ಮುಖಪುಟ ಇಲ್ಲ, ಗಾಜಿಯಾಬಾದ್ ನಲ್ಲಿ ಆಹಾರದಲ್ಲಿ 'ಮೂತ್ರ ಮಿಶ್ರಣ' ಮಾಡಿದ ಮನೆಕೆಲಸದ ಮಹಿಳೆಯು ಮುಸ್ಲಿಂ ಅಲ್ಲ

ಇಲ್ಲ, ಗಾಜಿಯಾಬಾದ್ ನಲ್ಲಿ ಆಹಾರದಲ್ಲಿ 'ಮೂತ್ರ ಮಿಶ್ರಣ' ಮಾಡಿದ ಮನೆಕೆಲಸದ ಮಹಿಳೆಯು ಮುಸ್ಲಿಂ ಅಲ್ಲ

ಮೂಲಕ: ಪ್ರಭಾನು ದಾಸ್

ಅಕ್ಟೋಬರ್ 22 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಫೇಸ್‌ಬುಕ್ ಮತ್ತು ಎಕ್ಸ್‌ನಲ್ಲಿನ ಪೋಷ್ಟ್‌ಗಳು ಗಾಜಿಯಾಬಾದ್‌ನಲ್ಲಿ ತನ್ನ ಉದ್ಯೋಗದಾತರ ಆಹಾರದಲ್ಲಿ ಮೂತ್ರವನ್ನು ಬೆರೆಸಿದ ಆರೋಪದ ಮೇಲೆ ಬಂಧಿಸಲ್ಪಟ್ಟ ಮಹಿಳೆಯೊಬ್ಬಳು ಮುಸ್ಲಿಂ ಎಂದು ಹೇಳಿಕೊಂಡಿವೆ. ಫೇಸ್‌ಬುಕ್ ಮತ್ತು ಎಕ್ಸ್‌ನಲ್ಲಿನ ಪೋಷ್ಟ್‌ಗಳು ಗಾಜಿಯಾಬಾದ್‌ನಲ್ಲಿ ತನ್ನ ಉದ್ಯೋಗದಾತರ ಆಹಾರದಲ್ಲಿ ಮೂತ್ರವನ್ನು ಬೆರೆಸಿದ ಆರೋಪದ ಮೇಲೆ ಬಂಧಿಸಲ್ಪಟ್ಟ ಮಹಿಳೆಯೊಬ್ಬಳು ಮುಸ್ಲಿಂ ಎಂದು ಹೇಳಿಕೊಂಡಿವೆ. (ಮೂಲ: ಫೇಸ್‌ಬುಕ್/ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಯ ಹೆಸರು ರೀನಾ ಮತ್ತು ಅವರು ಹಿಂದೂ ಸಮುದಾಯಾದವರು, ಪೋಷ್ಟ್ ಗಳು ಸೂಚಿಸುವಂತೆ ಮುಸ್ಲಿಂ ಅಲ್ಲ.

ಹೇಳಿಕೆ ಏನು?

ಎಕ್ಸ್ (ಹಿಂದೆ ಟ್ವಿಟರ್) ಮತ್ತು ಫೇಸ್‌ಬುಕ್‌ನಲ್ಲಿನ ಹಲವಾರು ಪೋಷ್ಟ್‌ಗಳು ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಇತ್ತೀಚಿನ ಪ್ರಕರಣದ ವೀಡಿಯೋವನ್ನು ಹಂಚಿಕೊಂಡಿವೆ, ಅಲ್ಲಿ ಮಹಿಳೆಯೊಬ್ಬರು ಆಹಾರದಲ್ಲಿ ಮೂತ್ರವನ್ನು ಬೆರೆಸುತ್ತಿರುವುದನ್ನು ಕಾಣಬಹುದು. ೩೭ ಸೆಕೆಂಡುಗಳ ವೀಡಿಯೋದಲ್ಲಿ, ಹಿಡನ್ ಕ್ಯಾಮೆರಾದಿಂದ ಸೆರೆಹಿಡಿಯಲಾದ, ರೀನಾ ಕುಮಾರ್ ಎಂದು ಗುರುತಿಸಲ್ಪಟ್ಟಿರುವ ಮನೆಕೆಲಸದಾಕೆ ಅಡುಗೆಮನೆಯ ಮೂಲೆಯಲ್ಲಿ ಮೂತ್ರ ವಿಸರ್ಜನೆ ಮಾಡುತಿದ್ದಾಳೆ ಮತ್ತು ಅದನ್ನು ಆಹಾರದ ಬಟ್ಟಲಿನಲ್ಲಿ ಮಿಶ್ರಣ ಮಾಡುತಿದ್ದಾಳೆ ಎಂದು ಹೇಳಲಾಗಿದೆ.

ಹಲವಾರು ತಿಂಗಳುಗಳ ಕಾಲ ಈ ವರ್ತನೆಯಲ್ಲಿ ತೊಡಗಿರುವ ವರದಿಯ ನಂತರ ಅಕ್ಟೋಬರ್ ೧೬, ೨೦೨೪ ರಂದು ರೀನಾ ಅವರನ್ನು ಬಂಧಿಸಲಾಯಿತು. ಆಕೆಯ ಉದ್ಯೋಗದಾತ ಅಳವಡಿಸಿದ್ದ ಹಿಡನ್ ಕ್ಯಾಮೆರಾದಲ್ಲಿ ಆಕೆಯ ಕೃತ್ಯ ಸೆರೆಯಾಗಿದೆ ಎಂದು ವರದಿಯಾಗಿದೆ.

ಆದರೆ, ವೈರಲ್ ಸೋಷಿಯಲ್ ಮೀಡಿಯಾ ಪೋಷ್ಟ್‌ಗಳು ವೀಡಿಯೋದಲ್ಲಿರುವ ಮಹಿಳೆ ರೀನಾ ಕುಮಾರ್ ಅಲ್ಲ ಆದರೆ "ರುಬಿನಾ ಖಾತೂನ್" ಎಂದು ಹೇಳುತ್ತವೆ, ಇದು ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ಸೂಚಿಸುತ್ತದೆ. ಅಂತಹ ಒಂದು ಪೋಷ್ಟ್ ಹೀಗೆ ಹೇಳುತ್ತದೆ, "ಗಾಜಿಯಾಬಾದ್‌ನಲ್ಲಿ ಮೂತ್ರದೊಂದಿಗೆ ಹಿಟ್ಟು ಬೆರೆಸುವ ಸೇವಕಿ 'ರೀನಾ' ಅವರ ನಿಜವಾದ ಹೆಸರು 'ರುಬಿನಾ ಖಾತೂನ್'."

ಈ ಹೇಳಿಕೆಯನ್ನು ಭಾರತೀಯ ಜನತಾ ಪಕ್ಷದ ದೆಹಲಿ ಘಟಕದ ಸಹ-ಮುಖ್ಯಸ್ಥ ಕ್ವಾಮ್ ಮೆಹದಿ ಅವರು ಹಂಚಿಕೊಂಡಿದ್ದಾರೆ, ಅವರ ಪೋಷ್ಟ್ ಎಕ್ಸ್ ನಲ್ಲಿ ೩೮೫,೦೦೦ ವೀಕ್ಷಣೆಗಳು, ೭,೫೦೦ ಕ್ಕೂ ಹೆಚ್ಚು ಲೈಕ್ ಗಳು ಮತ್ತು ಸುಮಾರು ೪,೦೦೦  ಮರುಹಂಚಿಕೆಗಳನ್ನು ಗಳಿಸಿದೆ. ಈ ಪೋಷ್ಟ್‌ಗಳ ಆರ್ಕೈವ್ ಮಾಡಿದ ಲಿಂಕ್‌ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ವೈರಲ್ ವೀಡಿಯೋದಲ್ಲಿರುವ ಮಹಿಳೆಯ ಹೆಸರು ರೀನಾ ಅಲ್ಲ, ರುಬಿನಾ ಖಾತೂನ್ ಎಂದು ಹೇಳುವ ಎಕ್ಸ್ ಮತ್ತು ಫೇಸ್‌ಬುಕ್‌ನಲ್ಲಿ ಪೋಷ್ಟ್‌ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ನಮ್ಮ ಸಂಶೋಧನೆಯು ಈ ಹೇಳಿಕೆಗಳು ತಪ್ಪು ಎಂದು ಸೂಚಿಸುತ್ತದೆ. ವೀಡಿಯೋದಲ್ಲಿರುವ ಮಹಿಳೆಯ ಹೆಸರು ರೀನಾ ಕುಮಾರ್ ಮತ್ತು ಹಿಂದೂ ಸಮುದಾಯಕ್ಕೆ ಸೇರಿದವರು.

ನಾವು ಇದನ್ನು ಹೇಗೆ ಪರಿಶೀಲಿಸಿದ್ದೇವೆ?

ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಘಟನೆಯನ್ನು ವಿವರಿಸುವ ಬಹು ಸುದ್ದಿ ವರದಿಗಳಿಗೆ ನಮ್ಮನ್ನು ಕರೆದೊಯ್ಯಿತು. ಎಕನಾಮಿಕ್ ಟೈಮ್ಸ್ ಮತ್ತು ಟೈಮ್ಸ್ ಆಫ್ ಇಂಡಿಯಾದ ಲೇಖನಗಳು ವೀಡಿಯೋದಲ್ಲಿರುವ ಮಹಿಳೆಯನ್ನು ಶಾಂತಿ ನಗರದ ೩೨ ವರ್ಷದ ರೀನಾ ಕುಮಾರ್ ಎಂದು ಗುರುತಿಸಿವೆ. 

ಈ ವರದಿಗಳ ಪ್ರಕಾರ, ಕ್ರಾಸಿಂಗ್ಸ್ ರಿಪಬ್ಲಿಕ್‌ನಲ್ಲಿ (ಉತ್ತರ ಪ್ರದೇಶದ ಗಾಜಿಯಾಬಾದ್‌ನ ಟೌನ್‌ಶಿಪ್) ವಾಸಿಸುವ ಕುಟುಂಬವು ಅವರನ್ನು ನೇಮಿಸಿಕೊಂಡಿತ್ತು, ನಿರಂತರ ಆರೋಗ್ಯ ಸಮಸ್ಯೆಗಳು ಅವರ ಅನುಮಾನವನ್ನು ಹುಟ್ಟುಹಾಕಿತು. ಅವರು ತಮ್ಮ ಅಡುಗೆಮನೆಯಲ್ಲಿ ಹಿಡನ್ ಕ್ಯಾಮೆರಾವನ್ನು ಇರಿಸಿದಾಗ, ಅವರು ತಮ್ಮ ಮನೆಗೆಲಸದ ಕೆಲಸಗಾತಿ ತಮ್ಮ ಆಹಾರದಲ್ಲಿ ಮೂತ್ರವನ್ನು ಬೆರೆಸುವುದನ್ನು ಕಂಡು ಹಿಡಿದರು.

ಈ ಪ್ರಕರಣದಲ್ಲಿ ಬಂಧನವನ್ನು ಘೋಷಿಸಿದ ಸುದ್ದಿ ಸಂಸ್ಥೆ ANI (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪೋಷ್ಟ್‌ನಲ್ಲಿ ಶಂಕಿತಳನ್ನು ರೀನಾ ಕುಮಾರ್ ಎಂದು ಗುರುತಿಸಿದೆ.

ಸುದ್ದಿ ವರದಿಗಳು ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ಒಳಗೊಂಡಿರುವುದನ್ನು ನಾವು ಗಮನಿಸಿದ್ದೇವೆ. ರಿವರ್ಸ್ ಇಮೇಜ್ ಸರ್ಚ್ ನ ಮೂಲಕ, ಉತ್ತರ ಪ್ರದೇಶ ಮೂಲದ ಪತ್ರಕರ್ತ ಸಚಿನ್ ಗುಪ್ತಾ ಅವರು ಎಕ್ಸ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ವೀಡಿಯೋವನ್ನು ಪೋಷ್ಟ್ ಮಾಡಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ, ಅವರು ಶಂಕಿತಳನ್ನು ಅಕ್ಟೋಬರ್ ೧೬, ೨೦೨೪ ರಂದು ಗುರುತಿಸಿದ್ದಾರೆ.

ಅಕ್ಟೋಬರ್ ೨೧, ೨೦೨೪ ರಂದು, ಅವರು ಈ ವೀಡಿಯೋದ ಸುತ್ತಲಿನ ತಪ್ಪು ಮಾಹಿತಿಗೆ ಪ್ರತಿಕ್ರಿಯಿಸಿದರು (ಇಲ್ಲಿ ಆರ್ಕೈವ್ ಮಾಡಲಾಗಿದೆ), ಮಹಿಳೆಯ ಹೆಸರು ನಿಜವಾಗಿಯೂ ರೀನಾ ಕುಮಾರ್ ಎಂದು ಸ್ಪಷ್ಟಪಡಿಸಿದರು ಮತ್ತು ಪ್ರಥಮ ಮಾಹಿತಿ ವರದಿಯ (ಎಫ್‌ಐಆರ್) ನಕಲನ್ನು ಲಗತ್ತಿಸಿದ್ದಾರೆ.

ಲಾಜಿಕಲಿ ಫ್ಯಾಕ್ಟ್ಸ್ ಎಫ್‌ಐಆರ್‌ನ ಪ್ರತಿಯನ್ನು ಪಡೆದುಕೊಂಡಿದೆ, ಇದು ಆರೋಪಿಯನ್ನು ಪ್ರಮೋದ್ ಕುಮಾರ್ ಅವರ ಪತ್ನಿ ರೀನಾ ಕುಮಾರ್ ಎಂದು ಸ್ಪಷ್ಟವಾಗಿ ಗುರುತಿಸುತ್ತದೆ. ವರದಿಯಲ್ಲಿ ರುಬಿನಾ ಖಾತೂನ್ ಹೆಸರು ಕಾಣಿಸುತ್ತಿಲ್ಲ.

ಎಫ್‌ಐಆರ್‌ನ ಹೈಲೈಟ್ ಮಾಡಿದ ಭಾಗವು ಆರೋಪಿಯನ್ನು ಗಾಜಿಯಾಬಾದ್‌ನ ಶಾಂತಿ ನಗರದಲ್ಲಿ ನೆಲೆಸಿರುವ ಪ್ರಮೋದ್ ಕುಮಾರ್ ಅವರ ಪತ್ನಿ ರೀನಾ ಎಂದು ಹೆಸರಿಸಿದೆ. (ಮೂಲ: ಘಾಜಿಯಾಬಾದ್ ಪೋಲೀಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಇದಲ್ಲದೆ, ಕ್ರಾಸಿಂಗ್ಸ್ ರಿಪಬ್ಲಿಕ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಪ್ರೀತಿ ಗಾರ್ಗ್ ಲಾಜಿಕಲ್ ಫ್ಯಾಕ್ಟ್ಸ್‌ಗೆ, "ಅಪರಾಧಿಯ ಹೆಸರು ರೀನಾ; ಅವಳು ಹಿಂದೂ ಸಮುದಾಯಕ್ಕೆ ಸೇರಿದವಳು." ಆರೋಪಿಯು ಅಲಿಯಾಸ್ ಅಡಿಯಲ್ಲಿ ಕೆಲಸ ಮಾಡುತ್ತಿಲ್ಲ ಮತ್ತು ರುಬಿನಾ ಖಾತೂನ್ ಎಂದು ಹೆಸರಿಲ್ಲ ಮತ್ತು ಅವಳು ಮುಸ್ಲಿಂ ಅಲ್ಲ ಎಂದು ಎಸ್‌ಎಚ್‌ಒ ದೃಢಪಡಿಸಿದರು.

ತೀರ್ಪು

ನಮ್ಮ ಸಂಶೋಧನೆ ಮತ್ತು ಪೊಲೀಸರ ಸ್ವತಂತ್ರ ಪರಿಶೀಲನೆಯು ವೈರಲ್ ವೀಡಿಯೋದಲ್ಲಿರುವ ಮಹಿಳೆ ರುಬಿನಾ ಖಾತೂನ್ ಅಲ್ಲ, ಬದಲಿಗೆ ಹಿಂದೂ ಮಹಿಳೆ ರೀನಾ ಕುಮಾರ್ ಎಂದು ಖಚಿತಪಡಿಸುತ್ತದೆ. ವೈರಲ್ ಪೋಷ್ಟ್‌ಗಳು ತಪ್ಪು ಕೋಮುವಾದಿ ಹೇಳಿಕೆಯೊಂದಿಗೆ ಪ್ರಚಾರ ಮಾಡುತ್ತಿವೆ, ಶಂಕಿತನನ್ನು ಮುಸ್ಲಿಂ ಎಂದು ತಪ್ಪಾಗಿ ಗುರುತಿಸುತ್ತವೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ