ಮೂಲಕ: ರಾಜೇಶ್ವರಿ ಪರಸ
ಮೇ 9 2024
ಹೈದರಾಬಾದ್‌ನ ಮಲಕ್‌ಪೇಟ್‌ನಲ್ಲಿ ಎಐಎಂಐಎಂ ಮುಖ್ಯಸ್ಥರ ಮನೆ-ಮನೆ ಪ್ರಚಾರದ ಸಂದರ್ಭದಲ್ಲಿ ಅರ್ಚಕರೊಬ್ಬರು ಹಾರ ಹಾಕಿದಾಗ ವೈರಲ್ ಚಿತ್ರವನ್ನು ತೆಗೆಯಲಾಗಿದೆ.
ಹೇಳಿಕೆ ಏನು?
ಹೈದರಾಬಾದ್ ಸಂಸತ್ ಸದಸ್ಯ (MP) ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ತಮ್ಮ ಚುನಾವಣಾ ಪ್ರಚಾರಕ್ಕಾಗಿ ದೇವಸ್ಥಾನಕ್ಕೆ ಹೋಗಿದ್ದಾಗಿ ಹೇಳುವ ಫೋಟೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ನಾಲ್ಕು ಬಾರಿ ಸಂಸದರಾಗಿರುವ ಮತ್ತು ಹೈದರಾಬಾದ್ ಸಂಸದೀಯ ಸ್ಥಾನದಿಂದ ಪಕ್ಷದ ಅಭ್ಯರ್ಥಿಯಾಗಿರುವ ಓವೈಸಿ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೆ ಮಾಧವಿ ಲತಾ ವಿರುದ್ಧ ಸ್ಪರ್ಧಿಸಿದ್ದಾರೆ. ಮೇ ೧೩, ೨೦೨೪ ರಂದು ನಡೆಯಲಿರುವ ಮತದಾನಕ್ಕೆ ಮುಂಚಿತವಾಗಿ ಅವರು ಮನೆ-ಮನೆಗೆ ಪ್ರಚಾರವನ್ನು ನಡೆಸುತ್ತಿದ್ದಾರೆ.
ಓವೈಸಿ ಮಾಲೆ ಧರಿಸಿ ಅರ್ಚಕರ ಬಳಿ ನಿಂತಿರುವ ಚಿತ್ರವನ್ನು ಬಿಜೆಪಿಯ ಕಾರಣದಿಂದ ಅವರು ದೇವಸ್ಥಾನಕ್ಕೆ ಹೋಗಿದ್ದಾರೆ ಎಂದು ಸೂಚಿಸುವ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇದೇ ರೀತಿಯ ಪೋಷ್ಟ್ ಗಳ ಆರ್ಕೈವ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಚಿತ್ರದ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ಹೇಳಿಕೆ ಸಂದರ್ಭದಿಂದ ಹೊರಗಿಡಲಾಗಿದೆ. ಚಿತ್ರವು ಓವೈಸಿ ಅವರ ಮನೆ-ಮನೆ ಚುನಾವಣೆ ಪ್ರಚಾರದಿಂದ ಬಂದಿದೆ ಮತ್ತು ಅವರು ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ತೋರಿಸುತ್ತಿಲ್ಲ.
ವಾಸ್ತವಾಂಶಗಳೇನು?
ಚಿತ್ರದ ಮೇಲೆ ರಿವರ್ಸ ಇಮೇಜ್ ಸರ್ಚ್ ಹುಡುಕಾಟವು ನಮ್ಮನ್ನು ಎಐಎಂಐಎಂ ನ ಅಧಿಕೃತ ಎಕ್ಸ್ (ಹಿಂದೆ ಟ್ವಿಟ್ಟರ್) ಖಾತೆಗೆ ಕರೆದೊಯ್ಯಿತು. ಮೇ ೨, ೨೦೨೪ ರಂದು ಪೋಷ್ಟ್‌ನಲ್ಲಿ (ಇಲ್ಲಿ ಆರ್ಕೈವ್ ಮಾಡಿ) ಓವೈಸಿಯವರ ಮನೆ-ಮನೆ ಚುನಾವಣಾ ಪ್ರಚಾರದ ಈ ಚಿತ್ರ ಮತ್ತು ಇತರ ಚಿತ್ರಗಳನ್ನು ಪಕ್ಷವು ಹಂಚಿಕೊಂಡಿದೆ. ಹೈದರಾಬಾದ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಸಾದುದ್ದೀನ್ ಓವೈಸಿ ಮತ್ತು ಮಲಕ್‌ಪೇಟ್ ಶಾಸಕ ಬಲಲಾ ಅಹ್ಮದ್ ಚುನಾವಣಾ ಪ್ರಚಾರದಲ್ಲಿದ್ದಾಗ ಮಲಕ್‌ಪೇಟ್‌ನ ಮೂಸರಂಬಾಗ್ ಮತ್ತು ಇಂದಿರಾ ನಗರದಲ್ಲಿ ತೆಗೆದ ಫೋಟೋಗಳು ಎಂದು ಪೋಷ್ಟ್‌ನಲ್ಲಿ ಹೇಳಲಾಗಿದೆ.
ಎಐಎಂಐಎಂ ಪೋಷ್ಟ್‌ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)
ಲಾಜಿಕಲಿ ಫ್ಯಾಕ್ಟ್ಸ್ ಅಸಾದುದ್ದೀನ್ ಓವೈಸಿ ಅವರ ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್‌ಒ) ತೌಸೀಫ್ ಮೊಹಮ್ಮದ್ ಅವರನ್ನು ಸಂಪರ್ಕಿಸಿದ್ದು, ಅವರು ಓವೈಸಿ ಅವರೊಂದಿಗಿನ ಚಿತ್ರವನ್ನು ಮಲಕ್‌ಪೇಟೆಯ ಸರಸ್ವತಿ ನಗರದಲ್ಲಿ ತೆಗೆದಿದ್ದಾರೆ ಎಂದು ಹೇಳಿದರು. ಇದು ಮೇ ೨, ೨೦೨೪ ರಂದು ನಡೆದ ಮನೆ-ಮನೆ ಅಭಿಯಾನದ ಒಂದು ಭಾಗವಾಗಿದೆ ಎಂದು ಅವರು ಹೇಳಿದರು.
ಹಲವಾರು ಮಾಧ್ಯಮಗಳು ಓವೈಸಿಯ ಪ್ರಚಾರದ ಹಾದಿಯ ವೀಡಿಯೋವನ್ನು ಸಹ ಪ್ರಕಟಿಸಿದವು. ಮೇ ೨, ೨೦೨೪ ರಂದು ಪ್ರಕಟಿಸಲಾದ ದಿ ಪ್ರಿಂಟ್‌ನ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಯೂಟ್ಯೂಬ್ ವೀಡಿಯೋ, ಓವೈಸಿಯ ಪಕ್ಕದಲ್ಲಿ ಪಾದ್ರಿಯನ್ನು ಛಾಯಾಚಿತ್ರ ಮಾಡುವುದನ್ನು ತೋರಿಸಿದೆ, ಅವರಿಗೆ ಹೂಮಾಲೆ ಹಾಕಿ ಕೇಸರಿ ಶಾಲನ್ನು ನೀಡುತ್ತಿದೆ. ಅರ್ಚಕರು ತಮ್ಮ ಪಕ್ಕದಲ್ಲಿ ನಿಂತಿದ್ದ ಇನ್ನೊಬ್ಬ ವ್ಯಕ್ತಿಯನ್ನು ಸಹ ಸನ್ಮಾನಿಸಿದರು.
ಮೊಹಮ್ಮದ್ ಅವರು ನಮ್ಮೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ, ಇದು ವಿಭಿನ್ನ ಕೋನದಿಂದ ಕೂಡ ಇದೇ ರೀತಿಯ ದೃಶ್ಯಗಳನ್ನು ತೋರಿಸಿದೆ. ಈ ವೀಡಿಯೋದಲ್ಲಿ, ೫೭ ಸೆಕೆಂಡುಗಳಲ್ಲಿ, ಟೋಪಿ ಹಾಕಿರುವ ವ್ಯಕ್ತಿಯೊಬ್ಬ ಓವೈಸಿಗೆ ಮಾಲೆ ಹಾಕುವುದನ್ನು ನಾವು ನೋಡಬಹುದು. ವೀಡಿಯೋವನ್ನು ಇಲ್ಲಿ ನೋಡಿ.
ನಾವು ಇತರ ಸುದ್ದಿ ಮಾಧ್ಯಮಗಳಲ್ಲಿ ಇದೇ ರೀತಿಯ ದೃಶ್ಯಗಳನ್ನು ಕಂಡುಕೊಂಡಿದ್ದೇವೆ - ಸ್ಥಳೀಯ ಸುದ್ದಿ ವೆಬ್‌ಸೈಟ್ ಸಿಯಾಸತ್, ಓವೈಸಿ ಅವರ ಚುನಾವಣಾ ಪ್ರಚಾರದ ಬಗ್ಗೆ ವರದಿ ಮಾಡಿದೆ ಮತ್ತು ಮನೆ-ಮನೆ ಪ್ರಚಾರದ ಸಮಯದಲ್ಲಿ ಅವರಿಗೆ ಹಾರ ಹಾಕಲಾಗಿದೆ ಎಂದು ಹೇಳಿದೆ.
ಮತ್ತೊಂದು ತೆಲುಗು ಸುದ್ದಿವಾಹಿನಿ, ಆರ್‌ಟಿವಿ ತೆಲುಗು, (ಇಲ್ಲಿ ಆರ್ಕೈವ್ ಮಾಡಿ) ಗ್ರೌಂಡ್ ರಿಪೋರ್ಟ್ ಅನ್ನು ಸಹ ನಾವು ಕಂಡುಕೊಂಡಿದ್ದೇವೆ. ಅವರ ವರದಿಗಾರ್ತಿ ದೇವಿಕಾ ಅವರು ಓವೈಸಿ ಮಾಲೆ ಹಾಕಿದ ಪ್ರದೇಶಕ್ಕೆ ಭೇಟಿ ನೀಡಿದರು. ವೀಡಿಯೋ ವರದಿಯಲ್ಲಿ, ಅವರು ರಸ್ತೆಯಲ್ಲಿ ನಡೆಯುವುದನ್ನು ಮತ್ತು ಪ್ರದೇಶದ ನಿವಾಸಿಗಳೊಂದಿಗೆ ಮಾತನಾಡುವುದನ್ನು ಕಾಣಬಹುದು. ವೈರಲ್ ಪೋಷ್ಟ್‌ನಲ್ಲಿ ಕಂಡುಬರುವ ಅದೇ ಕಂದುಬಣ್ಣದ ಗೇಟ್ ಅನ್ನು ನಾವು ನೋಡಬಹುದು. ಇದೀಗ ವೈರಲ್ ಆಗಿರುವ ವೀಡಿಯೋ ಸ್ಥಳ ಮಲಕಪೇಟೆಯ ರಸ್ತೆ ಎಂದು ವೀಡಿಯೋ ವರದಿ ತೋರಿಸುತ್ತದೆ.
ಹೋಲಿಕೆಯು ಓವೈಸಿಗೆ ಬೀದಿಯಲ್ಲಿ ಹಾರ ಹಾಕಲಾಗಿತ್ತು, ದೇವಸ್ಥಾನದೊಳಗೆ ಅಲ್ಲ ಎಂದು ತೋರಿಸುತ್ತದೆ. (ಮೂಲ: ಎಕ್ಸ್/ಆರ್‌ಟಿವಿ ತೆಲುಗು/ಸ್ಕ್ರೀನ್‌ಶಾಟ್)
ಓವೈಸಿಗೆ ಮಾಲೆ ಹಾಕಿರುವುದು, ಮಾಜಿ ಕಾರ್ಪೊರೇಟರ್ ನಿವಾಸದ ಬಳಿಯೇ ಹೊರತು ದೇವಸ್ಥಾನದೊಳಗೆ ಅಲ್ಲ ಎಂದು ದೇವಿಕಾ ಅವರೊಂದಿಗೆ ಮಾತನಾಡಿದ್ದೇವೆ. ಅರ್ಚಕರು ಹತ್ತಿರದಲ್ಲೇ ವಾಸಿಸುತ್ತಿದ್ದರು ಮತ್ತು ಓವೈಸಿ ಅವರ ಮನೆ-ಮನೆ ಪ್ರಚಾರಕ್ಕಾಗಿ ಭೇಟಿ ನೀಡಿದರು ಎಂದು ಅವರು ನಮಗೆ ತಿಳಿಸಿದರು.
ಮೇಲಿನ ಸಾಕ್ಷ್ಯವು ಓವೈಸಿಯವರ ಮನೆ-ಮನೆ ಪ್ರಚಾರದ ಸಮಯದಲ್ಲಿ ತೆಗೆದ ಚಿತ್ರವನ್ನು ತೋರಿಸುತ್ತದೆ. ಲಾಜಿಕಲಿ ಫ್ಯಾಕ್ಟ್ಸ್ ನಿಂದ ವೀಕ್ಷಿಸಿದ ಎಲ್ಲಾ ವೀಡಿಯೋಗಳು ರಸ್ತೆಯಲ್ಲಿ ಘಟನೆ ನಡೆದಿರುವುದನ್ನು ತೋರಿಸುತ್ತವೆ.
ತೀರ್ಪು
ಹೈದರಾಬಾದ್‌ನ ಮಲಕ್‌ಪೇಟ್‌ನಲ್ಲಿ ಅಸಾದುದ್ದೀನ್ ಓವೈಸಿ ಪ್ರಚಾರ ಮಾಡುತ್ತಿದ್ದಾಗ ಅರ್ಚಕರೋಬ್ಬರು ಅಸಾದುದ್ದೀನ್ ಓವೈಸಿಗೆ ಮಾಲಾರ್ಪಣೆ ಮಾಡುತ್ತಿರುವ ಫೋಟೋವನ್ನು ತೆಗೆದಿದ್ದಾರೆ, ದೇವಸ್ಥಾನದಲ್ಲಿ ಅಲ್ಲ.
(ಅನುವಾದಿಸಿದವರು: ರಜಿನಿ ಕೆ.ಜಿ)
Read this fact-check in English here.