ಮೂಲಕ: ರೋಹಿತ್ ಗುಟ್ಟಾ
ಸೆಪ್ಟೆಂಬರ್ 14 2023
ಈ ಚಿತ್ರವನ್ನು ಮಾರ್ಫ್ ಮಾಡಲಾಗಿದೆ. ಮೂಲ ವರದಿಯು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಯನ್ನು ಬಂಧಿಸಿದ ವಿಧಾನವನ್ನು ಖಂಡಿಸಿ ಲೇಖನವನ್ನು ಬರೆದಿದೆ.
ಸಂದರ್ಭ
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ರಾಷ್ಟ್ರೀಯ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಅವರು ೨೦೧೪ ಮತ್ತು ೨೦೧೯ರ ನಡುವಿನ ಅವಧಿಯಲ್ಲಿ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದಾರೆ. ಸೆಪ್ಟೆಂಬರ್ ೧೦ರ ದಿ ಹಿಂದೂ ವರದಿಯ ಪ್ರಕಾರ ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನ್ಯಾಯಾಲಯವು ಅವರನ್ನು ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಇಲ್ಲಿನ ಹೇಳಿಕೆಯೇನು?
ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಫೋಟೋಗಳು ತೆಲುಗು ದೈನಿಕ ಈನಾಡುವಿನ ಮುಖಪುಟವನ್ನು ಹೊಂದಿದ್ದು, ರೂ. ೩೭೧ ಕೋಟಿ ಮೂಲ್ಯದ ಹಗರಣದ ಬಗ್ಗೆ ಪ್ರಶ್ನಿಸಿದಾಗ "ಅಜ್ಞಾನವನ್ನು ತೋರ್ಪಡಿಸಿದ ನಾಯ್ಡು ಅವರನ್ನು ಪೊಲೀಸರು ಬಂಧಿಸಿದ್ದಾರೆ, ಎಂದು ಹೇಳುತ್ತದೆ. ಹೀಗೆ ಹಂಚಿಕೊಂಡ ಚಿತ್ರವು, ಅಪರಾಧ ತನಿಖಾ ಇಲಾಖೆ (ಸಿಐಡಿ)ಯಾ ಕೈವಶ ಹಗರಣದಲ್ಲಿ ನಾಯ್ಡು ಅವರ ಆಪಾದಿತ ಪಾತ್ರಕ್ಕೆ ಸಂಬಂಧಿಸಿದ ಎಲ್ಲಾ ಪುರಾವೆಗಳನ್ನು ಹೊಂದಿದೆ ಎಂದು ಹೇಳುತ್ತದೆ.
ಫೇಸ್‌ಬುಕ್ ಬಳಕೆದಾರರೊಬ್ಬರು ಹೀಗೆ ಹೇಳುವ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ, “ದ್ರಾಮೋಜಿ ಸುದ್ದಿಯನ್ನು ಚೆನ್ನಾಗಿ ಸಾಗಿಸಿದರು. ನಿನ್ನೆಯಿಂದ ಪ್ಯಾಂಟ್ ಹಾಕಿಕೊಂಡು ಓಡಾಡುತ್ತಿದ್ದಾನೆ. ಮುಂದಿನ ಗುರಿ ಅವನೇ ಎಂದು ಅರ್ಥವಾಯಿತು. ಅವರು ಜಗನ್ ಗೆ ತುಂಬಾ ಹೆದರುತ್ತಾರೆ (ತೆಲುಗಿನಿಂದ ಅನುವಾದಿಸಲಾಗಿದೆ)." ಪೋಷ್ಟ್ ನ ಆರ್ಕೈವ್ ಅನ್ನು ಇಲ್ಲಿ ನೋಡಬಹುದು.
ಇಲ್ಲಿ, ‘ದ್ರಾಮೋಜಿ’ ಎಂಬುದು ಈನಾಡು ಪತ್ರಿಕೆ ಮತ್ತು ಈಟಿವಿ ಚಾನೆಲ್‌ಗಳ ಸಂಸ್ಥಾಪಕ ಮತ್ತು ಮಾಲೀಕರಾದ ಸಿ ರಾಮೋಜಿರಾವ್ ಅವರ ಅವಹೇಳನಕಾರಿ ಉಲ್ಲೇಖವಾಗಿದೆ. ಜಗನ್ ಎಂಬುದು ಪ್ರಸ್ತುತ ಆಂಧ್ರಪ್ರದೇಶದ ಮುಖ್ಯಮಂತ್ರಿ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ (YSRCP) ಅಧ್ಯಕ್ಷರಾದ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರನ್ನು ಉಲ್ಲೇಖಿಸುತ್ತದೆ.
ಫೇಸ್‌ಬುಕ್ ಮತ್ತು ವಾಟ್ಸ್ ಆಪ್ ನಲ್ಲಿ ಕಂಡುಬಂದ ಪೋಷ್ಟ್ ನ ಸ್ಕ್ರೀನ್‌ಶಾಟ್‌ಗಳು (ಮೂಲ: ಫೇಸ್‌ಬುಕ್/ವಾಟ್ಸ್ ಆಪ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)
ಈನಾಡು ಆಗಾಗ ಟಿಡಿಪಿ ಪರ ಮತ್ತು ವೈಎಸ್‌ಆರ್‌ಸಿಪಿ ವಿರೋಧಿ ಲೇಖನಗಳನ್ನು ಪ್ರಕಟಿಸುತ್ತಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಈ ಹಿಂದೆ ವರದಿ ಮಾಡಿದೆ. ನಾಯ್ಡು ಅವರು ತಮ್ಮ ತಪ್ಪನ್ನು ಸಾಬೀತುಪಡಿಸುವ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಟಿಡಿಪಿ ಪರ ಪತ್ರಿಕೆಯೂ ಹೇಳುತ್ತಿದೆ ಎಂದು ಈ ಪೋಷ್ಟ್ ಮೂಲಕ ತಿಳಿಸಲು ಸಾಮಾಜಿಕ ಮಾಧ್ಯಮ ಬಳಕೆದಾರರು ಉದ್ದೇಶಿಸಿದ್ದಾರೆ. ವೈರಲ್ ಚಿತ್ರದ ಈನಾಡು ಪತ್ರಿಕೆಯ ಲೇಖನದ ಶೀರ್ಷಿಕೆಯು "ಕೌಶಲ್ಯ ಹಗರಣದಲ್ಲಿ ಚಂದ್ರಬಾಬು ಬಂಧನ" ಎಂದು (ಕನ್ನಡಕೆ ಅನುವಾದಿಸಿದಾಗ) ಹೇಳುತ್ತದೆ. ಇದರ ಮುಖ್ಯ ಸೂಚನೆಗಳು ಹೀಗಿವೆ: “ಕೌಶಲ್ಯ ಅಭಿವೃದ್ಧಿಯ ಹೆಸರಿನಲ್ಲಿ ಹಣವನ್ನು ವಂಚಿಸಲಾಗಿದೆ”, “ಪೂರ್ಣ ಪುರಾವೆಗಳೊಂದಿಗೆ ಸಿಐಡಿ ಬಂಧಿಸಲಾಗಿದೆ” ಮತ್ತು “ಎಸ್‌ಐಟಿಯೊಂದಿಗೆ ಬಾಬು ಅಜ್ಞಾನವನ್ನು ತೋರಿಸುತ್ತಿದ್ದಾರೆ”.
ಆದರೆ, ಈನಾಡು ಅಂತಹ ಯಾವುದೇ ವರದಿಯನ್ನು ಪ್ರಕಟಿಸಿಲ್ಲ ಮತ್ತು ನಾಯ್ಡು ಅವರನ್ನು ಅಪರಾಧಿ ಎಂದು ಘೋಷಿಸಿಲ್ಲ. ಪೋಷ್ಟ್ ನಲ್ಲಿ ಬಳಸಲಾದ ಚಿತ್ರವನ್ನು ಮಾರ್ಫ್ ಮಾಡಲಾಗಿದೆ.
ನಾವು ಏನು ಕಂಡುಕೊಂಡಿದ್ದೇವೆ?
ಚಿತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಉದ್ದೇಶಿತ ಲೇಖನದಲ್ಲಿ ತೆಲುಗು ಭಾಷೆಯ ಬರಹಗಳಲ್ಲಿ ಅನೇಕ ತಪ್ಪುಗಳನ್ನು ಗುರುತಿಸಿದ್ದೇವೆ. ತೆಲುಗಿನಲ್ಲಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯ ಅಂಶಗಳ ವಿಭಾಗದಲ್ಲಿನ ಕಾಗುಣಿತ ಚಿತ್ರದಲ್ಲಿ ತಪ್ಪಾಗಿದೆ. ಅಂತೆಯೇ ಪ್ರಮುಖ ಅಂಶವೊಂದರಲ್ಲಿ ನಾಯ್ಡು ಅವರನ್ನು ಪೊಲೀಸರು ಕಸ್ಟಡಿಗೆ ಒಪ್ಪಿಸಿದ್ದಾರೆ ಎಂದು ಬರೆಯಲಾಗಿದೆ. ಆದಾಗ್ಯೂ, ನ್ಯಾಯಾಲಯವು ಆರೋಪಿಯನ್ನು ಕಸ್ಟಡಿಗೆ ಒಪ್ಪಿಸುತ್ತದೆ ಮತ್ತು ಈ ಪ್ರಕರಣದಲ್ಲಿ, ವಿಜಯವಾಡದ ಎಸಿಬಿ ನ್ಯಾಯಾಲಯವು ನಾಯ್ಡು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು, ಎಂದು ಬರೆಯಲಾಗಿದೆ. ಲೇಖನದ ಮುಖ್ಯ ಪಠ್ಯವೂ ಸುಸಂಬದ್ಧವಲ್ಲದ ವಾಕ್ಯಗಳಿಂದ ತುಂಬಿದೆ.
(ಮೂಲ: ಫೇಸ್ಬುಕ್/ವಾಟ್ಸಪ್ಪ್)
ನಾವು ಪತ್ರಿಕೆಯ ವಿವರಗಳಾದ ಆವೃತ್ತಿ, ದಿನಾಂಕ, ಪುಟಗಳ ಸಂಖ್ಯೆ ಮತ್ತು ಚಿತ್ರದ ಮೇಲಿನ ಬೆಲೆಯನ್ನು ಗಮನಿಸಿದ್ದೇವೆ. ವೈರಲ್ ಚಿತ್ರವು ಸೆಪ್ಟೆಂಬರ್ ೧೦ರ ವಿಜಯವಾಡ ಆವೃತ್ತಿಯನ್ನು ತೋರಿಸುತ್ತದೆ ಎಂದು ಹೇಳಿಕೊಂಡಿದೆ. ಪುಟಗಳ ಸಂಖ್ಯೆಯನ್ನು ೧೬ ಎಂದು ಪಟ್ಟಿ ಮಾಡಲಾಗಿದೆ ಮತ್ತು ಬೆಲೆ ರೂ. ೬.೫೦. ಅದೇ ದಿನ ಪತ್ರಿಕೆಯ ವಿಜಯವಾಡ ಆವೃತ್ತಿಯನ್ನು ಪರಿಶೀಲಿಸಿದಾಗ - ಸೆಪ್ಟೆಂಬರ್ ೧೦ ರ ದೈನಂದಿನ ಆವೃತ್ತಿಯ ಬೆಲೆ ರೂ. ೮, ಪುಟಗಳ ಸಂಖ್ಯೆ ೧೮+೨೮, ಅಂದರೆ ೪೬ ಪುಟಗಳು ಎಂದು ಕಂಡುಕೊಂಡಿದ್ದೇವೆ.
ಮೂಲ ಪತ್ರಿಕೆಯ ಈ-ಪೇಪರ್ ನಲ್ಲಿ ನಾಯ್ಡು ಅವರ ದೊಡ್ಡ ಚಿತ್ರ ಇರಲಿಲ್ಲ, ಆದರೆ ಒಂದು ಸಣ್ಣ ಛಾಯಾಚಿತ್ರವನ್ನು ಹೊಂದಿರುವ ಲೇಖನವನ್ನು ಹೊಂದಿತ್ತು. ಮೂಲ ಆವೃತ್ತಿಯು ಮೊದಲ ಪುಟವನ್ನು ಎರಡು ವಿಭಾಗಗಳಾಗಿ ವಿಂಗಡಿಸಿದೆ. ನಾಯ್ಡು ಅವರ ಬಂಧನ ಮತ್ತು ಮುಂದಿನ ಪ್ರತಿಭಟನೆಗಳ ಸುದ್ದಿಗಳ ಜೊತೆಗೆ, ಮೊದಲ ಪುಟವು ನವದೆಹಲಿಯಲ್ಲಿ ನಡೆದ ಜಿ೨೦ ಶೃಂಗಸಭೆಯ ಪ್ರಸಾರವನ್ನು ಸಹ ಹೊಂದಿತ್ತು.
ಸೆಪ್ಟೆಂಬರ್ ೧೦, ೨೦೨೩ ರಂದು ಪ್ರಕಟವಾದ ಈನಾಡು ಪತ್ರಿಕೆಯ ಮೊದಲ ಪುಟ. (ಮೂಲ: ಸ್ಕ್ರೀನ್‌ಶಾಟ್/ಈನಾಡು ಪತ್ರಿಕೆ)
ಮುಖಪುಟದ ಮೇಲಿನ ಸ್ಕ್ರೀನ್‌ಶಾಟ್‌ನಲ್ಲಿ ಕಾಣುವಂತೆ, ಮೂಲ ಸಂಪಾದನೆಯ ಎಡಭಾಗದಲ್ಲಿ "ಜಗನ್‌ನ ದುಃಖದ ಸಂತೋಷ (ತೆಲುಗಿನಿಂದ ಅನುವಾದಿಸಲಾಗಿದೆ)" ಎಂದು ಓದುವ ಶೀರ್ಷಿಕೆಯ ಲೇಖನವನ್ನು ಹೊಂದಿತ್ತು.
ಹಾಗೇ, ಬಲಭಾಗದಲ್ಲಿರುವ ಲೇಖನವು "ಕಾನೂನುರಹಿತ ಬಂಧನ (ತೆಲುಗಿನಿಂದ ಅನುವಾದಿಸಲಾಗಿದೆ)" ಎಂಬ ಶೀರ್ಷಿಕೆಯನ್ನು ಹೊಂದಿದೆ. ನೇರಳೆ ಬಣ್ಣದಲ್ಲಿರುವ ಉಪಶೀರ್ಷಿಕೆ, "ನೂರಾರು ಪೊಲೀಸ್ ಸಿಬ್ಬಂದಿಯಿಂದ ದಾಳಿ" ಎಂದು ಅನುವಾದಿಸುತ್ತದೆ. ನಾಯ್ಡು ಬಂಧನದಲ್ಲಿ ಪೋಲೀಸರ ಕೈವಾಡವಿದೆ ಎಂದು ವರದಿಯು ಆರೋಪಿಸಿದೆ. ಇನ್‌ಸೆಟ್‌ನಲ್ಲಿ ನಾಯ್ಡು ಅವರ ಚಿತ್ರ ಮತ್ತು ಜನರು ಸುತ್ತುವರೆದಿರುವ ಬೆಂಗಾವಲು ಪಡೆಯನ್ನು ಮುಖ್ಯ ಚಿತ್ರವಾಗಿ ಬಳಸಲಾಗಿದೆ. ಈನಾಡಿನ ಎಲ್ಲಾ ೨೯ ಆವೃತ್ತಿಗಳೂ ಕೂಡ ನಾಯ್ಡು ಅವರ ಬಂಧನವನ್ನು ಖಂಡಿಸುವ ಒಂದೇ ರೀತಿಯ ಮುಖ್ಯಾಂಶಗಳು ಮತ್ತು ಫೋಟೋಗಳನ್ನು ಹೊಂದಿದ್ದವು. ನಾಯ್ಡು ಅವರು ತಪ್ಪಿತಸ್ಥರೇ ಮತ್ತು ಅವರ ವಿರುದ್ಧ ತನಿಖಾ ತಂಡವು ಯಾವುದೇ ಪುರಾವೆಗಳನ್ನು ಹೊಂದಿದೆಯೇ ಎಂಬ ಬಗ್ಗೆ ಅದರಲ್ಲಿ ಯಾವುದೇ ಉಲ್ಲೇಖವಿಲ್ಲ.
ತೀರ್ಪು
ಕೌಶಲ್ಯಾಭಿವೃದ್ಧಿ ನಿಧಿ ಹಗರಣದಲ್ಲಿ ನಾಯ್ಡು ತಪ್ಪಿತಸ್ಥರೆಂದು ವರದಿಯನ್ನು ಪ್ರಕಟಿಸಲು ಈನಾಡು ಪತ್ರಿಕೆಯ ಮುಖಪುಟದ ಮೊರ್ಫ್ ಮಾಡಲಾದ ಚಿತ್ರವನ್ನು ಬಳಸಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.