ಎಕ್ಸ್ ನಲ್ಲಿ ಭಾರತೀಯರಿಗೆ ಮಾಲ್ಡೀವ್ಸ್ ನ ಅಧ್ಯಕ್ಷರ ಕ್ಷಮೆಯಾಚನೆಯೆಂದು ತೋರಿಸಲು ಎಡಿಟ್ ಮಾಡಿದ ಸ್ಕ್ರೀನ್‌ಶಾಟ್ ಹಂಚಿಕೊಳ್ಳಲಾಗಿದೆ

ಮೂಲಕ: ರಾಹುಲ್ ಅಧಿಕಾರಿ
ಜನವರಿ 9 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಎಕ್ಸ್ ನಲ್ಲಿ ಭಾರತೀಯರಿಗೆ ಮಾಲ್ಡೀವ್ಸ್ ನ ಅಧ್ಯಕ್ಷರ ಕ್ಷಮೆಯಾಚನೆಯೆಂದು ತೋರಿಸಲು ಎಡಿಟ್ ಮಾಡಿದ ಸ್ಕ್ರೀನ್‌ಶಾಟ್ ಹಂಚಿಕೊಳ್ಳಲಾಗಿದೆ

ಮಾಲ್ಡೀವ್ಸ್ ಅಧ್ಯಕ್ಷರು ಭಾರತೀಯರಿಗೆ ಎಕ್ಸ್ ನಲ್ಲಿ ಕ್ಷಮೆಯಾಚನೆಯನ್ನು ಪೋಷ್ಟ್ ಮಾಡಿದ್ದಾರೆ ಮತ್ತು ನಂತರ ಪೋಷ್ಟ್ ಅನ್ನು ಅಳಿಸಿದ್ದಾರೆ ಎಂದು ಹೇಳುವ ವೈರಲ್ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ವೈರಲ್ ಸ್ಕ್ರೀನ್‌ಶಾಟ್ ನಕಲಿಯಾಗಿದ್ದು, ಭಾರತದೊಂದಿಗಿನ ರಾಜತಾಂತ್ರಿಕ ಭಿನ್ನಾಭಿಪ್ರಾಯದ ಮಧ್ಯೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಯಾವುದೇ ಕ್ಷಮೆಯನ್ನು ಪೋಷ್ಟ್ ಮಾಡಿಲ್ಲ.

ಕ್ಲೈಮ್ ಐಡಿ 273db4dc

ಇಲ್ಲಿನ ಹೇಳಿಕೆಯೇನು?

ಭಾರತ ಮತ್ತು ಮಾಲ್ಡೀವ್ಸ್ ನಡುವೆ ಹೆಚ್ಚುತ್ತಿರುವ ರಾಜತಾಂತ್ರಿಕ ಒತ್ತಡದ ನಡುವೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು ಅವರು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಭಾರತೀಯರಿಗೆ ಕ್ಷಮೆಯಾಚಿಸಿದ್ದರು ಮತ್ತು ನಂತರ ಅವರ ಪೋಷ್ಟ್ ಅನ್ನು ಅಳಿಸಿದ್ದಾರೆ (ಡಿಲೀಟ್ ಮಾಡಿದ್ದಾರೆ) ಎಂದು ಹೇಳುವ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಜನವರಿ ೭ ರಂದು ಪೋಷ್ಟ್ ಮಾಡಲಾದ ವೈರಲ್ ಸ್ಕ್ರೀನ್‌ಶಾಟ್ ಹೀಗಿದೆ, "ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾಡಲಾದ ಬೇಜವಾಬ್ದಾರಿ ಕಾಮೆಂಟ್‌ಗಳಿಗೆ ಮತ್ತು ನಮ್ಮ ಮಂತ್ರಿಗಳ ಪರವಾಗಿ ನಾನು ನಮ್ಮ ಭಾರತೀಯ ಸ್ನೇಹಿತರ ಪರವಾಗಿ ಕೈಮುಗಿದು ಕ್ಷಮೆಯಾಚಿಸುತ್ತೇನೆ. ಭಾರತದಿಂದ ಸ್ನೇಹಿತರನ್ನು ಸ್ವಾಗತಿಸಲು ಮತ್ತು ನಮ್ಮ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಎದುರು ನೋಡುತ್ತಿದ್ದೇನೆ ( ಕನ್ನಡಕ್ಕೆ ಅನುವಾದಿಸಲಾಗಿದೆ)." ಪೋಷ್ಟ್ ಅನ್ನು ಅಳಿಸಲಾಗಿದೆ ಎಂದು ಹೇಳುವ ಪಠ್ಯವನ್ನು ಸಹ ಸ್ಕ್ರೀನ್‌ಶಾಟ್ ಹೊಂದಿದೆ.

ಮಾಲ್ಡೀವಿಯನ್ ಸಚಿವರಾದ ಮರಿಯಮ್ ಶಿಯುನಾ, ಮಲ್ಶಾ ಷರೀಫ್ ಮತ್ತು ಅಬ್ದುಲ್ಲಾ ಮಹಜೂಮ್ ಮಜಿದ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಇತ್ತೀಚಿನ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಕೆಲವೇ ದಿನಗಳಲ್ಲಿ ಮುಯಿಝು ಅವರು ಈ ಕ್ಷಮೆಯಾಚಿಸಿದ್ದಾರೆ ಎಂದು ಉದ್ದೇಶಿಸಲಾಗಿದೆ.

ತಪ್ಪಾದ ಮಾಹಿತಿಯಿಂದ ತುಂಬಿರುವ ವಿವಾದಾತ್ಮಕ ಪೋಷ್ಟ್ ಗಳನ್ನು ನಿಯಮಿತವಾಗಿ ಹಂಚಿಕೊಳ್ಳಲು ಹೆಸರುವಾಸಿಯಾದ ಸಾಮಾಜಿಕ ಮಾಧ್ಯಮ ಬಳಕೆದಾರ ರಿಷಿ ಬಾಗ್ರೀ ಅವರು ಜನವರಿ ೮, ೨೦೨೪ ರಂದು ಮುಯಿಝು ಅವರ ಉದ್ದೇಶಿತ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು "ಮಾಲ್ಡೀವ್ಸ್ ಅಧ್ಯಕ್ಷ ಮಡಿಸಿದ ಕೈಯಿಂದ ಬೇಷರತ್ತಾದ ಕ್ಷಮೆಯಾಚಿಸುತ್ತದೆ (ಕನ್ನಡಕ್ಕೆ ಅನುವಾದಿಸಲಾಗಿದೆ)" ಎಂದು ಬರೆದಿದ್ದಾರೆ. ಎಕ್ಸ್ ಪೋಷ್ಟ್ ಈ ಫ್ಯಾಕ್ಟ್-ಚೆಕ್ ಪ್ರಕಟಿಸುವ ಸಮಯದಲ್ಲಿ ೨,೧೩,೦೦೦ ವೀಕ್ಷಣೆಗಳು ಮತ್ತು ೪,೫೦೦ ಲೈಕ್ ಗಳನ್ನು ಗಳಿಸಿದೆ.

ಎಕ್ಸ್ ನಲ್ಲಿ ಕಂಡುಬಂದ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಕೆಲವು ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಮುಯಿಝು ಅವರ ಉದ್ದೇಶಿತ ಅಳಿಸಿದ ಪೋಷ್ಟ್ ನ ಸ್ಕ್ರೀನ್‌ಶಾಟ್ ಅನ್ನು ಸಹ ಹಂಚಿಕೊಂಡಿದ್ದಾರೆ. ಇಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಆದರೆ, ಈ ಸ್ಕ್ರೀನ್‌ಶಾಟ್ ನಕಲಿಯಾಗಿದೆ. ಮಾಲ್ಡೀವ್ಸ್ ಅಧ್ಯಕ್ಷರು ಅಂತಹ ಯಾವುದೇ ಕ್ಷಮೆಯಾಚನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಷ್ಟ್ ಮಾಡಿಲ್ಲ.

ನಾವು ಕಂಡುಹಿದದ್ದೇನು?

ಈ ಉದ್ದೇಶಿತ ಸ್ಕ್ರೀನ್‌ಶಾಟ್ ಬಳಕೆದಾರಹೆಸರು, ಪ್ರೊಫೈಲ್ ಚಿತ್ರ ಮತ್ತು ಹ್ಯಾಂಡಲ್ ಅನ್ನು ಮುಯಿಝು ಅವರ ನಿಜವಾದ ಎಕ್ಸ್ ಖಾತೆಯಂತೆಯೇ ಬಳಸಿದೆ ಎಂದು ನಾವು ಗಮನಿಸಿದ್ದೇವೆ. ನಾವು ನಂತರ ಮುಯಿಝು ಅವರ ಅಧಿಕೃತ ಖಾತೆಯನ್ನು ಪರಿಶೀಲಿಸಿದಾಗ ಖಾತೆಯಿಂದ ಕೊನೆಯ ಪೋಷ್ಟ್ ಅನ್ನು ಜನವರಿ ೫ ರಂದು ಹಂಚಿಕೊಳ್ಳಲಾಗಿದೆ ಎಂದು ಕಂಡುಬಂದಿದೆ.

ಇದಲ್ಲದೆ, ಮುಯಿಝು ಖಾತೆಯಿಂದ ವೈರಲ್ ಸ್ಕ್ರೀನ್‌ಶಾಟ್‌ ನಲ್ಲಿ ಉಲ್ಲೇಖಿಸಲಾದ ದಿನಾಂಕದಂದು ಯಾವುದಾದರು ಪೋಷ್ಟ್ ಗಳನ್ನು ಅಳಿಸಲಾಗಿದೆಯೇ ಎಂದು ನೋಡಲು ನಾವು ಸಾಮಾಜಿಕ ಮಾಧ್ಯಮ ವಿಶ್ಲೇಷಣಾ ಸಾಧನ ಸೋಶಿಯಲ್ ಬ್ಲೇಡ್ ಅನ್ನು ಪರಿಶೀಲಿಸಿದ್ದೇವೆ. ಅಲ್ಲಿ ಕಂಡುಬಂದ ವಿವರಗಳ ಪ್ರಕಾರ, ಡಿಸೆಂಬರ್ ೨೪, ೨೦೨೩ ರಿಂದ ಮುಯಿಝು ಹ್ಯಾಂಡಲ್‌ನಿಂದ ಯಾವುದೇ ಪೋಷ್ಟ್ ಅನ್ನು ಅಳಿಸಲಾಗಿಲ್ಲ.

ಚಿತ್ರದಲ್ಲಿನ ಫಾಲೋವರ್ಸ್ ಮತ್ತು ಫಾಲೋವಿಂಗ್ ಕಾಲಮ್‌ಗಳ ಅಡಿಯಲ್ಲಿ ಕಾಣುವ (+) ಮತ್ತು (-) ಚಿಹ್ನೆಗಳು ಗಳಿಸಿದ/ಕಳೆದುಕೊಂಡ ಬಳಕೆದಾರರ ಸಂಖ್ಯೆಯನ್ನು ಸೂಚಿಸುತ್ತವೆ. ಅಂತೆಯೇ, 'ಟ್ವೀಟ್‌ಗಳು' ಕಾಲಮ್‌ನ ಅಡಿಯಲ್ಲಿನ ಚಿಹ್ನೆಗಳು ಮಾಡಿದ/ಅಳಿಸಲಾದ ಪೋಷ್ಟ್ ಗಳ ಸಂಖ್ಯೆಯನ್ನು ತೋರಿಸುತ್ತದೆ.

(ಮೂಲ: ಸೋಶಿಯಲ್ ಬ್ಲೇಡ್)

ನಾವು ವೇಬ್ಯಾಕ್ ಮೆಷಿನ್‌ನಲ್ಲಿ ಮುಯಿಝು ಅವರ ಎಕ್ಸ್ ಪ್ರೊಫೈಲ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಸಹ ಪರಿಶೀಲಿಸಿದ್ದೇವೆ ಮತ್ತು ಅಂತಹ ಯಾವುದೇ ಟ್ವೀಟ್ ಕಂಡುಬಂದಿಲ್ಲ.

ಮಾಲ್ಡೀವ್ಸ್ ಅಧ್ಯಕ್ಷರು ಕ್ಷಮೆಯಾಚಿಸಿದ್ದಾರೆಯೇ?

ಉಭಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಉದ್ವಿಗ್ನತೆ ಪ್ರಾರಂಭವಾದಾಗಿನಿಂದ, ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಹೈಕಮಿಷನ್, ಮಾಲ್ಡೀವ್ಸ್ ಸರ್ಕಾರದ ಸದಸ್ಯರು ಪ್ರಧಾನಿ ಮೋದಿ ವಿರುದ್ಧ ಅಗೌರವದ ಹೇಳಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಜನವರಿ ೭ ರಂದು ಮಾಲ್ಡೀವ್ಸ್ ವಿದೇಶಾಂಗ ಸಚಿವರು ಹೇಳಿಕೆಯಲ್ಲಿ, "ಈ ಅಭಿಪ್ರಾಯಗಳು ವೈಯಕ್ತಿಕ ಮತ್ತು ಮಾಲ್ಡೀವ್ಸ್ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ" ಎಂದು ಹೇಳಿದ್ದಾರೆ. ಇದರಲ್ಲಿ ಒಳಗೊಂಡಿರುವ ಎಲ್ಲಾ ಸರ್ಕಾರಿ ಅಧಿಕಾರಿಗಳನ್ನು ಅವರ ಹುದ್ದೆಗಳಿಂದ ಅಮಾನತುಗೊಳಿಸಲಾಗಿದೆ ಎಂದು ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಕಚೇರಿಯ ವಕ್ತಾರರು ಬಿಬಿಸಿಗೆ ತಿಳಿಸಿದ್ದಾರೆ. ಮಾಲ್ಡೀವಿಯನ್ ವಿದೇಶಾಂಗ ಸಚಿವ ಮೂಸಾ ಜಮೀರ್ ಅವರು ವಿದೇಶಿ ನಾಯಕರ ವಿರುದ್ಧದ ಟೀಕೆಗಳನ್ನು "ಸ್ವೀಕಾರಾರ್ಹವಲ್ಲ" ಎಂದು ಕರೆದಿದ್ದಾರೆ.

ಮಾಲ್ಡೀವ್ಸ್ ರಾಜಕಾರಣಿಗಳ ವಿವಾದಾತ್ಮಕ ಕಾಮೆಂಟ್‌ಗಳ ನಂತರ, ಮಾಲ್ಡೀವ್ಸ್ ಪ್ರವಾಸೋದ್ಯಮವನ್ನು ಬಹಿಷ್ಕರಿಸುವ ಕರೆಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಟ್ರೆಂಡಿಂಗ್ ಆಗಿವೆ ಎಂಬುದನ್ನು ಗಮನಿಸಬೇಕು. ಈ ಟೀಕೆಗಳು ಭಾರತೀಯ ಸೆಲೆಬ್ರಿಟಿಗಳನ್ನು ಸಾಮಾಜಿಕ ಮಾಧ್ಯಮಕ್ಕೆ ತೆಗೆದುಕೊಳ್ಳಲು ಮತ್ತು ಮಾಲ್ಡೀವ್ಸ್‌ಗೆ ಹೋಗುವ ಬದಲು ಭಾರತೀಯ ಪ್ರವಾಸಿ ತಾಣಗಳನ್ನು ಅನ್ವೇಷಿಸಲು ಎಕ್ಸ್ ನಲ್ಲಿ ಜನರನ್ನು ಒತ್ತಾಯಿಸಲು ಪ್ರಚಾರವನ್ನು ಪ್ರಾರಂಭಿಸಲು ಪ್ರಚೋದಿಸಿವೆ. ಮಾಜಿ ಅಧ್ಯಕ್ಷ ಇಬ್ರಾಹಿಂ ಸೋಲಿಹ್ ಸೇರಿದಂತೆ ಹಲವಾರು ಇತರ ಮಾಲ್ಡೀವ್ಸ್ ವ್ಯಕ್ತಿಗಳು ಭಾರತ ಮತ್ತು ಮೋದಿ ವಿರುದ್ಧ ಇಂತಹ ಭಾಷೆಯ ಬಳಕೆಯನ್ನು ಖಂಡಿಸಿ ಹೇಳಿಕೆಗಳನ್ನು ನೀಡಿದ್ದರೂ, ವೈರಲ್ ಹೇಳಿಕೆಗಳಿಗೆ ವಿರುದ್ಧವಾಗಿ ಪ್ರಸ್ತುತ ಮಾಲ್ಡೀವ್ಸ್ ಸರ್ಕಾರ ಅಥವಾ ರಾಷ್ಟ್ರದ ಅಧ್ಯಕ್ಷರಿಂದ ಯಾವುದೇ ಕ್ಷಮೆಯಾಚನೆಯ ವರದಿಗಳು ಕಂಡುಬಂದಿಲ್ಲ.

ತೀರ್ಪು 

ವೈರಲ್ ಸ್ಕ್ರೀನ್‌ಶಾಟ್‌ನಲ್ಲಿರುವ ಪೋಷ್ಟ್ ನಕಲಿಯಾಗಿದೆ ಮತ್ತು ಎಡಿಟಿಂಗ್ ಪರಿಕರಗಳನ್ನು ಬಳಸಿಕೊಂಡು ರಚಿಸಲಾಗಿದೆ. ಮಾಲ್ಡೀವ್ಸ್ ಅಧ್ಯಕ್ಷರು ತಮ್ಮ ಸರ್ಕಾರದ ಮಂತ್ರಿಗಳು ಭಾರತದ ಪ್ರಧಾನಿ ವಿರುದ್ಧ ಮಾಡಿದ ವಿವಾದಾತ್ಮಕ ಹೇಳಿಕೆಗಳಿಗೆ ಯಾವುದೇ ಕ್ಷಮೆಯನ್ನು ಪೋಷ್ಟ್ ಮಾಡಿ ಅದನ್ನು ಅಳಿಸಿಲ್ಲ.

(ತಿದ್ದುಪಡಿ: ಟೈಮ್ ಟೈಲ್‌ಗೆ ಸಂಬಂಧಿಸಿದಂತೆ ವೈರಲ್ ಸ್ಕ್ರೀನ್‌ಶಾಟ್ ಅಸಂಗತತೆಗಳನ್ನು ಹೊಂದಿದೆ ಎಂಬ ಉಲ್ಲೇಖವನ್ನು ತೆಗೆದುಹಾಕಲು ಈ ಫ್ಯಾಕ್ಟ್-ಚೆಕ್ ಅನ್ನು ನವೀಕರಿಸಲಾಗಿದೆ. ತಪ್ಪಿಗೆ ವಿಷಾದವಿದೆ.)

(ಅನುವಾದಿಸಿದವರು:ವಿವೇಕ್.ಜೆ)

Read this fact-check in English here.

ಈ ವಾಸ್ತವಾಂಶವನ್ನು ಪರಿಶೀಲಿಸಿ

English , অসমীয়া , हिंदी , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.