ಮೂಲಕ: ತಾಹಿಲ್ ಅಲಿ
ಅಕ್ಟೋಬರ್ 1 2024
ಲೆಬನಾನ್‌ನ ಬೊರುಜ್ ಹಮ್ಮೌಡ್‌ನಲ್ಲಿರುವ ಭೂಕುಸಿತ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ವೀಡಿಯೋ ತೋರಿಸುತ್ತದೆ. ಇದು ಲೆಬನಾನ್ ಪೇಜರ್ ಸ್ಪೋಟದ ಹಿಂದಿನದ್ದು.
ಹೇಳಿಕೆ ಏನು?
ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಉಗ್ರಗಾಮಿಗಳಿಗೆ ಸೇರಿದ ರಾಕೆಟ್ ಉಡಾವಣಾ ತಾಣವನ್ನು ಇಸ್ರೇಲಿ ವೈಮಾನಿಕ ದಾಳಿಯಿಂದ ನಾಶಪಡಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಬೆಟ್ಟದಂತಹ ಪ್ರದೇಶದಲ್ಲಿ ತೀವ್ರವಾದ ಬೆಂಕಿಯನ್ನು ಆವರಿಸಿರುವ ವೀಡಿಯೋವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ.
ಲೆಬನಾನ್‌ನಲ್ಲಿ ಇತ್ತೀಚಿನ ಪೇಜರ್ ಸ್ಫೋಟಗಳ ನಂತರ ಮತ್ತು ಸಂಸ್ಥೆಯು ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ನೂರಾರು ರಾಕೆಟ್‌ಗಳನ್ನು ಉಡಾಯಿಸಲು ನಿಮಿಷಗಳ ಮೊದಲು ಈ ದಾಳಿಯನ್ನು ನಡೆಸಲಾಗಿದೆ ಎಂದು ಬಳಕೆದಾರರು ಹೇಳಿದ್ದಾರೆ.
ಒಬ್ಬ ಫೇಸ್‌ಬುಕ್ (ಹಿಂದೆ ಟ್ವಿಟರ್) ಬಳಕೆದಾರರು ಈ ವೀಡಿಯೋವನ್ನು ಹಂಚಿಕೊಂಡಿದ್ದು ಅದರ ಶೀರ್ಷಿಕೆ ಹೀಗಿದೆ, "ಬಿಸ್ಮಿಲ್ಲಾ! ಭಯೋತ್ಪಾದಕರೇ ತುಂಬಿರುವ ಹೆಜ್ಬುಲ್ಲಾ ಇಸ್ರೇಲಿ ಮಿಲಿಟರಿ ಮತ್ತು ನಾಗರಿಕರನ್ನು ಗುರಿ ಮಾಡಿಕೊಂಡು ದಾಳಿಗಾಗಿ ೧೦೦ ರಾಕೆಟ್ ಲಾಂಚರ್‌ಗಳನ್ನು,ಮತ್ತು ೧೦೦೦ ಕ್ಕೂ ಹೆಚ್ಚು ಬ್ಯಾರೆಲ್‌ಗಳನ್ನು ಲೆಬನಾನ್‌ನಲ್ಲಿ ಸಿದ್ಧಪಡಿಸಿತ್ತು.ಉಡಾವಣೆಗೆ ಕೆಲವೇ ನಿಮಿಷಗಳ ಮೊದಲು,ಇಸ್ರೇಲ್ ಅದನ್ನು ಸ್ಫೋಟಿಸಿತು."
ಇದರ ಆರ್ಕೈವ್ ಮಾಡಿದ ಆವೃತ್ತಿ ಮತ್ತು ಅದೇ ರೀತಿಯ ಪೋಷ್ಟ್ ಗಳು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿವೆ.
ಕೆಲವು ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ರಿಪಬ್ಲಿಕ್ ಟಿವಿ ಮತ್ತು ಎಬಿಪಿ ಲೈವ್ ಸೇರಿದಂತೆ ಕೆಲವು ಸುದ್ದಿವಾಹಿನಿಗಳು ತಮ್ಮ ಸುದ್ದಿ ವರದಿಗಳಲ್ಲಿ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿವೆ, ಇದು ಲೆಬನಾನ್‌ನಲ್ಲಿ ಇಸ್ರೇಲ್‌ನ ಇತ್ತೀಚಿನ ವೈಮಾನಿಕ ದಾಳಿ ಎಂದು ಹೇಳಿಕೊಂಡಿದೆ.
ಆದರೆ, ವೈರಲ್ ವೀಡಿಯೋ ಲೆಬನಾನ್‌ನ ಬೊರುಜ್ ಹಮ್ಮೌಡ್‌ನಲ್ಲಿನ ಭೂಕುಸಿತ ಸ್ಥಳದಲ್ಲಿ ಬೆಂಕಿಯನ್ನು ತೋರಿಸುತ್ತದೆ, ಇದು ಇತ್ತೀಚಿನ ಉಲ್ಬಣಗಳಿಗೆ ಸಂಬಂಧವಿಲ್ಲ.
ವಾಸ್ತವಾಂಶಗಳೇನು?
ರಿವರ್ಸ್ ಇಮೇಜ್ ಸರ್ಚ್ ಮೂಲಕ, ಲೆಬನಾನ್ ಸುದ್ದಿ ಔಟ್ಲೆಟ್, ಎಲ್ಸಿಯಾಸಾ | السياسة ಹಂಚಿಕೊಂಡ ಅದೇ ತುಣುಕನ್ನು ನಾವು ಕಂಡುಕೊಂಡಿದ್ದೇವೆ. ಅದರ ಎಕ್ಸ್ ಖಾತೆಯಲ್ಲಿ ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಸೆಪ್ಟೆಂಬರ್ ೧೩, ೨೦೨೪ ರಂದು ಹಂಚಿಕೊಳ್ಳಲಾಗಿದೆ, "ವೀಡಿಯೋ ವಿಪತ್ತಿನ ಪ್ರಮಾಣವನ್ನು ತೋರಿಸುತ್ತದೆ ... ಇದು ಬೊರುಜ್ ಹಮ್ಮೌಡ್ ಲ್ಯಾಂಡ್‌ಫಿಲ್‌ನಲ್ಲಿ ಬೆಂಕಿಯ ದೃಶ್ಯವು ತೋರುತ್ತಿದೆ." (ಗೂಗಲ್ ಅರೇಬಿಕ್ ನಿಂದ ಅನುವಾದಿಸಲಾಗಿದೆ).
ಎಲ್ಸಿಯಾಸಾ ಸೆಪ್ಟೆಂಬರ್ ೧೨, ೨೦೨೪ ರಂದು ವರದಿಯನ್ನು ಪ್ರಕಟಿಸಿದ್ದು, ಇದರಲ್ಲಿ ಅದೇ ವೀಡಿಯೋವನ್ನು ಎಂಬೆಡ್ ಮಾಡಲಾಗಿದೆ, ಇದು ಲೆಬನಾನ್‌ನ ಜೆಡೆಡೆ ಪುರಸಭೆಯ ಭಾಗವಾಗಿರುವ ಬೊರುಜ್ ಹಮ್ಮೌದ್-ಡೋರಾದಲ್ಲಿನ ಭೂಕುಸಿತದಲ್ಲಿ ಬೆಂಕಿ ಸಂಭವಿಸಿದೆ ಎಂದು ಸೂಚಿಸುತ್ತದೆ.
ಎಲ್ಸಿಯಾಸಾ ಸುದ್ದಿ ಔಟ್ಲೆಟ್ ಎಲ್ಸಿಯಾಸಾದ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
(ಮೂಲ: ಎಲ್ಸಿಯಾಸಾ/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)
೨೦೨೪ ರ ಸೆಪ್ಟೆಂಬರ್ ೧೨ ರಂದು ಮತ್ತೊಂದು ಲೆಬನಾನಿನ ಸುದ್ದಿವಾಹಿನಿ ಆನ್-ನಹರ್ ವರದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ, ಇದು ವೈರಲ್ ವೀಡಿಯೋ ಬೊರುಜ್ ಹಮ್ಮೌಡ್ ಲ್ಯಾಂಡ್‌ಫಿಲ್‌ನಲ್ಲಿ ಬೆಂಕಿಯನ್ನು ತೋರಿಸುತ್ತದೆ ಎಂಬುದನ್ನು ದೃಢೀಕರಿಸುತ್ತದೆ. ವರದಿಯು ವಿವಿಧ ಕೋನಗಳಿಂದ ತೆಗೆದ ಬೆಂಕಿಯ ಒಂದೇ ರೀತಿಯ ದೃಶ್ಯಗಳನ್ನು ಒಳಗೊಂಡಿದೆ.
ಹೆಚ್ಚುವರಿಯಾಗಿ, ಸೆಪ್ಟೆಂಬರ್ ೧೨ ಮತ್ತು ೧೩, ೨೦೨೪ ರಂದು "ಇದು ಬೈರುತ್ ನ್ಯೂಸ್" ಎಂಬ ಔಟ್‌ಲೆಟ್ ಮೂಲಕ ಬೆಂಕಿಯ ಘಟನೆಯ ಹಲವಾರು ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. ಅವರ ಒಂದು ವರದಿಯಲ್ಲಿ, ಪರಿಸರ ಸಚಿವ ನಾಸರ್ ಯಾಸಿನ್ ಬೆಂಕಿಯ ಕಾರಣ ಇನ್ನೂ ತಿಳಿದಿಲ್ಲ ಎಂದು ಹೇಳಿದ್ದಾರೆ (ಉದಾಹರಣೆಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು).
ಸೆಪ್ಟೆಂಬರ್ ೧೭, ೨೦೨೪ ರಂದು ಲೆಬನಾನ್‌ನಾದ್ಯಂತ ಹ್ಯಾಂಡ್‌ಹೆಲ್ಡ್ ಪೇಜರ್‌ಗಳ ಸ್ಫೋಟಗಳ ಮೊದಲು ಈ ಬೆಂಕಿ ಸಂಭವಿಸಿದೆ ಎಂದು ಈ ವರದಿಗಳು ನಿರ್ಣಾಯಕವಾಗಿ ತೋರಿಸುತ್ತವೆ ಮತ್ತು ಇಸ್ರೇಲ್ ಮತ್ತು ಲೆಬನಾನ್ ನಡುವಿನ ಇತ್ತೀಚಿನ ಉಲ್ಬಣಕ್ಕೆ ಸಂಬಂಧಿಸಿಲ್ಲ.
ತೀರ್ಪು
ಸಾಮಾಜಿಕ ಮಾಧ್ಯಮ ಬಳಕೆದಾರರು ತೀವ್ರವಾದ ಬೆಂಕಿಯ ವೀಡಿಯೋವನ್ನು ಹಂಚಿಕೊಂಡಿದ್ದಾರೆ, ಇದು ರಾಕೆಟ್ ಉಡಾವಣಾ ಸೈಟ್‌ನಲ್ಲಿ ಇತ್ತೀಚಿನ ಇಸ್ರೇಲಿ ವೈಮಾನಿಕ ದಾಳಿ ಎಂದು ತಪ್ಪಾಗಿ ಪ್ರತಿಪಾದಿಸಿದ್ದಾರೆ. ಬದಲಿಗೆ, ಈ ವೀಡಿಯೋ ಲೆಬನಾನ್‌ನ ಬೊರುಜ್ ಹಮ್ಮೌಡ್‌ನಲ್ಲಿರುವ ಲ್ಯಾಂಡ್‌ಫಿಲ್ ಸೈಟ್‌ನಲ್ಲಿ ಬೆಂಕಿಯನ್ನು ತೋರಿಸುತ್ತದೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)
Read this fact-check in English here