ಮುಖಪುಟ ೨೦೨೦ ರ ಚಿತ್ರಗಳನ್ನು ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದ ಚಿತ್ರಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

೨೦೨೦ ರ ಚಿತ್ರಗಳನ್ನು ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದ ಚಿತ್ರಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಮೂಲಕ: ಉಮ್ಮೆ ಕುಲ್ಸುಮ್

ಜುಲೈ 31 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
೨೦೨೦ ರ ಚಿತ್ರಗಳನ್ನು ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದ ಚಿತ್ರಗಳೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ ಇತ್ತೀಚಿನ ವಯನಾಡ್ ಭೂಕುಸಿತದ ಚಿತ್ರಗಳನ್ನು ತೋರಿಸಲು ಹೇಳಿಕೊಳ್ಳುವ ಪೋಷ್ಟ್‌ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಆನ್‌ಲೈನ್‌ನಲ್ಲಿ ಪ್ರಸಾರವಾದ ಚಿತ್ರಗಳು ೨೦೨೦ ರಲ್ಲಿ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತವನ್ನು ತೋರುತ್ತವೆ, ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತ ಅಲ್ಲ.

ಹೇಳಿಕೆ ಏನು?

ಭಾರತದ ಕೇರಳ ರಾಜ್ಯದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭಾರೀ ಭೂಕುಸಿತ, ಕನಿಷ್ಠ ೮೦ ಜೀವಗಳನ್ನು ಬಲಿತೆಗೆದುಕೊಂಡಿತು. ರಕ್ಷಣಾ ಕಾರ್ಯಾಚರಣೆಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಯಿತು ಮತ್ತು ಅವುಗಳು ಇತ್ತೀಚಿನ ದುರಂತವನ್ನು ಚಿತ್ರಿಸಲಾಗಿದೆ ಎಂದು ತಪ್ಪಾಗಿ ಹೇಳಲಾಗಿದೆ. 

ಎಕ್ಸ್ ನಲ್ಲಿ (ಹಿಂದೆ ಟ್ವಿಟ್ಟರ್), ಒಬ್ಬ ಬಳಕೆದಾರರು ರಕ್ಷಣಾ ಕಾರ್ಯಾಚರಣೆಯ ಚಿತ್ರವನ್ನು ಈ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: “ಕೇರಳದಿಂದ ಬಹಳ ದುಃಖದ ಸುದ್ದಿ. ಭಾರೀ ಮಳೆಗೆ ಭೂಕುಸಿತ, ಅವಶೇಷಗಳಡಿಯಲ್ಲಿ ೧೦೦ ಕ್ಕೂ ಹೆಚ್ಚು ಮಂದಿ ಸಮಾಧಿ, ೮ ಮಂದಿ ಸಾವನ್ನಪ್ಪಿದ್ದಾರೆ. ಓ ಭಗವಾನ್ ಶಿವನೇ, ದಯವಿಟ್ಟು ಅಲ್ಲಿನ ಜನರನ್ನು ರಕ್ಷಿಸಿ (ಹಿಂದಿಯಿಂದ ಅನುವಾದಿಸಲಾಗಿದೆ).” ಈ ಪೋಷ್ಟ್ ಅನ್ನು ಬರೆಯುವ ಸಮಯದಲ್ಲಿ ೧೯,೦೦೦ ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಒಂದೇ ರೀತಿಯ ಪೋಷ್ಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. 

ತಮಿಳುನಾಡು ಕಾಂಗ್ರೆಸ್ ಸಮಿತಿಯು ಎಕ್ಸ್‌ನಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಎರಡು ಅಗೆಯುವ (ಜೆಸಿಬಿ) ರಕ್ಷಣಾ ತಂಡವನ್ನು ತೋರಿಸುವ ಚಿತ್ರವನ್ನು ಪೋಷ್ಟ್ ಮಾಡಿದೆ. ಅದರ ಶೀರ್ಷಿಕೆಯು ಹೀಗಿದೆ: “ವಯನಾಡಿನ ಮೆಪ್ಪಾಡಿ ಬಳಿ ವಿನಾಶಕಾರಿ ಭೂಕುಸಿತದಿಂದ ತೀವ್ರವಾಗಿ ನೊಂದಿದ್ದೇನೆ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನಮ್ಮ ಹೃತ್ಪೂರ್ವಕ ಸಂತಾಪಗಳು. ಇನ್ನೂ ಸಿಕ್ಕಿಬಿದ್ದಿರುವವರ ಸುರಕ್ಷಿತ ರಕ್ಷಣೆಗಾಗಿ ಪ್ರಾರ್ಥಿಸುತ್ತೇನೆ.” ವಯನಾಡ್ ಭೂಕುಸಿತಗಳಿಗೆ ಈ ಚಿತ್ರವನ್ನು ಲಿಂಕ್ ಮಾಡುವ ಇದೇ ರೀತಿಯ ಪೋಷ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಜೆ.ಸಿ. ಬಾಮ್‌ಫೋರ್ಡ್ ಎಕ್ಸ್‌ಕಾವೇಟರ್ಸ್ ಲಿಮಿಟೆಡ್, ಅಥವಾ ಜೆಸಿಬಿ, ನಿರ್ಮಾಣ, ಕೃಷಿ, ತ್ಯಾಜ್ಯ ನಿರ್ವಹಣೆ ಮತ್ತು ಕೆಡವಲು ಉಪಕರಣಗಳನ್ನು ತಯಾರಿಸುವ ಬಹುರಾಷ್ಟ್ರೀಯ ಕಂಪನಿ.

ಆನ್‌ಲೈನ್‌ನಲ್ಲಿ ಮಾಡಿದ ಹೇಳಿಕೆಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಎರಡೂ ಚಿತ್ರಗಳು ಕೇರಳದ ಇಡುಕ್ಕಿಯಲ್ಲಿ ಭೂಕುಸಿತದ ನಂತರ ರಕ್ಷಣಾ ಕಾರ್ಯಾಚರಣೆಗಳನ್ನು ಬಿಂಬಿಸುವ ೨೦೨೦ ರ ಚಿತ್ರವೆಂದು ನಾವು ಕಂಡುಕೊಂಡಿದ್ದೇವೆ. ಅವು ಇತ್ತೀಚಿನ ಘಟನೆಗಳನ್ನು ಚಿತ್ರಿಸುವುದಿಲ್ಲ.

ನಾವು ಸತ್ಯಗಳನ್ನು ಹೇಗೆ ಕಂಡುಕೊಂಡಿದ್ದೇವೆ?

ಚಿತ್ರ ೧

ಜೆಸಿಬಿಗಳೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ತೋರಿಸುವ ಮೊದಲ ಚಿತ್ರವು ೨೦೨೦ ರಲ್ಲಿ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದ ಎಂದು ನಾವು ಕಂಡುಕೊಂಡಿದ್ದೇವೆ. ರಿವರ್ಸ್ ಇಮೇಜ್ ಸರ್ಚ್, ಅಕ್ಟೋಬರ್, ೩೦, ೨೦೨೦ ರಂದು ಪ್ರಕಟವಾದ "Onmanorama" ನ ಸುದ್ದಿ ವರದಿಗೆ ನಮ್ಮನ್ನು ಕರೆದೊಯ್ಯಿತು. ಪಿ ಟಿ ಐ (PTI) ಗೆ ಮನ್ನಣೆ ನೀಡಿದ ವ್ಯಾಪಕವಾಗಿ ಪ್ರಸಾರವಾದ ಚಿತ್ರವನ್ನು ಒಳಗೊಂಡಿರುವ ವರದಿಯು ಇಡುಕ್ಕಿಯಲ್ಲಿ ಭಾರೀ ಮಳೆಯಿಂದ ಉಂಟಾದ ಭೂಕುಸಿತದ ನಂತರ ಆಗಸ್ಟ್ ೭, ೨೦೨೦ ರಂದು ತೆಗೆದುಕೊಳ್ಳಲಾಗಿದೆ ಎಂದು ಸೂಚಿಸಿದೆ. 

ಹಲವಾರು ಮುಖ್ಯವಾಹಿನಿಯ ಮಾಧ್ಯಮಗಳು ಈ ಚಿತ್ರವನ್ನು ೨೦೨೦ ರಲ್ಲಿ ಹಂಚಿಕೊಂಡಿವೆ, ಇದನ್ನು ಪಿಟಿಐ ಗೆ ಕ್ರೆಡಿಟ್ ನೀಡಲಾಗಿದೆ.


ವೈರಲ್ ಚಿತ್ರ ಮತ್ತು ೨೦೨೦ ರ ಸುದ್ದಿ ವರದಿಯನ್ನು ತೋರಿಸುವ ಹೋಲಿಕೆ. (ಮೂಲ: ಎಕ್ಸ್/Onmanorama)

ಚಿತ್ರ ೨

ಎರಡನೇ ಚಿತ್ರದ ರಿವರ್ಸ್ ಇಮೇಜ್ ಸರ್ಚ್, ಅಗೆಯುವ ಯಂತ್ರವು ಶಿಲಾಖಂಡರಾಶಿಗಳನ್ನು ತೆಗೆದುಹಾಕುತ್ತಿರುವಂತೆ, ಕಿತ್ತಳೆ ಬಣ್ಣದ ಕೋಟ್‌ಗಳಲ್ಲಿ ರಕ್ಷಣಾ ಕಾರ್ಯಕರ್ತರು ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುವುದನ್ನು ತೋರಿಸುತ್ತದೆ, ಇದು ಆಗಸ್ಟ್ ೯, ೨೦೨೦ ರಂದು ಪ್ರಕಟವಾದ ಬಿಸಿನೆಸ್ ಸ್ಟ್ಯಾಂಡರ್ಡ್‌ನ ವರದಿಗೆ ನಮ್ಮನ್ನು ಕರೆದೊಯ್ಯಿತು. ಚಿತ್ರ ವಿವರಣೆ ಹೀಗೆ ಓದುತ್ತದೆ, "ಇಡುಕ್ಕಿ ಜಿಲ್ಲೆಯ ಪೆಟ್ಟಿಮುಡಿಯಲ್ಲಿ ಭಾರೀ ಮಳೆಯ ನಂತರ ಭೂಕುಸಿತದ ನಂತರ ಎನ್‌ಡಿಆರ್‌ಎಫ್ ಸಿಬ್ಬಂದಿ ಬದುಕುಳಿದವರಿಗಾಗಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಾರೆ."


ವೈರಲ್ ಚಿತ್ರ ಮತ್ತು ೨೦೨೦ ರ ಸುದ್ದಿ ವರದಿಯನ್ನು ತೋರಿಸುವ ಹೋಲಿಕೆ. (ಮೂಲ: ಎಕ್ಸ್/ಬಿಸಿನೆಸ್ ಸ್ಟ್ಯಾಂಡರ್ಡ್)

ಆಗಸ್ಟ್ ೯, ೨೦೨೦ ರ ಲೈವ್‌ಮಿಂಟ್ ವರದಿಯು ಈ ಚಿತ್ರವನ್ನು ಸಹ ಒಳಗೊಂಡಿತ್ತು, ಇದನ್ನು ಪಿಟಿಐ ಸುದ್ದಿ ಸಂಸ್ಥೆಗೆ ಕ್ರೆಡಿಟ್ ನೀಡಲಾಗಿದೆ.

೨೦೨೦ ಇಡುಕ್ಕಿ ಭೂಕುಸಿತ

ಆಗಸ್ಟ್ ೨೦೨೦ ರಲ್ಲಿ, ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ವಿನಾಶಕಾರಿ ಭೂಕುಸಿತ ಸಂಭವಿಸಿದೆ. ಆಗಸ್ಟ್ ೭, ೨೦೨೦ ರಂದು, ಭಾರೀ ಮಾನ್ಸೂನ್ ಮಳೆಯು ರಾಜಮಾಲಾ ಪೆಟ್ಟಿಮುಡಿ ಪ್ರದೇಶದಲ್ಲಿ ಭೂಕುಸಿತವನ್ನು ಉಂಟುಮಾಡಿತು, ಚಹಾ ತೋಟದ ಕಾರ್ಮಿಕರ ವಸಾಹತು ಹೂಳಿತು. ಈ ದುರಂತವು ಕನಿಷ್ಠ ೪೯ ಸಾವುಗಳಿಗೆ ಕಾರಣವಾಯಿತು ಮತ್ತು ಅನೇಕರು ಕಾಣೆಯಾಗಿದ್ದಾರೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಮತ್ತು ಕಷ್ಟಕರವಾದ ಭೂಪ್ರದೇಶದಿಂದಾಗಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯು ಗಮನಾರ್ಹ ಸವಾಲುಗಳನ್ನು ಎದುರಿಸಿತು.

ವಯನಾಡ್ ಭೂಕುಸಿತ

ವಯನಾಡ್ ಇತ್ತೀಚೆಗೆ ಭಾರೀ ಮಳೆಯಿಂದಾಗಿ ತೀವ್ರ ಭೂಕುಸಿತವನ್ನು ಅನುಭವಿಸಿತು. ಪರಿಣಾಮವಾಗಿ ವಿನಾಶವು ವ್ಯಾಪಕವಾಗಿದೆ, ಇದು ಪ್ರದೇಶದಲ್ಲಿನ ಸೇವೆಗಳಿಗೆ ಗಮನಾರ್ಹ ಹಾನಿ ಮತ್ತು ಅಡ್ಡಿ ಉಂಟುಮಾಡಿತು. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಕೇರಳ ಸರ್ಕಾರ ಎರಡು ದಿನಗಳ ಅಧಿಕೃತ ಶೋಕಾಚರಣೆ ಘೋಷಿಸಿದೆ.

ತೀರ್ಪು

ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ಚಿತ್ರಗಳು ಕೇರಳದ ಇಡುಕ್ಕಿಯಲ್ಲಿ ೨೦೨೦ ರ ಭೂಕುಸಿತದಿಂದ ಬಂದವು ಮತ್ತು ವಯನಾಡಿನಲ್ಲಿ ಇತ್ತೀಚಿನ ಭೂಕುಸಿತದಿಂದ ಅಲ್ಲ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ