ಮುಖಪುಟ ಟರ್ಕಿಯ ಹಳೆಯ ವೀಡಿಯೋ ಕೇರಳದಲ್ಲಿ ಸೆರೆಹಿಡಿಯಲಾಗಿದೆ ಎಂದು ಸಂದರ್ಭ ರಹಿತ ಹಂಚಿಕೊಳ್ಳಲಾಗಿದೆ

ಟರ್ಕಿಯ ಹಳೆಯ ವೀಡಿಯೋ ಕೇರಳದಲ್ಲಿ ಸೆರೆಹಿಡಿಯಲಾಗಿದೆ ಎಂದು ಸಂದರ್ಭ ರಹಿತ ಹಂಚಿಕೊಳ್ಳಲಾಗಿದೆ

ಮೂಲಕ: ಮೊಹಮ್ಮದ್ ಸಲ್ಮಾನ್

ನವೆಂಬರ್ 12 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕೇರಳದ ಮುಸ್ಲಿಂ ವ್ಯಕ್ತಿ ಹಾಲಿನ ತೊಟ್ಟಿಯಲ್ಲಿ ಸ್ನಾನ ಮಾಡುತ್ತಿರುವುದನ್ನು ಈ ವೀಡಿಯೋ ತೋರಿಸುತ್ತದೆ ಎಂದು ಹಂಚಿಕೊಂಡ ಪೊಸ್ಟ್ ನ ಸ್ಕ್ರೀನ್‌ಶಾಟ್. ಕೇರಳದ ಮುಸ್ಲಿಂ ವ್ಯಕ್ತಿ ಹಾಲಿನ ತೊಟ್ಟಿಯಲ್ಲಿ ಸ್ನಾನ ಮಾಡುತ್ತಿರುವುದನ್ನು ಈ ವೀಡಿಯೋ ತೋರಿಸುತ್ತದೆ ಎಂದು ಹಂಚಿಕೊಂಡ ಪೊಸ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಈ ವೀಡಿಯೋ ಟರ್ಕಿಯ ಕೊನ್ಯಾದಿಂದ ಬಂದಿದೆ ಮತ್ತು ಈ ಘಟನೆಯು ೨೦೨೦ ರಲ್ಲಿ ಡೈರಿ ಪ್ಲಾಂಟ್‌ನಲ್ಲಿ ಸಂಭವಿಸಿದ್ದು, ಇದರಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು.

ಹೇಳಿಕೆ ಏನು?
 
ಫ್ಯಾಕ್ಟರಿಯಲ್ಲಿ ವ್ಯಕ್ತಿಯೊಬ್ಬ ಸ್ನಾನ ಮಾಡುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ, ವ್ಯಕ್ತಿ ಸಣ್ಣ ಟಬ್‌ನಲ್ಲಿ ಮಲಗಿದ್ದು, ಮಗ್‌ನಲ್ಲಿ ಬಿಳಿ ದ್ರವವನ್ನು ತುಂಬಿ ಅವನ ತಲೆಯ ಮೇಲೆ ಸುರಿದುಕೊಳ್ಳುತ್ತಿದ್ದಾನೆ. ಈ ವೀಡಿಯೋ ಕೇರಳದ ಡೈರಿ ಪ್ಲಾಂಟ್‌ನಲ್ಲಿದ್ದು, ಮುಸ್ಲಿಂ ವ್ಯಕ್ತಿಯೊಬ್ಬ ಹಾಲಿನ ಟಬ್‌ನಲ್ಲಿ ಸ್ನಾನ ಮಾಡುತ್ತಿದ್ದಾನೆ, ಅದೇ ಹಾಲನ್ನು ಪ್ಯಾಕ್ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

"ಕೇರಳದ ಹಾಲಿನ ಡೈರಿಯನ್ನು (ಕಾರ್ಖಾನೆ) ನೋಡಿ. ಒಬ್ಬ ಮುಸ್ಲಿಂ ವ್ಯಕ್ತಿ ಹಾಲಿನ ತೊಟ್ಟಿಯಲ್ಲಿ ಸ್ನಾನ ಮಾಡುತ್ತಿದ್ದಾನೆ ಮತ್ತು ಅದೇ ಹಾಲನ್ನು ಪ್ಯಾಕ್ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಹಾಲು ಕೂಡ ಈಗ ಕುಡಿಯಲು ಸುರಕ್ಷಿತವಲ್ಲ" ಎಂಬ ಶೀರ್ಷಿಕೆಯೊಂದಿಗೆ ಬಳಕೆದಾರರು ಫೇಸ್‌ಬುಕ್‌ ನಲ್ಲಿ ಬಳಕೆದಾರರು ಪೋಷ್ಟ್ ಮಾಡಿದ್ದಾರೆ. ಇದೇ ರೀತಿಯ ಹೇಳಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡ ಇತರ ಪೋಷ್ಟ್ ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಫೇಸ್‌ಬುಕ್‌/ಸ್ಕ್ರೀನ್‌ಶಾಟ್)


ಆದರೆ, ವೈರಲ್ ವೀಡಿಯೋ ಕೇರಳ ಅಥವಾ ಭಾರತದ ಯಾವುದೇ ರಾಜ್ಯದಿಂದ ಬಂದದ್ದಲ್ಲ ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ. ಇದು ವಾಸ್ತವವಾಗಿ ೨೦೨೦ ರ ಟರ್ಕಿಯ ವೀಡಿಯೋ. 

ನಾವು ಕಂಡುಕೊಂಡಿದ್ದು ಏನು? 


ವೈರಲ್ ವೀಡಿಯೋದ ಪ್ರಮುಖ ಫ್ರೇಮ್‌ಗಳ ಮೇಲೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಈ ಘಟನೆಯ ಕುರಿತು ಹಲವಾರು ಮಾಧ್ಯಮ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. ನವೆಂಬರ್ ೬, ೨೦೨೦ ರಂದು ಹುರಿಯೆತ್ ಡೈಲಿ ನ್ಯೂಸ್ ವರದಿಯು ಟರ್ಕಿಯ ಕೊನ್ಯಾ ನಗರದ ಡೈರಿ ಪ್ಲಾಂಟ್‌ನಲ್ಲಿ ಹಾಲಿನ ಟಬ್‌ನಲ್ಲಿ ಸ್ನಾನ ಮಾಡುವ ವ್ಯಕ್ತಿಯ ವೀಡಿಯೋ ಬಗ್ಗೆ ವಿವರಗಳನ್ನು ಹೊಂದಿಗೆ. ಈ ವರದಿಯು ಅದೇ ವೈರಲ್ ವೀಡಿಯೋವನ್ನು ಹೊಂದಿದ್ದು, ಅದನ್ನು ಈಗ ಕೇರಳದಿಂದ ಬಂದದ್ದು ಎಂದು ಹಂಚಿಕೊಳ್ಳಲಾಗುತ್ತಿದೆ.

ವೈರಲ್ ವೀಡಿಯೋ ಮತ್ತು ಹುರಿಯೆತ್ ಡೈಲಿ ವರದಿಯಲ್ಲಿರುವ ವೀಡಿಯೋದ ಹೋಲಿಕೆ.
 (ಮೂಲ: ಫೇಸ್‌ಬುಕ್‌/ಹುರಿಯತ್ ಡೈಲಿ/ಸ್ಕ್ರೀನ್‌ಶಾಟ್)


ಟರ್ಕಿಯ ಸುದ್ದಿ ವಾಹಿನಿ ಟಿಆರ್‌ಟಿ ಹೇಬರ್‌ನ ವರದಿಯ ಪ್ರಕಾರ, ಡೈರಿ ಪ್ಲಾಂಟ್‌ನಲ್ಲಿ ಕೆಲಸ ಮಾಡುವ ಎಮ್ರೆ ಸಯಾರ್ ಮತ್ತು ನವೆಂಬರ್ ೬, ೨೦೨೦ ರಂದು ಟಿಕ್‌ಟಾಕ್‌ನಲ್ಲಿ ವೀಡಿಯೋವನ್ನು ಹಂಚಿಕೊಂಡ ಇನ್ನೊಬ್ಬ ಉದ್ಯೋಗಿ ಉಗುರ್ ತುರ್ಗುಟ್ ಅವರನ್ನು ಬಂಧಿಸಲಾಗಿತ್ತು. ಡೈರಿ ಪ್ಲಾಂಟ್‌ಗೆ ದಂಡ ವಿಧಿಸಲಾಯಿತು ಮತ್ತು ನಂತರ ಅದರ ಪರವಾನಗಿಯನ್ನು ರದ್ದುಗೊಳಿಸಲಾಯಿತು ಎಂದು ಹೇಳಿದೆ. 

ಇಬ್ಬರನ್ನೂ ಆರು ದಿನಗಳ ಕಾಲ ಜೈಲಿನಲ್ಲಿಡಲಾಗಿತ್ತು ಎಂದು ಮತ್ತೊಂದು ಟರ್ಕಿಶ್ ವರದಿ ಹೇಳಿದೆ. ನಂತರ ವಿಚಾರಣೆ ಬಾಕಿ ಇರುವಾಗಲೇ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಟಬ್‌ನಲ್ಲಿರುವ ವಸ್ತು ಹಾಲು ಅಲ್ಲ ಆದರೆ ಬಿಸಿ ನೀರು ಮತ್ತು ಹಾಲಿನ ಅವಶೇಷವಾಗಿತ್ತು ಎಂದು ಪ್ರಕರಣದ ಪ್ರಾಸಿಕ್ಯೂಟರ್ ಹೇಳಿದರು. ನ್ಯಾಯಾಲಯವು ಅಕ್ಟೋಬರ್ ೨೦೨೧ ರಲ್ಲಿ ಸಯಾರ್ ಮತ್ತು ಉಗುರ್ ಅವರನ್ನು ಖುಲಾಸೆಗೊಳಿಸಿತು. ಇದರ ನಂತರ, ಸಾಯರ್ ಅವರು ೧೨೦,೦೦೦ ಲೀರಾಗಳ ಪರಿಹಾರಕ್ಕಾಗಿ ಮೊಕದ್ದಮೆ ಹೂಡಿದರು. ಸಯಾರ್ ಪ್ರಕರಣವನ್ನು ಗೆದ್ದರು ಆದರೆ ಕೊನ್ಯಾ ನ್ಯಾಯಾಲಯವು ಅವರಿಗೆ ಕೇವಲ ೧,೧೫೦ ಲೀರಾಗಳನ್ನು ಪಾವತಿಸಬೇಕೆಂದು ಆದೇಶಿಸಿತು. ಎಮ್ರೆ ಸಾಯರ್ ಸುಮಾರು ೭೦ ಜನರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ತೀರ್ಪು

ನಮ್ಮ ತನಿಖೆಯ ಪ್ರಕಾರ ವೈರಲ್ ವೀಡಿಯೋ ಕೇರಳದಿಂದಲ್ಲ, ಆದರೆ ೨೦೨೦ ರಲ್ಲಿ ಟರ್ಕಿಯ ಕೊನ್ಯಾದಿಂದ ಬಂದಿದೆ ಎಂದು ಸ್ಪಷ್ಟಪಡಿಸಿದೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)


ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ