ಮೂಲಕ: ವನಿತಾ ಗಣೇಶ್
ನವೆಂಬರ್ 4 2024
ವಿಜಯ್ ಅವರು ತಮಿಳುನಾಡಿನಲ್ಲಿ ವೈಎಸ್‌ಆರ್‌ಸಿಪಿ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರನ್ನು ಯಾವುದೇ ಸಮಯದಲ್ಲಿ ಉಲ್ಲೇಖಿಸಿಲ್ಲ ಎಂದು ಸಂಪೂರ್ಣ ವೀಡಿಯೋ ತೋರಿಸುತ್ತದೆ.
ಹೇಳಿಕೆ ಏನು?
ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರನ್ನು ತಮಿಳು ನಟ-ರಾಜಕಾರಣಿಯಾಗಿರುವ ಜೋಸೆಫ್ ವಿಜಯ್ ಚಂದ್ರಶೇಖರ್ ಅವರು ತಮ್ಮ ಇತ್ತೀಚಿನ ಭಾಷಣದಲ್ಲಿ ಟೀಕಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಅವರ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿಜಯ್ ಇತ್ತೀಚೆಗೆ ದಕ್ಷಿಣ ಭಾರತದ ರಾಜ್ಯವಾದ ತಮಿಳುನಾಡಿನಲ್ಲಿ ತಮ್ಮ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ ) ನ ರಾಜ್ಯ ಮಟ್ಟದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಅವರ ಭಾಷಣವನ್ನು ಪ್ರಾದೇಶಿಕ ಭಾಷೆಯಾದ ತಮಿಳಿನಿಂದ ಇನ್ನೊಂದು ಪ್ರಾದೇಶಿಕ ಭಾಷೆಯಾದ ತೆಲುಗಿಗೆ ತಪ್ಪಾಗಿ ಅನುವಾದಿಸಲಾಗಿದೆ.
೩೦ ಸೆಕೆಂಡ್‌ಗಳ ಈ ವೈರಲ್ ವೀಡಿಯೋಗೆ ತೆಲುಗಿನಲ್ಲಿ "ಜಗನ್‌ಮೋಹನ್ ರೆಡ್ಡಿ ವಿರುದ್ಧ ಹಲವು ಕೇಸ್‌ಗಳಿವೆ. ನನ್ನ ವಿರುದ್ಧ ಒಂದೇ ಒಂದು ಕೇಸ್ ಇಲ್ಲ. ಅವರು ಸಿಎಂ ಆಗುವುದಾದರೆ ನಾನು ಸಿಎಂ ಆಗಲು ಸಾಧ್ಯವಿಲ್ಲವೇ? ನೀವೇ ಹೇಳಿ (ನನಗೆ)" ಎಂದು ಶೀರ್ಷಿಕೆ ನೀಡಲಾಗಿದೆ. ಎಕ್ಸ್‌ನಲ್ಲಿನ ಪೋಷ್ಟ (ಹಿಂದೆ ಟ್ವಿಟರ್) ೭,೬೦೦ ಲೈಕ್ ಗಳನ್ನು ಗಳಿಸಿದ್ದು, ೧,೨೦೦ ಬಾರಿ ಮರುಹಂಚಿಕೊಳ್ಳಲಾಗಿದೆ. ಅದೇ ರೀತಿಯ ಹೇಳಿಕೆಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.
ಎಕ್ಸ್ ನಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ವರದಿಗಳ ಪ್ರಕಾರ, ವಿಜಯ್ ಅವರ ಮೊದಲ ರಾಜಕೀಯ ಭಾಷಣವು ಅವರ ಪಕ್ಷ ಟಿವಿಕೆ ಅನ್ನು ಪ್ರಾರಂಭಿಸುವುದರ ಮೇಲೆ ಕೇಂದ್ರೀಕರಿಸಿದೆ ಮತ್ತು ತಮಿಳುನಾಡಿನಲ್ಲಿ ೨೦೨೬ ರ ವಿಧಾನಸಭಾ ಚುನಾವಣೆಗೆ ಪಕ್ಷದ ಸಿದ್ಧಾಂತ ಮತ್ತು ಗುರಿಗಳನ್ನು ವಿವರಿಸುತ್ತದೆ. ವಿಜಯ್ ಅವರು ವೈರಲ್ ಕ್ಲಿಪ್‌ನಲ್ಲಿ ಅಥವಾ ಅವರ ಪಕ್ಷದ ಮೊದಲ ರಾಜ್ಯ ಸಮ್ಮೇಳನದಲ್ಲಿ ಅವರ ಉಳಿದ ಭಾಷಣದಲ್ಲಿ ರೆಡ್ಡಿಯನ್ನು ಉಲ್ಲೇಖಿಸಿಲ್ಲ ಮಾತನಾಡಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ.
ನಾವು ಕಂಡುಕೊಂಡದ್ದು ಏನು?
ವೈರಲ್ ಕ್ಲಿಪ್‌ನ ಮೇಲಿನ ಬಲ ಮೂಲೆಯಲ್ಲಿ ತಮಿಳು ಸುದ್ದಿ ಮಾಧ್ಯಮ ವೇದಿಕೆ ಪಾಲಿಮರ್ ನ್ಯೂಸ್ ಲೋಗೋವನ್ನು ನಾವು ಗಮನಿಸಿದ್ದೇವೆ. ಇದನ್ನು ಬಳಸಿಕೊಂಡು, ನಾವು ವಿಜಯ್ ಅವರ ಭಾಷಣದ ಪೂರ್ಣ ವೀಡಿಯೋವನ್ನು ಅದರ ಯೂಟ್ಯೂಬ್ ಚಾನೆಲ್‌ನಲ್ಲಿ ಕಂಡುಕೊಂಡೆವು (ಇಲ್ಲಿ ಆರ್ಕೈವ್ ಮಾಡಲಾಗಿದೆ). 'ಟಿವಿಕೆ ಮಾನಾಡು ೨೦೨೪ ರಲ್ಲಿ ದಳಪತಿ ವಿಜಯ್ ಅವರ ಪವರ್‌ಫುಲ್ ಭಾಷಣ |ಟಿವಿಕೆ ಮಾನಾಡು ಜನಸಮೂಹ | ವಿಜಯ್ ಕಾನ್ಫರೆನ್ಸ್, ' ಎಂದು ಶೀರ್ಷಿಕೆಯನ್ನು ಹೊಂದಿದೆ. ವಿಜಯ್ ಅವರು ತಮ್ಮ ಪಕ್ಷದ ಸಮಾವೇಶದಲ್ಲಿ ಜನಸಮೂಹವನ್ನು ಉದ್ದೇಶಿಸಿ ಮಾತನಾಡುವುದನ್ನು ತೋರಿಸುತ್ತದೆ. ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ಅಕ್ಟೋಬರ್ ೨೭ ರಂದು ನಡೆದ ಪಕ್ಷದ ಮೊದಲ ರಾಜ್ಯ ಮಟ್ಟದ ಸಮಾವೇಶದಲ್ಲಿ ಭಾಷಣ ಮಾಡಲಾಗಿತ್ತು.
ಸಂಬಂಧಿತ ಭಾಗವನ್ನು ವೀಡಿಯೋದಲ್ಲಿ ೫:೪೦ ಮತ್ತು ೬:೧೦ ಮಾರ್ಕ್ ನಡುವೆ ವೀಕ್ಷಿಸಬಹುದು. ಈ ಸಮಯದಲ್ಲಿ, ವಿಜಯ್ ತಮಿಳಿನಲ್ಲಿ ಹೇಳುತ್ತಾರೆ, "ನನಗೆ ತಿಳಿದಿರುವಂತೆ, ನಾವೆಲ್ಲರೂ ಒಂದೇ; ನಾವೆಲ್ಲರೂ ಸಮಾನರು. ನನ್ನ ಹೃದಯದಲ್ಲಿರುವ ನಿಮ್ಮೆಲ್ಲರಿಗೂ ... ಇಲ್ಲಿ ನಿಮ್ಮೆಲ್ಲರಿಗೂ: ನನ್ನ ಜೀವನಕ್ಕೆ ನಮಸ್ಕಾರಗಳು (ಜನಸಮೂಹವನ್ನು ಉಲ್ಲೇಖಿಸಿ) ." ನಾವು ಸಂಪೂರ್ಣ ಭಾಷಣವನ್ನು ಪರಿಶೀಲಿಸಿದ್ದೇವೆ ಮತ್ತು ವಿಜಯ್ ಅವರು ರೆಡ್ಡಿಯನ್ನು ಉಲ್ಲೇಖಿಸಿಲ್ಲ ಅಥವಾ ವೈಎಸ್‌ಆರ್‌ಸಿಪಿ ಅಧ್ಯಕ್ಷರಿಗೆ ಹೋಲಿಸಿಲ್ಲ ಎಂದು ಕಂಡುಕೊಂಡಿದ್ದೇವೆ.
ಹೆಚ್ಚುವರಿಯಾಗಿ, ನಾವು ಸ್ಥಳೀಯ ಸುದ್ದಿ ವಾಹಿನಿ ಪುತಿಯಥಲೈಮುರೈ ಟಿವಿ ಅಪ್‌ಲೋಡ್ ಮಾಡಿದ ಪೂರ್ಣ ಭಾಷಣವನ್ನು ಪರಿಶೀಲಿಸಿದ್ದೇವೆ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಮತ್ತು ವೈಎಸ್‌ಆರ್‌ಸಿಪಿ ಅಧ್ಯಕ್ಷರಿಗೆ ನಟ-ರಾಜಕಾರಣಿ ಯಾವುದೇ ಉಲ್ಲೇಖವನ್ನು ಮಾಡಲ್ಲ.
ವಿಜಯ್ ಅವರು ತಮ್ಮ ಭಾಷಣದಲ್ಲಿ ತಮಿಳುನಾಡಿನ ಆಡಳಿತ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮೇಲೆ ದಾಳಿ ಮಾಡಿದ್ದಾರೆ ಎಂದು ಮಾಧ್ಯಮ ವರದಿಗಳು ಗಮನಿಸಿವೆ; ಆದರೆ, ವಿಜಯ್ ಅವರು ತಮ್ಮ ಭಾಷಣದಲ್ಲಿ ರೆಡ್ಡಿಯವರ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ.
ವಿಜಯ್ ಅವರು ರೆಡ್ಡಿ ಅಥವಾ ವೈಎಸ್‌ಆರ್‌ಸಿಪಿ ಅಧ್ಯಕ್ಷರ ಯಾವುದೇ ಪ್ರಕರಣಗಳನ್ನು ಉಲ್ಲೇಖಿಸಿಲ್ಲ ಎಂದು ಇದು ಖಚಿತಪಡಿಸುತ್ತದೆ ಮತ್ತು ವೈರಲ್ ಕ್ಲಿಪ್ ಅನ್ನು ಆನ್‌ಲೈನ್‌ನಲ್ಲಿ ತಪ್ಪಾದ ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ.
ತೀರ್ಪು
ನಮ್ಮ ಸಂಶೋಧನೆಯು ವೈರಲ್ ವೀಡಿಯೋವನ್ನು ನಟ ವಿಜಯ್ ಅವರ ಪಕ್ಷದ ಸಮಾವೇಶದಲ್ಲಿ ಮಾಡಿದ ಭಾಷಣದ ತಪ್ಪಾದ ಅನುವಾದದೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ತೋರಿಸುತ್ತದೆ. ತಮ್ಮ ಭಾಷಣದಲ್ಲಿ, ನಟ-ರಾಜಕಾರಣಿಯು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯನ್ನು ಉಲ್ಲೇಖಿಸಲಿಲ್ಲ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here