ಮುಖಪುಟ ಟೈಮ್ಸ್ ಸ್ಕ್ವೇರ್‌ನಲ್ಲಿ ವಿರಾಟ್ ಕೊಹ್ಲಿಯ ನಿಜವಾದ ಪ್ರತಿಮೆ ಎಂದು ಮಾಧ್ಯಮಗಳು ಸಿಜಿಐ ವೀಡಿಯೋ ಜಾಹೀರಾತನ್ನು ತಪ್ಪಾಗಿ ಹಂಚಿಕೊಂಡಿವೆ

ಟೈಮ್ಸ್ ಸ್ಕ್ವೇರ್‌ನಲ್ಲಿ ವಿರಾಟ್ ಕೊಹ್ಲಿಯ ನಿಜವಾದ ಪ್ರತಿಮೆ ಎಂದು ಮಾಧ್ಯಮಗಳು ಸಿಜಿಐ ವೀಡಿಯೋ ಜಾಹೀರಾತನ್ನು ತಪ್ಪಾಗಿ ಹಂಚಿಕೊಂಡಿವೆ

ಮೂಲಕ: ಅಂಕಿತಾ ಕುಲಕರ್ಣಿ

ಜುಲೈ 1 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಟೈಮ್ಸ್ ಸ್ಕ್ವೇರ್‌ನಲ್ಲಿ ವಿರಾಟ್ ಕೊಹ್ಲಿಯ ನಿಜವಾದ ಪ್ರತಿಮೆ ಎಂದು ಮಾಧ್ಯಮಗಳು ಸಿಜಿಐ  ವೀಡಿಯೋ ಜಾಹೀರಾತನ್ನು ತಪ್ಪಾಗಿ ಹಂಚಿಕೊಂಡಿವೆ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ ಎಂದು ಹೇಳುವ ವೈರಲ್ ವೀಡಿಯೋ ಮತ್ತು ಮಾಧ್ಯಮ ವರದಿಗಳ ಮುಖ್ಯಾಂಶಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ನ್ಯೂಸ್ ೧೮/ಹಿಂದೂಸ್ತಾನ್ ಟೈಮ್ಸ್/ಇಂಡಿಯಾ ಟಿವಿ/ದಿ ಎಕನಾಮಿಕ್ ಟೈಮ್ಸ್)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ತಮ್ಮ ಹಾಸಿಗೆಗಳನ್ನು ಜಾಹೀರಾತು ಮಾಡಲು ಸಿಜಿಐ ಅನ್ನು ಬಳಸಿಕೊಂಡು ವೀಡಿಯೋವನ್ನು ರಚಿಸಲಾಗಿದೆ ಎಂದು ಡ್ಯುರೊಫ್ಲೆಕ್ಸ್ ಪ್ರತಿನಿಧಿ ಲಾಜಿಕಲಿ ಫ್ಯಾಕ್ಟ್ಸ್‌ಗೆ ದೃಢಪಡಿಸಿದರು.

ಹೇಳಿಕೆ ಏನು?

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಚಿತ್ರವು ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿರುವ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿಯ ಚಿನ್ನದ ಪ್ರತಿಮೆಯನ್ನು ಚಿತ್ರಿಸುತ್ತದೆ, ಇದು ಭಾರತೀಯ ಕ್ರಿಕೆಟ್‌ಗೆ ಮಹತ್ವದ ಕ್ಷಣವಾಗಿದೆ ಎಂದು ಹೇಳಲಾಗಿದೆ. ಎಕ್ಸ್‌ನಲ್ಲಿ (ಹಿಂದೆ ಟ್ವಿಟ್ಟರ್) ಅಂತಹ ಒಂದು ಪೋಷ್ಟ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) "ಟೈಮ್ಸ್ ಸ್ಕ್ವೇರ್‌ನಲ್ಲಿರುವ ವಿರಾಟ್ ಕೊಹ್ಲಿಯ ಪ್ರತಿಮೆಯನ್ನು ವಿಶ್ವದ ೮ ನೇ ಅದ್ಭುತವೆಂದು ಘೋಷಿಸಬೇಕು" ಎಂದು ಹೇಳುವ ವೀಡಿಯೋದಿಂದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದೆ. 

ಬರೆಯುವ ಸಮಯದಲ್ಲಿ, ಪೋಷ್ಟ್ ವೇದಿಕೆಯಲ್ಲಿ ೧೯೦,೨೦೦ ವೀಕ್ಷಣೆಗಳನ್ನು ಗಳಿಸಿದೆ. ಒಂದೇ ರೀತಿಯ ಪೋಷ್ಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ನ್ಯೂಸ್ ೧೮, ಹಿಂದೂಸ್ತಾನ್ ಟೈಮ್ಸ್, ಇಂಡಿಯಾ ಟಿವಿ ಮತ್ತು ಎಕನಾಮಿಕ್ ಟೈಮ್ಸ್ ಸೇರಿದಂತೆ ಬಹು ಮುಖ್ಯವಾಹಿನಿಯ ಮಾಧ್ಯಮಗಳು ವೈರಲ್ ಪ್ರತಿಮೆಯ ಬಗ್ಗೆ ವರದಿ ಮಾಡಿ, ಅದನ್ನು "ಇತ್ತೀಚೆಗೆ ಅನಾವರಣಗೊಳಿಸಲಾಗಿದೆ" ಎಂದು ಹೇಳಿಕೊಂಡಿವೆ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೈರಲ್ ಪೋಷ್ಟ್‌ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ನಮ್ಮ ತನಿಖೆಯು ವೀಡಿಯೋ ವಾಸ್ತವವಾಗಿ ಸಿಜಿಐ (ಕಂಪ್ಯೂಟರ್-ರಚಿತ ಚಿತ್ರಣ) ಬಳಸಿಕೊಂಡು ಡ್ಯುರೊಫ್ಲೆಕ್ಸ್ ಎಂಬ ಹಾಸಿಗೆ ಕಂಪನಿಯಿಂದ ರಚಿಸಲಾದ ಜಾಹೀರಾತು ಎಂದು ಬಹಿರಂಗಪಡಿಸುತ್ತದೆ.

ನಾವು ಏನು ಕಂಡುಕೊಂಡಿದ್ದೇವೆ?

ವೈರಲ್ ಚಿತ್ರದ ರಿವರ್ಸ್ ಇಮೇಜ್ ಸರ್ಚ್, ಜೂನ್ ೨೩, ೨೦೨೪ ರಂದು ಡ್ಯುರೊಫ್ಲೆಕ್ಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅಪ್‌ಲೋಡ್ ಮಾಡಿದ ವೀಡಿಯೋಗೆ ನಮ್ಮನ್ನು ಕರೆದೊಯ್ಯಿತು. ಶೀರ್ಷಿಕೆಯು ಹೀಗಿದೆ: “ಈಗಷ್ಟೇ ಅನಾವರಣಗೊಂಡಿದೆ: ಐಕಾನಿಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ವಿರಾಟ್ ಕೊಹ್ಲಿಯ ಜೀವಕ್ಕಿಂತ ದೊಡ್ಡ ಪ್ರತಿಮೆ. ಈ ರಾಜನ ಕರ್ತವ್ಯ, ನಾವು ಜಾಗತಿಕವಾಗಿ ಹೋಗುತ್ತಿದ್ದೇವೆ ಮತ್ತು ಇತಿಹಾಸವನ್ನು ನಿರ್ಮಿಸುತ್ತಿದ್ದೇವೆ! ನಾವು ವಿರಾಟ್ ಕೊಹ್ಲಿಗೆ ಉತ್ತಮ ನಿದ್ರೆ ಮತ್ತು ಉತ್ತಮ ಆರೋಗ್ಯವನ್ನು ನೀಡುತ್ತಿದ್ದೇವೆ. #GreatSleepGreatHealth #ViratKohli #worldcup #cricket #CGI (sic).

'CGI' ಎಂಬ ಹ್ಯಾಶ್‌ಟ್ಯಾಗ್ ಇದು ಕಂಪ್ಯೂಟರ್-ರಚಿತವಾಗಿದೆ ಎಂದು ಸೂಚಿಸುತ್ತದೆ. ಸಿಜಿಐ ಎನ್ನುವುದು ದೃಶ್ಯ ಪ್ರಾತಿನಿಧ್ಯಕ್ಕಾಗಿ ಚಿತ್ರಗಳು ಮತ್ತು ವೀಡಿಯೋಗಳನ್ನು ಹೆಚ್ಚಿಸಲು ಗ್ರಾಫಿಕ್ಸ್ ಅನ್ನು ಬಳಸುವ ತಂತ್ರಜ್ಞಾನವಾಗಿದೆ. 

ವೀಡಿಯೋವನ್ನು ಅವರ ಇನಸ್ಟಾಗ್ರಾಮ್ ಖಾತೆಯಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಮತ್ತು ಯೂಟ್ಯೂಬ್ ಚಾನಲ್‌ನಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹಂಚಿಕೊಳ್ಳಲಾಗಿದೆ, ಇದು ಸಿಜಿಐ ಎಂದು ಸ್ಪಷ್ಟವಾಗಿ ಹೇಳುತ್ತದೆ.

ವೈರಲ್ ಕ್ಲಿಪ್ ಸಿಜಿಐ ಎಂದು ಹೇಳುವ ಡ್ಯುರೊಫ್ಲೆಕ್ಸ್ ನ ಇನಸ್ಟಾಗ್ರಾಮ್ ಪೋಷ್ಟ್‌ನ ಸ್ಕ್ರೀನ್‌ಶಾಟ್.
(ಮೂಲ: ಇನಸ್ಟಾಗ್ರಾಮ್/ಡ್ಯುರೊಫ್ಲೆಕ್ಸ್/ಸ್ಕ್ರೀನ್‌ಶಾಟ್) 

ಲಾಜಿಕಲಿ ಫ್ಯಾಕ್ಟ್ಸ್ ಡ್ಯುರೊಫ್ಲೆಕ್ಸ್ ಪ್ರತಿನಿಧಿಯನ್ನು ಸಂಪರ್ಕಿಸಿತು (ಅವರು ಹಾಗೆ ಗುರುತಿಸಲು ಬಯಸುತ್ತಾರೆ), ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಷ್ಟ್ ಮಾಡಿದ ವೀಡಿಯೋವನ್ನು ಸಿಜಿಐ ಬಳಸಿ ರಚಿಸಲಾಗಿದೆ ಮತ್ತು ಇದು ಅವರ ರಾಷ್ಟ್ರೀಯ ಬ್ರಾಂಡ್ ರಾಯಭಾರಿ ವಿರಾಟ್ ಕೊಹ್ಲಿಯನ್ನು ಒಳಗೊಂಡ ಜಾಹೀರಾತು ಎಂದು ದೃಢಪಡಿಸಿದರು. ಡ್ಯುರೊಫ್ಲೆಕ್ಸ್ ಮೇ ೧೫, ೨೦೨೩ ರಂದು ಕೊಹ್ಲಿಯನ್ನು ತಮ್ಮ ಬ್ರಾಂಡ್ ಅಂಬಾಸಿಡರ್ ಆಗಿ ಮಾಡಿಕೊಂಡಿತ್ತು.

ಅರ್ತ್‌ಕ್ಯಾಮ್ ಮೂಲಕ ಸ್ಟ್ರೀಮ್ ಮಾಡಲಾದ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನ ಲೈವ್ ಫೂಟೇಜ್ ಅನ್ನು ನಾವು ಯೂಟ್ಯೂಬ್ ನಲ್ಲಿ ಪರಿಶೀಲಿಸಿದ್ದೇವೆ, ಆದರೆ ಕೊಹ್ಲಿಯ ಪ್ರತಿಮೆಯ ಬಗ್ಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ, ವೀಡಿಯೋ ಡಿಜಿಟಲ್ ಆಗಿ ರಚಿಸಲಾಗಿದೆ ಮತ್ತು ನಿಜವಲ್ಲ ಎಂದು ಮತ್ತಷ್ಟು ದೃಢಪಡಿಸುತ್ತದೆ.

ಹೆಚ್ಚುವರಿಯಾಗಿ, ಡ್ಯುರೊಫ್ಲೆಕ್ಸ್ ಈ ಹಿಂದೆ ಇದೇ ರೀತಿಯ ಸಿಜಿಐ ವೀಡಿಯೋಗಳನ್ನು ಜಾಹೀರಾತುಗಳಾಗಿ ಪೋಷ್ಟ್ ಮಾಡಿದೆ ಎಂದು ನಾವು ಪತ್ತೆಹಚ್ಚಿದ್ದೇವೆ, ಅದನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ತೀರ್ಪು

ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿರುವ ವಿರಾಟ್ ಕೊಹ್ಲಿಯ ಪ್ರತಿಮೆಯನ್ನು ಬಿಂಬಿಸುವ ಸಿಜಿಐ ವೀಡಿಯೋವನ್ನು ಡ್ಯುರೊಫ್ಲೆಕ್ಸ್ ಜಾಹೀರಾತಿನಂತೆ ರಚಿಸಿದೆ, ಇದು ಭಾರತೀಯ ಕ್ರಿಕೆಟಿಗನಿಗೆ ಸಮರ್ಪಿತವಾದ ನಿಜವಾದ ಪ್ರತಿಮೆಯನ್ನು ಪ್ರತಿನಿಧಿಸುತ್ತದೆ ಎಂಬ ತಪ್ಪು ಹೇಳಿಕೆಯೊಂದಿಗೆ ಪ್ರಸಾರವಾಗುತ್ತಿದೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ