ಮುಖಪುಟ ಈ ವೀಡಿಯೋ ಹರಿಯಾಣ ಚುನಾವಣೆಯ ಸೋಲಿನ ನಂತರ ದೀಪೇಂದ್ರ ಹೂಡಾ ಅಳುತ್ತಿರುವುದನ್ನು ತೋರಿಸುವುದಿಲ್ಲ

ಈ ವೀಡಿಯೋ ಹರಿಯಾಣ ಚುನಾವಣೆಯ ಸೋಲಿನ ನಂತರ ದೀಪೇಂದ್ರ ಹೂಡಾ ಅಳುತ್ತಿರುವುದನ್ನು ತೋರಿಸುವುದಿಲ್ಲ

ಮೂಲಕ: ಮೊಹಮ್ಮದ್ ಸಲ್ಮಾನ್

ಅಕ್ಟೋಬರ್ 10 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ವೀಡಿಯೋದಲ್ಲಿ ಕಾಂಗ್ರೆಸ್ ನಾಯಕ ದೀಪೇಂದ್ರ ಹೂಡಾ ಭಾವುಕರಾಗಿ ಕಣ್ಣೀರು ಒರೆಸುತ್ತಿರುವುದು ಕಂಡು ಬಂದಿದೆ. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನಂತರ ದೀಪೇಂದ್ರ ಹೂಡಾ ಕಣ್ಣೀರಿಟ್ಟಿದ್ದಾರೆ ಎಂಬ ವೀಡಿಯೋ ವೈರಲ್ ಆಗಿದೆ. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಈ ವೀಡಿಯೋ ಜೂನ್ ೪, ೨೦೨೪ ರದ್ದು, ಲೋಕಸಭೆ ಚುನಾವಣೆಯಲ್ಲಿ ಹರಿಯಾಣದ ರೋಹ್ಟಕ್ ಸ್ಥಾನವನ್ನು ಗೆದ್ದ ನಂತರ ಕಾಂಗ್ರೆಸ್ ನಾಯಕ ದೀಪೇಂದ್ರ ಹೂಡಾ ಭಾವುಕರಾದಾಗ ಚಿತ್ರಿಕರಿಸಲಾಗಿದೆ.

ಹೇಳಿಕೆ ಏನು?

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನಂತರ, ಪಕ್ಷದ ಸಂಸದ ದೀಪೇಂದರ್ ಹೂಡಾ ಅವರ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಅದರಲ್ಲಿ ಅವರು ಭಾವುಕರಾಗಿ ಕಣ್ಣೀರು ಒರೆಸುತ್ತಿರುವುದನ್ನು ಕಾಣಬಹುದು. ಈ ವೀಡಿಯೋ ಹರಿಯಾಣ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರದ್ದು ಎಂದು ಹೇಳಲಾಗುತ್ತಿದ್ದು, ಗೆಲ್ಲಬೇಕಾದ ಚುನಾವಣೆಯಲ್ಲಿ ಸೋತ ನಂತರ ದೀಪೇಂದ್ರ ಹೂಡಾ ಅವರ ಕಣ್ಣಲ್ಲಿ ನೀರು ತುಂಬಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅನಿರೀಕ್ಷಿತ ಸೋಲನ್ನು ಕಂಡಿರುವುದು ಗಮನಾರ್ಹ. ಅಕ್ಟೋಬರ್ ೫ ರಂದು ರಾಜ್ಯದ ೯೦ ಸ್ಥಾನಗಳಿಗೆ ಮತದಾನ ನಡೆದಿತ್ತು. ಅಕ್ಟೋಬರ್ ೮ ರಂದು ಫಲಿತಾಂಶ ಬಂದಿದ್ದು, ಇದರಲ್ಲಿ ಕಾಂಗ್ರೆಸ್ ೩೭ ಸ್ಥಾನಗಳನ್ನು ಪಡೆದುಕೊಂಡಿದೆ ಮತ್ತು ಬಿಜೆಪಿ ೪೮ ಸ್ಥಾನಗಳನ್ನು ಗೆದ್ದು ಸತತ ಮೂರನೇ ಬಾರಿಗೆ ಸರ್ಕಾರ ರಚಿಸಲಿದೆ.

ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಬಳಕೆದಾರರು ವೀಡಿಯೋವನ್ನು ಹಂಚಿಕೊಂಡಿದ್ದಾರೆ, "ದೀಪೇಂದರ್ ಹೂಡಾ ಅವರು ಗೆದ್ದ ಹರಿಯಾಣವನ್ನು ಕಳೆದುಕೊಂಡ ನಂತರ ಕಣ್ಣೀರು ಹಾಕುತ್ತಿದ್ದಾರೆ! ತುಂಬಾ ಭಾವನಾತ್ಮಕ ವೀಡಿಯೋ ಆದರೆ ಹೂಡಾ ಸಾಹಬ್, ನೀವು ತುಂಬಾ ಆತ್ಮವಿಶ್ವಾಸದಿಂದ ಇರಬಾರದು. ನಿಮ್ಮ ಭವಿಷ್ಯಕ್ಕಾಗಿ ಶುಭಾಶಯಗಳು. " ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಇದೇ ರೀತಿಯ ಹೇಳಿಕೆಗಳನ್ನು ಹೊಂದಿರುವ ಇತರ ಪೋಷ್ಟ್‌ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ವೈರಲ್ ಪೋಷ್ಟ್‌ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)

ಆದರೆ, ವೈರಲ್ ಆಗುತ್ತಿರುವ ವೀಡಿಯೋ ಜೂನ್ ೪, ೨೦೨೪ ರಂದು ನಡೆದ ಲೋಕಸಭೆ ಚುನಾವಣೆಯಲ್ಲಿ ಹರಿಯಾಣದ ರೋಹ್ಟಕ್ ಕ್ಷೇತ್ರದಲ್ಲಿ ಜಯಗಳಿಸಿದ ನಂತರ ದೀಪೇಂದರ್ ಹೂಡಾ ಭಾವುಕರಾಗಿದ್ದ ವೀಡಿಯೋ. ಅಕ್ಟೋಬರ್ ೮ ರಂದು ನಡೆದ ಹರಿಯಾಣ ವಿಧಾನಸಭೆ ಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

ನಾವು ಸತ್ಯವನ್ನು ಹೇಗೆ ಕಂಡುಕೊಂಡೆವು?

ವೈರಲ್ ವೀಡಿಯೋದ ಕೀಫ್ರೇಮ್‌ಗಳಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ ನಂತರ, ಜೂನ್ ೨೦೨೪ ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಷ್ಟ್ ಮಾಡಲಾದ ಹಲವಾರು ವೀಡಿಯೋಗಳನ್ನು ನಾವು ಕಂಡುಕೊಂಡಿದ್ದೇವೆ, ಇದು ಹರಿಯಾಣದ ರೋಹ್ಟಕ್ ಲೋಕಸಭಾ ಕ್ಷೇತ್ರದಲ್ಲಿ ದೀಪೇಂದರ್ ಹೂಡಾ ಅವರ ವಿಜಯದ ಸಂಭ್ರಮಾಚರಣೆ ಎಂದು ಪ್ರಸ್ತುತಪಡಿಸಿತು.

ಜೂನ್ ೪, ೨೦೨೪ ರಂದು, ಕರ್ನಾಲ್ ಬ್ರೇಕಿಂಗ್ ನ್ಯೂಸ್ ಹೆಸರಿನ ದೃಢೀಕೃತ ಯೂಟ್ಯೂಬ್ ಚಾನೆಲ್ ವೀಡಿಯೋವನ್ನು ಹಂಚಿಕೊಂಡಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ ) ದೀಪೇಂದರ್ ಹೂಡಾ ಅವರು ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿದ ನಂತರ ಪ್ರೇಕ್ಷಕರನ್ನು ನೋಡಿ ಕಣ್ಣೀರು ಹಾಕಿದರು.

ವಿಶಾಲ್ ಹೂಡಾ ಎಂಬ ಇನ್‌ಸ್ಟಾಗ್ರಾಮ್‌ ಬಳಕೆದಾರರ ಖಾತೆಯಲ್ಲಿ ವೈರಲ್ ವೀಡಿಯೋದ ದೀರ್ಘ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ಜೂನ್ ೬ ರಂದು ಪೋಷ್ಟ್ ಮಾಡಿದ ವೀಡಿಯೋದಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ), ದೀಪೇಂದರ್ ಹೂಡಾ ಭಾವುಕರಾಗಿ ಕಣ್ಣೀರು ಒರೆಸುವುದನ್ನು ಕಾಣಬಹುದು. ಲಕ್ಷಗಟ್ಟಲೆ ಮತಗಳಿಂದ ಗೆದ್ದ ನಂತರ ದೀಪೇಂದರ್ ಹೂಡಾ ಭಾವುಕರಾದರು ಎಂದು ಕಾಮೆಂಟರಿಯೊಂದಿಗೆ ವೀಡಿಯೋ ರೆಕಾರ್ಡ್ ಮಾಡಲಾಗಿದೆ, ಅದರ ಲೈವ್ ಚಿತ್ರಗಳನ್ನು ನೋಡಬಹುದು.


ವಿಶಾಲ್ ಹೂಡಾ ಅವರ ಇನ್‌ಸ್ಟಾಗ್ರಾಮ್‌ ಬಯೋ ಪ್ರಕಾರ, ಅವರು ದೀಪೇಂದರ್ ಹೂಡಾ ಅವರ ತಂಡದ ಸದಸ್ಯರಾಗಿದ್ದಾರೆ.

ಜೂನ್ ೫, ೨೦೨೪ ರಂದು ಪ್ರಕಟವಾದ ಡಿಎನ್‌ಎ ಹಿಂದಿಯ ವರದಿಯಲ್ಲಿ ವೀಡಿಯೋದ ಸ್ಕ್ರೀನ್‌ಶಾಟ್ ಸಹ ಇದೆ. ದೀಪೇಂದರ್ ಸಿಂಗ್ ಹೂಡಾ ಹರಿಯಾಣದ ರೋಹ್ಟಕ್ ಕ್ಷೇತ್ರದಿಂದ ಮೂರು ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ ಎಂದು ವರದಿಯಾಗಿದೆ. ಈ ಗೆಲುವಿನ ನಂತರ ಭಾವುಕರಾದರು. ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ಅವರು ರೋಹ್ಟಕ್‌ನಿಂದ ಏಳು ಸಾವಿರ ಮತಗಳ ಕಡಿಮೆ ಅಂತರದಿಂದ ಸೋತರು. ಕಾರ್ಯಕರ್ತರ ಪ್ರೀತಿ ಮತ್ತು ದೊಡ್ಡ ಗೆಲುವು ಕಾಂಗ್ರೆಸ್ ನಾಯಕರನ್ನು ಭಾವುಕರನ್ನಾಗಿಸಿತು. ಅವನ ಕಣ್ಣಲ್ಲಿ ನೀರು ಬಂತು.

ಹೂಡಾ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದ ದೈನಿಕ್ ಭಾಸ್ಕರ್ ವರದಿಗಾರ, ರತನ್ ಪವಾರ್ ಅವರೊಂದಿಗೆ ನಾವು ಮಾತನಾಡಿದ್ದೇವೆ, ಅವರು ವೈರಲ್ ವೀಡಿಯೋವನ್ನು ಲೋಕಸಭೆ ಚುನಾವಣೆ ಫಲಿತಾಂಶದ ದಿನವಾದ ಜೂನ್ ೪ ರದ್ದು ಎಂದು ಖಚಿತಪಡಿಸಿದ್ದಾರೆ. ರತನ್ ಪವಾರ್ ನಮಗೆ, "ಈ ವೀಡಿಯೋ ರೋಹ್ಟಕ್‌ನ ಬ್ಯಾಂಕ್ವೆಟ್ ಹಾಲ್‌ನಿಂದ ಮತ ಎಣಿಕೆಯನ್ನು ವೀಕ್ಷಿಸುತ್ತಿದೆ. ದೀಪೇಂದರ್ ಹೂಡಾ ಅವರ ಗೆಲುವು ಖಚಿತವಾದ ನಂತರವೇ ಅಲ್ಲಿಗೆ ತಲುಪಿದ್ದರು, ನಂತರ ಅವರ ಬೆಂಬಲಿಗರು ಅವರನ್ನು ಹೆಗಲ ಮೇಲೆ ಎತ್ತಿದರು. ಈ ಸಮಯದಲ್ಲಿ ಅವರು ಭಾವುಕರಾದರು." 

ನ್ಯೂಸ್ ಏಜೆನ್ಸಿ ANI ಜೂನ್ ೪ ರಂದು ತನ್ನ ಹಿಂದಿ ಮಾಜಿ ಹ್ಯಾಂಡಲ್‌ನಿಂದ ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹಂಚಿಕೊಂಡಿದೆ, ಅದರಲ್ಲಿ ದೀಪೇಂದರ್ ಹೂಡಾ ವಿಜಯದ ನಂತರ ತನ್ನ ಬೆಂಬಲಿಗರ ಶುಭಾಶಯಗಳನ್ನು ಸ್ವೀಕರಿಸುತ್ತಿರುವುದನ್ನು ಕಾಣಬಹುದು. ವೈರಲ್ ವೀಡಿಯೋ ರೆಕಾರ್ಡ್ ಮಾಡಿದ ಅದೇ ಸ್ಥಳದ ವೀಡಿಯೋ ಇದು ಎಂದು ದೃಶ್ಯಗಳು ತೋರಿಸುತ್ತವೆ.

೨೦೨೪ ರ ಲೋಕಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಅಭ್ಯರ್ಥಿ ದೀಪೇಂದರ್ ಹೂಡಾ ಅವರು ಹರಿಯಾಣದ ರೋಹ್ಟಕ್ ಕ್ಷೇತ್ರದಿಂದ ಬಿಜೆಪಿಯ ಅರವಿಂದ್ ಶರ್ಮಾ ಅವರನ್ನು ಮೂರು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು.

ತೀರ್ಪು

ದೀಪೇಂದರ್ ಹೂಡಾ ಅವರ ವೈರಲ್ ವೀಡಿಯೋ ಇತ್ತೀಚೆಗೆ ಮುಗಿದ ಹರಿಯಾಣ ವಿಧಾನಸಭೆ ಚುನಾವಣೆಯದಲ್ಲ, ಆದರೆ ೨೦೨೪ ರ ಲೋಕಸಭೆ ಚುನಾವಣೆಯಲ್ಲಿ ರೋಹ್ಟಕ್ ಕ್ಷೇತ್ರದಿಂದ ವಿಜಯೋತ್ಸವದ ಸಂಭ್ರಮಾಚರಣೆಯಲ್ಲಿ ಭಾವೋದ್ವೇಗಕ್ಕೆ ಒಳಗಾದ ವೀಡಿಯೋ ಎಂದು ನಮ್ಮ ಈವರೆಗಿನ ತನಿಖೆ ಸ್ಪಷ್ಟಪಡಿಸಿದೆ.

(ಅನುವಾದಿಸಿದವರು: ರಜಿನಿ ಕೆ.ಜಿ)


ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ