ಮುಖಪುಟ ಬಿಹಾರದಲ್ಲಿ ಪತ್ನಿಯನ್ನು ಕೊಂದ ಆರೋಪಿಯ ವೀಡಿಯೋವನ್ನು ಕೋಮು ಸ್ಪಿನ್‌ನೊಂದಿಗೆ ಹಂಚಿಕೊಳ್ಳಲಾಗಿದೆ

ಬಿಹಾರದಲ್ಲಿ ಪತ್ನಿಯನ್ನು ಕೊಂದ ಆರೋಪಿಯ ವೀಡಿಯೋವನ್ನು ಕೋಮು ಸ್ಪಿನ್‌ನೊಂದಿಗೆ ಹಂಚಿಕೊಳ್ಳಲಾಗಿದೆ

ಮೂಲಕ: ರಜಿನಿ ಕೆ.ಜಿ

ಜುಲೈ 6 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಬಿಹಾರದಲ್ಲಿ ಪತ್ನಿಯನ್ನು ಕೊಂದ ಆರೋಪಿಯ ವೀಡಿಯೋವನ್ನು ಕೋಮು ಸ್ಪಿನ್‌ನೊಂದಿಗೆ ಹಂಚಿಕೊಳ್ಳಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಕುಟುಂಬದ ಹೇಳಿಕೆಗಳು, ಅಧಿಕೃತ ದಾಖಲೆಗಳು ಮತ್ತು ಪೊಲೀಸರು ಮೃತ ಪಟ್ಟವರು ಮತ್ತು ಆರೋಪಿಯು ಒಂದೇ ಧಾರ್ಮಿಕ ಸಮುದಾಯದವರು ಎಂದು ದೃಢಪಡಿಸಿದ್ದಾರೆ.

ಸಂದರ್ಭ
ಪುರುಷನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಹೇಳುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಹಿಂದೂ ಎಂಬ ಕಾರಣಕ್ಕೆ ಕೊಂದಿದ್ದಾನೆ ಎಂದು ಕೋಮುವಾದದ ಮಾತುಗಳು ಕೇಳಿಬರುತ್ತಿವೆ. ವೀಡಿಯೋ ಶೇರ್ ಮಾಡಿರುವ ಟ್ವಿಟ್ಟರ್ ಬಳಕೆದಾರರು "ಹಿಂದೂ ಎಂಬ ಕಾರಣಕ್ಕೆ ಪತ್ನಿಯನ್ನು ಕೊಂದಿದ್ದೇನೆ ಎಂದು ಎಷ್ಟು ಹೆಮ್ಮೆಯಿಂದ ಹೇಳುತಿದ್ದಾನೆ" ಎಂದು ಬರೆದುಕೊಂಡಿದ್ದಾರೆ. ಮೇ ೨ ರಂದು ಪೋಷ್ಟ್ ಮಾಡಲಾದ ಟ್ವೀಟ್ ವ್ಯಾಪಕವಾಗಿ ಪ್ರಸಾರವಾಗಿದೆ ಮತ್ತು ೯೮ ಸಾವಿರ ವೀಕ್ಷಣೆಗಳನ್ನು ಮತ್ತು ೨೭೦೦ ಸಾವಿರ ಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಗಳಿಸಿದೆ. ಆ ವ್ಯಕ್ತಿ ತನ್ನ ಹೆಂಡತಿಯನ್ನು ಹಿಂದೂ ಎಂಬ ಕಾರಣಕ್ಕೆ ಕೊಂದಿದ್ದಾನೆ ಮತ್ತು ಅವಳು ಆತನನ್ನು ಪ್ರೀತಿಸುವಂತೆ ಮಾಡಿದನು ಮತ್ತು ಮದುವೆಯಾದ ಒಂದು ವರ್ಷದೊಳಗೆ ಅವಳನ್ನು ಕೊಂದನು, ಇದು ಲವ್ ಜಿಹಾದ್ ಎಂದು ವೀಡಿಯೋದಲ್ಲಿ ಅಳವಡಿಸಲಾದ ಪಠ್ಯ ಪ್ರತಿಪಾದಿಸುತ್ತದೆ.

ವಾಸ್ತವವಾಗಿ
ವೀಡಿಯೋದಲ್ಲಿ, ವರದಿಗಾರನ ಮೈಕ್‌ನಲ್ಲಿ ಇನ್ಸಾಫ್ ೨೪ (Insaaf 24) ರ ಲೋಗೋವನ್ನು ಹಿಂದಿಯಲ್ಲಿ ಬರೆದಿರುವುದನ್ನು ನಾವು ಗಮನಿಸಿದೆವು. ಇನ್ಸಾಫ್ ೨೪ ಬಿಹಾರ ಮೂಲದ ಸ್ಥಳೀಯ ಸುದ್ದಿವಾಹಿನಿಯಾಗಿದೆ. ಏಪ್ರಿಲ್ ೨೮, ೨೦೨೩ ರಂದು ಅದರ ಯುಟ್ಯೂಬ್ (YouTube) ಚಾನಲ್‌ನಲ್ಲಿ ಮೂಲ ವೀಡಿಯೋವನ್ನು ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ವ್ಯಕ್ತಿಯು ತನ್ನ ಹೆಂಡತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡರೂ, ಆರೋಪಿಯು ತನ್ನ ಹೆಂಡತಿಯ ಧರ್ಮವನ್ನು ಬಹಿರಂಗಪಡಿಸುವ ಯಾವುದೇ ಹೇಳಿಕೆಯನ್ನು ಹೊಂದಿಲ್ಲ. ಪರಿಶೀಲನೆಗಾಗಿ ನಾವು ಇನ್ಸಾಫ್ ೨೪ ಅನ್ನು ಸಂಪರ್ಕಿಸಿದಾಗ, ಅವರು ಘಟನೆಗೆ ಯಾವುದೇ ಕೋಮು ಕೋನ ಇರುವುದನ್ನು ನಿರಾಕರಿಸಿದರು ಮತ್ತು ಆರೋಪಿಯ ಪತ್ನಿ ಒಂದೇ ಧಾರ್ಮಿಕ ಸಮುದಾಯಕ್ಕೆ ಸೇರಿದವರು ಎಂದು ಸ್ಪಷ್ಟಪಡಿಸಿದರು. ಬಿಹಾರದ ಸಮಸ್ತಿಪುರ ಜಿಲ್ಲೆಯ ಬಾಂಗ್ರಾದಲ್ಲಿ ಈ ಘಟನೆ ನಡೆದಿದೆ.

ಮೇ ೪ ರಂದು ಪ್ರಕಟವಾದ ಇತ್ತೀಚಿನ ವರದಿಯಲ್ಲಿ, ಸುದ್ದಿವಾಹಿನಿಯು ಮೃತಪಟ್ಟಿದ್ದವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿದೆ, ಅವರು ಅದನ್ನೇ ಖಚಿತಪಡಿಸಿದ್ದಾರೆ. ವರದಿಯ ಪ್ರಕಾರ, ಸಂತ್ರಸ್ತೆಯ ಹೆಸರು ಯಾಸ್ಮೀನ್ ಮತ್ತು ಎಂಟು ತಿಂಗಳ ಹಿಂದೆ ಆರೋಪಿ ಮೊಹಮ್ಮದ್ ಮೆಹಬೂಬ್ ಆಲಂ ನನ್ನು ಮದುವೆಯಾಗಿದ್ದಳು. ವರದಿಯು ದಂಪತಿಗಳ ಫೋಟೋವನ್ನು ತೋರಿಸುತ್ತದೆ. 

ಬಾಂಗ್ರಾ ಮೂಲದ ಸ್ಟ್ರಿಂಗರ್ ಇರ್ಫಾನ್ ಅಹ್ಮದ್ ಅವರನ್ನು ಲಾಜಿಕಲಿ ಫ್ಯಾಕ್ಟ್ಸ್ ಸಂಪರ್ಕಿಸಿತು. ಅವರು ಸಂತ್ರಸ್ತೆಯ ಆಧಾರ್ ಕಾರ್ಡ್ ಮತ್ತು ನಿಕಾಹ್ ನಾಮ (ಇಸ್ಲಾಮಿಕ್ ಮದುವೆ ಪ್ರಮಾಣಪತ್ರ) ಅನ್ನು ಹಂಚಿಕೊಂಡಿದ್ದಾರೆ. ಆರೋಪಿಗಳು ಮತ್ತು ಸಂತ್ರಸ್ತೆ ಇಬ್ಬರೂ ಒಂದೇ ಧಾರ್ಮಿಕ ಸಮುದಾಯಕ್ಕೆ ಸೇರಿದವರು ಎಂದು ದೃಢಪಡಿಸಿದರು.

ಆಪಾದಿತ ಕೊಲೆಗೆ ಯಾವುದೇ ಕೋಮು ಕೋನ ಇರುವುದನ್ನು ಪೊಲೀಸರು ನಿರಾಕರಿಸಿದ್ದಾರೆ. “ಸಂತ್ರಸ್ತೆಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ನಾವು ಇನ್ನೂ ತನಿಖೆ ನಡೆಸುತ್ತಿದ್ದೇವೆ. ಆದರೆ, ಆಕೆ ಬೇರೆ ಧಾರ್ಮಿಕ ಹಿನ್ನೆಲೆಯಿಂದ ಬಂದವಳು ಎಂಬ ಹೇಳಿಕೆಗಳು ಸುಳ್ಳು” ಎಂದು ಬಾಂಗ್ರಾ ಪೊಲೀಸ್ ಠಾಣೆ ಎಸ್‌ಎಚ್‌ಒ ಅಭಿನವ್ ಕುಮಾರ್ ಲಾಜಿಕಲಿ ಫ್ಯಾಕ್ಟ್ಸ್‌ಗೆ ತಿಳಿಸಿದ್ದಾರೆ.

"ವರದಕ್ಷಿಣೆಗಾಗಿ" ಆಕೆಯನ್ನು ಕೊಲ್ಲಲಾಗಿದೆ ಎಂದು ಮೃತಳ ಕುಟುಂಬ ಸದಸ್ಯರು ಆರೋಪಿಸಿದ್ದರೆ, ಸ್ಥಳೀಯ ಪೊಲೀಸರು ಪ್ರಕರಣವು ಇನ್ನೂ ತನಿಖೆಯಲ್ಲಿದೆ ಮತ್ತು ಮರಣೋತ್ತರ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ ಎಂದು ತಿಳಿಸಿದರು.

ತೀರ್ಪು

ಕೊಲೆ ಎಂದು ಹೇಳಲಾದ ಘಟನೆಯನ್ನು "ಲವ್ ಜಿಹಾದ್" ನ ಕೋಮು ನಿರೂಪಣೆಯನ್ನು ಉತ್ತೇಜಿಸಲು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಮೃತಳ ಕುಟುಂಬದ ಸದಸ್ಯರು, ಸ್ಥಳೀಯ ಪೊಲೀಸರು ಮತ್ತು ಸ್ಥಳೀಯ ಪತ್ರಕರ್ತರ ಹೇಳಿಕೆಗಳು ಮೃತಳು ಒಂದೇ ಧಾರ್ಮಿಕ ಸಮುದಾಯಕ್ಕೆ ಸೇರಿದವರು ಎಂದು ಖಚಿತಪಡಿಸುತ್ತದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ