ಮುಖಪುಟ ೨೦೨೦ ರ ನಟ ಸಲ್ಮಾನ್ ಖಾನ್ ಅವರ ವೀಡಿಯೋವನ್ನು ಅವರು ಲಾರೆನ್ಸ್ ಬಿಷ್ಣೋಯ್ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆಂದು ಹಂಚಿಕೊಂಡಿದ್ದಾರೆ

೨೦೨೦ ರ ನಟ ಸಲ್ಮಾನ್ ಖಾನ್ ಅವರ ವೀಡಿಯೋವನ್ನು ಅವರು ಲಾರೆನ್ಸ್ ಬಿಷ್ಣೋಯ್ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆಂದು ಹಂಚಿಕೊಂಡಿದ್ದಾರೆ

ಮೂಲಕ: ಉಮ್ಮೆ ಕುಲ್ಸುಮ್

ಅಕ್ಟೋಬರ್ 16 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕೋವಿಡ್-೧೯ ಲಾಕ್‌ಡೌನ್‌ನ ೨೦೨೦ ರ ವೀಡಿಯೋವನ್ನು ಬಳಸಿಕೊಂಡು ಸಲ್ಮಾನ್ ಖಾನ್ ಲಾರೆನ್ಸ್ ಬಿಷ್ಣೋಯ್‌ಗೆ ಬೆದರಿಕೆ ಹಾಕಿದ್ದಾರೆ ಎಂದು ತಪ್ಪಾಗಿ ಹೇಳುವ ಸಾಮಾಜಿಕ ಮಾಧ್ಯಮ ಪೋಷ್ಟ್‌ನ ಸ್ಕ್ರೀನ್‌ಶಾಟ್. ಸಾಮಾಜಿಕ ಮಾಧ್ಯಮ ಬಳಕೆದಾರರು ಸಲ್ಮಾನ್ ಖಾನ್ ಅವರ ಕೋವಿಡ್-೧೯ ಲಾಕ್‌ಡೌನ್ ಸಂದೇಶದ ೨೦೨೦ ರ ವೀಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ, ಇದನ್ನು ಲಾರೆನ್ಸ್ ಬಿಷ್ಣೋಯ್‌ಗೆ ಬೆದರಿಕೆ ಎಂದು ತಪ್ಪಾಗಿ ಹೇಳಿಕೊಳ್ಳುತ್ತಿದ್ದಾರೆ. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಭಾರತೀಯ ನಟ ಸಲ್ಮಾನ್ ಖಾನ್ ಅವರ ವೈರಲ್ ಕ್ಲಿಪ್ ೨೦೨೦ ರದ್ದು, ಕೋವಿಡ್-೧೯ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುವವರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಹೇಳಿಕೆ ಏನು?

ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಬಾಬಾ ಸಿದ್ದಿಕ್ ಅವರ ಹತ್ಯೆಯ ನಂತರ ಭಾರತೀಯ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರಿಗೆ "ಬೆದರಿಕೆ" ಎಂದು ಹೇಳುವ ಮೂಲಕ ಭಾರತೀಯ ನಟ ಸಲ್ಮಾನ್ ಖಾನ್ ಒಳಗೊಂಡಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಡಿದೆ.

ವೀಡಿಯೋದಲ್ಲಿ, ಖಾನ್ ಹೇಳುತ್ತಾರೆ, “ಒಪ್ಪುತ್ತೇನೆ, ನೀವು ತುಂಬಾ ಧೈರ್ಯಶಾಲಿ, ತುಂಬಾ ಶಕ್ತಿಶಾಲಿ. ಆದರೆ ನೀವು ನಿಮ್ಮ ಕುಟುಂಬದ ಸದಸ್ಯರ ಶವಪೆಟ್ಟಿಗೆಯ ಭಾರವನ್ನು ಹೊರುವಷ್ಟು ಧೈರ್ಯಶಾಲಿ, ಶಕ್ತಿಶಾಲಿಯಾಗಿದ್ದೀರಾ? ನೀವು ಅವರ ಅಂತ್ಯಕ್ರಿಯೆಯ ಚಿತಾಭಸ್ಮವನ್ನು ಒಯ್ಯುತ್ತೀರಾ? ನಿಮ್ಮಲ್ಲಿ ಅಷ್ಟು ಧೈರ್ಯವಿದೆಯೇ? ನೀವು ಯಮರಾಜ್ (ಸಾವಿನ ಹಿಂದೂ ದೇವರು) ಅಥವಾ ಮಲಕುಲ್ ಮೌತ್ (ಇಸ್ಲಾಂನಲ್ಲಿ ಸಾವಿನ ದೇವತೆ) ರಂತೆ ಸಾವಿನ ಸಂದೇಶವಾಹಕರಾಗುತ್ತಿದ್ದೀರಾ?

ಖಾನ್ ಅವರ ಮಾತುಗಳು ಬಿಷ್ಣೋಯ್ ಅವರನ್ನು ಉದ್ದೇಶಿಸಿವೆ ಎಂಬ ಹೇಳಿಕೆಗಳೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಬಳಕೆದಾರರು ವೀಡಿಯೋವನ್ನು ಹೀಗೆ ಹಂಚಿಕೊಂಡಿದ್ದಾರೆ, "ಲಾರೆನ್ಸ್ ಬಿಷ್ಣೋಯ್ ಅವರಿಗೆ ಸಲ್ಮಾನ್ ಖಾನ್ ಸಂದೇಶ. ನೀವು ಸಲ್ಮಾನ್ ಖಾನ್ ಅವರನ್ನು ಬೆಂಬಲಿಸುತ್ತೀರಾ?" 

ವೀಡಿಯೋವು ಹಿಂದಿ ಪಠ್ಯವನ್ನು ಸಹ ಒಳಗೊಂಡಿದೆ: "ಎಲ್ಲಾ ನಡೆದ ನಂತರ, ಸಲ್ಮಾನ್ ಖಾನ್ ಲಾರೆನ್ಸ್ ಬಿಷ್ಣೋಯ್‌ಗೆ ಬೆದರಿಕೆ ಹಾಕಿದರು." ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಆನ್‌ಲೈನ್‌ನಲ್ಲಿ ಮಾಡಿದ ಕ್ಲೈಮ್‌ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಅಜಿತ್ ಪವಾರ್ ಬಣ) ಹಿರಿಯ ರಾಜಕಾರಣಿ ಸಿದ್ದಿಕ್ ಅವರನ್ನು ಅಕ್ಟೋಬರ್ ೧೨ ರಂದು ಗುಂಡಿಕ್ಕಿ ಕೊಲ್ಲಲಾಯಿತು. ಬಿಷ್ಣೋಯ್ ಅವರ ಗ್ಯಾಂಗ್ ದಾಳಿಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿತು, ಸಿದ್ದಿಕ್ ಖಾನ್ ಅವರೊಂದಿಗಿನ ನಿಕಟ ಸಂಬಂಧದ ಕಾರಣದಿಂದ ಗುರಿಯಾಗಿದೆ ಎಂದು ಹೇಳಿದ್ದಾರೆ. ಥಾರ್ ಮರುಭೂಮಿ ಪ್ರದೇಶದ ಸಸ್ಯ ಮತ್ತು ಪ್ರಾಣಿಗಳನ್ನು ತೀವ್ರವಾಗಿ ರಕ್ಷಿಸಲು ಹೆಸರುವಾಸಿಯಾದ ಬಿಷ್ಣೋಯ್ ಸಮುದಾಯದಿಂದ ಪವಿತ್ರವೆಂದು ಪರಿಗಣಿಸಲ್ಪಟ್ಟ ೧೯೯೯ ರ ಬ್ಲ್ಯಾಕ್‌ಬಕ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ನಟನು ಬಿಷ್ಣೋಯ್ ಗ್ಯಾಂಗ್‌ನಿಂದ ಹಲವಾರು ವರ್ಷಗಳಿಂದ ಹಲವಾರು ಬೆದರಿಕೆಗಳನ್ನು ಎದುರಿಸಿದ್ದಾನೆ.

ಆದರೆ,  ಕೋವಿಡ್-೧೯ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಖಾನ್ ವ್ಯಕ್ತಿಗಳನ್ನು ಟೀಕಿಸಿದಾಗ ವೈರಲ್ ವೀಡಿಯೋ ೨೦೨೦ ರ ಹಿಂದಿನದು ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ.

ನಾವು ಕಂಡುಕೊಂಡದ್ದು

ವೈರಲ್ ಕ್ಲಿಪ್‌ನಿಂದ ವಿವಿಧ ಕೀಫ್ರೇಮ್‌ಗಳೊಂದಿಗೆ ರಿವರ್ಸ್ ಇಮೇಜ್ ಸರ್ಚ್ ಅನ್ನು ಬಳಸಿಕೊಂಡು, ಲಾಜಿಕಲಿ ಫ್ಯಾಕ್ಟ್ಸ್, ಖಾನ್ ಅವರ ಅಧಿಕೃತ ಇನಸ್ಟಾಗ್ರಾಮ್ ಖಾತೆಯಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಏಪ್ರಿಲ್ ೧೫, ೨೦೨೦ ರಂದು ಹಂಚಿಕೊಂಡ ದೀರ್ಘವಾದ ಆವೃತ್ತಿಯನ್ನು ಕಂಡುಕೊಂಡಿದೆ. ವೀಡಿಯೋ ನಾಲ್ಕು ವರ್ಷಕ್ಕಿಂತ ಹಳೆಯದಾಗಿದೆ ಎಂದು ಇದು ಖಚಿತಪಡಿಸುತ್ತದೆ. ಮೂಲ ಕ್ಲಿಪ್‌ನಲ್ಲಿ, ಖಾನ್ ಕೋವಿಡ್-೧೯ ಮತ್ತು ಲಾಕ್‌ಡೌನ್ ಕುರಿತು ಚರ್ಚಿಸಿದ್ದಾರೆ ಆದರೆ ಬಿಷ್ಣೋಯ್ ಅವರನ್ನು ಉಲ್ಲೇಖಿಸಿಲ್ಲ.

ಈಗ ವೈರಲ್ ಟೀಕೆಗಳನ್ನು ಒಳಗೊಂಡಿರುವ ವೀಡಿಯೋದ ಭಾಗದ ಮೊದಲು, ಖಾನ್ ಹೇಳುತ್ತಾರೆ, “ಕೆಲವು ಜೋಕರ್‌ಗಳಿಂದಾಗಿ, ಈ ಕೋವಿಡ್-೧೯ ವೈರಸ್ ದೇಶಾದ್ಯಂತ ಹರಡುತ್ತಿದೆ. ನಿಮ್ಮ ಕ್ರಮಗಳು ಉತ್ತಮವಾಗಿದ್ದರೆ, ಹಲವಾರು ವೈದ್ಯರು, ದಾದಿಯರು, ಪೊಲೀಸ್ ಅಧಿಕಾರಿಗಳು ಮತ್ತು ಆರೋಗ್ಯ ಕಾರ್ಯಕರ್ತರು ವೈರಸ್ ಪಡೆಯುತ್ತಿರಲಿಲ್ಲ ಮತ್ತು ನಾವು ಸಾಮಾನ್ಯ ಜೀವನಕ್ಕೆ ಮರಳಬಹುದಿತ್ತು. ಸಾಂಕ್ರಾಮಿಕ ರೋಗವು ಚೀನಾದಲ್ಲಿ ಪ್ರಾರಂಭವಾಯಿತು ಮತ್ತು ಅಲ್ಲಿ ಕಡಿಮೆಯಾಗುತ್ತದೆ, ಕೆಲವು ಬೇಜವಾಬ್ದಾರಿ ಜನರ ಕಾರಣ, ಭಾರತವು ದೀರ್ಘಕಾಲದವರೆಗೆ ಲಾಕ್‌ಡೌನ್‌ನಲ್ಲಿರುತ್ತದೆ."

ವೀಡಿಯೋವನ್ನು ಏಪ್ರಿಲ್ ೧೬, ೨೦೨೦ ರಂದು ಸಂಸದ್ ಟಿವಿ ಯೂಟ್ಯೂಬ್ ಚಾನೆಲ್‌ಗೆ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅಪ್‌ಲೋಡ್ ಮಾಡಲಾಗಿದೆ: “ಲಾಕ್‌ಡೌನ್ ಉಲ್ಲಂಘಿಸುವ ಜನರಿಗೆ ಸಲ್ಮಾನ್ ಖಾನ್ ಸಂದೇಶ” ಎಂಬ ಶೀರ್ಷಿಕೆಯೊಂದಿಗೆ. ಈ ವೀಡಿಯೋದಲ್ಲಿ ಸಂಬಂಧಿತ ಭಾಗವನ್ನು ೧:೩೭ ಮಾರ್ಕ್‌ನಲ್ಲಿ ನೋಡಬಹುದು.

ಏಪ್ರಿಲ್ ೨೦೨೦ ರಂದು ಹಲವಾರು ಸುದ್ದಿ ಲೇಖನಗಳು ಕೋವಿಡ್-೧೯ ಲಾಕ್‌ಡೌನ್ ಕುರಿತು ಖಾನ್ ಅವರ ಹೇಳಿಕೆಗಳನ್ನು ಒಳಗೊಂಡಿವೆ, ಇದರಲ್ಲಿ ಈಗ ವೈರಲ್ ಆಗಿರುವ ಕ್ಲಿಪ್ ಸೇರಿದೆ. ಲಾಕ್‌ಡೌನ್ ನಿಯಮಗಳಿಗೆ ಬದ್ಧವಾಗಿರುವಂತೆ ನಟ ಸಾರ್ವಜನಿಕರನ್ನು ಒತ್ತಾಯಿಸಿದರು ಮತ್ತು ಸಾಂಕ್ರಾಮಿಕ ಸಮಯದಲ್ಲಿ ಸಾಮೂಹಿಕ ಜವಾಬ್ದಾರಿಯ ಮಹತ್ವವನ್ನು ಒತ್ತಿ ಹೇಳಿದರು.

ಅಕ್ಟೋಬರ್ ೧೬, ೨೦೨೪ ರ ಹೊತ್ತಿಗೆ ಬಿಷ್ಣೋಯ್ ಅಥವಾ ಸಿದ್ದಿಕ್ ಹತ್ಯೆಯ ಬಗ್ಗೆ ಖಾನ್ ಯಾವುದೇ ಸಾರ್ವಜನಿಕ ಕಾಮೆಂಟ್‌ಗಳನ್ನು ನೀಡಿಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.

ತೀರ್ಪು

ಸಲ್ಮಾನ್ ಖಾನ್ ಅವರ ವೈರಲ್ ವೀಡಿಯೋ, ಲಾರೆನ್ಸ್ ಬಿಷ್ಣೋಯ್ ಅವರನ್ನು ಗುರಿಯಾಗಿಟ್ಟುಕೊಂಡು ನೀಡಿದ ಸಂದೇಶ ಎಂದು ತಪ್ಪಾಗಿ ಚಿತ್ರಿಸಲಾಗಿದೆ, ವಾಸ್ತವವಾಗಿ ಏಪ್ರಿಲ್ ೨೦೨೦ ರದ್ದು. ಆ ಕ್ಲಿಪ್‌ನಲ್ಲಿ, ಕೋವಿಡ್-೧೯ ಲಾಕ್‌ಡೌನ್ ನಿಯಮಗಳ ಉಲ್ಲಂಘನೆಯ ಬಗ್ಗೆ ನಟ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ