ಮುಖಪುಟ ಆಂಧ್ರಪ್ರದೇಶ ಸರ್ಕಾರ ವಿಶಾಖಪಟ್ಟಣದ ಗಾಂಧಿ ಕ್ಯಾನ್ಸರ್ ಆಸ್ಪತ್ರೆಯನ್ನು 'ಮಾರಾಟ' ಮಾಡಿದೆಯೇ? ಹೇಳಿಕೆಯು ಸಂದರ್ಭದಿಂದ ಹೊರಗಿದೆ

ಆಂಧ್ರಪ್ರದೇಶ ಸರ್ಕಾರ ವಿಶಾಖಪಟ್ಟಣದ ಗಾಂಧಿ ಕ್ಯಾನ್ಸರ್ ಆಸ್ಪತ್ರೆಯನ್ನು 'ಮಾರಾಟ' ಮಾಡಿದೆಯೇ? ಹೇಳಿಕೆಯು ಸಂದರ್ಭದಿಂದ ಹೊರಗಿದೆ

ಮೂಲಕ: ರೋಹಿತ್ ಗುಟ್ಟಾ

ಜುಲೈ 2 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಆಂಧ್ರಪ್ರದೇಶ ಸರ್ಕಾರ ವಿಶಾಖಪಟ್ಟಣದ ಗಾಂಧಿ ಕ್ಯಾನ್ಸರ್ ಆಸ್ಪತ್ರೆಯನ್ನು 'ಮಾರಾಟ' ಮಾಡಿದೆಯೇ? ಹೇಳಿಕೆಯು ಸಂದರ್ಭದಿಂದ ಹೊರಗಿದೆ ಆಂಧ್ರಪ್ರದೇಶ ಸರ್ಕಾರವು ವಿಶಾಖಪಟ್ಟಣಂನಲ್ಲಿರುವ ಗಾಂಧಿ ಕ್ಯಾನ್ಸರ್ ಆಸ್ಪತ್ರೆಯನ್ನು ಹೆಚ್‌ಸಿಜಿ ಗುಂಪಿಗೆ ಮಾರಾಟ ಮಾಡಿದೆ ಎಂದು ಹೇಳುವ ಸಾಮಾಜಿಕ ಮಾಧ್ಯಮ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಗಾಂಧಿ ಕ್ಯಾನ್ಸರ್ ಆಸ್ಪತ್ರೆ ಖಾಸಗಿ ಸಂಸ್ಥೆಯಾಗಿದೆ. ಆಸ್ಪತ್ರೆಯಲ್ಲಿನ ಪಾಲು ಮಾರಾಟವು ಸರ್ಕಾರದ ಒಳಗೊಳ್ಳುವಿಕೆ ಇಲ್ಲದೆ ಖಾಸಗಿಯಿಂದ ಖಾಸಗಿ ವ್ಯವಹಾರವಾಗಿದೆ.

ಹೇಳಿಕೆ ಏನು?

ತೆಲುಗು ದೇಶಂ ಪಕ್ಷ (ಟಿಡಿಪಿ), ಜನಸೇನಾ ಪಕ್ಷ (ಜೆಎಸ್‌ಪಿ), ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಒಳಗೊಂಡಿರುವ ಆಂಧ್ರಪ್ರದೇಶ ಸರ್ಕಾರವು ವಿಶಾಖಪಟ್ಟಣಂನಲ್ಲಿ ೧೯೬ ಹಾಸಿಗೆಗಳನ್ನು ಒಳಗೊಂಡ ಮಹಾತ್ಮ ಗಾಂಧಿ ಕ್ಯಾನ್ಸರ್ ಆಸ್ಪತ್ರೆಯ ೫೪ ಪ್ರತಿಶತವನ್ನು ಹೆಚ್‌ಸಿಜಿ ಗುಂಪಿಗೆ ರೂ. ೪೧೪ ಕೋಟಿಗೆ "ಮಾರಾಟ" ಮಾಡಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಆರೋಪಿಸಲಾಗುತ್ತಿದೆ.

ಹೇಳಿಕೆಯು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಮುಂದಿನ ೧೮ ತಿಂಗಳಲ್ಲಿ ಇನ್ನೊಂದು ೩೪ ಪ್ರತಿಶತ ಪಾಲನ್ನು ರೂ. ೩೦೦ ಕೋಟಿಗೆ  ಮಾರಾಟ ಮಾಡಲಾಗುವುದು ಎಂದು ಹೇಳುತ್ತದೆ. ಹಿಂದಿನ ಸರ್ಕಾರವು "ರಾಜ್ಯದಲ್ಲಿ ಆರೋಗ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿದೆ" ಆದರೆ ಪ್ರಸ್ತುತ ಸರ್ಕಾರವು "ಮಾರಾಟದ ಅಮಲಿನಲ್ಲಿದೆ" ಎಂದು ಹೇಳಲಾಗಿದೆ. ಅಂತಹ ಪೋಷ್ಟ್ ಗಳ ಆರ್ಕೈವ್‌ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಸಾಮಾಜಿಕ ಮಾಧ್ಯಮ ಪೋಷ್ಟ್ ನ ಸ್ಕ್ರೀನ್‌ಶಾಟ್.
(ಮೂಲ: ಫೇಸ್‌ಬುಕ್/ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಮಹಾತ್ಮಾ ಗಾಂಧಿ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ (ಎಂಜಿಸಿಹೆಚ್ಆರ್ ಐ) ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಕ್ಯಾನ್ಸರ್ ಆಸ್ಪತ್ರೆಯಾಗಿದ್ದು, ರಾಷ್ಟ್ರವ್ಯಾಪಿ ಶಾಖೆಗಳನ್ನು ಹೊಂದಿದೆ. ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಲಿಮಿಟೆಡ್ (ಹೆಚ್‌ಸಿಜಿ) ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಯಾನ್ಸರ್ ಆಸ್ಪತ್ರೆಗಳ ಗುಂಪಾಗಿದೆ.

ಆದರೆ, ಹೇಳಿಕೆಯು ಸಂದರ್ಭದಿಂದ ಹೊರಗಿದೆ. ಎಂಜಿಸಿಹೆಚ್ಆರ್ ಐ ನಲ್ಲಿ ಹೆಚ್‌ಸಿಜಿ ಬಹುಪಾಲು ಪಾಲನ್ನು ಖರೀದಿಸಿದೆ, ಇದು ಎರಡು ಘಟಕಗಳ ನಡುವಿನ ಖಾಸಗಿ-ಖಾಸಗಿ ವ್ಯವಹಾರವಾಗಿದೆ, ಆಂಧ್ರ ಪ್ರದೇಶ ಸರ್ಕಾರದಿಂದ ಯಾವುದೇ ಒಳಗೊಳ್ಳುವಿಕೆ ಅಥವಾ ಮಾಲೀಕತ್ವವಿಲ್ಲ.

ನಾವು ಕಂಡುಕೊಂಡಿದ್ದು ಏನು?

ಜೂನ್ ೨೮, ೨೦೨೪ ರಂದು, ದಿ ಎಕನಾಮಿಕ್ ಟೈಮ್ಸ್‌ನಲ್ಲಿನ ವರದಿಯು ೧೯೬ ಹಾಸಿಗೆಗಳ ಎಂಜಿಸಿಹೆಚ್ಆರ್ ಐ ನಲ್ಲಿ ನಿಯಂತ್ರಣ ಪಾಲನ್ನು ೪೧೪ ಕೋಟಿಗೆ ಹೆಚ್‌ಸಿಜಿ ಸ್ವಾಧೀನಪಡಿಸಿಕೊಂಡಿದೆ ಎಂದು ಖಚಿತಪಡಿಸುತ್ತದೆ. ಹೆಚ್‌ಸಿಜಿ ಆರಂಭದಲ್ಲಿ ೫೧ ಪ್ರತಿಶತದಷ್ಟು ಪಾಲನ್ನು ಹೊಂದಿದ್ದು, ೧೮ ತಿಂಗಳೊಳಗೆ ಹೆಚ್ಚುವರಿ ೩೪ ಪ್ರತಿಶತವನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದೆ ಎಂದು ವರದಿಯು ಗಮನಿಸುತ್ತದೆ.

ಆಸ್ಪತ್ರೆಯ ಹೆಸರು ಎಂಜಿಸಿಹೆಚ್ಆರ್ ಐ ಆಗಿದ್ದು, ಇದು ಭಾರತದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ (ಎಂಸಿಎ) ವೈಜಾಗ್ ಆಸ್ಪತ್ರೆ ಮತ್ತು ಕ್ಯಾನ್ಸರ್ ರಿಸರ್ಚ್ ಸೆಂಟರ್ ಪ್ರೈವೇಟ್ ಲಿಮಿಟೆಡ್ ಎಂದು ನೋಂದಾಯಿಸಲ್ಪಟ್ಟಿದೆ. ಎಂಜಿಸಿಹೆಚ್ಆರ್ ಐ ವೆಬ್‌ಸೈಟ್‌ನ ಪ್ರಕಾರ, ಆಸ್ಪತ್ರೆಯನ್ನು ೨೦೦೫ ರಲ್ಲಿ ಒಂಬತ್ತು ಅನಿವಾಸಿ ಭಾರತೀಯರು (ಎನ್ ಆರ್ ಐ) ಮತ್ತು ಖಾಸಗಿ ವ್ಯಕ್ತಿಗಳಾದ ಭಾರತೀಯ ನಿವಾಸಿ ಪ್ರವರ್ತಕರು ಸ್ಥಾಪಿಸಿದರು. ಆಸ್ಪತ್ರೆಯು ಸರ್ಕಾರೇತರ ಖಾಸಗಿ ಸಂಸ್ಥೆ ಎಂದು ಎಂಸಿಎ ದಾಖಲೆಗಳು ಖಚಿತಪಡಿಸುತ್ತವೆ.

ಎಂಸಿಎ ನಲ್ಲಿ ಆಸ್ಪತ್ರೆಯ ವಿವರಗಳ ಸ್ಕ್ರೀನ್‌ಶಾಟ್. (ಮೂಲ: mca.gov.in)

ಹೆಚ್ಚುವರಿಯಾಗಿ, ಜೂನ್ ೨೮, ೨೦೨೪ ರಲ್ಲಿ, ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಗೆ ಸಲ್ಲಿಸಿದ ಫೈಲಿಂಗ್, ಹೆಚ್‌ಸಿಜಿ ಈ ವಹಿವಾಟಿಗೆ ಯಾವುದೇ ಸರ್ಕಾರ ಅಥವಾ ನಿಯಂತ್ರಕ ಅನುಮೋದನೆಯ ಅಗತ್ಯವಿಲ್ಲ ಎಂದು ಗಮನಿಸಿದೆ. ಇದು ಆಸ್ಪತ್ರೆಯ ಖಾಸಗಿ ಮಾಲೀಕತ್ವವನ್ನು ಮತ್ತಷ್ಟು ದೃಢಪಡಿಸುತ್ತದೆ.

ಬಿಎಸ್ಇ ಗೆ ಹೆಚ್‌ಸಿಜಿ ಸಲ್ಲಿಸಿದ ಫೈಲಿಂಗ್ ನ ಸ್ಕ್ರೀನ್‌ಶಾಟ್. (ಮೂಲ: bseindia.com)

ಆಂಧ್ರಪ್ರದೇಶದ ಸರ್ಕಾರಿ ಆಸ್ಪತ್ರೆಗಳು ಕ್ಯಾನ್ಸರ್ ಕೇಂದ್ರಗಳನ್ನು ಹೊಂದಿದ್ದರೆ, ರಾಜ್ಯವು ಮೀಸಲಾದ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ವಹಿಸುವುದಿಲ್ಲ. ವಿಶಾಖಪಟ್ಟಣಂನಲ್ಲಿರುವ ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಭಾರತ ಸರ್ಕಾರ ಮತ್ತು ಟಾಟಾ ಮೆಮೋರಿಯಲ್ ಕೇಂದ್ರದಿಂದ ಧನಸಹಾಯ ಪಡೆದಿದೆ.

ಜೂನ್ ೨೯, ೨೦೨೪ ರಂದು, ಆಂಧ್ರಪ್ರದೇಶ ಸರ್ಕಾರದ ಅಧಿಕೃತ ಫ್ಯಾಕ್ಟ್-ಚೆಕ್ ಘಟಕವು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಈ ಸುದ್ದಿ ತಪ್ಪು (ಇಲ್ಲಿ  ಆರ್ಕೈವ್ ಮಾಡಲಾಗಿದೆ) ಎಂದು ಸ್ಪಷ್ಟಪಡಿಸಿದೆ, "ಕೆಳಗಿನ ಪೋಷ್ಟ್ ಸಂಪೂರ್ಣವಾಗಿ ಸುಳ್ಳು. ಈ ವ್ಯವಹಾರದೊಂದಿಗೆ ಸರ್ಕಾರವು ಯಾವುದೇ ಸಂಬಂಧವನ್ನು ಹೊಂದಿಲ್ಲ."

ಆಂಧ್ರಪ್ರದೇಶ ಸರ್ಕಾರದ ಫ್ಯಾಕ್ಟ್ ಚೆಕ್ ಘಟಕ ನೀಡಿರುವ ಸ್ಪಷ್ಟೀಕರಣದ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/FactCheck.AP.Gov.in)

ತೀರ್ಪು

ಎರಡು ಆಸ್ಪತ್ರೆಗಳ ನಡುವಿನ ಖಾಸಗಿ ವಹಿವಾಟನ್ನು ಆಂಧ್ರ ಪ್ರದೇಶ ಸರ್ಕಾರವು ಸಾರ್ವಜನಿಕ ಆಸ್ಪತ್ರೆಯನ್ನು ಖಾಸಗಿ ಸಂಸ್ಥೆಗಳಿಗೆ "ಮಾರಾಟ" ಮಾಡುತ್ತಿದೆ ಎಂದು ತಪ್ಪಾಗಿ ನಿರೂಪಿಸಲಾಗಿದೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ