ಮುಖಪುಟ ೨೦೨೩ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂದು ಹೇಳುವ ಅಭಿಪ್ರಾಯ ಸಮೀಕ್ಷೆಯೊಂದರ ಫ್ಯಾಬ್ರಿಕೇಟೆಡ್ ಗ್ರಾಫಿಕ್ ಅನ್ನು ಹಂಚಿಕೊಳ್ಳಲಾಗಿದೆ

೨೦೨೩ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂದು ಹೇಳುವ ಅಭಿಪ್ರಾಯ ಸಮೀಕ್ಷೆಯೊಂದರ ಫ್ಯಾಬ್ರಿಕೇಟೆಡ್ ಗ್ರಾಫಿಕ್ ಅನ್ನು ಹಂಚಿಕೊಳ್ಳಲಾಗಿದೆ

ಮೂಲಕ: ಅಂಕಿತಾ ಕುಲಕರ್ಣಿ

ಆಗಸ್ಟ್ 4 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
೨೦೨೩ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂದು ಹೇಳುವ ಅಭಿಪ್ರಾಯ ಸಮೀಕ್ಷೆಯೊಂದರ ಫ್ಯಾಬ್ರಿಕೇಟೆಡ್ ಗ್ರಾಫಿಕ್ ಅನ್ನು ಹಂಚಿಕೊಳ್ಳಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು False

ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬಹುದು ಎಂದು ಊಹಿಸುವ ಎನ್‌ಡಿಟಿವಿ ಯ ವೈರಲ್ ಗ್ರಾಫಿಕ್ ಎಡಿಟ್ ಮಾಡಲಾಗಿದೆ.

ಸಂಧರ್ಭ
ಕರ್ನಾಟಕ ವಿಧಾನಸಭಾ ಚುನಾವಣೆ ಮೇ ೧೦ ರಂದು ಒಂದೇ ಹಂತದಲ್ಲಿ ಮತದಾನ ನೆಡೆಯಿತು. ಈ ಸಮಯದಲ್ಲಿ ಹಲವಾರು ಮಾಧ್ಯಮಗಳು ಮತ್ತು ಸಂಶೋಧನಾ ಸಂಸ್ಥೆಗಳು ರಾಜ್ಯದಲ್ಲಿ ಅಭಿಪ್ರಾಯ ಸಮೀಕ್ಷೆಗಳನ್ನು ಪ್ರಕಟಿಸಿವೆ. ಆದರೆ, ಈ ಸಮೀಕ್ಷೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡಲು ಬಳಸಿಕೊಳ್ಳಲಾಗುತ್ತಿದೆ.

ಅಭಿಪ್ರಾಯ ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳಿಕೊಳ್ಳಲು ಹಲವಾರು ಬಳಕೆದಾರರು ನ್ಯೂಸ್ ಚಾನೆಲ್ ಎನ್‌ಡಿಟಿವಿ ಯ ಗ್ರಾಫಿಕ್ ಅನ್ನು ಹಂಚಿಕೊಂಡಿದ್ದಾರೆ. ಎನ್‌ಡಿಟಿವಿ ಪೋಲ್ ಆಫ್ ಪೋಲ್ಸ್, ಎಬಿಪಿ ಸಿ-ವೋಟರ್ ಪೋಲ್, ಈ ದಿನ ಟಿವಿ೯ (TV9) ಕನ್ನಡ, ಸಿ ಡೈಲಿ ಟ್ರ್ಯಾಕರ್, ಲೋಕ ಪೋಲ್, ಆರ್‌ಎಸ್‌ಎಸ್ ಆಂತರಿಕ ಸಮೀಕ್ಷೆ ಮತ್ತು ರಾಜ್ಯ ಇಂಟೆಲಿಜೆನ್ಸ್ ಬ್ಯೂರೋ ಸೇರಿದಂತೆ ವಿವಿಧ ಅಭಿಪ್ರಾಯ ಸಮೀಕ್ಷೆಗಳ ಫಲಿತಾಂಶಗಳನ್ನು ಎನ್‌ಡಿಟಿವಿ ಗೆ ಅನುಸರಿಸುವ ಗ್ರಾಫಿಕ್ ನಲ್ಲಿ ನೋಡಬಹುದು. ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ, "ಬ್ರೇಕಿಂಗ್ ನ್ಯೂಸ್- ಕರ್ನಾಟಕ ಚುನಾವಣೆಗಳಲ್ಲಿ 40% ಆಯೋಗದ ಸರ್ಕಾರದ ವಿರುದ್ಧ ಭಾರಿ ವಿರೋಧಿ ಆಡಳಿತದಿಂದಾಗಿ ತಮ್ಮ ಅತಿದೊಡ್ಡ ಸೋಲಿನತ್ತ ನೋಡುತ್ತಿದೆ ಎಂದು ಹೆಚ್ಚಿನ ಅಭಿಪ್ರಾಯ ಸಮೀಕ್ಷೆಗಳು ಹೇಳುತ್ತಿವೆ. ಇಂದು, ಎನ್‌ಡಿಟಿವಿ ಪೋಲ್ ಆಫ್ ಪೋಲ್ಸ್ ಟ್ರ್ಯಾಕರ್ ಊಹಿಸುತ್ತದೆ ." ಪೋಷ್ಟ್ ೫೦,೦೦೦ ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ೭೭೯ ಲೈಕ್‌ಗಳನ್ನು ಹೊಂದಿದೆ.

ವಾಸ್ತವವಾಗಿ
ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಮುನ್ಸೂಚನೆ ನೀಡುವ ಯಾವುದೇ ಗ್ರಾಫಿಕ್ ಅನ್ನು ನಾವು ಪೋಷ್ಟ್ ಮಾಡಿಲ್ಲ ಎಂದು ಎನ್‌ಡಿಟಿವಿ ಸ್ಪಷ್ಟನೆ ನೀಡಿದೆ. ಮತದಾನದ ನಂತರ ಮೇ ೧೦ ರಂದು ಎನ್‌ಡಿಟಿವಿ ಎಕ್ಸಿಟ್ ಪೋಲ್‌ಗಳನ್ನು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ಹೇಳಿಕೆಯು, ವೈರಲ್ ಆದ ಗ್ರಾಫಿಕ್ ಎಡಿಟ್ ಮಾಡಲಾಗಿದೆ ಎಂದು ಸಾಬೀತುಪಡಿಸುತ್ತದೆ.

ವೈರಲ್ ಪೋಷ್ಟ್ ನಲ್ಲಿರುವ ಗ್ರಾಫಿಕ್ ಎಬಿಪಿ ಸಿ-ವೋಟರ್ ಪೋಲ್,ಈ ದಿನ, ಟಿವಿ9 ಕನ್ನಡ, ಸಿ ಡೈಲಿ ಟ್ರ್ಯಾಕರ್,ಲೋಕ್ ಪೋಲ್, ಆರ್‌ಎಸ್‌ಎಸ್ ಆಂತರಿಕ ಸಮೀಕ್ಷೆ ಮತ್ತು ರಾಜ್ಯ ಗುಪ್ತಚರ ಬ್ಯೂರೋದ ಅಭಿಪ್ರಾಯ ಸಮೀಕ್ಷೆಗಳ ಫಲಿತಾಂಶಗಳನ್ನು ಪಟ್ಟಿಮಾಡಿದೆ. ಅವರಲ್ಲಿ ಹೆಚ್ಚಿನವರು ಕಾಂಗ್ರೆಸ್ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದರೂ, ಗ್ರಾಫಿಕ್‌ನಲ್ಲಿ ಪ್ರಸ್ತುತಪಡಿಸಿದ ಸಂಖ್ಯೆಯಲ್ಲಿ ಹಲವಾರು ವ್ಯತ್ಯಾಸಗಳಿವೆ ಎಂದು ನಾವು ಕಂಡುಕೊಂಡಿದ್ದೇವೆ.

ಎಬಿಪಿ ಸಿ-ವೋಟರ್ ಪ್ರಕಾರ, ಕರ್ನಾಟಕದ ೨೨೪ ವಿಧಾನಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ ೧೦೭-೧೧೯ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ, ಆದರೆ ಬಿಜೆಪಿ ಮತ್ತು ಜೆಡಿಎಸ್ ಕ್ರಮವಾಗಿ ೭೪-೮೬ ಸ್ಥಾನಗಳನ್ನು ಮತ್ತು ೨೩-೩೫ ಸ್ಥಾನಗಳನ್ನು ಪಡೆಯಬಹುದು. ಉಳಿದ ಪಕ್ಷಗಳು ೦-೫ ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ. ಕಾಂಗ್ರೆಸ್ ೧೨೦-೧೩೧ ಸ್ಥಾನಗಳನ್ನು, ಬಿಜೆಪಿ ೬೧-೭೫ ಸ್ಥಾನಗಳನ್ನು, ಜೆಡಿಎಸ್ ೧೬-೨೬ ಸ್ಥಾನಗಳನ್ನು ಮತ್ತು ಇತರರು ೦-೫ ಸ್ಥಾನಗಳನ್ನು ಗೆಲ್ಲುತ್ತಾರೆ ಎಂದು ಎಬಿಪಿ ವರದಿ ಮಾಡಿದೆ ಎಂದು ವೈರಲ್ ಪೋಷ್ಟ್ ತಪ್ಪಾಗಿ ಹೇಳಿದೆ.

ಕಾಂಗ್ರೆಸ್ ೧೩೨-೧೪೦ ಸ್ಥಾನಗಳನ್ನು, ಬಿಜೆಪಿ ೫೭-೬೫ ಸ್ಥಾನಗಳನ್ನು ಮತ್ತು ಜೆಡಿಎಸ್ + ೧೯-೨೫ ಸ್ಥಾನಗಳನ್ನು ಗೆಲ್ಲಲಿದ್ದು, ಇತರರು ೧-೫ ಸ್ಥಾನಗಳನ್ನು ಗೆಲ್ಲುತ್ತಾರೆ ಎಂದು ಈಡಿನಾ ಸಮೀಕ್ಷೆಯು ಊಹಿಸಿದೆ. ವೈರಲ್ ಪೋಷ್ಟ್ ನಲ್ಲಿರುವ ಸಂಖ್ಯೆಗಳು 'ಇತರರು' ಹೊರತುಪಡಿಸಿ ಎಲ್ಲಾ ಪಕ್ಷಗಳಿಗೆ ಸರಿಯಾಗಿದೆ.

ಅದರಂತೆ, ಸಿ ಡೈಲಿ ಟ್ರಾಕರ್ ಪ್ರಕಾರ ಕಾಂಗ್ರೆಸ್ ೧೩೦-೧೫೭ ಸ್ಥಾನಗಳನ್ನು, ಬಿಜೆಪಿ ೩೭-೫೬, ಜೆಡಿಎಸ್ +೨೨-೩೪ ಮತ್ತು ಇತರ ಸ್ವತಂತ್ರ ಪಕ್ಷಗಳು ೦-೩ ಸ್ಥಾನಗಳನ್ನು ಗೆಲ್ಲಲಿವೆ. ಆದರೆ, ಸಿ ಡೈಲಿ ಟ್ರ್ಯಾಕರ್ ಡೇಟಾವು ಕಾಂಗ್ರೆಸ್ ೧೫೪ ಸ್ಥಾನಗಳನ್ನು, ಬಿಜೆಪಿ ೪೩ ಸ್ಥಾನಗಳನ್ನು, ಜೆಡಿಎಸ್ +೨೧ ಸ್ಥಾನಗಳನ್ನು ಮತ್ತು ಇತರರು ೬ ಸ್ಥಾನಗಳನ್ನು ಪಡೆಯುತ್ತದೆ ಎಂದು ವೈರಲ್ ಪೋಷ್ಟ್ ತಪ್ಪಾಗಿ ವರದಿ ಮಾಡಿದೆ.

ಆರ್‌ಎಸ್‌ಎಸ್ ಆಂತರಿಕ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆಲುವಿನ ಮುನ್ಸೂಚನೆ ನೀಡಿರುವುದನ್ನು ದೃಢಪಡಿಸುವ ಯಾವುದೇ ವರದಿಗಳು ನಮಗೆ ಕಂಡುಬಂದಿಲ್ಲ. ಲಾಜಿಕಲಿ ಫ್ಯಾಕ್ಟ್ಸ್ ಈ ಹಿಂದೆ ೨೦೨೩ ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಮುನ್ಸೂಚನೆ ನೀಡುವ ಆರ್‌ಎಸ್‌ಎಸ್ ಸಮೀಕ್ಷೆಯ ಬಗ್ಗೆ ಇದೇ ರೀತಿಯ ಹೇಳಿಕೆಯನ್ನು ಸುಳ್ಳು ಎಂದು ವರದಿಮಾಡಿದೆ. 

ರಾಜ್ಯ ಇಂಟೆಲಿಜೆನ್ಸ್ ದಳವು ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಮುನ್ಸೂಚನೆ ನೀಡುವ ಯಾವುದೇ ಅಭಿಪ್ರಾಯ ಸಮೀಕ್ಷೆ ನಡೆಸಿದೆ ಅಥವಾ ಪ್ರಕಟಿಸಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ವೈರಲ್ ಪೋಷ್ಟ್ ನಲ್ಲಿರುವ ಸಂಖ್ಯೆಗಳು ತಪ್ಪು.

ತೀರ್ಪು
ಎನ್‌ಡಿಟಿವಿ ಸೇರಿದಂತೆ ಹೆಚ್ಚಿನ ಮಾಧ್ಯಮಗಳು ಮತ್ತು ಸಂಶೋಧನಾ ಸಂಸ್ಥೆಗಳು ೨೦೨೩ ರ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗೆಲುವಿನ ಬಗ್ಗೆ ಮುನ್ಸೂಚನೆ ನೀಡಿದೆ ಎಂದು ಹೇಳುವ ಒಂದು ಎಡಿಟ್ ಮಾಡಲಾದ ಗ್ರಾಫಿಕ್ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಎನ್‌ಡಿಟಿವಿ ಈ ಗ್ರಾಫಿಕ್ ಅನ್ನು ಪೋಷ್ಟ್ ಮಾಡಿಲ್ಲ ಎಂದು ಹೇಳಿದೆ. ಇದಲ್ಲದೆ, ಅನೇಕ ಅಭಿಪ್ರಾಯ ಸಮೀಕ್ಷೆಗಳು ಕಾಂಗ್ರೆಸ್ ಗೆಲುವನ್ನು ಸೂಚಿಸಿವೆ ಎಂಬುದು ನಿಜವಾದರೂ, ವೈರಲ್ ಗ್ರಾಫಿಕ್‌ನಲ್ಲಿನ ಸಂಖ್ಯೆಗಳು ತಪ್ಪಾಗಿದೆ. ಆದರಿಂದ ಈ ಹೇಳಿಕೆಯು ತಪ್ಪು ಎಂದು ನಾವು ಗುರುತಿಸಿದ್ದೇವೆ.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ