ಮುಖಪುಟ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಕೊಲೆಯಾದ ಸಂತ್ರಸ್ತೆಯ ಕೊನೆಯ ಕ್ಷಣಗಳು ಎಂದು ಮೇಕಪ್ ಕಲಾವಿದೆಯ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಕೊಲೆಯಾದ ಸಂತ್ರಸ್ತೆಯ ಕೊನೆಯ ಕ್ಷಣಗಳು ಎಂದು ಮೇಕಪ್ ಕಲಾವಿದೆಯ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಆಗಸ್ಟ್ 21 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಕೊಲೆಯಾದ ಸಂತ್ರಸ್ತೆಯ ಕೊನೆಯ ಕ್ಷಣಗಳು ಎಂದು ಮೇಕಪ್ ಕಲಾವಿದೆಯ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ ಮೇಕಪ್ ಕಲಾವಿದೆಯನ್ನು ಆರ್‌ಜಿ ಕರ್ ಆಸ್ಪತ್ರೆಯ ಕೊಲೆ ಸಂತ್ರಸ್ತೆ ಎಂದು ತಪ್ಪಾಗಿ ಪ್ರಸ್ತುತಪಡಿಸುವ ಫೇಸ್‌ಬುಕ್ ಪೋಷ್ಟ್‌ನ ಸ್ಕ್ರೀನ್‌ಶಾಟ್. (ಮೂಲ: ಸ್ಕ್ರೀನ್‌ಶಾಟ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೈರಲ್ ವೀಡಿಯೋವು ಮೇಕಪ್ ಕಲಾವಿದೆಯನ್ನು ಚಿತ್ರಿಸುತ್ತದೆ, ಪಶ್ಚಿಮ ಬಂಗಾಳದ ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಟ್ರೈನಿ ವೈದ್ಯೆಯನಲ್ಲ.

(ಪ್ರಚೋದಕ ಎಚ್ಚರಿಕೆ: ಈ ಕಥೆಯು ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ವಿವರಣೆಯನ್ನು ಒಳಗೊಂಡಿದೆ. ಓದುಗರ ವಿವೇಚನೆಗೆ ಸಲಹೆ ನೀಡಲಾಗುತ್ತದೆ.)

ಹೇಳಿಕೆ ಏನು?

ಮಹಿಳೆಯ ಕುತ್ತಿಗೆ ಮತ್ತು ಮುಖದ ಸುತ್ತ ಕಾಣುವ ಗಾಯಗಳ ಕಿರು ವೀಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಗಸ್ಟ್ ೯, ೨೦೨೪ ರಂದು ಸೆಮಿನಾರ್ ಹಾಲ್‌ನಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ನಂತರ ಶವವಾಗಿ ಪತ್ತೆಯಾದ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ತರಬೇತಿ ಪಡೆದ ವೈದ್ಯೆಯ ಕೊನೆಯ ಕ್ಷಣಗಳನ್ನು ವೀಡಿಯೋ ತೋರಿಸುತ್ತದೆ ಎಂದು ಹೇಳಲಾಗಿದೆ.

ಫೇಸ್‌ಬುಕ್, ಎಕ್ಸ್ (ಹಿಂದೆ ಟ್ವಿಟ್ಟರ್), ಮತ್ತು ಯೂಟ್ಯೂಬ್ ನಲ್ಲಿನ ವಿವಿಧ ಬಳಕೆದಾರರು ಇದೇ ರೀತಿಯ ಹೇಳಿಕೆಗಳೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ, ಸಂತ್ರಸ್ತೆಯ ನ್ಯಾಯಕ್ಕಾಗಿ ಕರೆ ನೀಡಿದ್ದಾರೆ. ಕೆಲವು ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. 

ಸಾಮಾಜಿಕ ಮಾಧ್ಯಮ ಪೋಷ್ಟ್‌ಗಳ ಸ್ಕ್ರೀನ್‌ಶಾಟ್‌ಗಳು ಮೇಕಪ್ ಕಲಾವಿದೆಯ ವೀಡಿಯೋವನ್ನು ಆರ್‌ಜಿ ಕರ್ ಆಸ್ಪತ್ರೆಯ ಕೊಲೆ ಸಂತ್ರಸ್ತೆಯ 'ಕೊನೆಯ ಕ್ಷಣಗಳು' ಎಂದು ತಪ್ಪಾಗಿ ಗುರುತಿಸುತ್ತವೆ.
(ಮೂಲ: ಸ್ಕ್ರೀನ್‌ಶಾಟ್‌ಗಳು/ಯೂಟ್ಯೂಬ್/ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ನಾವು ಏನು ಕಂಡುಕೊಂಡಿದ್ದೇವೆ?

ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್ ಫೇಸ್‌ಬುಕ್ ಪೋಷ್ಟ್‌ಗಳಿಗೆ ನಮ್ಮನ್ನು ಕರೆದೊಯ್ಯಿತು. ಅದು ಕ್ಲಿಪ್ ಅನ್ನು 'ಝೀನತ್ ರೆಹಮಾನ್' (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹೆಸರಿನ ಖಾತೆಗೆ ಕ್ರೆಡಿಟ್ ನೀಡಿವೆ.

ರಹಮಾನ್ ಅವರ ಫೇಸ್‌ಬುಕ್ ಖಾತೆಯು ಬಯೋದಲ್ಲಿ ಅವರನ್ನು ‘ಆರ್ಟಿಸ್ಟ್’ ಎಂದು ಪಟ್ಟಿ ಮಾಡಿದೆ ಆದರೆ ಸಾರ್ವಜನಿಕರಿಗೆ ಖಾತೆಯನ್ನು ಲಾಕ್ ಮಾಡಲಾಗಿದೆ; ಲಿಂಕ್ ಮಾಡಲಾದ ಇನ್‍ಸ್ಟಾಗ್ರಾಮ್ ಖಾತೆಯು ಸಹ ನಿಷ್ಕ್ರಿಯವಾಗಿದೆ.

ಆದರೆ, ಫೇಸ್‌ಬುಕ್‌ನಲ್ಲಿ ಕೀವರ್ಡ್ ಹುಡುಕಾಟವು ರೆಹಮಾನ್‌ರನ್ನು ಮೇಕಪ್ ಕಲಾವಿದೆ ಎಂದು ಗುರುತಿಸುವ ಸಾರ್ವಜನಿಕವಾಗಿ ಲಭ್ಯವಿರುವ ಪೋಷ್ಟ್‌ಗಳನ್ನು ಬಹಿರಂಗಪಡಿಸಿತು. ಒಂದು ಪೋಷ್ಟ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ವೈರಲ್ ವೀಡಿಯೋದಲ್ಲಿರುವ ಮಹಿಳೆಯನ್ನು ಹೋಲುವ ಫೋಟೋಗಳನ್ನು ಒಳಗೊಂಡಿತ್ತು, 'ಝೀನತ್' ಎಂದು ಬರೆಯಲಾಗಿದೆ. ರೆಹಮಾನ್ ಮೇಕಪ್ ಲುಕ್ ಕ್ರಿಯೇಟ್ ಮಾಡಿದ್ದಾರೆ ಎಂದು ಶೀರ್ಷಿಕೆ ಸೂಚಿಸಿದೆ.

ಮೇಕಪ್ ಕಲಾವಿದರಿಗೆ ಸಂಬಂಧಿಸಿದ ಫೇಸ್‌ಬುಕ್ ಗುಂಪುಗಳಲ್ಲಿ ಹೆಚ್ಚಿನ ಹುಡುಕಾಟವು ಸುಮಾರು ಎರಡು ಮಿಲಿಯನ್ ಸದಸ್ಯರನ್ನು ಹೊಂದಿರುವ 'ಮೇಕಪ್ ಕಲಾವಿದರು' ಗುಂಪಿಗೆ (ಇಲ್ಲಿ ಆರ್ಕೈವ್ ಮಾಡಲಾಗಿದೆ) ನಮ್ಮನ್ನು ಕರೆದೊಯ್ಯಿತು. ಮಾರ್ಚ್ ೧೧, ೨೦೨೦ ರಿಂದ ರೆಹಮಾನ್ ಈ ಗುಂಪಿನ ಸದಸ್ಯರಾಗಿದ್ದಾರೆ.

ಬಾಲಿವುಡ್-ಪ್ರೇರಿತ ಮೇಕ್ಅಪ್ ಲುಕ್‌ಗಳನ್ನು ಮತ್ತು ಗಾಯಗಳನ್ನು ಒಳಗೊಂಡಿರುವ ಹ್ಯಾಲೋವೀನ್-ವಿಷಯದ ರಚನೆಗಳನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪ್ರದರ್ಶಿಸುತ್ತಿರುವ ರೆಹಮಾನ್ ಅವರ ಬಹು ಫೋಟೋಗಳನ್ನು (ಇಲ್ಲಿ ಮತ್ತು ಇಲ್ಲಿ ಆರ್ಕೈವ್ ಮಾಡಲಾಗಿದೆ) ನಾವು ಕಂಡುಕೊಂಡಿದ್ದೇವೆ.

ಹೆಚ್ಚುವರಿಯಾಗಿ, ಲೈಂಗಿಕ ದೌರ್ಜನ್ಯದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನದ ಭಾಗವಾಗಿ ಮೂಗೇಟುಗಳನ್ನು ಅನುಕರಿಸುವ ಮೇಕ್ಅಪ್ ಅನ್ನು ಒಳಗೊಂಡಿರುವ ಮತ್ತೊಂದು ಫೋಟೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅಕ್ಟೋಬರ್ ೧, ೨೦೨೦ ರಂದು ಪೋಷ್ಟ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ.

ದೃಶ್ಯ ಹೋಲಿಕೆ

ಫೇಸ್‌ಬುಕ್ ಗುಂಪಿನಿಂದ ರೆಹಮಾನ್‌ನ ಚಿತ್ರಗಳೊಂದಿಗೆ ವೈರಲ್ ವೀಡಿಯೋದಲ್ಲಿರುವ ಮಹಿಳೆಯ ದೃಶ್ಯ ಹೋಲಿಕೆ ಅವರು ಒಂದೇ ವ್ಯಕ್ತಿ ಎಂದು ಸೂಚಿಸುತ್ತದೆ.


ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್‌ಗಳು ಮತ್ತು ಫೇಸ್‌ಬುಕ್ ಗುಂಪಿನಲ್ಲಿ ಪೋಷ್ಟ್ ಮಾಡಿದ ರೆಹಮಾನ್ ಅವರ ಚಿತ್ರಗಳ ನಡುವಿನ ಹೋಲಿಕೆ. (ಮೂಲ: ಸ್ಕ್ರೀನ್‌ಶಾಟ್‌ಗಳು/ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಕೋಲ್ಕತ್ತಾ ಮೂಲದ ಮಹಿಳಾ ಸಬಲೀಕರಣ ಗುಂಪಿನ ಬ್ಯುಸಿಕ್ವೀನ್ಸ್‌ನ ಸಂಸ್ಥಾಪಕ ಅಟೂಫಾ ಖುಷ್ನೂದ್ ಅವರನ್ನು ಲಾಜಿಕಲಿ ಫ್ಯಾಕ್ಟ್ಸ್ ಸಂಪರ್ಕಿಸಿದೆ. ರೆಹಮಾನ್ ಅವರ ಸ್ನೇಹಿತ ಖುಷ್ನೂದ್ ಅವರು ಫೇಸ್‌ಬುಕ್‌ನಲ್ಲಿ ಪೋಷ್ಟ್ ಅನ್ನು ಅಪ್‌ಲೋಡ್ ಮಾಡಿದ್ದು, ರೆಹಮಾನ್ ಅವರ ಹೆಸರಿನ ಫಲಕವನ್ನು ಹಿಡಿದಿದ್ದಾರೆ. ವೈರಲ್ ವೀಡಿಯೋವು ಮೇಕಪ್ ಕಲಾವಿದೆ ರೆಹಮಾನ್ ಅವರನ್ನು ಚಿತ್ರಿಸುತ್ತದೆ ಮತ್ತು ಆರ್ಜಿ ಕರ್ ಆಸ್ಪತ್ರೆಯ ಕೊಲೆ ಸಂತ್ರಸ್ತೆಯನಲ್ಲ ಎಂದು ಅವರು ಖಚಿತಪಡಿಸಿದ್ದಾರೆ.

ಜೀನತ್ ಅವರು ನ್ಯಾಯಕ್ಕಾಗಿ ಕರೆಯಾಗಿ [ಆರ್‌ಜಿ ಕರ್ ಆಸ್ಪತ್ರೆ ಸಂತ್ರಸ್ತರು] ಅನುಭವಿಸಿದ ಸಂಕಟವನ್ನು ಮರು-ನಟಿಸಲು ಮತ್ತು ಹೈಲೈಟ್ ಮಾಡಲು ವೀಡಿಯೋವನ್ನು ರಚಿಸಿದ್ದಾರೆ. ಗೌರವ ಸಲ್ಲಿಸುವುದು ಮತ್ತು ಜಾಗೃತಿ ಮೂಡಿಸುವುದು ಮಾತ್ರ ಆಕೆಯ ಉದ್ದೇಶವಾಗಿತ್ತು. ಯಾರನ್ನೂ ದಾರಿ ತಪ್ಪಿಸುವ ಉದ್ದೇಶದಿಂದ ಆಕೆ ತನ್ನ ವೈಯಕ್ತಿಕ ಪ್ರೊಫೈಲ್‌ನಲ್ಲಿ ವೀಡಿಯೋವನ್ನು ಪೋಷ್ಟ್ ಮಾಡಿದ್ದಾಳೆ. ದುರದೃಷ್ಟವಶಾತ್, ಕೆಲವು ಸಾಮಾಜಿಕ ಮಾಧ್ಯಮ ಪುಟಗಳು ವೀಡಿಯೋವನ್ನು ಡೌನ್‌ಲೋಡ್ ಮಾಡಿ ತಪ್ಪುದಾರಿಗೆಳೆಯುವ ಶೀರ್ಷಿಕೆಗಳೊಂದಿಗೆ ಅದನ್ನು ಹಂಚಿಕೊಂಡಿವೆ, ಇದು ಗೊಂದಲಕ್ಕೆ ಕಾರಣವಾಯಿತು,” ಎಂದು ಖುಷ್ನೂದ್ ವಿವರಿಸಿದರು.

ವೈರಲ್ ವೀಡಿಯೋ ಕುರಿತು ಕಾಮೆಂಟ್ ಮಾಡಲು ಲಾಜಿಕಲಿ ಫ್ಯಾಕ್ಟ್ಸ್ ಕೂಡ ರೆಹಮಾನ್ ಅವರನ್ನು ಸಂಪರ್ಕಿಸಿದೆ. ಪ್ರತಿಕ್ರಿಯೆಯನ್ನು ಸ್ವೀಕರಿಸಿದ ನಂತರ ಈ ಫ್ಯಾಕ್ಟ್-ಚೆಕ್ ಅನ್ನು ನವೀಕರಿಸಲಾಗುತ್ತದೆ.

ಇದಲ್ಲದೆ, ಪ್ರಶ್ನೆಯಲ್ಲಿರುವ ಕ್ಲೈಮ್‌ನೊಂದಿಗೆ ಹೊಂದಾಣಿಕೆಯಾಗುವ ವೀಡಿಯೋವನ್ನು ಉಲ್ಲೇಖಿಸುವ ಯಾವುದೇ ವಿಶ್ವಾಸಾರ್ಹ ವರದಿಗಳು ಹೊರಬಂದಿಲ್ಲ.

ಆರ್ ಜಿ ಕರ್ ಆಸ್ಪತ್ರೆ ಕೊಲೆ ಪ್ರಕರಣ

ಮರಣೋತ್ತರ ಪರೀಕ್ಷೆಯ ಪ್ರಕಾರ, "ಕೆನ್ನೆ, ತುಟಿಗಳು, ಮೂಗು, ಕುತ್ತಿಗೆ, ತೋಳುಗಳು ಮತ್ತು ಮೊಣಕಾಲುಗಳ ಮೇಲೆ ಸವೆತಗಳು ಮತ್ತು ಸೂಕ್ಷ್ಮ ಪ್ರದೇಶಗಳಿಗೆ ಗಾಯಗಳೊಂದಿಗೆ" ಸಂತ್ರಸ್ತೆ ಅರೆ-ಬಟ್ಟೆಯ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ

ರಾಷ್ಟ್ರವ್ಯಾಪಿ ಪ್ರತಿಭಟನೆಗಳ ನಡುವೆ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಮುಂದಿನ ವಿಚಾರಣೆಯನ್ನು ಆಗಸ್ಟ್ ೨೨ ಕ್ಕೆ ನಿಗದಿಪಡಿಸಿದೆ. ಆ ಸಮಯದಲ್ಲಿ, ಸಿಬಿಐ ಮತ್ತು ಪಶ್ಚಿಮ ಬಂಗಾಳ ಸರ್ಕಾರವು ತಮ್ಮ ವರದಿಗಳನ್ನು ಸಲ್ಲಿಸುವ ನಿರೀಕ್ಷೆಯಿದೆ.

ಹೈಕೋರ್ಟ್ ನಿರ್ದೇಶನದ ನಂತರ, ಸಿಬಿಐ ಕೋಲ್ಕತ್ತಾ ಪೊಲೀಸರಿಂದ ಪ್ರಕರಣದ ಜವಾಬ್ದಾರಿಯನ್ನು ವಹಿಸಿಕೊಂಡಿದೆ ಮತ್ತು ಮೂಲಗಳ ಪ್ರಕಾರ ಆರೋಪಿ ಸಂಜೋಯ್ ರಾಯ್‌ಗೆ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಅನುಮತಿ ಪಡೆದಿದೆ ಎಂದು ವರದಿಯಾಗಿದೆ.

ಸಂತ್ರಸ್ತೆಯ ಪೋಷಕರು ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನಗಳ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಪ್ರಕರಣವನ್ನು ನಿರ್ವಹಿಸುತ್ತಿರುವುದನ್ನು ಟೀಕಿಸಿದ್ದಾರೆ.

ಇದರ ನಡುವೆ, ವೈದ್ಯರು ಸತತ ಹತ್ತನೇ ದಿನವೂ ತಮ್ಮ ಮುಷ್ಕರವನ್ನು ಮುಂದುವರೆಸಿರುವುದರಿಂದ ದೇಶಾದ್ಯಂತ ಆರೋಗ್ಯ ಸೇವೆಗಳು ಪರಿಣಾಮ ಬೀರಿವೆ.

ತೀರ್ಪು

ವೈರಲ್ ವೀಡಿಯೋ ವಾಸ್ತವವಾಗಿ ಮೇಕಪ್ ಕಲಾವಿದೆಯನ್ನು ಒಳಗೊಂಡಿದೆ ಮತ್ತು ಆರ್‌ಜಿ ಕರ್ ಆಸ್ಪತ್ರೆಯ ಕೊಲೆ ಸಂತ್ರಸ್ತೆಯ 'ಕೊನೆಯ ಕ್ಷಣಗಳನ್ನು' ಚಿತ್ರಿಸುವುದಿಲ್ಲ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ