ಮುಖಪುಟ ತಿರುಪತಿ ದೇವಸ್ಥಾನದ ಹಿರಿಯ ನಾಗರಿಕ ಭೇಟಿ ಸ್ಲಾಟ್‌ಗಳ ವೈರಲ್ ಹೇಳಿಕೆ ಸಂದರ್ಭ ರಹಿತವಾಗಿದೆ

ತಿರುಪತಿ ದೇವಸ್ಥಾನದ ಹಿರಿಯ ನಾಗರಿಕ ಭೇಟಿ ಸ್ಲಾಟ್‌ಗಳ ವೈರಲ್ ಹೇಳಿಕೆ ಸಂದರ್ಭ ರಹಿತವಾಗಿದೆ

ಮೂಲಕ: ರಾಜೇಶ್ವರಿ ಪರಸ

ಅಕ್ಟೋಬರ್ 15 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ತಿರುಮಲದ ಹೊಸ ರಿಯಾಯಿತಿಯಲ್ಲಿ ಹಿರಿಯ ನಾಗರಿಕರಿಗೆ ಎರಡು ಸ್ಲಾಟ್‌ಗಳಲ್ಲಿ ಉಚಿತ ದರ್ಶನವನ್ನು ಅನುಮತಿಸಲಾಗಿದೆ ಎಂದು ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್ ಶಾಟ್. ತಿರುಮಲದ ಹೊಸ ರಿಯಾಯಿತಿಯಲ್ಲಿ ಹಿರಿಯ ನಾಗರಿಕರಿಗೆ ಎರಡು ಸ್ಲಾಟ್‌ಗಳಲ್ಲಿ ಉಚಿತ ದರ್ಶನವನ್ನು ಅನುಮತಿಸಲಾಗಿದೆ ಎಂದ ಪೋಷ್ಟ್ ನ ಸ್ಕ್ರೀನ್ ಶಾಟ್. ( ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಪ್ರಸ್ತುತ, ಹಿರಿಯ ನಾಗರಿಕರಿಗೆ ಕೇವಲ ಒಂದು ಮೀಸಲಾದ ಸ್ಲಾಟ್ ಇದೆ, ಇದನ್ನು ಸೋಮವಾರದಿಂದ ಶನಿವಾರದವರೆಗೆ ಮಧ್ಯಾಹ್ನ ೩ ಗಂಟೆಗೆ ಕಾಯ್ದಿರಿಸಲಾಗಿದೆ.

ಹೇಳಿಕೆ ಏನು? 

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಜ್ಯದ ಪ್ರಸಿದ್ಧ ತಿರುಪತಿ ದೇವಸ್ಥಾನದಲ್ಲಿ 'ಹೊಸ ಸುಧಾರಣೆ' ಘೋಷಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ಅಂತಹ ಒಂದು ಸಾಮಾಜಿಕ ಮಾಧ್ಯಮ ಪೋಷ್ಟ್ ನ ಶೀರ್ಷಿಕೆ ಹೀಗಿದೆ, "ತಿರುಪತಿಯಲ್ಲಿ ಚಂದ್ರಬಾಬು ನಾಯ್ಡು ಅವರ ಮೊದಲ ಸುಧಾರಣೆ. ತಿರುಪತಿ ಬಾಲಾಜಿಗೆ ಭೇಟಿ ನೀಡುವ ಹಿರಿಯ ನಾಗರಿಕರಿಗೆ ಒಳ್ಳೆಯ ಸುದ್ದಿ. ೬೫ ವರ್ಷ ದಾಟಿದ ನಾಗರಿಕರಿಗೆ ಉಚಿತ ದರ್ಶನ. ಎರಡು ಸ್ಲಾಟ್‌ಗಳನ್ನು ಬೆಳಿಗ್ಗೆ ೧೦ ಗಂಟೆಗೆ ಮತ್ತು ಇನ್ನೊಂದು ಮಧ್ಯಾಹ್ನ ೩ ಗಂಟೆಗೆ ನಿಗದಿಪಡಿಸಲಾಗಿದೆ.  ವಯಸ್ಸಿನ ಪುರಾವೆ ಮತ್ತು ಫೋಟೋ ಐಡಿಯನ್ನು ಸಲ್ಲಿಸಲು  ಸ್೧ ಕೌಂಟರ್‌ಗೆ ವರದಿ ಮಾಡಬಹುದು."  

ಸಂದೇಶವು ವಾಟ್ಸ್ಆಪ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗಿದೆ ಹಾಗು ಇದೇ ರೀತಿಯ ಪೋಷ್ಟ್ ಗಳ ಆರ್ಕೈವ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಆದರೆ , ವೈರಲ್ ಹೇಳಿಕೆ ತಪ್ಪು. ಪ್ರಸ್ತುತ, ಹಿರಿಯ ನಾಗರಿಕರಿಗೆ ಕೇವಲ ಒಂದು ಮೀಸಲಾದ ಸ್ಲಾಟ್ ಇದೆ, ಇದನ್ನು ಸೋಮವಾರದಿಂದ ಶನಿವಾರದವರೆಗೆ ಮಧ್ಯಾಹ್ನ ೩ ಗಂಟೆಗೆ ಕಾಯ್ದಿರಿಸಲಾಗಿದೆ. ಲಾಜಿಕಲಿ ಫ್ಯಾಕ್ಟ್ಸ್ ನೊಂದಿಗೆ ಮಾತನಾಡಿದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ), ದೇವಾಲಯವನ್ನು ನಿರ್ವಹಿಸುವ ಅಧಿಕೃತ ಟ್ರಸ್ಟ್, ಈ ನಿಬಂಧನೆಯಲ್ಲಿ ಯಾವುದೇ ಹೊಸ ಬದಲಾವಣೆಗಳನ್ನು ಮಾಡಲಾಗಿಲ್ಲ ಎಂದು ತಿಳಿಸಿದರು.

ವಾಸ್ತವಾಂಶಗಳೇನು?

ನಾವು ಟಿಟಿಡಿ ಯ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಿದ್ದೇವೆ ಆದರೆ ಹಿರಿಯ ನಾಗರಿಕರಿಗಾಗಿ ಹೊಸ ದೇವಾಲಯದ ಭೇಟಿ ಸ್ಲಾಟ್‌ಗಳ ಕುರಿತು ಯಾವುದೇ ಇತ್ತೀಚಿನ ಪ್ರಕಟಣೆ ಕಂಡುಬಂದಿಲ್ಲ. ಸಾಂಕ್ರಾಮಿಕ ರೋಗದ ಮೊದಲು ದೇವಾಲಯವು ಹಿರಿಯ ನಾಗರಿಕರಿಗೆ ಎರಡು ಸ್ಲಾಟ್‌ಗಳನ್ನು ಹೊಂದಿತ್ತು, ಆದರೆ ಇದು ಏಪ್ರಿಲ್ ೨೦೨೨ ರಲ್ಲಿ ಬದಲಾಯಿತು ಎಂದು ದೇವಾಲಯದ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.

ದೇವಾಲಯದ ವೆಬ್‌ಸೈಟ್‌ನ ಆರ್ಕೈವ್‌ಗಳನ್ನು ನೋಡಿದಾಗ, ನಾವು ಎರಡು ಸ್ಲಾಟ್ ನಿಬಂಧನೆಗಳನ್ನು ಡಿಸೆಂಬರ್ ೨೦೧೪ ರಿಂದ ಪತ್ತೆಹಚ್ಚಬಹುದು, ಅದು ಆ ಸಮಯದಲ್ಲಿ ಈಗಾಗಲೇ ಜಾರಿಯಲ್ಲಿದೆ ಎಂದು ಸೂಚಿಸುತ್ತದೆ. ಇದೇ ರೀತಿಯ ನಿಬಂಧನೆಯ ಆರ್ಕೈವ್ ಆವೃತ್ತಿಯನ್ನು ಮಾರ್ಚ್ ೨೦೧೫ ರಲ್ಲಿ ನೋಡಬಹುದಾಗಿದೆ. ಹೆಚ್ಚುವರಿಯಾಗಿ, ಆರ್ಕೈವ್‌ಗಳು ಹಿರಿಯ ನಾಗರಿಕರಿಗೆ ವಿಶೇಷ ದರ್ಶನವನ್ನು ೨೦೧೪ ಕ್ಕೂ ಮೊದಲು ಅಸ್ತಿತ್ವದಲ್ಲಿವೆ ಎಂದು ತೋರಿಸುತ್ತದೆ. ಆರ್ಕೈವ್ ಮಾಡಿದ ಪೋಷ್ಟ್ ಅನ್ನು ಇಲ್ಲಿ ಕಾಣಬಹುದು.

ಪ್ರಸ್ತುತ, ವೆಬ್‌ಸೈಟ್ ಹಿರಿಯ ನಾಗರಿಕರಿಗೆ ಕೇವಲ ಒಂದು ಉಚಿತ ಸ್ಲಾಟ್ ಸಮಯವನ್ನು ತೋರಿಸುತ್ತದೆ-ಸೋಮವಾರದಿಂದ ಶನಿವಾರದವರೆಗೆ ಮಧ್ಯಾಹ್ನ ೩ ಗಂಟೆಗೆ. ಹಿರಿಯ ನಾಗರಿಕರ ದರ್ಶನ ಪ್ರಯೋಜನಗಳನ್ನು ಪಡೆಯಲು ಭಕ್ತರು ತಮ್ಮ ಆಧಾರ್ ಕಾರ್ಡ್, ಗುರುತಿನ ದಾಖಲೆಯನ್ನು ತೋರಿಸಬೇಕು ಮತ್ತು ದಿನಕ್ಕೆ ೧೦೦೦ ಭಕ್ತರಿಗೆ ಮಾತ್ರ ವರ್ಗದಲ್ಲಿ ಅವಕಾಶ ಕಲ್ಪಿಸಬಹುದು ಎಂದು ವೆಬ್‌ಸೈಟ್ ಹೇಳುತ್ತದೆ.

ಹಿರಿಯ ನಾಗರಿಕರಿಗೆ ದೇವಾಲಯದ ಭೇಟಿ ಸ್ಲಾಟ್‌ಗಳಿಗೆ ಟಿಟಿಡಿ ವೆಬ್‌ಸೈಟ್ ನಿಯಮಗಳು. (ಮೂಲ: tirumala.org)

ಅನಾಮಧೇಯರಾಗಿ ಉಳಿಯಲು ಬಯಸಿದ ಟಿಟಿಡಿ ಪ್ರತಿನಿಧಿಯೊಬ್ಬರು ಲಾಜಿಕಲಿ ಫ್ಯಾಕ್ಟ್ಸ್ ನೊಂದಿಗೆ ಮಾತನಾಡುತ್ತಾ, "ಇತ್ತೀಚಿಗೆ ಅಂತಹ ಯಾವುದೇ ಹೊಸ ನಿಬಂಧನೆಯನ್ನು ಸೇರಿಸಲಾಗಿಲ್ಲ. ಸದ್ಯಕ್ಕೆ, ಹಿರಿಯ ನಾಗರಿಕರಿಗೆ ಉಚಿತ ದರ್ಶನವು ಒಂದು ಸ್ಲಾಟ್‌ಗೆ ಮಾತ್ರ ಲಭ್ಯವಿದೆ - ಮಧ್ಯಾಹ್ನ ೩ ಗಂಟೆಗೆ. ಈ ದರ್ಶನವನ್ನು ಬುಕ್ ಮಾಡಬೇಕಾಗಿದೆ. ಸಾಕಷ್ಟು ಮುಂಚಿತವಾಗಿ ಆನ್‌ಲೈನ್‌ನಲ್ಲಿ."

೨೦೨೪ ರ ಜೂನ್‌ನಲ್ಲಿ ಹೇಳಿಕೆ ಮೊದಲ ಬಾರಿಗೆ ಬಂದಾಗ ಟಿಟಿಡಿ ಮಂಡಳಿಯು ಸ್ಪಷ್ಟೀಕರಣವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಸಹ ನೀಡಿತ್ತು. ಟಿಟಿಡಿ ೧,೦೦೦ ಹಿರಿಯ ನಾಗರಿಕರು ಮತ್ತು ದೈಹಿಕ ವಿಕಲಾಂಗರಿಗೆ ಪ್ರತಿ ತಿಂಗಳ ೨೩ ರಂದು ಆನ್‌ಲೈನ್ ಕೋಟಾವನ್ನು ಬಿಡುಗಡೆ ಮಾಡುತ್ತದೆ ಎಂದು ಹೇಳಿಕೆ ಸ್ಪಷ್ಟಪಡಿಸಿದೆ.

ತೀರ್ಪು

ಸಾಮಾಜಿಕ ಮಾಧ್ಯಮದ ಹೇಳಿಕೆಗಳಿಗೆ ವಿರುದ್ಧವಾಗಿ, ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುವ ಹಿರಿಯ ನಾಗರಿಕರಿಗೆ ಚಂದ್ರಬಾಬು ನಾಯ್ಡು ಸರ್ಕಾರವು ಯಾವುದೇ ಹೊಸ ನಿಬಂಧನೆಯನ್ನು ಪರಿಚಯಿಸಿಲ್ಲ. ವಿಶೇಷ ಸ್ಲಾಟ್ ದರ್ಶನ ನಿಬಂಧನೆಯು ಒಂದು ದಶಕದಿಂದ ಅಸ್ತಿತ್ವದಲ್ಲಿದೆ ಆದರೆ ಕಾವಿಡ್-೧೯ ಸಾಂಕ್ರಾಮಿಕ ಸಮಯದಲ್ಲಿ ಇದಕ್ಕೆ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check this English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ