ಮುಖಪುಟ ೨೦೧೯ ರ ವೀಡಿಯೋವನ್ನು ೨೦೨೪ರ ಲೋಕಸಭೆ ಚುನಾವಣೆಯ ಬಗ್ಗೆ ಬಿಬಿಸಿ ನೀಡಿದ ಊಹೆಗಳು ಎಂದು ಹಂಚಿಕೊಳ್ಳಲಾಗಿದೆ

೨೦೧೯ ರ ವೀಡಿಯೋವನ್ನು ೨೦೨೪ರ ಲೋಕಸಭೆ ಚುನಾವಣೆಯ ಬಗ್ಗೆ ಬಿಬಿಸಿ ನೀಡಿದ ಊಹೆಗಳು ಎಂದು ಹಂಚಿಕೊಳ್ಳಲಾಗಿದೆ

ಮೂಲಕ: ಸೋಹಮ್ ಶಾ

ಮೇ 31 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
೨೦೧೯ ರ ವೀಡಿಯೋವನ್ನು ೨೦೨೪ರ ಲೋಕಸಭೆ ಚುನಾವಣೆಯ ಬಗ್ಗೆ ಬಿಬಿಸಿ ನೀಡಿದ ಊಹೆಗಳು ಎಂದು ಹಂಚಿಕೊಳ್ಳಲಾಗಿದೆ ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ೩೪೭ ಸ್ಥಾನಗಳನ್ನು ಬಿಬಿಸಿ ಊಹಿಸಿದೆ ಎಂದು ಹೇಳಿಕೊಂಡು ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ವೈರಲ್ ಕ್ಲಿಪ್ ನಲ್ಲಿ ಬಿಬಿಸಿ ಆಂಕರ್ ೨೦೧೯ ರ ಲೋಕಸಭೆ ಚುನಾವಣೆಗಳ ನೇರ ಫಲಿತಾಂಶಗಳನ್ನು ಪ್ರಕಟಿಸುವುದನ್ನು ತೋರಿಸುತ್ತದೆ.

ಹೇಳಿಕೆ ಏನು?

ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಅದರ ಮಿತ್ರಪಕ್ಷಗಳು ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ೩೪೭ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಟೀನ್ (ಬಿಬಿಸಿ) ಊಹೆಗಳನ್ನು ಮಾಡಿದೆ ಎಂದು ತೋರಿಸಲು ಅದರ ಕ್ಲಿಪ್ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಕಾಂಗ್ರೆಸ್ ಹಾಗು ಮಿತ್ರಪಕ್ಷಗಳು ೮೭ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ವೀಡಿಯೋದಲ್ಲಿ ಹೇಳಲಾಗಿದೆ. 

ವೀಡಿಯೋದಲ್ಲಿನ ಆಂಕರ್ ಹೀಗೆ ಹೇಳುವುದನ್ನು ಕೇಳಬಹುದು, "ಕೆಲವು ನಿಮಿಷಗಳ ಹಿಂದೆ ಬಿಜೆಪಿ ಮತ್ತು ಅದರ ಸಮ್ಮಿಶ್ರ ಪಾಲುದಾರರು ಬಹಳ ಮುನ್ನಡೆ ಸಾಧಿಸಿದ್ದಾರೆ. ೩೪೭ ಸ್ಥಾನಗಳ, ಸ್ಪಷ್ಟ ಬಹುಮತ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ೮೭ ಸ್ಥಾನಗಳಲ್ಲಿ ಹಿಂದುಳಿದಿವೆ." ಇದು ಬಿಬಿಸಿಯ ಚುನಾವಣೆಯ ಅಭಿಪ್ರಾಯ ಅಥವಾ ಎಕ್ಸಿಟ್ ಪೋಲ್ ಎಂದು ಹೇಳಿಕೊಂಡು ವೀಡಿಯೋವನ್ನು ಶೇರ್ ಮಾಡಲಾಗಿದೆ. 

ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಜೂನ್ ೧ ರಂದು ನಡೆಯಲಿದ್ದು, ಜೂನ್ ೪ ರಂದು ಫಲಿತಾಂಶ ಪ್ರಕಟವಾಗಲಿದೆ.

ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಅಂತಹ ಒಂದು ಪೋಷ್ಟ್ "ಈಗ ಬಿಬಿಸಿ ಕೂಡ ಮೋದಿಗೆ ೩೪೭  ಸೀಟುಗಳನ್ನು ಊಹಿಸಿದೆ. ಕನಿಷ್ಠ ಜೂನ್ ೪ ರವರೆಗೆ ಅವರನ್ನು ಆನಂದಿಸಲು ಬಿಡಬೇಕಿತ್ತು" ಎಂಬ ಶೀರ್ಷಿಕೆಯನ್ನು ಹೊಂದಿದೆ. 

ವೀಡಿಯೋದ ಮೇಲೆ ಬರೆದ ಪಠ್ಯವು ಹೀಗೆ ಹೇಳುತ್ತದೆ, "ನೀವು ಬಿಬಿಸಿ ನಾಶವಾಗಲಿ, ನಿಮ್ಮಂತಹ ಬೂಟ್‌ಲಿಕರ್‌ಗಳ ಕನಸಿನಲ್ಲಿಯೂ ನಾವು ರಾಹುಲ್ ಅವರನ್ನು ಪ್ರಧಾನಿಯಾಗಲು ಬಿಡುವುದಿಲ್ಲ. ಕನಿಷ್ಠ ಜೂನ್ ೪ ರವರೆಗೆ ಅವರನ್ನು ಆನಂದಿಸಲು ಬಿಡಬೇಕಾಗಿತ್ತು." 

ಅಂತಹ ಪೋಷ್ಟ್ ಗಳ ಆರ್ಕೈವ್‌ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ )

ಆದರೆ, ಈ ವೀಡಿಯೋ ಹಳೆಯದು ಮತ್ತು ಅದು ೨೦೧೯ ರ ಲೋಕಸಭಾ ಚುನಾವಣೆಯ ಫಲಿತಾಂಶಗಳ ಪ್ರಕಟಣೆಯನ್ನು ತೋರಿಸುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ.

ಸತ್ಯ ಏನು?

ಗೂಗಲ್ ಹುಡುಕಾಟದ ಮೂಲಕ, ನಾವು ಬಿಬಿಸಿ ನ್ಯೂಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೋದ ವಿಸ್ತೃತ ಆವೃತ್ತಿಯನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಕಂಡುಕೊಂಡಿದ್ದೇವೆ, ಇದನ್ನು ಮೇ ೨೩, ೨೦೧೯ ರಂದು ಪೋಷ್ಟ್ ಮಾಡಲಾಗಿದೆ, "ಭಾರತದ ಚುನಾವಣಾ ಫಲಿತಾಂಶಗಳು ೨೦೧೯: ನರೇಂದ್ರ ಮೋದಿ ಅವರು ಪ್ರಚಂಡ ಗೆಲುವು ಸಾಧಿಸಿದ್ದಾರೆ - ಬಿಬಿಸಿ ನ್ಯೂಸ್," ಎಂಬ ಶೀರ್ಷಿಕೆಯನ್ನು ಹೊಂದಿದೆ.  ವೈರಲ್ ಕ್ಲಿಪ್ ಅನ್ನು ಈ ವೀಡಿಯೋದಲ್ಲಿ ೦:೦೩ ಟೈಮ್‌ಸ್ಟ್ಯಾಂಪ್ ನಲ್ಲಿ ನೋಡಬಹುದು.

ವೀಡಿಯೋದಲ್ಲಿ, ನಿರೂಪಕರು ಲೋಕಸಭೆ ಚುನಾವಣೆಯ ನೇರ ಫಲಿತಾಂಶಗಳನ್ನು ಪ್ರಕಟಿಸಿದ್ದಾರೆ, ಅದರ ಎಣಿಕೆಯು ಮೇ ೨೩, ೨೦೧೯ ರಂದು ನಡೆಯಿತು. ಈ ಸಂದರ್ಭದಲ್ಲಿ, ಬಿಜೆಪಿ ಮತ್ತು ಮಿತ್ರಪಕ್ಷಗಳು ೩೪೭ ಸ್ಥಾನಗಳನ್ನು ಗೆದ್ದಿವೆ, ಕಾಂಗ್ರೆಸ್ ಹಾಗು ಮಿತ್ರಪಕ್ಷಗಳು ೮೭ ಸ್ಥಾನಗಳನ್ನು ಗೆದ್ದಿವೆ ಎಂದು ಅವರು ನಿರೂಪಿಸಿದ್ದಾರೆ.  

೨೦೧೯ ರಲ್ಲಿ, ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರೆಟಿಕ್ ಅಲಯನ್ಸ್ ಒಟ್ಟು ೩೫೩ ಸ್ಥಾನಗಳನ್ನು ಗೆದ್ದರೆ, ಪಕ್ಷವು ೩೦೩ ಸ್ಥಾನಗಳನ್ನು ಗೆದ್ದಿತ್ತು. ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ ೯೧ ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಪಕ್ಷವು ೫೨ ಸ್ಥಾನಗಳನ್ನು ಗೆದ್ದಿತ್ತು. 

ಈ ವೀಡಿಯೋ ೨೦೧೯ ರ ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು ಚರ್ಚಿಸುತ್ತದೆ ಮತ್ತು ೨೦೨೪ ರ ಲೋಕಸಭಾ ಚುನಾವಣೆಯ ಅಭಿಪ್ರಾಯ ಅಥವಾ ಎಕ್ಸಿಟ್ ಪೋಲ್ ಅಲ್ಲ ಎಂದು ಇದು ಸ್ಪಷ್ಟಪಡಿಸುತ್ತದೆ. ವಾಸ್ತವವಾಗಿ, ಚುನಾವಣಾ ಆಯೋಗವು ಎಕ್ಸಿಟ್ ಪೋಲ್ ನ ಪ್ರಕಟಣೆಯನ್ನು ಏಪ್ರಿಲ್ ೧೯, ೨೦೨೪ ರಿಂದ, ಜೂನ್ ೧, ೨೦೨೪ ರ ಸಂಜೆ ೬.೩೦ ರವರೆಗೆ ನಿಷೇಧಿಸಿದೆ. 

ತೀರ್ಪು

ಬಿಬಿಸಿ ೨೦೧೯ ರಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು ಪ್ರಕಟಿಸಿದ ವೀಡಿಯೋ ಈಗ ನಡೆಯುತ್ತಿರುವ ಚುನಾವಣೆಗೆ ಸಂಬಂಧಿಸಿಲ್ಲ ಮತ್ತು ಬಿಬಿಸಿ ಅಂತಹ ಯಾವುದೇ ಊಹೆಗಳನ್ನು ನೀಡಿಲ್ಲ. ಆದ್ದರಿಂದ ನಾವು ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು : ಅಂಕಿತಾ ಕುಲಕರ್ಣಿ)

Read this fact-check in English here.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ