ಮುಖಪುಟ ‘ಮಹಿಳೆಗೆ ಕಿರುಕುಳ ನೀಡಿ ಸಿಕ್ಕಿಬಿದ್ದ ಹಿಂದೂ ತಪಸ್ವಿ’ ಎಂದು ಸ್ಕ್ರಿಪ್ಟ್ ವೀಡಿಯೋ ವೈರಲ್

‘ಮಹಿಳೆಗೆ ಕಿರುಕುಳ ನೀಡಿ ಸಿಕ್ಕಿಬಿದ್ದ ಹಿಂದೂ ತಪಸ್ವಿ’ ಎಂದು ಸ್ಕ್ರಿಪ್ಟ್ ವೀಡಿಯೋ ವೈರಲ್

ಮೂಲಕ: ರಾಹುಲ್ ಅಧಿಕಾರಿ

ನವೆಂಬರ್ 15 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಮಹಿಳೆಗೆ ಕಿರುಕುಳ ನೀಡುತ್ತಿದ್ದಾಗ ಸಿಕ್ಕಿಬಿದ್ದ ಹಿಂದೂ ತಪಸ್ವಿಯನ್ನು ವೀಡಿಯೋ ತೋರಿಸುತ್ತದೆ ಎಂದು ಹಂಚಿಕೊಂಡ ಪೋಷ್ಟ್. ಹಿಂದೂ ಸಂತ ಮಹಿಳೆಗೆ ಕಿರುಕುಳ ನೀಡುತ್ತಿರುವುದನ್ನು ತೋರಿಸುತ್ತವೆ ಎಂದು ವೀಡಿಯೋವನ್ನು ಹಂಚಿಕೊಂಡ ಸಾಮಾಜಿಕ ಮಾಧ್ಯಮದ ಪೋಷ್ಟ್ ಗಳು . (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೈರಲ್ ಕ್ಲಿಪ್ ಅನ್ನು ಸ್ಕ್ರಿಪ್ಟ್ ಮಾಡಿದ ವೀಡಿಯೋದಿಂದ ತೆಗೆದುಕೊಳ್ಳಲಾಗಿದೆ. ಇದು ನಿಜ ಜೀವನದ ಘಟನೆಯನ್ನು ತೋರಿಸುತ್ತದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

(ಪ್ರಚೋದಕ ಎಚ್ಚರಿಕೆ: ಈ ಕಥೆಯು ಲೈಂಗಿಕ ನಿಂದನೆಯ ಉಲ್ಲೇಖಗಳನ್ನು ಒಳಗೊಂಡಿದೆ. ಓದುಗರ ವಿವೇಚನೆಗೆ ಸಲಹೆ ನೀಡಲಾಗುತ್ತದೆ.)

ಹೇಳಿಕೆ ಏನು?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋ ಒಂದರಲ್ಲಿ ಮಹಿಳೆಗೆ ಕಿರುಕುಳ ನೀಡುತ್ತಿರುವಾಗ ಸಿಕ್ಕಿಬಿದ್ದ ಹಿಂದೂ ತಪಸ್ವಿಯನ್ನು ತೋರಿಸುತ್ತಿದೆ. ವೈರಲ್ ಕ್ಲಿಪ್‌ನಲ್ಲಿ, ಚಿತ್ರೀಕರಿಸುವ ವ್ಯಕ್ತಿ ತಪಸ್ವಿಯನ್ನು ಪ್ರಶ್ನಿಸಿದಾಗ , ಕೇಸರಿ ವಸ್ತ್ರವನ್ನು ಧರಿಸಿದ ವ್ಯಕ್ತಿ ಮಹಿಳೆಯ ಹೊಟ್ಟೆ ನೋವನ್ನು ನಿವಾರಿಸುತ್ತಿದ್ದರು ಎಂದು ವಿವರಿಸುತ್ತಾರೆ, ಆದರೆ ಮಹಿಳೆ ತೊಂದರೆಗೀಡಾಗಿದ್ದನ್ನು ತೋರಿಸುತ್ತದೆ. 

ಎಕ್ಸ್ (ಹಿಂದೆ ಟ್ವಿಟ್ಟರ್) ಬಳಕೆದಾರರು ವೀಡಿಯೋವನ್ನು ಹಂಚಿಕೊಂಡಿದ್ದು ಅದರ ಹಿಂದಿ ಶೀರ್ಷಿಕೆ ಹೀಗೆ ಅನುವಾದಿಸುತ್ತದೆ, “ಸಂತರು ರೋಗಗಳನ್ನು ಗುಣಪಡಿಸಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಸಂಘಿ ಮನೋಭಾವದ ಪೂಜಾರಿಯೊಬ್ಬರು ಕುಂಕುಮ ಮತ್ತು ದೇವರ ಹೆಸರಿನಲ್ಲಿ ಹಿಂದುತ್ವವನ್ನು ಪ್ರಚಾರ ಮಾಡಿ ಸಿಕ್ಕಿಬಿದ್ದರು. ಜೈ ಹಿಂದುತ್ವ!” ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಹೇಳಿಕೆ ತಪ್ಪು. ವೈರಲ್ ಕ್ಲಿಪ್ ಅನ್ನು ವಾಸ್ತವವಾಗಿ ಸ್ಕ್ರಿಪ್ಟ್ ಮಾಡಿದ ವೀಡಿಯೋದಿಂದ ತೆಗೆದುಕೊಳ್ಳಲಾಗಿದೆ ಮತ್ತು ಹಿಂದೂ ಸನ್ಯಾಸಿಯೊಬ್ಬ ಮಹಿಳೆಗೆ ಕಿರುಕುಳ ನೀಡುತ್ತಿರುವಾಗ ಸಿಕ್ಕಿಬಿದ್ದಿದ್ದಾನೆ ಎಂಬ ತಪ್ಪಾದ ನಿರೂಪಣೆಯೊಂದಿಗೆ ಪ್ರಸಾರ ಮಾಡಲಾಗಿದೆ.

ನಾವು ಕಂಡುಕೊಂಡಿದ್ದು ಏನು?

ನಾವು ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್ ನಡೆಸಿದೆವು ಮತ್ತು ಅಶ್ವನಿ ಪಾಂಡೆ ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ಪ್ರಕಟಿಸಲಾದ ವಿಸ್ತೃತ ಆವೃತ್ತಿಯನ್ನು ಕಂಡುಕೊಂಡೆವು. ಮೂಲ ವೀಡಿಯೋ (ಇಲ್ಲಿ ಆರ್ಕೈವ್ ಮಾಡಲಾಗಿದೆ) ೧೩ ನಿಮಿಷಗಳಷ್ಟು ಉದ್ದವಾಗಿದೆ ಮತ್ತು ಸ್ಪಷ್ಟವಾಗಿ ಸ್ಕ್ರಿಪ್ಟ್ ಮಾಡಲಾಗಿದೆ. ೧೬-ಸೆಕೆಂಡ್ ಮಾರ್ಕ್‌ನಲ್ಲಿ, ಅದನ್ನು ಮನರಂಜನಾ ಉದ್ದೇಶಗಳಿಗಾಗಿ ಮಾತ್ರ ರಚಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಕೇಸರಿ ಉಡುಪಿನಲ್ಲಿರುವ ವ್ಯಕ್ತಿಯೊಬ್ಬ ತಾನು ಪವಿತ್ರ ಪುರುಷನೆಂದು ಹೇಳಿಕೊಳ್ಳುವುದು ಮತ್ತು ಹೊಟ್ಟೆ ನೋವು ನಿವಾರಣೆಗಾಗಿ ತನ್ನನ್ನು ಭೇಟಿ ಮಾಡಿದ ಮಹಿಳೆಗೆ ಕಿರುಕುಳ ನೀಡುವುದನ್ನು ವೀಡಿಯೋ ಚಿತ್ರಿಸುತ್ತದೆ. ವೀಡಿಯೋದಲ್ಲಿ ಕ್ಯಾಮರಾದಲ್ಲಿ ಮತ್ತು ಹೊರಗೆ ಕಾಣಿಸಿಕೊಳ್ಳುವ ಇಬ್ಬರು ವ್ಯಕ್ತಿಗಳು, ವ್ಯಕ್ತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುತ್ತಾರೆ ಮತ್ತು ಅವರಲ್ಲಿ ಒಬ್ಬರು ವ್ಯಕ್ತಿಯನ್ನು ಕಪಾಳಮೋಕ್ಷ ಮಾಡುತ್ತಾರೆ. ವೀಡಿಯೋದ ಕೊನೆಯಲ್ಲಿ, ವ್ಯಕ್ತಿ ತನ್ನ ಕೇಸರಿ ಉಡುಪನ್ನು ತೆಗೆದುಹಾಕುವುದನ್ನು ಕಾಣಬಹುದು, ಅದರ ಕೆಳಗೆ ಶರ್ಟ್ ಮತ್ತು ಪ್ಯಾಂಟ್ ಅನ್ನು ಬಹಿರಂಗಪಡಿಸುತ್ತಾನೆ, ನಂತರ ಪೊಲೀಸರ ಮುಂದೆ ವರದಿ ಮಾಡಲು ಅವನನ್ನು ಎಳೆದುಕೊಂಡು ಹೋಗುವುದನ್ನು ಕಾಣಬಹುದು.

ಹೆಚ್ಚುವರಿಯಾಗಿ, ವೈರಲ್ ಕ್ಲಿಪ್ ಮೂಲ ವೀಡಿಯೋದಲ್ಲಿ ೦:೫೧ ಸೆಕೆಂಡ್‌ಗಳಿಂದ ೨:೧೯ ನಿಮಿಷಗಳವರೆಗೆ ಹೊಂದಿಕೆಯಾಗುತ್ತದೆ ಮತ್ತು ಇದನ್ನು ನಿಜ ಜೀವನದ ಘಟನೆಯಾಗಿ ಹಂಚಿಕೊಳ್ಳಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.


ವೈರಲ್ ಕ್ಲಿಪ್ ಅನ್ನು ಸ್ಕ್ರಿಪ್ಟ್ ಮಾಡಲಾಗಿದೆ ಎಂದು ಹೇಳುವ ಮೂಲ ವೀಡಿಯೋದ ಸ್ಕ್ರೀನ್‌ಶಾಟ್. 
(ಮೂಲ: ಯೂಟ್ಯೂಬ್/ಸ್ಕ್ರೀನ್‌ಶಾಟ್)


ನಾವು ಯೂಟ್ಯೂಬ್ ಚಾನಲ್ ಅನ್ನೂ ಸಹ ಪರಿಶೀಲಿಸಿದ್ದೇವೆ ಮತ್ತು ಅಂತಹ ನಿರಾಕರಣೆಗಳೊಂದಿಗೆ ಚಾನಲ್ ಹಲವಾರು ರೀತಿಯ ಸ್ಕ್ರಿಪ್ಟ್ ವೀಡಿಯೋಗಳನ್ನು ಪ್ರಕಟಿಸಿದೆ ಎಂದು ಕಂಡುಕೊಂಡಿದ್ದೇವೆ. ವೈರಲ್ ವೀಡಿಯೋದಲ್ಲಿ ಕಂಡುಬರುವ ಪುರುಷ ಮತ್ತು ಮಹಿಳೆ ಇಬ್ಬರೂ ಬೇರೆ ಬೇರೆ ಸ್ಕ್ರಿಪ್ಟ್ ಮಾಡಿದ ವೀಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ, ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಒಂದು ವೀಡಿಯೋದಲ್ಲಿ  (ಇಲ್ಲಿ ಆರ್ಕೈವ್ ಮಾಡಲಾಗಿದೆ), ಅವರು ವೈದ್ಯ ಮತ್ತು ವಿದ್ಯಾರ್ಥಿಯನ್ನು ಚಿತ್ರಿಸುತ್ತಾರೆ, ಇದರಲ್ಲಿ ವ್ಯಕ್ತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಮತ್ತು ವೈರಲ್ ವೀಡಿಯೋದ ಕಥೆಯಂತೆಯೇ ಇದೆ.

ವೈರಲ್ ವೀಡಿಯೋದ ವ್ಯಕ್ತಿ ಇತರ ಸ್ಕ್ರಿಪ್ಟ್ ಮಾಡಿದ ವೀಡಿಯೋಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಿರುವುದನ್ನು ಚಿತ್ರ ತೋರಿಸುತ್ತದೆ. (ಮೂಲ: ಯೂಟ್ಯೂಬ್/ಸ್ಕ್ರೀನ್‌ಶಾಟ್)

ನಾವು ವೀಡಿಯೋ ತಯಾರಕರನ್ನು ಸಂಪರ್ಕಿಸಿದ್ದೇವೆ ಮತ್ತು  ಪ್ರತಿಕ್ರಿಯೆಯನ್ನು ಸ್ವೀಕರಿಸಿದರೆ ಈ ಫ್ಯಾಕ್ಟ್-ಚೆಕ್ ಅನ್ನು ನವೀಕರಿಸಲಾಗುತ್ತದೆ.

ಲಾಜಿಕಲಿ ಫ್ಯಾಕ್ಟ್ಸ್ ಈ  ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ನೈಜ-ಜೀವನದ ಘಟನೆಗಳೆಂದು ಪ್ರಸಾರವಾದ ಹಲವಾರು ಸ್ಕ್ರಿಪ್ಟ್ ವೀಡಿಯೋಗಳನ್ನು ಫ್ಯಾಕ್ಟ್-ಚೆಕ್ ಮಾಡಿದೆ

ತೀರ್ಪು


ಹಿಂದೂ ಸನ್ಯಾಸಿಯೊಬ್ಬ ಮಹಿಳೆಗೆ ಕಿರುಕುಳ ನೀಡುತ್ತಿರುವಾಗ ಸಿಕ್ಕಿಬಿದ್ದಿದ್ದಾನೆ ಎಂಬ ತಪ್ಪಾದ  ಹೇಳಿಕೆಯೊಂದಿಗೆ ವೈರಲ್ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದು ವಾಸ್ತವವಾಗಿ ಮನರಂಜನಾ ಉದ್ದೇಶಗಳಿಗಾಗಿ ರಚಿಸಲಾದ ಸ್ಕ್ರಿಪ್ಟ್ ಮಾಡಿದ ವೀಡಿಯೋ.


ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ