ಮುಖಪುಟ ಇಲ್ಲ, ಆಂಧ್ರದಲ್ಲಿ ವೈಎಸ್‌ಆರ್‌ಸಿಪಿ ನಾಯಕ 'ವಿದ್ಯುತ್ ಇಲಾಖೆ ಅಧಿಕಾರಿಯ' ಮೇಲೆ ಹಲ್ಲೆ ನಡೆಸುತ್ತಿರುವುದನ್ನು ವೀಡಿಯೋ ತೋರಿಸಲ್ಲ

ಇಲ್ಲ, ಆಂಧ್ರದಲ್ಲಿ ವೈಎಸ್‌ಆರ್‌ಸಿಪಿ ನಾಯಕ 'ವಿದ್ಯುತ್ ಇಲಾಖೆ ಅಧಿಕಾರಿಯ' ಮೇಲೆ ಹಲ್ಲೆ ನಡೆಸುತ್ತಿರುವುದನ್ನು ವೀಡಿಯೋ ತೋರಿಸಲ್ಲ

ಮೂಲಕ: ರಾಜೇಶ್ವರಿ ಪರಸ

ಜುಲೈ 24 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಆಂಧ್ರದಲ್ಲಿ ವೈಎಸ್‌ಆರ್‌ಸಿಪಿ ನಾಯಕ 'ವಿದ್ಯುತ್ ಇಲಾಖೆ ಅಧಿಕಾರಿಯ' ಮೇಲೆ ಹಲ್ಲೆ ನಡೆಸುತ್ತಿರುವುದನ್ನು ವೀಡಿಯೋ ತೋರಿಸಲ್ಲ ತೆಲಂಗಾಣದಲ್ಲಿ ವೈಎಸ್‌ಆರ್‌ಸಿಪಿ ನಾಯಕ ಪಿ ಕೊಂಡ ರೆಡ್ಡಿ ಮತ್ತು ಬೆಂಬಲಿಗರು ವಿದ್ಯುತ್ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಲಾಜಿಕಲಿ ಫ್ಯಾಕ್ಟ್ಸ್ ಎಫ್‌ಐಆರ್ ಅನ್ನು ಪರಿಶೀಲಿಸಿದ್ದು, ಘಟನೆ ನಡೆದಿರುವುದು ಆಂಧ್ರಪ್ರದೇಶದಲ್ಲಿ ಅಲ್ಲ, ತೆಲಂಗಾಣದಲ್ಲಿ ಎಂಬುದನ್ನು ದೃಢಪಡಿಸಿದೆ.

ಹೇಳಿಕೆ ಏನು?

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ೨೦ ಸೆಕೆಂಡ್‌ಗಳ ವೀಡಿಯೋ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ನಾಯಕ "ಕೊಂಡಾ ರೆಡ್ಡಿ" ಮತ್ತು ಅವರ ಬೆಂಬಲಿಗರು ವಿದ್ಯುತ್ ಇಲಾಖೆಯ ಅಧಿಕಾರಿಯ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ತೋರಿಸುತ್ತದೆ. ಕಳೆದ ನಾಲ್ಕು ತಿಂಗಳಿನಿಂದ ವಿದ್ಯುತ್ ಬಿಲ್ ಪಾವತಿಸದಿರುವುದನ್ನು ಅಧಿಕಾರಿ ಪ್ರಶ್ನಿಸಿದಾಗ ವಾಗ್ವಾದ ನಡೆದಿದೆ ಎಂದು ಆರೋಪಿಸಿರುವ ಪೋಷ್ಟ್ ಗಳು ವೀಡಿಯೋದೊಂದಿಗೆ ಇವೆ. 

ಬಿಳಿಯ ಬಟ್ಟೆ ತೊಟ್ಟ ಯುವಕನೊಬ್ಬ ಇನ್ನೊಬ್ಬ ವ್ಯಕ್ತಿಯನ್ನು ಹೊಡೆಯುತ್ತಿರುವಾಗ ಅದನ್ನು ನೋಡುತ್ತಿದ್ದ ಜನರು ಮಧ್ಯಪ್ರವೇಶಿಸಲು ಪ್ರಯತ್ನಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಒಂದು ಪೋಷ್ಟ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ೧೬೮,೦೦೦ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಇದೇ ರೀತಿಯ ಪೋಷ್ಟ್‌ಗಳ ಆರ್ಕೈವ್ ಅನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.


ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಕ್ಲೈಮ್‌ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ನಮ್ಮ ತನಿಖೆಯಿಂದ ಆರೋಪ ತಪ್ಪು ಎಂದು ತಿಳಿದುಬಂದಿದೆ. ಘಟನೆ ನಿಜವಾಗಿ ನಡೆದಿರುವುದು ಹೈದರಾಬಾದ್‌ನ ತೆಲಂಗಾಣದಲ್ಲಿ, ಆಂಧ್ರಪ್ರದೇಶದಲ್ಲಿ ಅಲ್ಲ ಮತ್ತು ವೈಎಸ್‌ಆರ್‌ಸಿಪಿ ನಾಯಕನನ್ನು ಒಳಗೊಂಡಿಲ್ಲ.

ನಾವು ಕಂಡುಕೊಂಡದ್ದು

ರಿವರ್ಸ್ ಇಮೇಜ್ ಮತ್ತು ಗೂಗಲ್ ಸರ್ಚ್ ಮೂಲಕ, ಜುಲೈ ೧೯, ೨೦೨೪ ರಂದು ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಸನತ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೈದರಾಬಾದ್‌ನ ಮೋತಿ ನಗರದಲ್ಲಿ ನಡೆದ ಘಟನೆಯನ್ನು ಚಿತ್ರಿಸುವ ದೃಶ್ಯಗಳನ್ನು ಗುರುತಿಸಲಾಗಿದೆ.

ಡೆಕ್ಕನ್ ಕ್ರಾನಿಕಲ್, ಟೈಮ್ಸ್ ಆಫ್ ಇಂಡಿಯಾ ಮತ್ತು ಪ್ರಾದೇಶಿಕ ಔಟ್‌ಲೆಟ್ ದಿಶಾ ಡೈಲಿ ಸುದ್ದಿ ವರದಿಗಳು ವೈರಲ್ ವೀಡಿಯೋದಲ್ಲಿರುವಂತೆಯೇ ಚಿತ್ರಗಳನ್ನು ಒಳಗೊಂಡಿವೆ.


ವೈರಲ್ ವೀಡಿಯೋ ಮತ್ತು ಡೆಕ್ಕನ್ ಕ್ರಾನಿಕಲ್ ವರದಿಯಿಂದ ಸ್ಕ್ರೀನ್‌ಶಾಟ್‌ಗಳ ಹೋಲಿಕೆ (ಮೂಲ: ಎಕ್ಸ್/ಡೆಕ್ಕನ್ ಕ್ರಾನಿಕಲ್)

ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಮೋತಿ ನಗರ ಪ್ರದೇಶದಲ್ಲಿ ೨೦ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಟಿ. ಮುರಳೀಧರ್ ರಾವ್ ಇಬ್ಬರು ವಿದ್ಯುತ್ ಇಲಾಖೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಮಿತಿಮೀರಿದ ವಿದ್ಯುತ್ ಬಿಲ್‌ಗಳನ್ನು ಪಾವತಿಸುವ ಸಂಬಂಧವಾಗಿ ಸಿಬ್ಬಂದಿ ರಾವ್ ಅವರ ನಿವಾಸಕ್ಕೆ ಭೇಟಿ ನೀಡಿದಾಗ ವಾಗ್ವಾದ ಪ್ರಾರಂಭವಾಯಿತು, ಇದು ಸೇವೆಯ ಸಂಪರ್ಕ ಕಡಿತಕ್ಕೆ ಕಾರಣವಾಯಿತು.

ಸನತ್ ನಗರ ಪೊಲೀಸ್ ಠಾಣೆಯ ಸಬ್-ಇನ್‌ಸ್ಪೆಕ್ಟರ್ ಕೆ. ಹರೀಶ್ ಅವರು ವಿವರಗಳನ್ನು ಲಾಜಿಕಲಿ ಫ್ಯಾಕ್ಟ್ಸ್ ಗೆ  ದೃಢಪಡಿಸಿದರು: “ಈ ಘಟನೆಯು ನಮ್ಮ ವ್ಯಾಪ್ತಿಯ ಮೋತಿ ನಗರದಲ್ಲಿ ಸಂಭವಿಸಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ವಿದ್ಯುತ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಆರೋಪಿ ವಿದ್ಯಾರ್ಥಿ. ಈ ಘಟನೆ ಆಂಧ್ರಪ್ರದೇಶಕ್ಕೆ ಸಂಬಂಧಿಸಿಲ್ಲ."

ತನಿಖೆ ನಡೆಯುತ್ತಿರುವುದರಿಂದ ಆರೋಪಿ ಅಥವಾ ಆತನ ಕುಟುಂಬದ ರಾಜಕೀಯ ಸಂಬಂಧಗಳ ಬಗ್ಗೆ ಪ್ರತಿಕ್ರಿಯಿಸಲು ಸಬ್ ಇನ್ಸ್‌ಪೆಕ್ಟರ್ ನಿರಾಕರಿಸಿದ್ದಾರೆ. 

ಸಿಬ್ಬಂದಿಯೊಬ್ಬರ ದೂರಿನ ಆಧಾರದ ಮೇಲೆ ಜುಲೈ ೧೮, ೨೦೨೪ ರಂದು ದಾಖಲಿಸಲಾದ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ನಾವು ಪರಿಶೀಲಿಸಿದ್ದೇವೆ. ಎಫ್ಐಆರ್ ವಿವರಗಳು ಹೀಗಿವೆ:

  • ಈ ಘಟನೆಯು ಜುಲೈ ೧೮, ೨೦೨೪ ರಂದು ಮಧ್ಯಾಹ್ನ ೧:೩೦ ರ ಸುಮಾರಿಗೆ ಸಂಭವಿಸಿದೆ. ಹೈದರಾಬಾದ್‌ನ ಮೋತಿ ನಗರದಲ್ಲಿ. 
  • ಲೈನ್ ಇನ್ಸ್‌ಪೆಕ್ಟರ್ ಎಚ್.ಶ್ರೀಕಾಂತ್ ಮತ್ತು ಮೀಟರ್ ರೀಡರ್ ಪಿ ಸಾಯಿ ಗಣೇಶ್ ಅವರು ಬಾಕಿ ಇರುವ ೬,೮೫೮  ರೂ ಗಳನ್ನು ಸಂಗ್ರಹಿಸಿ ಮತ್ತು ತೆರುವುಗೊಳಿಸಲು ವೆಂಕಟಸ್ವಾಮಿ ರಾವ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.
  • ಬಾಕಿ ಹಣ ಪಾವತಿಸದ ವಿಚಾರವಾಗಿ ವಾಗ್ವಾದ ನಡೆದು ವೆಂಕಟಸ್ವಾಮಿ ಅವರ ಪುತ್ರ ಹಲ್ಲೆ ನಡೆಸಿದ್ದು, ಸಾಯಿ ಗಣೇಶ್ ಮತ್ತು ಶ್ರೀಕಾಂತ್ ಎಂಬುವವರಿಗೆ ಗಾಯಗಳಾಗಿವೆ.

ಯಾವುದೇ ಅಧಿಕೃತ ವರದಿಗಳು ಘಟನೆ ವೈಎಸ್‌ಆರ್‌ಸಿಪಿ ನಾಯಕ ಕೊಂಡ ರೆಡ್ಡಿಗೆ ಸಂಬಂಧಿಸಿದೆ ಎಂದು ವರದಿ ಮಾಡಿಲ್ಲ.

ತೀರ್ಪು

ಹೈದರಾಬಾದ್‌ನಲ್ಲಿ ವಿದ್ಯಾರ್ಥಿ ಮತ್ತು ವಿದ್ಯುತ್ ಇಲಾಖೆ ಅಧಿಕಾರಿಗಳ ನಡುವಿನ ವಾಗ್ವಾದವನ್ನು ಚಿತ್ರಿಸುವ ವೀಡಿಯೋವನ್ನು ವೈಎಸ್‌ಆರ್‌ಸಿಪಿ ನಾಯಕ ಕೊಂಡ ರೆಡ್ಡಿ ಆಂಧ್ರಪ್ರದೇಶದಲ್ಲಿ ವಿದ್ಯುತ್ ಇಲಾಖೆ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಅಧಿಕೃತ ದಾಖಲೆಗಳು ಅಪರಾಧಿಯನ್ನು ತೆಲಂಗಾಣದ ವಿದ್ಯಾರ್ಥಿ ಎಂದು ಗುರುತಿಸುತ್ತದೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ