ಮುಖಪುಟ ಇಲ್ಲ, ವೈಎಸ್‌ಆರ್‌ಸಿಪಿ ಬೆಂಬಲಿಗರು ಚಂದ್ರಬಾಬು ನಾಯ್ಡು ಅವರ ಬಂಧನವನ್ನು ಸಂಭ್ರಮಿಸುತ್ತಿರುವುದನ್ನು ವೈರಲ್ ವೀಡಿಯೋ ತೋರಿಸುವಿದಿಲ್ಲ

ಇಲ್ಲ, ವೈಎಸ್‌ಆರ್‌ಸಿಪಿ ಬೆಂಬಲಿಗರು ಚಂದ್ರಬಾಬು ನಾಯ್ಡು ಅವರ ಬಂಧನವನ್ನು ಸಂಭ್ರಮಿಸುತ್ತಿರುವುದನ್ನು ವೈರಲ್ ವೀಡಿಯೋ ತೋರಿಸುವಿದಿಲ್ಲ

ಮೂಲಕ: ರೋಹಿತ್ ಗುಟ್ಟಾ

ಅಕ್ಟೋಬರ್ 30 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ವೈಎಸ್‌ಆರ್‌ಸಿಪಿ ಬೆಂಬಲಿಗರು ಚಂದ್ರಬಾಬು ನಾಯ್ಡು ಅವರ ಬಂಧನವನ್ನು ಸಂಭ್ರಮಿಸುತ್ತಿರುವುದನ್ನು ವೈರಲ್ ವೀಡಿಯೋ ತೋರಿಸುವಿದಿಲ್ಲ ವೈಎಸ್‌ಆರ್‌ಸಿಪಿ ಬೆಂಬಲಿಗರು ಚಂದ್ರಬಾಬು ನಾಯ್ಡು ಅವರ ನ್ಯಾಯಾಂಗ ಬಂಧನವನ್ನು ಆಚರಿಸುತ್ತಿದ್ದಾರೆ ಎಂದು ಹೇಳಿಕೊಳ್ಳುವ ಎಕ್ಸ್‌ನಲ್ಲಿ ಕಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಭಾರತೀಯ ನಟ ವಿಜಯ್ ಅಭಿಮಾನಿಗಳು ಅವರ ಇತ್ತೀಚಿನ ಚಿತ್ರದ ಬಿಡುಗಡೆಯನ್ನು ಸಂಭ್ರಮಿಸುತ್ತಿರುವುದನ್ನು ಈ ವೀಡಿಯೋ ತೋರಿಸುತ್ತದೆ. ಅದಕ್ಕೂ ಆಂಧ್ರಪ್ರದೇಶದ ಮಾಜಿ ಸಿಎಂಗೂ ಸಂಬಂಧವಿಲ್ಲ.

ನಿರೂಪಣೆ ಏನು?

ಎಕ್ಸ್‌ (ಹಿಂದೆ ಟ್ವಿಟ್ಟರ್) ನಲ್ಲಿ ಬಳಕೆದಾರರು ಕಳೆದ ವಾರ ಬ್ಲಾಕ್ ಅಂಡ್ ವೈಟ್ ವೀಡಿಯೋವನ್ನು ಹಂಚಿಕೊಂಡು ಇದು ಭಾರತದ ಆಂಧ್ರಪ್ರದೇಶದ ಆಡಳಿತ ಪಕ್ಷವಾದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಬೆಂಬಲಿಗರನ್ನು ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರ ಬಂಧನವನ್ನು ಆಚರಿಸುತ್ತಿರುವುದನ್ನು ತೋರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ವೈಎಸ್‌ಆರ್‌ಸಿಪಿ ಯ ಪ್ರತಿಸ್ಪರ್ಧಿ ಪಕ್ಷದ ಮುಖ್ಯಸ್ಥ ನಾಯ್ಡು ಅವರನ್ನು ಸೆಪ್ಟೆಂಬರ್ ೧೦ ರಂದು ಬಂಧಿಸಲಾಯಿತು ಮತ್ತು ಅವರ ಸರ್ಕಾರವು ೨೦೧೪ ಮತ್ತು ೨೦೧೯ ರ ನಡುವೆ ಜಾರಿಗೊಳಿಸಿದ ಕೌಶಲ್ಯ ಅಭಿವೃದ್ಧಿ ಯೋಜನೆಯಲ್ಲಿ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಹಾಗು ವಿವಿಧ ಆರೋಪಗಳ ಹಿನ್ನಲೆಯಲ್ಲಿ ಬಂಧಿಸಲಾಗಿದೆ. 

ಸಿನಿಮಾ ಹಾಲ್‌ನಂತೆ ಕಾಣುವ ರಸ್ತೆಯೊಂದರಲ್ಲಿ ಜನರ ಗುಂಪು ತೆಂಗಿನಕಾಯಿ ಒಡೆಯುತ್ತಿರುವುದನ್ನು ವೀಡಿಯೋ ತೋರಿಸುತ್ತದೆ ಹಾಗೂ ಸಂಭ್ರಮಾಚರಣೆಯಿಂದಾಗಿ ವಾಹನ ಸಂಚಾರ ಸ್ಥಗಿತಗೊಂಡಂತೆ ಕಾಣುತ್ತಿದೆ.  ಪ್ರಕಟಣೆಯ ಸಮಯದಲ್ಲಿ ವೀಡಿಯೋ (ಇಲ್ಲಿ ಆರ್ಕೈವ್ ಮಾಡಲಾಗಿದೆ) ೫೦,೦೦೦ ವೀಕ್ಷಣೆಗಳನ್ನು ಗಳಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ಕಂಡ ಪೋಷ್ಟ್ ನ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ವೈಎಸ್‌ಆರ್‌ಸಿಪಿ ಸದಸ್ಯರು ನಾಯ್ಡು ಅವರ ವಿಸ್ತೃತ ನ್ಯಾಯಾಂಗ ಬಂಧನವನ್ನು ಆಚರಿಸುತ್ತಿರುವುದನ್ನು ಈ ವೀಡಿಯೋ  ತೋರಿಸುವುದಿಲ್ಲ. 

ವಾಸ್ತವಾಂಶಗಳು

ರಸ್ತೆಯ ಬದಿಯಲ್ಲಿ ಜನಸಮೂಹಕ್ಕೆ ಎದುರಾಗಿರುವ ತಮಿಳಿನ ಪೋಸ್ಟರ್‌ಗಳನ್ನು ಅಂಟಿಸಿರುವುದನ್ನು ವೀಡಿಯೋ ತೋರಿಸುತ್ತದೆ. ಮತ್ತು ಜನರು ತೆಂಗಿನಕಾಯಿ  ಒಡೆಯುತ್ತಿರುವ ಸ್ಥಳದಲ್ಲಿ ಕಾಣುವ ಹೊರಗಿನ ಸಿನಿಮಾ ಹಾಲ್‌ನ ಹೆಸರನ್ನೂ ನೋಡಬಹುದು, ಅಲ್ಲಿ ಸಂಗೀತಾ ಥಿಯೇಟರ್ ಎಂದು ಬರೆಯಲಾಗಿದೆ.

ವೈರಲ್ ವೀಡಿಯೋದಲ್ಲಿ ಕಂಡ ಗುರುತುಗಳು. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್)

ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ಮತ್ತು ಗೂಗಲ್ ಸರ್ಚ್ ಮೂಲಕ, ಈ ವೀಡಿಯೋದ ಘಟನೆಗಳು ತಮಿಳುನಾಡಿನಲ್ಲಿ ಕಂಡುಬಂದಿದೆ ಎಂದು  ಉಲ್ಲೇಖಿಸುವ ವಿವಿಧ ವರದಿಗಳನ್ನು ನಾವು ಕಂಡುಕೊಂಡೆವು.

'ಸ್ಪಾರ್ಕ್ ಮೀಡಿಯಾ' ಹೆಸರಿನ ಎಕ್ಸ್‌ನ ಬಳಕೆದಾರರು ಅಕ್ಟೋಬರ್ ೧೯ ರಂದು ಮೂಲ  ವೀಡಿಯೋವನ್ನು ಕಲರ್ ನಲ್ಲಿ ಪೋಷ್ಟ್ ಮಾಡಿದ್ದಾರೆ ಮತ್ತು ಇದು ಭಾರತೀಯ ನಟ ವಿಜಯ್ (ಪ್ರಧಾನವಾಗಿ ತಮಿಳು ಚಲನಚಿತ್ರಗಳಲ್ಲಿ ನಟಿಸುವ ನಾಯಕ) ಅವರ ಇತ್ತೀಚಿನ ಚಿತ್ರ 'ಲಿಯೋ' ಬಿಡುಗಡೆಯಾದ ನಂತರ ಅಭಿಮಾನಿಗಳ ಸಂಭ್ರಮಾಚರಣೆಯನ್ನು ತೋರಿಸುತ್ತದೆ ಎಂದು ಸೂಚಿಸಲಾಗಿದೆ. ಬಳಕೆದಾರರು ಘಟನೆಯ ಸ್ಥಳವನ್ನು ತಮಿಳುನಾಡಿನ ಕೊಯಂಬತ್ತೂರು ಕರುಮತ್ತಂಪಟ್ಟಿ ಎಂದು ಗುರುತಿಸಿದ್ದಾರೆ.

ಎರಡೂ ವೀಡಿಯೋಗಳಲ್ಲಿ ಜನರು ತೆಂಗಿನಕಾಯಿಯನ್ನು ಒಡೆಯುವುದನ್ನು ನೋಡಬಹುದು, ಹೀಗಾಗಿ ಟ್ರಾಫಿಕ್- ಲಾರಿ, ಆಟೋರಿಕ್ಷಾ ಮತ್ತು ವಿಜಯ್ ಅವರ ಬ್ಯಾನರ್‌ಗಳನ್ನು ಕಾಣಬಹುದು. 

ವೈರಲ್ ಕ್ಲಿಪ್ ಮತ್ತು ಸ್ಪಾರ್ಕ್ ಮೀಡಿಯಾ ಮತ್ತು ಇತರರು ಹಂಚಿಕೊಂಡ ವೀಡಿಯೋದ ಹೋಲಿಕೆ.
(ಮೂಲ: ಎಕ್ಸ್‌/ಈಟಿವಿ ಭಾರತ್ ತಮಿಳು/ಸ್ಕ್ರೀನ್‌ಶಾಟ್‌ಗಳು)

ಈಟಿವಿ ಭಾರತ್ ತಮಿಳು ಕೊಯಂಬತ್ತೂರಿನಲ್ಲಿ ವಿಜಯ್ ಅಭಿಮಾನಿಗಳ ಸಂಭ್ರಮಾಚರಣೆಯನ್ನು ವೀಡಿಯೋ ತೋರಿಸುತ್ತದೆ ಎಂದು ವರದಿ ಮಾಡಿದೆ ಮತ್ತು ಅದೇ ವೀಡಿಯೋವನ್ನು ಹೊಂದಿದೆ. ನ್ಯೂಸ್ ೧೮ ಮತ್ತು ನ್ಯೂಸ್ ೨೪x೭ ತಮಿಳು ಕೂಡ ಘಟನೆಯ ಕುರಿತು ವರದಿ ಮಾಡಿ ವೈರಲ್ ಕ್ಲಿಪ್‌ನಿಂದ ಇದೇ ರೀತಿಯ ವಿವರಗಳು ಮತ್ತು ದೃಶ್ಯಗಳನ್ನು ಒಳಗೊಂಡಿದೆ. 

ಈ ವರದಿಗಳಲ್ಲಿ ಉಲ್ಲೇಖಿಸಲಾದ ಮಾಹಿತಿಯನ್ನು ಬಳಸಿಕೊಂಡು ನಾವು ಚಿತ್ರಮಂದಿರವನ್ನು ಗೂಗಲ್ ನಕ್ಷೆಗಳಲ್ಲಿ ಕಂಡುಹಿಡಿದೆವು. ಸಂಗೀತಾ ಥಿಯೇಟರ್ ಕೊಯಂಬತ್ತೂರು ಜಿಲ್ಲೆಯ ಸೋಮನೂರಿನ ಸಂಗೀತಾ-ಸವಿತಾ ರಂಗಮಂದಿರದ ಸಂಕೀರ್ಣದ ಭಾಗವಾಗಿದೆ. ಗೂಗಲ್ ಮ್ಯಾಪ್‌ನಲ್ಲಿ ನಾವು ಕಂಡ ನಕ್ಷೆಯಲ್ಲಿ ವೈರಲ್ ವೀಡಿಯೋದಲ್ಲಿ ಕಂಡ ವಿದ್ಯುತ್ ಕಂಬ, ನೀಲಿ ಬಣ್ಣದ ಕಟ್ಟಡವನ್ನು ಗುರುತಿಸಬಹುದು.

ಸ್ಪಾರ್ಕ್ ಮೀಡಿಯಾ ವೀಡಿಯೋ ಮತ್ತು ಗೂಗಲ್ ಮ್ಯಾಪ್ಸ್ ನಲ್ಲಿ ಕಾಣುವ ಸಂಗೀತಾ ಥಿಯೇಟರ್‌ನ ಚಿತ್ರದ ಹೋಲಿಕೆ. (ಮೂಲ: ಎಕ್ಸ್/ಗೂಗಲ್ ಚಿತ್ರಗಳು/ಸ್ಕ್ರೀನ್‌ಶಾಟ್)

ವೈರಲ್ ವೀಡಿಯೋ ಕೊಯಂಬತ್ತೂರಿನಲ್ಲಿ ವಿಜಯ್ ಅಭಿಮಾನಿಗಳ ಸಂಭ್ರಮಾಚರಣೆಯನ್ನು ತೋರಿಸುತ್ತದೆ ಎಂದು ಇದೆಲ್ಲವೂ ಸ್ಥಾಪಿಸುತ್ತದೆ.

ತೀರ್ಪು

ಚಲನಚಿತ್ರ ನಟ ವಿಜಯ್ ಅವರ ಅಭಿಮಾನಿಗಳು ಅವರ ಇತ್ತೀಚಿನ ಚಿತ್ರದ ಬಿಡುಗಡೆಯನ್ನು ಆಚರಿಸುತ್ತಿರುವ ವೀಡಿಯೋವನ್ನು, ವೈಎಸ್‌ಆರ್‌ಸಿಪಿ ಸದಸ್ಯರು ಚಂದ್ರಬಾಬು ನಾಯ್ಡು ಅವರ ನ್ಯಾಯಾಂಗ ಬಂಧನದವನ್ನು ಆಚರಿಸುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಆದ್ದರಿಂದ ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.  

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ