ಮುಖಪುಟ ಅಂಬಾಲಾದಲ್ಲಿ ಜನರು ವ್ಯಕ್ತಿಯೊಬ್ಬನನ್ನು ಥಳಿಸುವ ಹಳೆಯ ವೀಡಿಯೋವನ್ನು ಕೋಮುವಾದದ ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ

ಅಂಬಾಲಾದಲ್ಲಿ ಜನರು ವ್ಯಕ್ತಿಯೊಬ್ಬನನ್ನು ಥಳಿಸುವ ಹಳೆಯ ವೀಡಿಯೋವನ್ನು ಕೋಮುವಾದದ ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ

ಮೂಲಕ: ವಿವೇಕ್ ಜೆ

ಜುಲೈ 4 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಅಂಬಾಲಾದಲ್ಲಿ ಜನರು ವ್ಯಕ್ತಿಯೊಬ್ಬನನ್ನು ಥಳಿಸುವ ಹಳೆಯ ವೀಡಿಯೋವನ್ನು ಕೋಮುವಾದದ ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಈ ವೀಡಿಯೋದಲ್ಲಿ ಲವ್ ಜಿಹಾದ್ ಕೋನವಿಲ್ಲ. ೨೦೨೦ ರಲ್ಲಿ ಹರಿಯಾಣದ ಅಂಬಾಲಾದಲ್ಲಿ ಶಾಲಾ ಬಾಲಕಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಹಿಂದೂ ವ್ಯಕ್ತಿಯನ್ನು ಥಳಿಸಲಾಗಿದೆ.

ಪ್ರಚೋದಕ ಎಚ್ಚರಿಕೆ: ಲೈಂಗಿಕ ಕಿರುಕುಳ

ಸಂದರ್ಭ
 

ಜನರು ವ್ಯಕ್ತಿಯೊಬ್ಬನನ್ನು ರಸ್ತೆಯಲ್ಲಿ ಅವನ ಬಟ್ಟೆ ಬಿಚ್ಚಿ ಥಳಿಸುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಅದಕ್ಕೆ ‘ಲವ್ ಜಿಹಾದ್’ ಎಂಬ ತಪ್ಪು ಹೇಳಿಕೆ ನೀಡಲಾಗುತ್ತಿದೆ. "#ಹಿಂದೂ ವಿನಂತೆ ನಟಿಸಿ ಪ್ರೀತಿಯಲ್ಲಿ ಬೀಳಿಸಿದ್ದು #ಮುಸ್ಲಿಂ ಯುವಕ ಎಂದು ಗೊತ್ತಾಗಿದ್ದರಿಂದ... ಬಹಿರಂಗವಾಗಿ ಬಟ್ಟೆಯನ್ನು ಬಿಚ್ಚಿಸಿ ಬೆತ್ತಲೆ ಮಾಡಿದ ಯುವತಿಯ ಕುಟುಂಬದವರು..." ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ವೀಡಿಯೋದಲ್ಲಿ, ಜನರು ವ್ಯಕ್ತಿಯನ್ನು ಹೊಡೆದು ವಿವಸ್ತ್ರಗೊಳಿಸುವುದನ್ನು ಕಾಣಬಹುದು. ಈ ವೀಡಿಯೋವನ್ನು ಹಿಂದಿ, ಕನ್ನಡ ಮೊದಲಾದ ಹಲವಾರು ಭಾಷೆಗಳಲ್ಲಿನ ಶೀರ್ಷಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ. ಲವ್ ಜಿಹಾದ್ ಒಂದು ಪಿತೂರಿ ಸಿದ್ಧಾಂತವಾಗಿದ್ದು, ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಪರಿವರ್ತಿಸುವ ಏಕೈಕ ಗುರಿಯೊಂದಿಗೆ ಸಂಬಂಧಗಳಿಗೆ ಮತ್ತು/ಅಥವಾ ಮದುವೆಗೆ ಸಿಲುಕಿಸುತ್ತಾರೆ ಎಂದು ಹೇಳುತ್ತದೆ.

ಆದರೆ ಈ ವೀಡಿಯೋ ತಪ್ಪಾದ ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ. ವೀಡಿಯೋ ಅಂಬಾಲಾ ನಗರದಲ್ಲಿ ೨೦೨೦ ರಲ್ಲಿ ನಡೆದ ಘಟನೆಯದ್ದು. ಆರೋಪಿ ಹಿಂದೂ ವ್ಯಕ್ತಿಯಾಗಿದ್ದು, ಶಾಲಾ ಬಾಲಕಿಯರಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಥಳಿಸಲಾಗಿತ್ತು.

ವಾಸ್ತವವಾಗಿ

ರಿವರ್ಸ್ ಇಮೇಜ್ ಸರ್ಚ್ ಮೂಲಕ, ವೀಡಿಯೋ ಹರಿಯಾಣದ ಅಂಬಾಲಾದಲ್ಲಿ ನಡೆದ ಘಟನೆಯದ್ದು ಎಂದು ನಾವು ಕಂಡುಕೊಂಡಿದ್ದೇವೆ. ಪ್ರಥಮ್ ತೆಹೆಲ್ಕಾ ನ್ಯೂಸ್ ಎಂಬ ಯೂಟ್ಯೂಬ್ ಚಾನೆಲ್ ಜನವರಿ ೨೦, ೨೦೨೦ ರಂದು ಇದೇ ವೀಡಿಯೋವನ್ನು ಹಂಚಿಕೊಂಡಿದೆ. ಸಾರ್ವಜನಿಕ ಮಾರುಕಟ್ಟೆಯಲ್ಲಿ ಪುರುಷನನ್ನು ವಿವಸ್ತ್ರಗೊಳಿಸಿ ಮಹಿಳೆಯರು ಥಳಿಸಿದ್ದಾರೆ ಎಂದು ಹಿಂದಿಯಲ್ಲಿ ಈ ವೀಡಿಯೋದ ಶೀರ್ಷಿಕೆ ಹೇಳುತ್ತದೆ.

ಅಂಬಾಲಾ ನ್ಯೂಸ್ ಹರಿಯಾಣದ ಯೂಟ್ಯೂಬ್ ಚಾನೆಲ್‌ನಲ್ಲೂ ಕೂಡ ಈ ವೈರಲ್ ವೀಡಿಯೋ ಕಂಡುಬಂದಿದೆ. ೧:೦೩ ನಿಮಿಷಗಳಲ್ಲಿ, ಅದೇ ವೈರಲ್ ವೀಡಿಯೋವನ್ನು ನೋಡಬಹುದು. ಆ ವ್ಯಕ್ತಿಯನ್ನು ಪವನ್ ಕುಮಾರ್ ಎಂದು ಗುರುತಿಸಲಾಗಿದೆ ಎಂದು ವೀಡಿಯೋದಲ್ಲಿ ಹೇಳಲಾಗಿದೆ.

ಈ ಯೂಟ್ಯೂಬ್ ವೀಡಿಯೋದಲ್ಲಿ, ಜಿತೇಂದ್ರ ಕುಮಾರ್ ಎಂಬ ವ್ಯಕ್ತಿ, ತನ್ನ ಮಗಳಿಗೆ ಕಿರುಕುಳ ನೀಡುತಿದ್ದಿದನ್ನು ಹಿಡಿದ ಶಾಲಾ ಬಾಲಕಿಯೊಬ್ಬಳ ತಾಯಿ ಆ ವ್ಯಕ್ತಿಯನ್ನು ವಿವಸ್ತ್ರಗೊಳಿಸಿದ್ದಾರೆ ಎಂದು ಹೇಳುವುದನ್ನು ಕೇಳಬಹುದು. ವೈರಲ್ ವೀಡಿಯೋದಲ್ಲಿ ವ್ಯಕ್ತಿಯನ್ನು ವಿವಸ್ತ್ರಗೊಳಿಸುತ್ತಿರುವುದಾಗಿ ಕಂಡುಬಂದ ಮಹಿಳೆಯೊಬ್ಬರು ಶಾಲಾ ಬಾಲಕಿಯ ತಾಯಿ ಎಂದು ಗುರುತಿಸಿಕೊಂಡಿದ್ದಾರೆ. ಒಬ್ಬ ವ್ಯಕ್ತಿ ತನ್ನ ಮಗಳು ಮತ್ತು ಶಾಲೆಗೆ ಹೋಗುತ್ತಿರುವ ಇನ್ನೊಬ್ಬ ಹುಡುಗಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು ಎಂದು ಮತ್ತು ಆತನ ಮೇಲೆ ಪೊಲೀಸ್ ದೂರು ದಾಖಲಿಸಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ. 

ಅಂಬಾಲಾ ಮಹಿಳಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸುನೀತಾ ಢಾಕಾ ಅವರು ಎಫ್‌ಐಆರ್ ದಾಖಲಿಸಲಾಗಿತ್ತು ಎಂದು ವೀಡಿಯೋದಲ್ಲಿ ಖಚಿತಪಡಿಸಿದ್ದಾರೆ.

ಲಾಜಿಕಲಿ ಫ್ಯಾಕ್ಟ್ಸ್ ಆರೋಪಿಯ ಧರ್ಮದ ಕುರಿತಾದ ಹೇಳಿಕೆಗಳ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಢಾಕಾ ಅವರನ್ನು ಸಂಪರ್ಕಿಸಿದಾಗ ಹೀಗೆ ಹೇಳಿದರು, “ಇದು ಸುಳ್ಳು. ಇಬ್ಬರೂ ಹಿಂದೂಗಳಾಗಿದ್ದರು, ಯಾರೂ ಮುಸ್ಲಿಮರಾಗಿರಲಿಲ್ಲ." ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಪ್ರಕರಣವಾಗಿರುವುದರಿಂದ ಪೊಲೀಸರು ಎಫ್‌ಐಆರ್ ಸಾರ್ವಜನಿಕಗೊಳಿಸಿಲ್ಲ.

ಜನವರಿ ೨೧, ೨೦೨೦ ರಂದು, ಬಿಸಿನೆಸ್ ಸ್ಟ್ಯಾಂಡರ್ಡ್ ಕೂಡ ಈ ಘಟನೆಯ ಬಗ್ಗೆ ವರದಿ ಮಾಡಿದೆ. ಢಾಕಾ ಅವರು ಆ ವ್ಯಕ್ತಿಯನ್ನು ಪವನ್ ಎಂದು ಗುರುತಿಸಿರುವುದನ್ನು ವರದಿ ಉಲ್ಲೇಖಿಸಿದೆ.

ತೀರ್ಪು

೨೦೨೦ ರ ವೈರಲ್ ವೀಡಿಯೋದಲ್ಲಿ ವಿವಸ್ತ್ರಗೊಳಿಸಲಾದ ವ್ಯಕ್ತಿ ಮುಸ್ಲಿಂ ಅಲ್ಲ. ಆರೋಪಿಗಳು ಮತ್ತು ಸಂತ್ರಸ್ತರು ಒಂದೇ ಸಮುದಾಯಕ್ಕೆ ಸೇರಿದವರು ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ