ಮುಖಪುಟ ಚಂದ್ರಬಾಬು ನಾಯ್ಡು ಎನ್‌ಡಿಎ ತೊರೆಯುತ್ತಿರುವ ೨೦೧೮ ರ ಸುದ್ದಿಯ ತುಣುಕನ್ನು ಇತ್ತೀಚೀನದ್ದು ಎಂದು ಹಂಚಿಕೊಳ್ಳಲಾಗಿದೆ

ಚಂದ್ರಬಾಬು ನಾಯ್ಡು ಎನ್‌ಡಿಎ ತೊರೆಯುತ್ತಿರುವ ೨೦೧೮ ರ ಸುದ್ದಿಯ ತುಣುಕನ್ನು ಇತ್ತೀಚೀನದ್ದು ಎಂದು ಹಂಚಿಕೊಳ್ಳಲಾಗಿದೆ

ಮೂಲಕ: ಮೊಹಮ್ಮದ್ ಸಲ್ಮಾನ್

ಸೆಪ್ಟೆಂಬರ್ 9 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಚಿತ್ರದಲ್ಲಿ ಚಂದ್ರಬಾಬು ನಾಯ್ಡು ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ತೊರೆದಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ. ಚಂದ್ರಬಾಬು ನಾಯ್ಡು ಎನ್‌ಡಿಎ ಮೈತ್ರಿಯನ್ನು ಮುರಿದಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋ ಕ್ಲಿಪ್ ಮೂಲಕ ಹೇಳಿಕೊಳ್ಳುತ್ತಿದ್ದಾರೆ. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ವೈರಲ್ ಸುದ್ದಿ ಕ್ಲಿಪ್ ೨೦೧೮ ರಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ತೊರೆಯಲು ನಿರ್ಧರಿಸಿದನ್ನು ತೋರಿಸುತ್ತದೆ.

ಹೇಳಿಕೆ ಏನು?

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆಗಿನ ಮೈತ್ರಿಯನ್ನು ಮುರಿದುಕೊಂಡಿದೆ ಎಂದು ಹೇಳಲಾಗುತ್ತಿರುವ ಸುದ್ದಿ ಕ್ಲಿಪ್‌ನ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ ಈಡೇರದ ಕಾರಣ ಮೈತ್ರಿ ಮುರಿದು ಬಿದ್ದಿದ್ದು, ಟಿಡಿಪಿಯ ಇಬ್ಬರು ಕೇಂದ್ರ ಸಚಿವರು ನಾಳೆ ರಾಜೀನಾಮೆ ನೀಡಲಿದ್ದಾರೆ ಎಂದು ಸುದ್ದಿಯ ತುಣುಕಿನಲ್ಲಿ ಹೇಳಲಾಗಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆಯಂತೆ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಕ್ಲಿಪ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

ಎಕ್ಸ್ (ಹಿಂದೆ ಟ್ವಿಟರ್‌) ನಲ್ಲಿ, ಬಳಕೆದಾರರು ಕ್ಲಿಪ್ ಅನ್ನು "ಖೇಲಾ ಹೋ ಗಯಾ" ಎಂದು ಶೀರ್ಷಿಕೆ ನೀಡಿದ್ದಾರೆ, ಇದು ಇಲ್ಲಿಯವರೆಗೆ ೩೦೦೦ ಕ್ಕೂ ಹೆಚ್ಚು ಮರುಪೋಷ್ಟ್ ಗಳನ್ನು ಮತ್ತು ೯೦೦೦ ಲೈಕ್‌ಗಳನ್ನು ಗಳಿಸಿದೆ. ಪೋಷ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ವೀಕ್ಷಿಸಿ. ಅದೇ ರೀತಿ ಮತ್ತೊಬ್ಬ ಬಳಕೆದಾರರು ಸುದ್ದಿ ಕ್ಲಿಪ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು "ಚಂದ್ರಬಾಬು ನಾಯ್ಡು ನಂತರ ನಿತೀಶ್ ಕೂಡ ಆಡಬಹುದು...ನಾಳೆ, (ಟಿಡಿಪಿ) ಯ ಇಬ್ಬರು ಸಚಿವರು ಎನ್‌ಡಿಎಗೆ ರಾಜೀನಾಮೆ ನೀಡುತ್ತಾರೆ!..." ಎಂದು ಬರೆದಿದ್ದಾರೆ, ಪೋಷ್ಟ್‌ನ ಆರ್ಕೈವ್ ಆವೃತ್ತಿಯನ್ನು ಇಲ್ಲಿ ನೋಡಿ. ಇತರ ಪೋಷ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಿ.

ವೈರಲ್ ಪೋಷ್ಟ್‌ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)

೧೬ ಸ್ಥಾನಗಳೊಂದಿಗೆ ಟಿಡಿಪಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸಮ್ಮಿಶ್ರ ಸರ್ಕಾರದ ಪ್ರಮುಖ ಘಟಕವಾಗಿದೆ. 

ಆದರೆ, ವೈರಲ್ ಸುದ್ದಿ ಕ್ಲಿಪ್ ಇತ್ತೀಚಿನದ್ದಲ್ಲ, ೨೦೧೮ ರದ್ದು. ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ತೊರೆಯಲು ನಿರ್ಧರಿಸಿದ್ದರು.

ನಾವು ಸತ್ಯವನ್ನು ಹೇಗೆ ಕಂಡುಕೊಂಡೆವು?

ಸಂಬಂಧಿತ ಕೀವರ್ಡ್‌ಗಳ ಮೂಲಕ ಹುಡುಕಿದಾಗ, ಮಾರ್ಚ್ ೭, ೨೦೧೮ ರಂದು ಎಬಿಪಿ ನ್ಯೂಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅಪ್‌ಲೋಡ್ ಮಾಡಲಾದ ವೈರಲ್ ಸುದ್ದಿ ಕ್ಲಿಪ್ ಅನ್ನು ನಾವು ಕಂಡುಕೊಂಡಿದ್ದೇವೆ, ಇದು ಇತ್ತೀಚಿನ ಸುದ್ದಿ ಅಲ್ಲ, ಆದರೆ ಇದು ಆರು ವರ್ಷಗಳಿಗಿಂತ ಹಳೆಯದು ಎಂದು ಸ್ಪಷ್ಟಪಡಿಸುತ್ತದೆ. 

ಚಂದ್ರಬಾಬು ನಾಯ್ಡು ಅವರು ಬಿಜೆಪಿಯ ಎನ್‌ಡಿಎ ಮೈತ್ರಿಕೂಟದೊಂದಿಗಿನ ಸಂಬಂಧವನ್ನು ಮುರಿದಿದ್ದಾರೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ತಮ್ಮ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಮೈತ್ರಿ ತೊರೆದಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರಕ್ಕೆ ಸೇರ್ಪಡೆಯಾಗಿರುವ ಟಿಡಿಪಿಯ ಇಬ್ಬರು ಕೇಂದ್ರ ಸಚಿವರು ರಾಜೀನಾಮೆ ನೀಡಲಿದ್ದಾರೆ. 

ಮಾರ್ಚ್ ೧೬, ೨೦೧೮ ರ NDTV ವರದಿಯು ೨೦೧೯ ರ ಲೋಕಸಭಾ ಚುನಾವಣೆಗೆ ಮೊದಲು ಟಿಡಿಪಿ ಮೈತ್ರಿಯನ್ನು ಮುರಿದು ಬಿಜೆಪಿಗೆ ದೊಡ್ಡ ಹೊಡೆತವನ್ನು ನೀಡಿತು ಎಂದು ವರದಿ ಮಾಡಿದೆ. ಚಂದ್ರಬಾಬು ನಾಯ್ಡು ಅವರ ಪಕ್ಷವೂ ಸಂಸತ್ತಿನಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಿದೆ. ಆಂಧ್ರಪ್ರದೇಶದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಚಂದ್ರಬಾಬು ನಾಯ್ಡು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ; ನಾಲ್ಕು ವರ್ಷಗಳಿಂದ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗಿದ್ದು, ಇದು ಕೇಂದ್ರದ ಕೊನೆಯ ಬಜೆಟ್ ಆಗಿದ್ದು, ಅದರಲ್ಲಿ ಆಂಧ್ರಪ್ರದೇಶದ ಪ್ರಸ್ತಾಪವೇ ಇರಲಿಲ್ಲ.

ಎನ್‌ಡಿಎ ತೊರೆಯುವ ಕುರಿತು ಚಂದ್ರಬಾಬು ನಾಯ್ಡು ಅವರು ಇತ್ತೀಚೆಗೆ ಯಾವುದೇ ಹೇಳಿಕೆ ನೀಡಿದ್ದಾರೆಯೇ ಎಂಬುದನ್ನು ಕೂಡ ಪರಿಶೀಲಿಸಿದ್ದೇವೆ. ಆದರೆ ಟಿಡಿಪಿ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡಿದೆ ಎಂಬ ಯಾವುದೇ ಸುದ್ದಿ ಅಥವಾ ಅಧಿಕೃತ ಹೇಳಿಕೆ ನಮಗೆ ಕಂಡುಬಂದಿಲ್ಲ. ಹೀಗೇ ನಡೆದಿದ್ದರೆ ಈ ಸುದ್ದಿ ಸಾಕಷ್ಟು ಸುದ್ದಿಯಾಗುತ್ತಿತ್ತು. ವೈರಲ್ ನ್ಯೂಸ್ ಕ್ಲಿಪ್ ಹಳೆಯದು ಎಂಬುದು ಸ್ಪಷ್ಟವಾಗಿದೆ.

ಟಿಡಿಪಿ ಈ ಹಿಂದೆ ಯಾವಾಗ ಎನ್‌ಡಿಎ ತೊರೆದಿತ್ತು?

ಜೂನ್ ೨೦೨೪ ರಿಂದ ಇಂಡಿಯನ್ ಎಕ್ಸ್‌ಪ್ರೆಸ್ ವರದಿ (ಇಲ್ಲಿ ಆರ್ಕೈವ್) ಎನ್‌ಡಿಎ ಯಲ್ಲಿನ ಅತ್ಯಂತ ಮೌಲ್ಯಯುತ ಪಕ್ಷಗಳಲ್ಲಿ ಒಂದಾದ ಟಿಡಿಪಿಯು ಮೈತ್ರಿಯನ್ನು ತೊರೆಯುವ ಟೈಮ್‌ಲೈನ್ ಅನ್ನು ಉಲ್ಲೇಖಿಸಿದೆ. ಟಿಡಿಪಿ ೧೯೯೯-೨೦೦೪ ರ ಅವಧಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ಭಾಗವಾಗಿತ್ತು. ೨೦೧೪ ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಹಂತದ ಮತದಾನಕ್ಕೆ ಮುನ್ನ ಅಕಾಲಿದಳದ ನಾಯಕ ನರೇಶ್ ಗುಜ್ರಾಲ್ ಅವರ ಮಧ್ಯಸ್ಥಿಕೆಯ ನಂತರ ನಾಯ್ಡು ಎನ್‌ಡಿಎಗೆ ಮರು ಸೇರ್ಪಡೆಗೊಂಡರು. ನಾಯ್ಡು ನಾಲ್ಕು ವರ್ಷಗಳ ಕಾಲ ಎನ್‌ಡಿಎ ಭಾಗವಾಗಿದ್ದರು ಮತ್ತು ೨೦೧೮ ರಲ್ಲಿ ಬೇರ್ಪಟ್ಟರು. ಇದರ ನಂತರ, ಚಂದ್ರಬಾಬು ನಾಯ್ಡು ಅವರ ಪಕ್ಷವು ೨೦೨೪ ರ ಚುನಾವಣೆಗೆ ಮೊದಲು ಮತ್ತೆ ಎನ್‌ಡಿಎ ಸೇರಿತು.

ತೀರ್ಪು

ನಮ್ಮ ಈವರೆಗಿನ ತನಿಖೆಯಿಂದ ಚಂದ್ರಬಾಬು ನಾಯ್ಡು ಅವರ ಪಕ್ಷವಾದ ಟಿಡಿಪಿಯು ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆಗಿನ ಮೈತ್ರಿಯನ್ನು ಮುರಿದಿಲ್ಲ ಅಥವಾ ಅದರ ಸಚಿವರು ರಾಜೀನಾಮೆ ನೀಡುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ವೈರಲ್ ಆಗುತ್ತಿರುವ ಸುದ್ದಿ ಕ್ಲಿಪ್ ಸುಮಾರು ಆರು ವರ್ಷಗಳಷ್ಟು ಹಳೆಯದು, ಅಂದರೆ ೨೦೧೮ ರದ್ದು.

(ಅನುವಾದಿಸಿದವರು: ರಜಿನಿ ಕೆ.ಜಿ)

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ