ಮುಖಪುಟ ವಿದ್ಯುದಾಘಾತದಿಂದ ಆದ ಮರಣಗಳನ್ನು ಅದು ಬಾಂಗ್ಲಾದೇಶದಲ್ಲಿ 'ಹಿಂದೂಗಳ ಮೇಲೆ ದಾಳಿ' ಎಂದು ಹಂಚಿಕೊಳ್ಳಲಾಗಿದೆ

ವಿದ್ಯುದಾಘಾತದಿಂದ ಆದ ಮರಣಗಳನ್ನು ಅದು ಬಾಂಗ್ಲಾದೇಶದಲ್ಲಿ 'ಹಿಂದೂಗಳ ಮೇಲೆ ದಾಳಿ' ಎಂದು ಹಂಚಿಕೊಳ್ಳಲಾಗಿದೆ

ಮೂಲಕ: ರೋಹಿತ್ ಗುಟ್ಟಾ

ಆಗಸ್ಟ್ 14 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ವಿದ್ಯುದಾಘಾತದಿಂದ ಆದ ಮರಣಗಳನ್ನು ಅದು ಬಾಂಗ್ಲಾದೇಶದಲ್ಲಿ 'ಹಿಂದೂಗಳ ಮೇಲೆ ದಾಳಿ' ಎಂದು ಹಂಚಿಕೊಳ್ಳಲಾಗಿದೆ ಇದು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯ ವೀಡಿಯೋ ಎಂದು ಹೇಳಿಕೊಳ್ಳುವ ಸಾಮಾಜಿಕ ಮಾಧ್ಯಮ ಪೋಷ್ಟ್‌ನ ಸ್ಕ್ರೀನ್‌ಶಾಟ್ (ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್ ಇಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಜುಲೈ ೭ ರಂದು ಬಾಂಗ್ಲಾದೇಶದ ಬೋಗುರಾದಲ್ಲಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ವಿದ್ಯುದಾಘಾತದಿಂದ ಐದು ಜನರು ಸಾವನ್ನಪ್ಪಿದ ಘಟನೆಯನ್ನು ವೀಡಿಯೋ ತೋರಿಸುತ್ತದೆ.

(ಪ್ರಚೋದಕ ಎಚ್ಚರಿಕೆ: ಪರಿಶೀಲನೆಯು ದುಃಖದ ದೃಶ್ಯಗಳು ಮತ್ತು ವಿವರಣೆಗಳನ್ನು ಒಳಗೊಂಡಿರಬಹುದು. ಓದುಗರ ವಿವೇಚನೆಗೆ ಸಲಹೆ ನೀಡಲಾಗುತ್ತದೆ.)

ಹೇಳಿಕೆ ಏನು?

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅಶಾಂತಿಯ ನಡುವೆ ಹಿಂದೂಗಳನ್ನು ಕೊಲ್ಲಲಾಗಿದೆ ಎಂದು ತೋರಿಸುವ ೧:೨೩ ನಿಮಿಷಗಳ ಯಾತನಾಮಯ ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಜನರು ದೇಹಗಳನ್ನು ಸುತ್ತಲೂ ಮಲಗಿಕೊಂಡು ಅಳುತ್ತಿದ್ದಾರೆ. ವೀಡಿಯೋದಲ್ಲಿ, ಕಟ್ಟಡದ ಮುಂದೆ ಹಲವಾರು ಮೃತದೇಹಗಳು ಬಿದ್ದಿರುವುದನ್ನು ಮತ್ತು ಜನರು ಅಳುವುದು, ಇತರರನ್ನು ಸಮಾಧಾನಪಡಿಸುವುದನ್ನು ನಾವು ನೋಡಬಹುದು.

ಫೇಸ್‌ಬುಕ್ ಬಳಕೆದಾರರು ಈ ವೀಡಿಯೋವನ್ನು ಹಂಚಿಕೊಂಡಿದ್ದು, (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹಿಂದೂಗಳು "ಬಾಂಗ್ಲಾದೇಶದಲ್ಲಿ ಹ್ಯಾಕ್ ಮತ್ತು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ" ಎಂದು ಹೇಳಿಕೊಂಡಿದ್ದಾರೆ, ಆದರೆ ಭಾರತದಲ್ಲಿದ್ದವರು "ಗಾಢವಾದ ನಿದ್ರೆಯಲ್ಲಿದ್ದಾರೆ." ಅದೇ ರೀತಿಯ ಪೋಷ್ಟ್ ಗಳ ಆರ್ಕೈವ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಸಾಮಾಜಿಕ ಮಾಧ್ಯಮ ಪೋಷ್ಟ್‌ನ ಸ್ಕ್ರೀನ್‌ಶಾಟ್ (ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ವೀಡಿಯೋದಲ್ಲಿರುವ ಜನರು ಹಿಂದೂಗಳಾಗಿದ್ದರೂ, ಅವರು ಬಾಂಗ್ಲಾದೇಶದಲ್ಲಿ ರಥಯಾತ್ರೆ (ಹಿಂದೂ ದೇವರ ವಿಗ್ರಹವನ್ನು ಹೊತ್ತ ರಥದೊಂದಿಗೆ ಭಕ್ತರು ನಡೆಯುವ ಉತ್ಸವ) ಸಮಯದಲ್ಲಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ.

ನಾವು ಏನು ಕಂಡುಕೊಂಡಿದ್ದೇವೆ?

ವೀಡಿಯೋ ಮೇಲಿನ ಎಡ ಮೂಲೆಯಲ್ಲಿ ಸಿರಾಜ್‌ಗಂಜ್ ಎಕ್ಸ್‌ಪ್ರೆಸ್‌ನ ಲೋಗೋವನ್ನು ಹೊಂದಿದೆ ಮತ್ತು ನಾವು ಅದರ ಖಾತೆಯನ್ನು ಫೇಸ್‌ಬುಕ್‌ನಲ್ಲಿ ಕಂಡುಕೊಂಡಿದ್ದೇವೆ. ಪುಟವು ಬಾಂಗ್ಲಾದೇಶದ ಸಿರಾಜ್‌ಗಂಜ್ ಮೂಲದ "ಮಾಧ್ಯಮ/ಸುದ್ದಿ ಕಂಪನಿ" ಎಂದು ಪಟ್ಟಿಮಾಡುತ್ತದೆ. ಈ ಖಾತೆಯು ಈಗ ವೈರಲ್ ಆಗಿರುವ ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಜುಲೈ ೭, ೨೦೨೪ ರಂದು ಬಂಗಾಳಿ ಭಾಷೆಯಲ್ಲಿ "ಬೋಗುರಾದಲ್ಲಿ ರಥಯಾತ್ರೆಯ ಸಂದರ್ಭದಲ್ಲಿ ೫ ಮಂದಿ ಸತ್ತರು, ಕನಿಷ್ಠ ೩೦ ಮಂದಿ ಗಾಯಗೊಂಡರು" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಬೊಗುರಾ ಉತ್ತರ ಬಾಂಗ್ಲಾದೇಶದಲ್ಲಿರುವ ಒಂದು ನಗರ.

ನಾವು ನಂತರ ರಿವರ್ಸ್ ಇಮೇಜ್ ಸರ್ಚ್ ಮೂಲಕ ವೀಡಿಯೋದ ಕೀಫ್ರೇಮ್‌ಗಳನ್ನು ರನ್ ಮಾಡಿದ್ದೇವೆ ಮತ್ತು ಘಟನೆಯನ್ನು ದೃಢೀಕರಿಸುವ ಇತರ ವರದಿಗಳನ್ನು ಕಂಡುಕೊಂಡಿದ್ದೇವೆ.

ಬಾಂಗ್ಲಾದೇಶದ ಸುದ್ದಿವಾಹಿನಿಯಾದ ಢಾಕಾ ಬಿಡಿ ನ್ಯೂಸ್ ೨೪ ರ ವರದಿಯ ಪ್ರಕಾರ, ಜುಲೈ ೭ ರ ಮಧ್ಯಾಹ್ನ ಬೋಗುರಾದಲ್ಲಿ ಜಗನ್ನಾಥ ರಥ ಯಾತ್ರೆಯ ಸಂದರ್ಭದಲ್ಲಿ ವಿದ್ಯುದಾಘಾತದಿಂದ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು ೫೦ ಜನರು ಗಾಯಗೊಂಡಿದ್ದಾರೆ. ಮೃತರನ್ನು ಅಲೋಕ್, ಅತಾಶಿ, ರಜಿಂತಾ, ನರೇಶ್ ಮತ್ತು ಸಬಿತಾ ಎಂದು ವರದಿಯಲ್ಲಿ ಗುರುತಿಸಲಾಗಿದೆ.

ದೇಶದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಬಾಂಗ್ಲಾದೇಶ ಸಂಗಾಬಾದ್ ಸಂಸ್ಥಾ (ಬಿಎಸ್ಎಸ್) ಪ್ರಕಟಿಸಿದ ವರದಿಯು ಈಗ ವೈರಲ್ ಆಗಿರುವ ವೀಡಿಯೋದಲ್ಲಿ ಕಂಡುಬರುವ ಅದೇ ದೃಶ್ಯಗಳನ್ನು ಹೊಂದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು, ಚಿಕಿತ್ಸೆ ವೇಳೆ ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. 

ಢಾಕಾ ಟ್ರಿಬ್ಯೂನ್ ವರದಿಯ ಪ್ರಕಾರ ರಥದ ಲೋಹದ ಗುಮ್ಮಟವು ಹೈ-ವೋಲ್ಟೇಜ್ ವೈರ್‌ಗೆ ಸಂಪರ್ಕಕ್ಕೆ ಬಂದು ಬೆಂಕಿ ಹೊತ್ತಿಕೊಂಡಾಗ ಈ ಘಟನೆ ಸಂಭವಿಸಿದೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯ ವರದಿಗಳಿದ್ದರೂ, ಈ ವೀಡಿಯೋ ಅವರ ಮೇಲಿನ ದಾಳಿಯದ್ದಲ್ಲ ಆದರೆ ಜುಲೈ ಆರಂಭದಲ್ಲಿ ನಡೆದ ಅಪಘಾತವಾಗಿದೆ. 

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅಶಾಂತಿ

  • ಆಗಸ್ಟ್ ೧೨, ೨೦೨೪ ರ ಹೊತ್ತಿಗೆ, ಹಿಂಸಾತ್ಮಕ ಪ್ರತಿಭಟನೆಯ ನಂತರ ಬಾಂಗ್ಲಾದೇಶದಲ್ಲಿ ೪೫೦ ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

  •  ಆಗಸ್ಟ್ ೮ ರಂದು, ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಆಗಸ್ಟ್ ೫ ರಂದು ದೇಶವನ್ನು ತೊರೆದ ನಂತರ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ಪ್ರಮಾಣವಚನ ಸ್ವೀಕರಿಸಿದರು.
  •  ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅಶಾಂತಿಯು ಕೋಟಾ ಸುಧಾರಣಾ ಚಳುವಳಿಗೆ ಕಾರಣವಾಗಿದೆ, ಇದು ಜೂನ್ ೨೦೨೪ ರಲ್ಲಿ ರಾಷ್ಟ್ರವ್ಯಾಪಿ ನಾಗರಿಕ ಅಸಹಕಾರ ಮತ್ತು ಪ್ರಧಾನಿ ಹಸೀನಾ ಮತ್ತು ಅವರ ಕ್ಯಾಬಿನೆಟ್‌ನ ರಾಜೀನಾಮೆಗೆ ಕರೆ ನೀಡಿದ ಪ್ರತಿಭಟನಾಕಾರರೊಂದಿಗೆ ಪ್ರಾರಂಭವಾಯಿತು.

ತೀರ್ಪು

ಬಾಂಗ್ಲಾದೇಶದಲ್ಲಿ ಉದ್ದೇಶಿತ ದಾಳಿಯಲ್ಲಿ ಹಿಂದೂಗಳು ಕೊಲ್ಲಲ್ಪಟ್ಟರು ಎಂದು ಹಬ್ಬದ ಸಮಯದಲ್ಲಿ ವಿದ್ಯುದಾಘಾತದಲ್ಲಿ ಸಾವನ್ನಪ್ಪಿದ ಹಿಂದೂ ಭಕ್ತರ ಶವಗಳ ಮೇಲೆ ಜನರು ಅಳುತ್ತಿರುವ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಲಾಜಿಕಲಿ ಫ್ಯಾಕ್ಟ್ಸ್ ಬಾಂಗ್ಲಾದೇಶದ ಹಿಂಸಾಚಾರದ ಬಗ್ಗೆ ತಪ್ಪು ಮಾಹಿತಿಯನ್ನು ಸಕ್ರಿಯವಾಗಿ ಹೊರಹಾಕುತ್ತಿದೆ. ನಮ್ಮ ಫ್ಯಾಕ್ಟ್-ಚೆಕ್ ಅನ್ನು ನೀವು ಇಲ್ಲಿ ಓದಬಹುದು.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ