ಮುಖಪುಟ ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ 'ಗೆಲ್ಲುವ ತಂಡ' ಎಂದು ಕರೆದಿರುವ ಕ್ಲಿಪ್ ಎಡಿಟ್ ಮಾಡಲಾಗಿದೆ

ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ 'ಗೆಲ್ಲುವ ತಂಡ' ಎಂದು ಕರೆದಿರುವ ಕ್ಲಿಪ್ ಎಡಿಟ್ ಮಾಡಲಾಗಿದೆ

ಮೂಲಕ: ರೋಹಿತ್ ಗುಟ್ಟಾ

ಮಾರ್ಚ್ 6 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ 'ಗೆಲ್ಲುವ ತಂಡ' ಎಂದು ಕರೆದಿರುವ ಕ್ಲಿಪ್ ಎಡಿಟ್ ಮಾಡಲಾಗಿದೆ ಮುಂಬರುವ ಆಂಧ್ರಪ್ರದೇಶ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಗೆಲ್ಲುವ ತಂಡವಾಗಿದೆ ಎಂದು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಹೇಳಿಕೊಳ್ಳುತ್ತಿರುವ ಸಾಮಾಜಿಕ ಮಾಧ್ಯಮ ಪೋಷ್ಟ್‌ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೀಡಿಯೋವನ್ನು ಎಡಿಟ್ ಮಾಡಲಾಗಿದೆ. ಮೂಲ ವೀಡಿಯೋದಲ್ಲಿ, ನಾಯ್ಡು ಅವರು ಟಿಡಿಪಿ-ಜೆಎಸ್‌ಪಿ ಮೈತ್ರಿಯನ್ನು "ಗೆಲ್ಲುವ ತಂಡ" ಎಂದು ಹೇಳುವುದನ್ನು ಕೇಳಬಹುದು.

ಹೇಳಿಕೆ ಏನು?

ದಕ್ಷಿಣ ಭಾರತದ ರಾಜ್ಯವಾದ ಆಂಧ್ರಪ್ರದೇಶ ತನ್ನ ಮುಂಬರುವ ಚುನಾವಣೆಗೆ ತಯಾರಿ ನಡೆಸುತ್ತಿದೆ. ಪ್ರಸ್ತುತ ಅಧಿಕಾರದಲ್ಲಿರುವ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷವು (ವೈಎಸ್‌ಆರ್‌ಸಿಪಿ) ಪ್ರಮುಖ ವಿರೋಧ ಪಕ್ಷವಾದ ತೆಲುಗು ದೇಶಂ ಪಕ್ಷದಿಂದ (ಟಿಡಿಪಿ) ಸ್ಪರ್ಧೆಯನ್ನು ಎದುರಿಸುತ್ತಿದೆ, ಇದು ಮತ್ತೊಂದು ವಿರೋಧ ಪಕ್ಷವಾದ ಜನ ಸೇನಾ ಪಕ್ಷ (ಜೆಎಸ್‌ಪಿ) ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಈ ಒಕ್ಕೂಟವು ಫೆಬ್ರವರಿ ೨೮, ೨೦೨೪ ರಂದು ಆಂಧ್ರಪ್ರದೇಶದ ತಾಡೆಪಲ್ಲಿಗುಡೆಮ್‌ನಲ್ಲಿ 'ಜೆಂಡಾ' (ಧ್ವಜ) ಹೆಸರಿನ ಸಾರ್ವಜನಿಕ ಸಭೆಯೊಂದಿಗೆ ತಮ್ಮ ಜಂಟಿ ಪ್ರಚಾರವನ್ನು ಪ್ರಾರಂಭಿಸಿತು.

ಈ ನಡುವೆ ಆಂಧ್ರದ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ನಾಯಕ ಎನ್. ಚಂದ್ರಬಾಬು ನಾಯ್ಡು ಅವರ ೨೭ ಸೆಕೆಂಡ್‌ಗಳ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕ್ಲಿಪ್ ವೈಎಸ್‌ಆರ್‌ಸಿಪಿ ಯನ್ನು 'ಗೆಲ್ಲುವ ತಂಡ' ಮತ್ತು ಟಿಡಿಪಿ-ಜೆಎಸ್‌ಪಿ ಮೈತ್ರಿಯನ್ನು 'ಮೋಸ ಮಾಡುವ ತಂಡ' ಎಂದು ನಾಯ್ಡು ಉಲ್ಲೇಖಿಸುವುದನ್ನು ತೋರಿಸುತ್ತದೆ. ಈ ಹೇಳಿಕೆಗಳನ್ನು ಪ್ರಸ್ತುತ ವೈಎಸ್‌ಆರ್‌ಸಿಪಿಗೆ ಬೆಂಬಲವಾಗಿ ಸಾಮಾಜಿಕ ಮಾಧ್ಯಮ ಖಾತೆಗಳು,  'ವೈಎಸ್‌ಎಸ್‌ಜಗನ್‌ಅಗೇನ್' ಮತ್ತು 'ಟಿಡಿಪಿಜೆಎಸ್‌ಪಿ ಕೊಲ್ಯಾಪ್ಸ್' ನಂತಹ ಹ್ಯಾಶ್‌ಟ್ಯಾಗ್‌ಗಳ ಜೊತೆಗೆ ಪ್ರಚಾರ ಮಾಡಲಾಗಿದೆ. ಅಂತಹ ಪೋಷ್ಟ್ ಗಳ ಆರ್ಕೈವ್‌ಗಳಿಗೆ ಲಿಂಕ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ವೈರಲ್ ಸಾಮಾಜಿಕ ಮಾಧ್ಯಮ ಪೋಷ್ಟ‌ನ ಸ್ಕ್ರೀನ್‌ಶಾಟ್ (ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಗೆಲ್ಲುವ ತಂಡ ಎಂದು ಹೇಳುತ್ತಿರುವಂತೆ ವೀಡಿಯೋ ಎಡಿಟ್ ಮಾಡಲಾಗಿದೆ.

ನಾವು ಏನು ಕಂಡುಕೊಂಡಿದ್ದೇವೆ?

ಸೂಕ್ಷ್ಮವಾಗಿ ಪರಿಶೀಲಿಸಿದಾಗ, ವೀಡಿಯೋವು ಆಡಿಯೋ ಮತ್ತು ದೃಶ್ಯ ಅಂಶಗಳ ನಡುವಿನ ವ್ಯತ್ಯಾಸಗಳನ್ನು ಬಹಿರಂಗಪಡಿಸುತ್ತದೆ, ನಿರ್ದಿಷ್ಟವಾಗಿ ೦:೦೭ ಮತ್ತು ೦:೨೩ ಸಮಯಸ್ಟ್ಯಾಂಪ್‌ಗಳಲ್ಲಿ, ನಾಯ್ಡು ಅವರ ತುಟಿ ಚಲನೆಗಳು "ಗೆಲ್ಲುವುದು" ಎಂಬ ಪದದೊಂದಿಗೆ ಹೊಂದಿಕೆಯಾಗುವುದಿಲ್ಲ. ಈ ವ್ಯತ್ಯಾಸವು ವೀಡಿಯೋವನ್ನು ಎಡಿಟ್ ಮಾಡಿರಬಹುದು ಎಂದು ಸೂಚಿಸುತ್ತದೆ.

ಹೆಚ್ಚಿನ ತನಿಖೆಯು ಫೆಬ್ರವರಿ ೨೮, ೨೦೨೪ ರಂದು ತಾಡೆಪಲ್ಲಿಗುಡೆಮ್‌ನಲ್ಲಿ ಟಿಡಿಪಿ ಮತ್ತು ಜೆಎಸ್‌ಪಿ ಆಯೋಜಿಸಿದ್ದ ಜಂಟಿ ಸಾರ್ವಜನಿಕ ಸಭೆಯಲ್ಲಿ ನಾಯ್ಡು ಅವರ ಭಾಷಣದ ಮೂಲ ವೀಡಿಯೋವನ್ನು ಪತ್ತೆಹಚ್ಚಲು ಕಾರಣವಾಯಿತು. ಈ ಭಾಷಣವನ್ನು ತೆಲುಗು ಸುದ್ದಿ ವಾಹಿನಿಗಳಾದ ಎಬಿಎನ್ ಆಂಧ್ರಜ್ಯೋತಿ ಮತ್ತು ಟಿವಿ ೫ ನ್ಯೂಸ್ ನೇರಪ್ರಸಾರ ಮಾಡಿದೆ. 

ವೈರಲ್ ವೀಡಿಯೋ ಎರಡು ಭಾಗಗಳನ್ನು ಹೊಂದಿದೆ. ವೀಡಿಯೋದ ಮೊದಲ ಭಾಗವನ್ನು ಎಬಿಎನ್ ಲೈವ್ ಟೆಲಿಕಾಸ್ಟ್‌ನ ೨:೨೦:೧೫ ರಿಂದ ೨:೨೦:೨೫ ಸಮಯದಲ್ಲಿ ನೋಡಬಹುದು. ಇಲ್ಲಿ, ನಾಯ್ಡು ಹೇಳುತ್ತಾರೆ, “ಆದ್ದರಿಂದ, ಟಿಡಿಪಿ-ಜನಸೇನೆ ಗೆಲ್ಲುವ ತಂಡವಾಗಿದೆ. ವೈಎಸ್ಆರ್ ಕಾಂಗ್ರೆಸ್ ಪಕ್ಷ ವಂಚನೆಯ ತಂಡವಾಗಿದೆ. ಅಲ್ಲವೇ?" ಅದೇ ಟಿವಿ ೫ ನ್ಯೂಸ್ ಲೈವ್ ಟೆಲಿಕಾಸ್ಟ್‌ನ ೩:೫೯:೨೨ ರಿಂದ ೩:೫೯:೩೨ ಸಮಯದಲ್ಲಿ ನೋಡಬಹುದು.ವೈಎಸ್‌ಆರ್‌ಸಿಪಿ ಗೆಲ್ಲುವ ತಂಡ ಎಂದು ನಾಯ್ಡು ಹೇಳುತ್ತಿದ್ದಾರೆ ಎಂದು ತೋರಲು ‘ಗೆಲ್ಲುವ ತಂಡ’ ಮತ್ತು ‘ಮೋಸ ಮಾಡುವ ತಂಡ’ ಎಂಬ ಪದಗಳನ್ನು ತಿರುವಿ ಹಾಕಲಾಗಿದೆ. 

ಎಬಿಎನ್ ಲೈವ್ ಟೆಲಿಕಾಸ್ಟ್‌ನ ೨:೨೦:೨೬ ರಿಂದ ೨:೨೦:೩೮ ಟೈಮ್‌ಸ್ಟ್ಯಾಂಪ್‌ನಲ್ಲಿ ಎರಡನೇ ಭಾಗವನ್ನು ನೋಡಬಹುದು. ಮೂಲ ವೀಡಿಯೋದಲ್ಲಿ, ನಾಯ್ಡು ಹೇಳುತ್ತಾರೆ, “ಜೋರಾಗಿ ಹೇಳು... ಟಿಡಿಪಿ-ಜನಸೇನೆ ಗೆಲ್ಲುವ ತಂಡ. ವೈಎಸ್ಆರ್ ಕಾಂಗ್ರೆಸ್ ಪಕ್ಷ ವಂಚನೆಯ ತಂಡವಾಗಿದೆ. ಅದೇ ಟಿವಿ ೫ ನ್ಯೂಸ್ ಲೈವ್ ಟೆಲಿಕಾಸ್ಟ್‌ನ ೩:೫೯:೨೩-೩:೫೯:೩೫ ಸಮಯದಲ್ಲಿ ನೋಡಬಹುದು.

ಮುಂಬರುವ ಆಂಧ್ರಪ್ರದೇಶ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿಯನ್ನು "ಗೆಲ್ಲುವ ತಂಡ" ಎಂದು ನಾಯ್ಡು ಅವರು ಅನುಮೋದಿಸಿದ್ದಾರೆ ಎಂದು ತಪ್ಪಾಗಿ ಚಿತ್ರಿಸಲು ವೈರಲ್ ವೀಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ಈ ಸಂಶೋಧನೆಗಳು ಸ್ಪಷ್ಟಪಡಿಸುತ್ತವೆ.

ತೀರ್ಪು

ಮುಂಬರುವ ಆಂಧ್ರಪ್ರದೇಶ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿಯನ್ನು 'ಗೆಲ್ಲುವ ತಂಡ' ಎಂದು ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ ಎಂದು ಹೇಳಲು ಎಡಿಟ್ ಮಾಡಿದ ವೀಡಿಯೋ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ