ಮೂಲಕ: ರಾಜೇಶ್ವರಿ ಪರಸ
ಜುಲೈ 18 2024
ಕಲ್ಯಾಣ್ ಮೈಕ್ರೊಫೋನ್ ಸರಿಯಾಗಿ ಕಾರ್ಯನಿರ್ವಹಿಸದ ನಂತರ ಎದ್ದುನಿಂತು ಮತ್ತು ಅವರ ಮಾತನ್ನು ಮುಂದುವರಿಸಲು ವೇದಿಕೆಯತ್ತ ಚಲಿಸುವುದನ್ನು ಮೂಲ ವೀಡಿಯೋ ಚಿತ್ರಿಸುತ್ತದೆ.
ಹೇಳಿಕೆ ಏನು?
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮೈಕ್ರೊಫೋನ್ ಅನ್ನು ಪರೀಕ್ಷಿಸುವುದು, ಅದನ್ನು ಕೆಳಗೆ ಇರಿಸಿ ಮತ್ತು ಎದ್ದೇಳುತ್ತಿರುವುದನ್ನು ತೋರಿಸುವ ಎಂಟು ಸೆಕೆಂಡುಗಳ ವೀಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ, ಮೈಕ್ರೊಫೋನ್ ಅಸಮರ್ಪಕವಾದ ಕಾರಣದಿಂದ ಅವರು ಪತ್ರಿಕಾಗೋಷ್ಠಿಯನ್ನು ತೊರೆದಿದ್ದಾರೆ ಎಂದು ಸೂಚಿಸಿದ್ದಾರೆ. ವೀಡಿಯೋದಲ್ಲಿ ಕಲ್ಯಾಣ್ ಮೈಕ್ರೊಫೋನ್ ಅನ್ನು ಟ್ಯಾಪ್ ಮಾಡುತ್ತಾ, "ಆತ್ಮೀಯ ಸದಸ್ಯ ಕಾರ್ಯದರ್ಶಿ" ಎಂದು ಹೇಳುತ್ತಿರುವುದನ್ನು ಕಾಣಬಹುದು ಮತ್ತು ಅದನ್ನು ಮತ್ತೆ ಮೇಜಿನ ಮೇಲೆ ಇರಿಸಿ ಮತ್ತು ಎದ್ದುನಿಂತುಕೊಳ್ಳುತ್ತಾರೆ.
ವೀಡಿಯೋವನ್ನು ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ: “‘ನಾನು ಆಸಕ್ತಿ ಕಳೆದುಕೊಂಡಿದ್ದೇನೆ.’ ಮೈಕ್ ಕಾರ್ಯನಿರ್ವಹಿಸದ ಕಾರಣ, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹೊರಟುಹೋದರು (ತೆಲುಗಿನಿಂದ ಅನುವಾದಿಸಲಾಗಿದೆ).” ಅಂತಹ ಪೋಷ್ಟ್ ಗಳ ಆರ್ಕೈವ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಆನ್‌ಲೈನ್ ಪೋಷ್ಟ್‌ಗಳ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ಈ ಹೇಳಿಕೆ ಸಂದರ್ಭದಿಂದ ಹೊರಗಿಡಲಾಗಿದೆ. ಕಲ್ಯಾಣ್ ಪತ್ರಿಕಾಗೋಷ್ಠಿಯಿಂದ ಹೊರಡಲಿಲ್ಲ ಬದಲಾಗಿ ವೇದಿಕೆಯತ್ತ ತೆರಳಿ ಭಾಷಣ ಮುಂದುವರಿಸಿದರು ಎಂಬುದನ್ನು ಪೂರ್ಣ ವೀಡಿಯೋ ಬಹಿರಂಗಪಡಿಸುತ್ತದೆ.
ವಾಸ್ತವಾಂಶಗಳೇನು?
ಜುಲೈ ೧೨, ೨೦೨೪ ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತಾಡೆಪಲ್ಲಿಯಲ್ಲಿ ಪಂಚಾಯತ್ ರಾಜ್ (ಪಿಆರ್) ಮತ್ತು ಗ್ರಾಮೀಣಾಭಿವೃದ್ಧಿ (ಆರ್‌ಡಿ) ಸಚಿವಾಲಯದೊಂದಿಗಿನ ಇತ್ತೀಚಿನ ಸಂವಾದದಲ್ಲಿ ಪವನ್ ಕಲ್ಯಾಣ್ ಅವರನ್ನು ಈಗ ವೈರಲ್ ವೀಡಿಯೋ ತೋರಿಸುತ್ತದೆ. ಹಿನ್ನೆಲೆಯಲ್ಲಿರುವ ಬ್ಯಾನರ್‌ನಲ್ಲಿ "O/o Commissioner, PR & RD Dept., Tadepalli Dt: 12-07-2024" ಎಂದು ಬರೆಯಲಾಗಿದೆ, ಇದು ಸ್ಥಳ ಮತ್ತು ದಿನಾಂಕವನ್ನು ದೃಢೀಕರಿಸುತ್ತದೆ.
ಈವೆಂಟ್‌ನ ಲೈವ್‌ಸ್ಟ್ರೀಮ್ ಅನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಆಂಧ್ರಪ್ರದೇಶದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ (I&PR) ಇಲಾಖೆಯ ಅಧಿಕೃತ ಯೂಟ್ಯೂಬ್ ಚಾನಲ್‌ನಿಂದ ಅಪ್‌ಲೋಡ್ ಮಾಡಲಾಗಿದೆ. “ಗೌರವಾನ್ವಿತ ಉಪಮುಖ್ಯಮಂತ್ರಿ ಶ್ರೀ. ಕೊನಿದಲ ಪವನ್ ಕಲ್ಯಾಣ್” ಈ ಶೀರ್ಷಿಕೆಯೊಂದಿಗೆ ಅಪ್ಲೋಡ್ ಮಾಡಲಾಗಿದೆ.
ವಿಭಿನ್ನ ಕೋನದಿಂದ ಚಿತ್ರೀಕರಿಸಲಾದ ವೀಡಿಯೋ, ಕಲ್ಯಾಣ್ ಆರಂಭದಲ್ಲಿ ೨೦:೩೩ ರಿಂದ ಟೇಬಲ್‌ನಲ್ಲಿ ಹ್ಯಾಂಡ್‌ಹೆಲ್ಡ್ ಮೈಕ್ರೊಫೋನ್‌ನೊಂದಿಗೆ ಮಾತನಾಡುವುದನ್ನು ತೋರಿಸುತ್ತದೆ. ೨೦:೪೩ ರ ಸುಮಾರಿಗೆ, ಅದರ ಕಾರ್ಯವನ್ನು ಪರಿಶೀಲಿಸಲು ಅವನು ಮಧ್ಯಂತರವಾಗಿ ಮೈಕ್ರೊಫೋನ್ ಅನ್ನು ಟ್ಯಾಪ್ ಮಾಡುತ್ತಾರೆ. ೨೧:೦೦ ಕ್ಕೆ, ಯಾರಾದರೂ ಅವನಿಗೆ ಮತ್ತೊಂದು ಮೈಕ್ರೊಫೋನ್ ಅನ್ನು ಹಸ್ತಾಂತರಿಸುತ್ತಾರೆ, ಬಹುಶಃ ಮೊದಲನೆಯದರೊಂದಿಗೆ ಸಮಸ್ಯೆಗಳಿರಬಹುದು.
ವೈರಲ್ ಕ್ಲಿಪ್ ಇಲ್ಲಿ ಪ್ರಾರಂಭವಾಗುತ್ತದೆ, ಕಲ್ಯಾಣ್ ಮೈಕ್ರೊಫೋನ್‌ನಲ್ಲಿ ಮಾತನಾಡಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ ಮತ್ತು ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುವುದನ್ನು ಮುಂದುವರಿಸಲು ೨೧:೧೩ ಕ್ಕೆ ವೇದಿಕೆಗೆ ತೆರಳುತ್ತದೆ. ಅವರು ನೈರ್ಮಲ್ಯ ಚಟುವಟಿಕೆಗಳು ಮತ್ತು ಘನ-ದ್ರವ ಸಂಪನ್ಮೂಲ ನಿರ್ವಹಣೆ ಅಭ್ಯಾಸಗಳನ್ನು ನಗುವಿನೊಂದಿಗೆ ಚರ್ಚಿಸಲು ಪ್ರಾರಂಭಿಸುತ್ತಾರೆ.
ಈವೆಂಟ್ ಅನ್ನು ಕಲ್ಯಾಣ್ ಸ್ಥಾಪಿಸಿದ ಜನಸೇನಾ ಪಾರ್ಟಿಯು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಸ್ಟ್ರೀಮ್ ಮಾಡಿದೆ, ಅದೇ ಘಟನೆಯನ್ನು ೩೧:೦೫ ಮತ್ತು ೩೧:೧೩ ರ ನಡುವೆ ವಿಭಿನ್ನ ದೃಷ್ಟಿಕೋನದಿಂದ ಸೆರೆಹಿಡಿಯಲಾಗಿದೆ.
ತೀರ್ಪು
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮೈಕ್‌ನಲ್ಲಿ ದೋಷಪೂರಿತವಾದ ನಂತರ ಎದ್ದುನಿಂತು ಮತ್ತು ಭಾಷಣವನ್ನು ಮುಂದುವರಿಸಲು ವೇದಿಕೆಯತ್ತ ಚಲಿಸುತ್ತಿರುವ ವೀಡಿಯೋವನ್ನು ಎಡಿಟ್ ಮಾಡಲಾಗಿದೆ ಮತ್ತು ಅವರು 'ಆಸಕ್ತಿ ಕಳೆದುಕೊಂಡಿದ್ದಾರೆ' ಮತ್ತು ಸಭೆಯಿಂದ ನಿರ್ಗಮಿಸಿದ್ದಾರೆ ಎಂದು ಸೂಚಿಸುವ ಸಂದರ್ಭದಿಂದ ಹೊರಗಡೆ ಇರುವ ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ.
(ಅನುವಾದಿಸಿದವರು: ರಜಿನಿ ಕೆ.ಜಿ)
Read this fact-check in English here