ಮುಖಪುಟ ಇಲ್ಲ, ಆಂಧ್ರಪ್ರದೇಶದ ನವ ಸರ್ಕಾರವು ತಿರುಪತಿ ದೇವಸ್ಥಾನದ ಟಿಕೆಟ್ ಬೆಲೆಗಳನ್ನು ಕಡಿಮೆ ಮಾಡಿಲ್ಲ

ಇಲ್ಲ, ಆಂಧ್ರಪ್ರದೇಶದ ನವ ಸರ್ಕಾರವು ತಿರುಪತಿ ದೇವಸ್ಥಾನದ ಟಿಕೆಟ್ ಬೆಲೆಗಳನ್ನು ಕಡಿಮೆ ಮಾಡಿಲ್ಲ

ಮೂಲಕ: ರಾಜೇಶ್ವರಿ ಪರಸ

ಜೂನ್ 27 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಆಂಧ್ರಪ್ರದೇಶದ ನವ ಸರ್ಕಾರವು ತಿರುಪತಿ ದೇವಸ್ಥಾನದ ಟಿಕೆಟ್ ಬೆಲೆಗಳನ್ನು ಕಡಿಮೆ ಮಾಡಿಲ್ಲ ತಿರುಮಲದಲ್ಲಿ ವಿಶೇಷ ದರ್ಶನ ಟಿಕೆಟ್ ಮತ್ತು ಲಡ್ಡು ಬೆಲೆಗಳನ್ನು ಕಡಿಮೆ ಮಾಡಲಾಗಿದೆ ಎಂದು ಹೇಳುವ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್ / ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

'ವಿಶೇಷ ದರ್ಶನ' ಟಿಕೆಟ್‌ಗಳು ಮತ್ತು 'ಲಡ್ಡು ಪ್ರಸಾದ' ದರಗಳಲ್ಲಿ ಬದಲಾವಣೆ ಮಾಡಲಾಗಿಲ್ಲ. ದೇವಾಲಯದ ಆಡಳಿತ ಮಂಡಳಿಯು ವೈರಲ್ ಹೇಳಿಕೆಯನ್ನು ತಳ್ಳಿಹಾಕಿದೆ.

ಹಕ್ಕು ಏನು?

ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರತದ ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ದೇವಸ್ಥಾನದಲ್ಲಿ ವಿಶೇಷ ದರ್ಶನ (ವಿಗ್ರಹದ ವೀಕ್ಷಣೆ) ಮತ್ತು 'ಲಡ್ಡು ಪ್ರಸಾದ' (ದೇವರಿಗೆ ಅರ್ಪಿಸುವ ಮತ್ತು ಭಕ್ತರಿಗೆ ವಿತರಿಸುವ ಆಹಾರ) ಬೆಲೆಗಳನ್ನು ಕಡಿಮೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. 

ಹೊಸದಾಗಿ ಆಯ್ಕೆಯಾದ ತೆಲುಗು ದೇಶಂ ಪಕ್ಷ (ಟಿಡಿಪಿ)-ಜನಸೇನಾ ಪಕ್ಷ (ಜೆಎಸ್‌ಪಿ)-ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಬದಲಾವಣೆಯು ಸಂಭವಿಸಿದೆ ಎಂದು ಹೇಳಿಕೆಗಳು ಸೂಚಿಸುತ್ತವೆ. ವೈರಲ್ ಪೋಷ್ಟ್ ಗಳ ಪ್ರಕಾರ, ವಿಶೇಷ ದರ್ಶನದ ಬೆಲೆ ೩೦೦ ರಿಂದ ೨೦೦ ರೂ.ಗೆ ಮತ್ತು ಲಡ್ಡು ಪ್ರಸಾದದ ಬೆಲೆ ೫೦ ರಿಂದ ೨೫ ರೂ.ಗೆ ಕಡಿಮೆ ಮಾಡಲಾಗಿದೆ. ಈ ಪೋಷ್ಟ್ ಗಳ ಆರ್ಕೈವ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಅದ್ದರೆ, ಈ ಹೇಳಿಕೆ ತಪ್ಪು; ದೇವಸ್ಥಾನದಲ್ಲಿ ಬೆಲೆ ಇಳಿಕೆಯಾಗಿಲ್ಲ. ತಿರುಮಲ ಬೆಟ್ಟಗಳಲ್ಲಿ ನೆಲೆಗೊಂಡಿರುವ ತಿರುಪತಿ ದೇವಸ್ಥಾನವು ಪೂಜ್ಯ ಹಿಂದೂ ದೇವರಾದ ಭಗವಾನ್ ಬಾಲಾಜಿಗೆ ಸಮರ್ಪಿತವಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು
(ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ವಾಸ್ತವಾಂಶಗಳು ಇಲ್ಲಿವೆ

ದೇವಸ್ಥಾನದ ಆಡಳಿತವನ್ನು ನೋಡಿಕೊಳ್ಳುತ್ತಿರುವ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಯಿಂದ ಅಧಿಕೃತ ಪ್ರಕಟಣೆಗಳಿಗಾಗಿ ಆನ್‌ಲೈನ್‌ನಲ್ಲಿ ಪರಿಶೀಲಿಸಿದಾಗ, ಅವರ ವೆಬ್‌ಸೈಟ್‌ನಲ್ಲಿ ಅಂತಹ ಯಾವುದೇ ಸೂಚನೆಗಳು ಕಂಡುಬಂದಿಲ್ಲ.

ಡೆಕ್ಕನ್ ಕ್ರಾನಿಕಲ್‌ನ ಸುದ್ದಿ ವರದಿಯು ಟಿಟಿಡಿ ಬಿಡುಗಡೆ ಮಾಡಿದ ಹೇಳಿಕೆಯನ್ನು ಉಲ್ಲೇಖಿಸಿ ಬೆಲೆ ಇಳಿಕೆಯ ಊಹಾಪೋಹವನ್ನು "ನಕಲಿ ಸುದ್ದಿ" ಎಂದು ತಳ್ಳಿಹಾಕಿದೆ.

ಟಿಟಿಡಿಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೊರಡಿಸಿದ ಅಧಿಕೃತ ಹೇಳಿಕೆ, (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹೀಗಿದೆ: “ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನದ ೩೦೦ ರೂ. ವಿಶೇಷ ಪ್ರವೇಶ ದರ್ಶನ ಮತ್ತು ೫೦ ರೂ. ಲಡ್ಡು ಪ್ರಸಾದದ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ದೃಢಪಡಿಸಿದ ಟಿಟಿಡಿ, ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸುದ್ದಿಗಳನ್ನು ನಂಬಬೇಡಿ ಎಂದು ಭಕ್ತರನ್ನು ಒತ್ತಾಯಿಸಿದರು."

ಈ ಹೇಳಿಕೆಯನ್ನು ಟಿಟಿಡಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ (ಇಲ್ಲಿ ಆರ್ಕೈವ್ ಮಾಡಲಾಗಿದೆ). ಟಿಕೆಟ್ ದರಗಳು ರೂ ೩೦೦ ನಲ್ಲಿಯೇ ಇರುತ್ತವೆ ಮತ್ತು ಲಡ್ಡು ದರಗಳೂ ಸಹ ಬದಲಾಗಿಲ್ಲ. ಹಾಗು ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು  ಮಾಹಿತಿಯನ್ನು ನಂಬದಂತೆ ಎಚ್ಚರಿಕೆಯನ್ನು ನೀಡಿದೆ.

TTDevasthanams ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ:ಎಕ್ಸ್)

ನಾವು ಅಧಿಕೃತ ವೆಬ್‌ಸೈಟ್‌ನಲ್ಲಿ ಬೆಲೆಗಳನ್ನು ಪರಿಶೀಲಿಸಿದಾಗ, ವಿಶೇಷ ದರ್ಶನದ ಬೆಲೆ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪ್ರತಿ ಭಕ್ತನಿಗೆ ೩೦೦ ರೂಪಾಯಿಗಳು ಮತ್ತು ಈ ದರ್ಶನದ ಭಾಗವಾಗಿ, ಒಂದು ಲಡ್ಡುವನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ. ದೇವಸ್ಥಾನಕ್ಕೆ ಭೇಟಿ ನೀಡುವ ಇತರ ಭಕ್ತರು ಪ್ರಸಾದ ಕೌಂಟರ್‌ನಿಂದ ತಲಾ ೫೦ ರೂ.ಗೆ ಲಡ್ಡು ಖರೀದಿಸಬಹುದು ಎಂದು ಹೇಳಲಾಗಿದೆ. 

ಟಿಟಿಡಿ ವೆಬ್‌ಸೈಟ್ ಪ್ರಕಾರ ೨೦೦೯ ರ ಸೆಪ್ಟೆಂಬರ್ ೨೧ ರಂದು ಸೀಘ್ರ ದರ್ಶನ ಎಂದು ಕರೆಯಲ್ಪಡುವ ಈ ವಿಶೇಷ ಪ್ರವೇಶ ದರ್ಶನವನ್ನು ಪರಿಚಯಿಸಲಾಗಿತ್ತು. 

ತೀರ್ಪು

ಸಾಮಾಜಿಕ ಮಾಧ್ಯಮದ ಹೇಳಿಕೆಗಳಿಗೆ ವಿರುದ್ಧವಾಗಿ, ತಿರುಮಲದಲ್ಲಿರುವ ತಿರುಪತಿ ದೇವಸ್ಥಾನದಲ್ಲಿ ವಿಶೇಷ ದರ್ಶನ ಅಥವಾ ಲಡ್ಡು ಪ್ರಸಾದದ ಬೆಲೆಗಳನ್ನು ಕಡಿಮೆ ಮಾಡಲಾಗಿಲ್ಲ. ಟಿಟಿಡಿ ಈ ಹೇಳಿಕೆಗಳನ್ನು "ನಕಲಿ ಸುದ್ದಿ" ಎಂದು ಸ್ಪಷ್ಟವಾಗಿ ತಳ್ಳಿಹಾಕಿದೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here.  

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ