾರತೀಯ ಸಂಸತ್ತಿನ ಹೊರಗೆ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು 'ಚೀನೀ ಸಂವಿಧಾನ'ವನ್ನು ಹಿಂಡಿದುಕೊಂಡಿರಲಿಲ್ಲ ೧೮ ನೇ ಲೋಕಸಭೆಯ ಅಧಿವೇಶನದಲ್ಲಿ ಕಾಂಗ್ರೆಸ್ ಮತ್ತು INDIA ಬ್ಲಾಕ್ ಪ್ರತಿಭಟನೆಯಲ್ಲಿ ಚೀನಾದ ಸಂವಿಧಾನವನ್ನು ಎತ್ತಿ ಹಿಡಿಯಲಾಗಿದೆ ಎಂದು ಹೇಳುವ ವೈರಲ್ ಸಾಮಾಜಿಕ ಮಾಧ್ಯಮ ಪೋಷ್ಟ್‌ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೀಡಿಯೋಗಳಲ್ಲಿ ಕಂಡುಬರುವ ಪುಸ್ತಕಗಳು ಭಾರತೀಯ ಸಂವಿಧಾನದ ಪಾಕೆಟ್ ಗಾತ್ರದ ಆವೃತ್ತಿಗಳಾಗಿವೆ ಅವುಗಳು ಚೀನಾದ ಸಂವಿಧಾನದ ಪ್ರತಿಗಳು ಎಂಬ ಆನ್‌ಲೈನ್ ಹೇಳಿಕೆಗಳು ತಪ್ಪು.

ಹೇಳಿಕೆ ಏನು?

ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿನ ಹಲವಾರು ಪೋಷ್ಟ್ಗಳು ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಅಲಯನ್ಸ್ (INDIA) ಬ್ಲಾಕ್‌ನ ಸದಸ್ಯರನ್ನು ಒಳಗೊಂಡ ಪ್ರತಿಭಟನೆಯ ವೀಡಿಯೋಗಳನ್ನು ಒಳಗೊಂಡಿವೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮತ್ತು ದ್ರಾವಿಡ ಮುನ್ನೇತ್ರ ಸಂಸದ ಕಳಗಂನ ಕನಿಮೋಳಿ ಕರುಣಾನಿಧಿ ಮತ್ತು ತೃಣಮೂಲ ಕಾಂಗ್ರೆಸ್‌ನ ಮಹುವಾ ಮೊಯಿತ್ರಾ ಸೇರಿದಂತೆ ಇತರ ವಿರೋಧ ಪಕ್ಷದ ಸಂಸದರು ಸಣ್ಣ ಕೆಂಪು ಪುಸ್ತಕವನ್ನು ಹಿಡಿದುಕೊಂಡು ಭಾರತೀಯ ಸಂವಿಧಾನ ಮತ್ತು ಅದರ ತತ್ವಗಳನ್ನು ಬೆಂಬಲಿಸುವ ಘೋಷಣೆಗಳನ್ನು ಕೂಗುವುದನ್ನು ೨೦ ಸೆಕೆಂಡುಗಳ ಕ್ಲಿಪ್ ತೋರಿಸುತ್ತದೆ.

ಈ ಪೋಷ್ಟ್ ಗಳ ಜೊತೆಗಿನ ಶೀರ್ಷಿಕೆಗಳು ಪ್ರತಿಭಟನೆಯ ಸಮಯದಲ್ಲಿ ತೋರಿಸಲಾದ ಪುಸ್ತಕಗಳು ಭಾರತೀಯ ಸಂವಿಧಾನದ ಪ್ರತಿಗಳಲ್ಲ, ಬದಲಿಗೆ ಚೀನಾದ ಸಂವಿಧಾನ ಎಂದು ಆರೋಪಿಸುತ್ತವೆ. ಈ ಪೋಷ್ಟ್‌ ಗಳ ಆರ್ಕೈವ್ ಲಿಂಕ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಪ್ರತಿಭಟನೆಯಲ್ಲಿ ಚೀನಾದ ಸಂವಿಧಾನದ ಪ್ರತಿಗಳನ್ನು ಬಳಸಲಾಗಿದೆ ಎಂದು ಹೇಳುವ ಎಕ್ಸ್  ಪೋಷ್ಟ್‌ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಪ್ರತಿಭಟನಾಕಾರರು ಹೊಂದಿರುವ ಪುಸ್ತಕವು ಭಾರತೀಯ ಸಂವಿಧಾನದ ಪಾಕೆಟ್ ಗಾತ್ರದ ಆವೃತ್ತಿಯಾಗಿದೆ, ಚೀನಾದ ಸಂವಿಧಾನವಲ್ಲ ಎಂದು ಸ್ಪಷ್ಟವಾಗುತ್ತದೆ.

ನಾವು ಏನು ಕಂಡುಕೊಂಡಿದ್ದೇವೆ?

ಎಎನ್ಐ (ANI) ವಾಟರ್‌ಮಾರ್ಕ್ ಹೊಂದಿದ ವೀಡಿಯೋವನ್ನು ಪರಿಶೀಲಿಸಿದ ನಂತರ, ಅದನ್ನು ಮೂಲತಃ ಸುದ್ದಿ ಸಂಸ್ಥೆಯು ಜೂನ್ ೨೪, ೨೦೨೪ ರಂದು ಎಕ್ಸ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ನಲ್ಲಿ ಅಪ್‌ಲೋಡ್ ಮಾಡಿದೆ ಎಂದು ನಾವು ಕಂಡುಕೊಂಡೆವು. "ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ INDIA ಬ್ಲಾಕ್ ನಾಯಕರು ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ" ಎಂದು ಶೀರ್ಷಿಕೆಯಲ್ಲಿ ಹೇಳಲಾಗಿದೆ.

ಪ್ರತಿಭಟನೆಯ ಹೆಚ್ಚಿನ ದೃಶ್ಯಗಳು ಎಕ್ಸ್ ನಲ್ಲಿ ಕಂಡುಬಂದಿವೆ. ಖರ್ಗೆ ಅವರು ಜೂನ್ ೨೪, ೨೦೨೪ ರಂದು ಎಕ್ಸ್ ನಲ್ಲಿ ಈ ದೃಶ್ಯಗಳ ಕೊಲಾಜ್ ಅನ್ನು ಹಂಚಿಕೊಂಡಿದ್ದಾರೆ, ಜೊತೆಗೆ ವಿವಿಧ ಸಮಸ್ಯೆಗಳ ಬಗ್ಗೆ ಆಡಳಿತ ಪಕ್ಷದ ಕ್ರಮವನ್ನು ಒತ್ತಾಯಿಸುವ ಹೇಳಿಕೆಯೊಂದಿಗೆ (ಆರ್ಕೈವ್ ಇಲ್ಲಿ). ವೀಡಿಯೋದಲ್ಲಿ ೦:೩೫ ಸೆಕೆಂಡ್‌ನಲ್ಲಿ, ಪುಸ್ತಕದ ಶೀರ್ಷಿಕೆಯು ‘ಭಾರತದ ಸಂವಿಧಾನ’ ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ.

ಖರ್ಗೆಯವರ ಟ್ವೀಟ್‌ನಿಂದ 'ಭಾರತದ ಸಂವಿಧಾನ' ಎಂಬ ಶೀರ್ಷಿಕೆ ಗೋಚರಿಸುವ ದೃಶ್ಯಗಳ ಸ್ಕ್ರೀನ್‌ಶಾಟ್. (ಮೂಲ: ಖರ್ಗೆ/ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಅಂತೆಯೇ, ಜೂನ್ ೨೪, ೨೦೨೪ ರಂದು ರಾಹುಲ್ ಗಾಂಧಿಯವರು ಎಕ್ಸ್‌ನಲ್ಲಿ ಅಪ್‌ಲೋಡ್ ಮಾಡಿದ ಪ್ರತಿಭಟನೆಯ ವೀಡಿಯೋಗಳು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪುಸ್ತಕದ ಶೀರ್ಷಿಕೆ - ‘ದಿ ಕಾನ್‌ಸ್ಟಿಟ್ಯೂಷನ್ ಆಫ್ ಇಂಡಿಯಾ’ – ಕೆಲವು ಫ್ರೇಮ್‌ಗಳಲ್ಲಿ “ಈಸ್ಟರ್ನ್ ಇಬಿಸಿ” ಪದಗಳು ಗೋಚರಿಸುವುದನ್ನು ತೋರಿಸುತ್ತದೆ.

ಈ ಕ್ಲಿಪ್‌ನ ೦:೫೦ ಮಾರ್ಕ್‌ನಲ್ಲಿ, ಶೀರ್ಷಿಕೆಯು ಸ್ಪಷ್ಟವಾಗಿ ಗೋಚರಿಸುವ ಮೂಲಕ ಸೋನಿಯಾ ಗಾಂಧಿ ಅದನ್ನು ಕ್ಯಾಮೆರಾಕ್ಕೆ ಹಿಡಿದಿಟ್ಟುಕೊಳ್ಳುತ್ತಾರೆ ಮತ್ತು ೦:೫೭ ಮಾರ್ಕ್‌ನಲ್ಲಿ, ಕಾರಿನಲ್ಲಿ ಕುಳಿತ ರಾಹುಲ್ ಅದನ್ನು ಪತ್ರಿಕೆಗಳಿಗೆ ತೋರಿಸುತ್ತಾರೆ.

ಎಕ್ಸ್‌ನಲ್ಲಿ ರಾಹುಲ್ ಗಾಂಧಿಯವರು ಅಪ್‌ಲೋಡ್ ಮಾಡಿದ ವೀಡಿಯೋದಿಂದ ಸ್ಕ್ರೀನ್‌ಶಾಟ್‌ಗಳು 'ದಿ ಕಾನ್‌ಸ್ಟಿಟ್ಯೂಷನ್ ಆಫ್ ಇಂಡಿಯಾ' ಮತ್ತು ಪ್ರಕಾಶಕರು 'ಇಬಿಸಿ' ಗೋಚರಿಸುತ್ತವೆ. (ಮೂಲ: ರಾಹುಲ್ ಗಾಂಧಿ/ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಭಾರತದ ಸಂವಿಧಾನದ ಈ ನಿರ್ದಿಷ್ಟ ಕೆಂಪು ಆವೃತ್ತಿಯನ್ನು ಭಾರತದಲ್ಲಿ ಕಾನೂನು ಪುಸ್ತಕಗಳ ಪ್ರಮುಖ ಉತ್ಪಾದಕರಾದ ಈಸ್ಟರ್ನ್ ಬುಕ್ ಕಂಪನಿ (ಇಬಿಸಿ) ಪ್ರಕಟಿಸಿದೆ ಎಂದು ಗೂಗಲ್ ಸರ್ಚ್ ಬಹಿರಂಗಪಡಿಸಿದೆ. ಇದು ಗೋಪಾಲ್ ಶಂಕರನಾರಾಯಣನ್ ಬರೆದ ಕೋಟ್ ಪಾಕೆಟ್ ಆವೃತ್ತಿಯಾಗಿದೆ. ಈ ಹಿಂದೆ ರ್‍ಯಾಲಿಗಳಲ್ಲಿ ರಾಹುಲ್ ಈ ಕಾಪಿಯೊಂದಿಗೆ ಕಾಣಿಸಿಕೊಂಡಿದ್ದರು.

ಉದಾಹರಣೆಗೆ, ೨೦೨೪ ರ ಏಪ್ರಿಲ್‌ನಿಂದ ತೆಲಂಗಾಣ ಯುವ ಕಾಂಗ್ರೆಸ್‌ನಿಂದ ಎಕ್ಸ್ ಪೋಷ್ಟ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ನಡೆದ ರ್‍ಯಾಲಿಯಲ್ಲಿ ರಾಹುಲ್ ಅದೇ ಸಂವಿಧಾನದ ಪ್ರತಿಯನ್ನು ಹಿಡಿದಿರುವುದನ್ನು ತೋರಿಸುತ್ತದೆ.

ಜುಲೈ ೧೫, ೨೦೨೧ ರಂದು ರಾಷ್ಟ್ರಪತಿ ಭವನ ಎಕ್ಸ್ ಖಾತೆಯಿಂದ ಪೋಷ್ಟ್ ಮಾಡಲಾದ ಫೋಟೋದಲ್ಲಿ ಕಂಡುಬರುವಂತೆ, ಮಧ್ಯಪ್ರದೇಶದ ರಾಜ್ಯಪಾಲ ಮಂಗುಭಾಯ್ ಛಗನ್‌ಭಾಯ್ ಪಟೇಲ್ ಅವರಿಂದ ಪ್ರತಿಯನ್ನು ಸ್ವೀಕರಿಸಿದ ಮಾಜಿ ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಸೇರಿದಂತೆ ಇತರ ರಾಜಕೀಯ ವ್ಯಕ್ತಿಗಳನ್ನು ಸಹ ಈ ಪ್ರತಿಯೊಂದಿಗೆ ಛಾಯಾಚಿತ್ರ ಮಾಡಲಾಗಿದೆ (ಆರ್ಕೈವ್ ಮಾಡಲಾಗಿದೆ ಇಲ್ಲಿ).

ರಾಹುಲ್ ಬಳಿಯಿರುವ ಈ ಸಂವಿಧಾನದ ಪ್ರತಿಯನ್ನು ಈ ಹಿಂದೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಚೀನಾದ ಸಂವಿಧಾನ ಎಂದು ತಪ್ಪಾಗಿ ಗುರುತಿಸಿದ್ದಾರೆ, ಆ ಸಮಯದಲ್ಲಿ ಲಾಜಿಕಲಿ ಫ್ಯಾಕ್ಟ್ಸ್ ಈ ಹೇಳಿಕೆಯನ್ನು ನಿರಾಕರಿಸಿದೆ.

ತೀರ್ಪು

೧೮ ನೇ ಲೋಕಸಭೆಯ ಮೊದಲ ದಿನದ ಪ್ರತಿಭಟನೆಯಲ್ಲಿ INDIA ಬ್ಲಾಕ್ ಸದಸ್ಯರು ಚೀನಾ ಸಂವಿಧಾನದ ಪ್ರತಿಗಳನ್ನು ಬಳಸುತ್ತಿದ್ದಾರೆ ಎಂಬ ಹೇಳಿಕೆ ತಪ್ಪು. ಪ್ರಶ್ನೆಯಲ್ಲಿರುವ ಪುಸ್ತಕವು ಭಾರತೀಯ ಸಂವಿಧಾನದ ಪಾಕೆಟ್ ಗಾತ್ರದ ಆವೃತ್ತಿಯಾಗಿದೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ