ಮುಖಪುಟ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ಸಿಗರೇಟ್ ಹಿಡಿದಿರುವ ಈ ಚಿತ್ರವು ಎಐ- ರಚಿತವಾಗಿದೆ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ಸಿಗರೇಟ್ ಹಿಡಿದಿರುವ ಈ ಚಿತ್ರವು ಎಐ- ರಚಿತವಾಗಿದೆ

ಮೂಲಕ: ಮೊಹಮ್ಮದ್ ಸಲ್ಮಾನ್

ಜುಲೈ 16 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ಸಿಗರೇಟ್ ಹಿಡಿದಿರುವ ಈ ಚಿತ್ರವು ಎಐ- ರಚಿತವಾಗಿದೆ ವೈರಲ್ ಆಗಿರುವ ಚಿತ್ರದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ಸಿಗರೇಟ್ ಹಿಡಿದಿದ್ದಾರೆ. (ಮೂಲ: ಎಕ್ಸ್/ ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ವೈರಲ್ ಚಿತ್ರವನ್ನು ಎಐ ಟೂಲ್ 'ರೀಮೇಕರ್' ಮೂಲಕ ಎಡಿಟ್ ಮಾಡಲಾಗಿದೆ ಮತ್ತು ಮೂಲ ಚಿತ್ರದಲ್ಲಿರುವ ಮಹಿಳೆಯ ಮುಖವನ್ನು ಸೋನಿಯಾ ಗಾಂಧಿಯವರ ಮುಖದೊಂದಿಗೆ ಬದಲಾಯಿಸಲಾಗಿದೆ.

ಹೇಳಿಕೆ ಏನು?

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಸಿಗರೇಟ್ ಹಿಡಿದಿರುವ ಕಪ್ಪು-ಬಿಳುಪು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಅವರ ಯೌವನದ ಫೋಟೋ ಎಂದು ಹೇಳಿಕೊಳ್ಳಲಾಗಿದೆ. ಕಾಂಗ್ರೆಸ್ ನಾಯಕಿ ಸಿಗರೇಟು ಹಿಡಿದುಕೊಂಡು ತಲೆಗೆ ಮುಸುಕು ಹಾಕಿಕೊಂಡು ಕಂಬಕ್ಕೆ ಒರಗಿ ನಿಂತಿರುವುದನ್ನು ಕಾಣಬಹುದು. 

ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಭಗವಾ ಕ್ರಾಂತಿ ಎಂಬ ಹೆಸರಿನ ಬಳಕೆದಾರರು ಚಿತ್ರವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಈ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: "(ಫೋಟೋ) ಗುರುತಿಸುವ ವ್ಯಕ್ತಿಗೆ ರೂ ೮೫೦೦ ಕಟಾ ಕಟ್ ಟಕಾ ಟಕ್ (sic) (ಹಿಂದಿಯಿಂದ ಅನುವಾದಿಸಲಾಗಿದೆ)." ೨೦೨೪ ರಲ್ಲಿ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯ ಹಣಕಾಸು ಯೋಜನೆಯ ಭಾಗವಾಗಿ ಸೂಚಿಸಲು ಆಡಳಿತಾರೂಢ ಬಿಜೆಪಿ ನಾಯಕರು ಮತ್ತು ಬೆಂಬಲಿಗರು ಬಳಸಿದ ಪದಗುಚ್ಛವನ್ನು ಜಿಬ್ ಉಲ್ಲೇಖಿಸುತ್ತದೆ. ಚಿತ್ರದೊಂದಿಗೆ ಹೆಚ್ಚಿನ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.


ಎಕ್ಸ್ ನಲ್ಲಿ ವೈರಲ್ ಚಿತ್ರದ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಆದರೆ, ಎಐ (AI) ಕಂಟೆಂಟ್ ಜನರೇಟರ್ ಟೂಲ್ 'ರಿಮೇಕರ್' ಅನ್ನು ಬಳಸಿ, ೨೦೧೩ ರಲ್ಲಿ ಮೈಕ್ರೋಬ್ಲಾಗಿಂಗ್ ಸೈಟ್ ಟಂಬ್ಲರ್ (Tumblr) ನಲ್ಲಿ ಅಪ್‌ಲೋಡ್ ಮಾಡಲಾದ ಮೂಲ ಫೋಟೋಗೆ ಸೋನಿಯಾ ಗಾಂಧಿಯವರ ಮುಖವನ್ನು ಸೇರಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.

ನಾವು ಕಂಡುಕೊಂಡದ್ದು

ವೈರಲ್ ಚಿತ್ರದ ಕೆಳಗಿನ ಎಡ ಮೂಲೆಯಲ್ಲಿ 'ರೀಮೇಕರ್' ಎಂದು ಹೇಳುವ ಸಣ್ಣ ವಾಟರ್‌ಮಾರ್ಕ್ ಅನ್ನು ನಾವು ಗಮನಿಸಿದ್ದೇವೆ, ಯಾವುದೇ ಫೋಟೋ ಅಥವಾ ವೀಡಿಯೋದಲ್ಲಿ ಯಾರೊಬ್ಬರ ಮುಖವನ್ನು ಬದಲಾಯಿಸಬಹುದಾದ ಎಐ (ಕೃತಕ ಬುದ್ಧಿಮತ್ತೆ) ಸೃಜನಶೀಲ ವಿಷಯ ಜನರೇಟರ್. ವೈರಲ್ ಫೋಟೋದಲ್ಲಿರುವ ಸೋನಿಯಾ ಗಾಂಧಿಯವರ ಮುಖವನ್ನು ಈ ಫೇಸ್ ಸ್ವಾಪ್ ಸಾಫ್ಟ್‌ವೇರ್ ಬಳಸಿ ಬದಲಾಯಿಸಿರಬಹುದು ಎಂದು ಇದು ಸೂಚಿಸುತ್ತದೆ.


ವೈರಲ್ ಚಿತ್ರದಲ್ಲಿ 'ರೀಮೇಕರ್' ವಾಟರ್‌ಮಾರ್ಕ್. (ಮೂಲ: ಎಕ್ಸ್/ ಸ್ಕ್ರೀನ್‌ಶಾಟ್)

ಸೋನಿಯಾ ಗಾಂಧಿಯವರ ಮುಖದ ಹೊಳಪು ಉಳಿದ ಫೋಟೋದ ಟೋನ್‌ಗೆ ಹೊಂದಿಕೆಯಾಗುವುದಿಲ್ಲ ಮತ್ತು ಅವರ ಮುಖಕ್ಕೆ ಅವಾಸ್ತವಿಕ ಗುಣಮಟ್ಟವನ್ನು ನೀಡಿರುವುದನ್ನು ನಾವು ಗಮನಿಸಿದ್ದೇವೆ. ಇದು ಸಾಮಾನ್ಯವಾಗಿ ಎಐ ಮೂಲಕ ರಚಿಸಲಾದ ಚಿತ್ರಗಳಲ್ಲಿ ಕಂಡುಬರುತ್ತದೆ. 

ವೈರಲ್ ಫೋಟೋದ ರಿವರ್ಸ್ ಇಮೇಜ್ ಸರ್ಚ್, ಫೆಬ್ರವರಿ ೨೦೧೩ ರಲ್ಲಿ ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್ ಟಂಬ್ಲರ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ನಲ್ಲಿ ಅಪ್‌ಲೋಡ್ ಮಾಡಿದ ಚಿತ್ರಕ್ಕೆ ನಮ್ಮನ್ನು ಕರೆದೊಯ್ಯಿತು. ಇದು ವೈರಲ್ ಚಿತ್ರದಂತೆ ಕಾಣುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ, ಆದರೆ ಚಿತ್ರದಲ್ಲಿರುವ ಮಹಿಳೆ ಸೋನಿಯಾ ಗಾಂಧಿ ಅಲ್ಲ. ಫೋಟೋದಲ್ಲಿ ಛಾಯಾಗ್ರಾಹಕನ ವಾಟರ್‌ಮಾರ್ಕ್, ‘ಫರ್ಜಾದ್’ ಕೂಡ ಇದೆ. ಶೀರ್ಷಿಕೆಯ ಪ್ರಕಾರ, ಈ ಫೋಟೋವನ್ನು ೨೦೧೨ ರಲ್ಲಿ ಫರ್ಜಾದ್ ಸರ್ಫರಾಜಿ ತೆಗೆದಿದ್ದಾರೆ ಮತ್ತು ಅದರ ಶೀರ್ಷಿಕೆ ಹೀಗೆದೆ - 'ಗಜಲ್.'


ವೈರಲ್ ಚಿತ್ರ (ಎಡ) ಮತ್ತು ೨೦೧೨ ರಲ್ಲಿ ತೆಗೆದಿರುವ ಫರ್ಜಾದ್ ಸರ್ಫರಾಜಿ ರವರ ಫೋಟೋ (ಮೂಲ: ಎಕ್ಸ್/Tumblr/ಸ್ಕ್ರೀನ್‌ಶಾಟ್)

ಹೆಚ್ಚುವರಿಯಾಗಿ, ಅದೇ ಫೋಟೋವನ್ನು ಇನ್​ಸ್ಟಾಗ್ರಾಮ್, ಎಕ್ಸ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ, ಇದನ್ನು ೨೦೧೨ ರಲ್ಲಿ ಇರಾನ್‌ನಲ್ಲಿ ಫರ್ಜಾದ್ ಸರ್ಫರಾಜಿ ತೆಗೆದಿದ್ದಾರೆ ಎಂದು ಹೇಳುತ್ತವೆ. ಆದರೆ, ಫೋಟೋವನ್ನು ಎಲ್ಲಿ ತೆಗೆಯಲಾಗಿದೆ ಮತ್ತು ಫೋಟೋದಲ್ಲಿರುವ ಮಹಿಳೆಯ ಗುರುತನ್ನು ಸ್ವತಂತ್ರವಾಗಿ ಪರಿಶೀಲಿಸಲು ನಮಗೆ ಸಾಧ್ಯವಾಗಲಿಲ್ಲ.

ತೀರ್ಪು

ಸೋನಿಯಾ ಗಾಂಧಿ ಧೂಮಪಾನ ಮಾಡುತ್ತಿರುವ ಫೋಟೋವನ್ನು ಡಿಜಿಟಲ್ ಆಗಿ ಮಾರ್ಪಡಿಸಲಾಗಿದೆ ಮತ್ತು ರೀಮೇಕರ್ ಎಂಬ ಎಐ ಉಪಕರಣದ ಸಹಾಯದಿಂದ ಮೂಲ ಫೋಟೋದಲ್ಲಿರುವ ಮಹಿಳೆಯ ಮುಖವನ್ನು ಬದಲಾಯಿಸಲಾಗಿದೆ ಎಂದು ನಮ್ಮ ಸಂಶೋಧನೆ ತೋರಿಸುತ್ತದೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ