ಮುಖಪುಟ ಬಿಜೆಪಿ ಪಕ್ಷವು ಸೋತರೆ ಕರ್ನಾಟಕದಲ್ಲಿ ಕೇಂದ್ರದಿಂದ ಮಂಜೂರಾದ ಯೋಜನೆಗಳು ಸ್ಥಗಿತಗೊಳ್ಳುತ್ತವೆ ಎಂದು ಜೆಪಿ ನಡ್ಡಾ ಹೇಳಲಿಲ್ಲ

ಬಿಜೆಪಿ ಪಕ್ಷವು ಸೋತರೆ ಕರ್ನಾಟಕದಲ್ಲಿ ಕೇಂದ್ರದಿಂದ ಮಂಜೂರಾದ ಯೋಜನೆಗಳು ಸ್ಥಗಿತಗೊಳ್ಳುತ್ತವೆ ಎಂದು ಜೆಪಿ ನಡ್ಡಾ ಹೇಳಲಿಲ್ಲ

ಮೂಲಕ: ಅಂಕಿತಾ ಕುಲಕರ್ಣಿ

ಜುಲೈ 13 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಬಿಜೆಪಿ ಪಕ್ಷವು ಸೋತರೆ ಕರ್ನಾಟಕದಲ್ಲಿ ಕೇಂದ್ರದಿಂದ ಮಂಜೂರಾದ ಯೋಜನೆಗಳು ಸ್ಥಗಿತಗೊಳ್ಳುತ್ತವೆ ಎಂದು ಜೆಪಿ ನಡ್ಡಾ ಹೇಳಲಿಲ್ಲ

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ನಡ್ಡಾ ಅವರ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿರುವ ಯೋಜನೆಗಳಿಗೆ ಅಡ್ಡಿ ಮಾಡುತ್ತದೆ ಎಂದು ಹೇಳಿದರು.

ಸಂದರ್ಭ

ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರವು ಮೇ ೮ ರಂದು ಅಧಿಕೃತವಾಗಿ ಕೊನೆಗೊಂಡಿತು ಮತ್ತು ರಾಜ್ಯದ ೨೨೪ ಕ್ಷೇತ್ರಗಳ ಸ್ಥಾನಗಳಿಗೆ ನಾಯಕರನ್ನು ಆಯ್ಕೆ ಮಾಡಲು ಮೇ ೧೦ ರಂದು ಮತದಾನ ನೆಡೆಸಲಾಯಿತು. ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಜೆಪಿ ನಡ್ಡಾ ಅವರು ಮೇ ೭ ರಂದು ವಿಜಯನಗರದಲ್ಲಿ ರೋಡ್‌ಶೋ ನಡೆಸಿದ ಸಂದರ್ಭದಲ್ಲಿ, ಜನತಾ ದಳ-ಜಾತ್ಯತೀತ (ಜೆಡಿಎಸ್) ನ ಅಧಿಕೃತ ಟ್ವಿಟ್ಟರ್ ಖಾತೆಯು, " ರಾಜ್ಯದಲ್ಲಿ BJP ಸೋತರೆ ಕೇಂದ್ರದಿಂದ ಬರುವ ಎಲ್ಲ ಯೋಜನೆಗಳು ಬಂದ್ ಆಗಲಿವೆ ಎಂದು @JPNadda ಹೇಳಿದ್ದಾರೆ. ಮಿಸ್ಟರ್ ನಡ್ಡಾ, 'ಬಂದ್' ಮಾಡಿಸಲು ನೀವು ಯಾವೂರ ದೊಣ್ಣೆ ನಾಯಕ? ಕೇಂದ್ರದ ಅನುದಾನ #ಚುನಾವಣಾ_ಜೀವಿ @narendramodi ನೀಡುವ ಭಿಕ್ಷೆಯೊ, ಔದಾರ್ಯವೋ ಅಲ್ಲ. ಅದು ನಮ್ಮ ಹಕ್ಕು. ಅದನ್ನು ಹೇಗೆ ಪಡೆಯಬೇಕು ಎಂದು ನಮಗೆ ಗೊತ್ತು." ಎಂದು ಟ್ವೀಟ್ ಮಾಡಿದೆ. ಈ ಟ್ವೀಟ್ ೪೦೭ ಲೈಕ್ಸ್ ಮತ್ತು ೧೭,೫೦೦ ವೀಕ್ಷಣೆಗಳನ್ನು ಗಳಿಸಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮತ್ತು ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಟ ಪ್ರಕಾಶ್ ರಾಜ್ ಇದೇ ನಿರೂಪಣೆಯೊಂದಿಗೆ ಪೋಷ್ಟ್ ಅನ್ನು ಶೇರ್ ಮಾಡಿ ಬಿಜೆಪಿ ಮತ್ತು ನಡ್ಡಾ ಅವರನ್ನು ಟೀಕಿಸಿದ್ದಾರೆ. ಆದರೆ ನಡ್ಡಾ ಅವರ ಈ ಹೇಳಿಕೆಯು ತಪ್ಪಾಗಿ ಬಿಂಬಿಸಲಾಗಿದೆ. 

ವಾಸ್ತವವಾಗಿ

ದಿ ಹಿಂದೂ ವರದಿಯ ಪ್ರಕಾರ, ಮೇ ೭ ರಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ನಡ್ಡಾ ಅವರು ಬಿಜೆಪಿ ಅಭ್ಯರ್ಥಿ ಕರುಣಾಕರ್ ರೆಡ್ಡಿ ಅವರನ್ನು ಬೆಂಬಲಿಸಿ ರೋಡ್‌ಶೋ ನಡೆಸಿದರು. ರೋಡ್‌ಶೋ ದಲ್ಲಿ ನಡ್ಡಾ ಅವರು ಮಾತನಾಡಿದ ನೇರ ಪ್ರಸಾರದ ವೀಡಿಯೋವನ್ನು ನಾವು ಕಂಡುಕೊಂಡೆವು. ವೀಡಿಯೋದ ೫೯:೨೦ ನಿಮಿಷಗಳಲ್ಲಿ ನಡ್ಡಾ ಅವರು, ಸಿದ್ದರಾಮಯ್ಯ ಅವರ ಸರ್ಕಾರವು ಅಧಿಕಾರಕ್ಕೆ ಬಂದರೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಂತಹ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳಿಗೆ ಬ್ರೇಕ್ ಬೀಳಲಿದೆ ಮತ್ತು ಜನರು ಅಭಿವೃದ್ಧಿಯನ್ನು ನೋಡಬೇಕಾದರೆ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು. ಅದಲ್ಲದೆ ಬಿಜೆಪಿ ಸರ್ಕಾರವು ದಲಿತರಿಗೆ, ಬುಡಕಟ್ಟು ಜನರಿಗೆ, ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ ಮೀಸಲಾತಿ ಕೋಟಾವನ್ನು ಹೆಚ್ಚಿಸಿತು ಹಾಗು ಪರಿಶಿಷ್ಟ ಜಾತಿ (ಎಸ್‌ಸಿ) ಅವರಿಗೆ ಒಳ ಮೀಸಲಾತಿಯನ್ನು ಪರಿಚಯಿಸಿತು. ಆದರೆ ಸಿದ್ದರಾಮಯ್ಯ ಸರ್ಕಾರ ಚುನಾವಣೆಯನ್ನು ಗೆದ್ದರೆ ನಿರ್ಧಾರಗಳನ್ನು ಬದಲಾಯಿಸುತ್ತಾರೆ ಎಂದು ಅವರು ಹೇಳಿದರು.

ರ‍್ಯಾಲಿಯಲ್ಲಿ ರೋಡ್ ಶೋ ಮಾಡಿದ ಅವರು, "ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ಕಾರ್ಯಗಳು ಸ್ಥಗಿತಗೊಳ್ಳುತ್ತದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿಮಗೆ ಮನೆ ಸಿಗುವುದಿಲ್ಲ, ರಸ್ತೆ ಕಾಮಗಾರಿ ನಿಲ್ಲಿಸಲಾಗುವುದು ಮತ್ತು ಹೊಸ ರಸ್ತೆಗಳನ್ನು ಹಾಕುವ ಪ್ರಶ್ನೆಯೇ ಇಲ್ಲ. ಎಸ್‌ಸಿ, ಎಸ್‌ಟಿ, ಒಕ್ಕಲಿಗರು ಮತ್ತು ಲಿಂಗಾಯತರಿಗೆ ಹೆಚ್ಚಿಸಿರುವ ಮೀಸಲಾತಿಯನ್ನು ಹಿಂಪಡೆಯುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ ಹೊರತು ಏನನ್ನೂ ಕೊಡಲು ಅಲ್ಲ" ಎಂದು ಹೇಳಿದರು. ಡೆಕ್ಕನ್ ಹೆರಾಲ್ಡ್ ಕೂಡ ಇದನ್ನೇ ವರದಿ ಮಾಡಿದೆ. 

ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಯೋಜನೆಗಳನ್ನು ಸ್ಥಗಿತಗೊಳಿಸುವುದಾಗಿ ಹೇಳುವಾಗ ನಡ್ಡಾ ಅವರು ಕಾಂಗ್ರೆಸ್ ಅನ್ನು ಉಲ್ಲೇಖಿಸಿದರು. ೨೦೨೩ರ ಕರ್ನಾಟಕ ಚುನಾವಣೆಯಲ್ಲಿ ಪಕ್ಷವು ಗೆಲ್ಲಲು ವಿಫಲವಾದರೆ ಬಿಜೆಪಿ ನಡೆಸುತ್ತಿರುವ ಕೇಂದ್ರ ಯೋಜನೆಗಳನ್ನು ಸ್ಥಗಿತಗೊಳಿಸುತ್ತದೆ ಎಂದು ಅವರು ಹೇಳಲಿಲ್ಲ. 

ತೀರ್ಪು
ಚುನಾವಣಾ ರ‍್ಯಾಲಿಯಲ್ಲಿ ಕಾಂಗ್ರೆಸ್ ಬಗ್ಗೆ ನಡ್ಡಾ ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಯೋಜನೆಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿಲ್ಲ. ಆದ್ದರಿಂದ, ನಾವು ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸಿದ್ದೇವೆ. 

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ