ಮುಖಪುಟ ಮಾಜಿ ಪ್ರಧಾನಿ ನರಸಿಂಹರಾವ್ ಅವರ ಭಾರತರತ್ನ ಪ್ರಶಸ್ತಿ ಘೋಷಿಸಿದಾಗ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಚಪ್ಪಾಳೆಯನ್ನು ತಟ್ಟಿದ್ದಾರೆ

ಮಾಜಿ ಪ್ರಧಾನಿ ನರಸಿಂಹರಾವ್ ಅವರ ಭಾರತರತ್ನ ಪ್ರಶಸ್ತಿ ಘೋಷಿಸಿದಾಗ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಚಪ್ಪಾಳೆಯನ್ನು ತಟ್ಟಿದ್ದಾರೆ

ಮೂಲಕ: ರಾಹುಲ್ ಅಧಿಕಾರಿ

ಏಪ್ರಿಲ್ 4 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಮಾಜಿ ಪ್ರಧಾನಿ ನರಸಿಂಹರಾವ್ ಅವರ ಭಾರತರತ್ನ ಪ್ರಶಸ್ತಿ ಘೋಷಿಸಿದಾಗ ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಚಪ್ಪಾಳೆಯನ್ನು ತಟ್ಟಿದ್ದಾರೆ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಪ್ರಶಸ್ತಿ ಪ್ರದಾನ ಸಮಾರಂಭದ ದೃಶ್ಯಾವಳಿಗಳು ರಾವ್ ಅವರ ಹೆಸರನ್ನು ಘೋಷಿಸಿದಾಗ ಖರ್ಗೆ ಚಪ್ಪಾಳೆ ತಟ್ಟುವುದನ್ನು ತೋರಿಸುತ್ತದೆ.

ಹೇಳಿಕೆ ಏನು?
ಭಾರತದ ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಅವರಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ನೀಡಿ ಗೌರವಿಸಲಾಯಿತು, ಮಾರ್ಚ್ ೩೦ ರಂದು ಅವರ ಪುತ್ರ ಪಿವಿ ಪ್ರಭಾಕರ್ ರಾವ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.

ಇದಾದ ಕೆಲವೇ ದಿನಗಳಲ್ಲಿ, ಸಮಾರಂಭದ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ, ತಮ್ಮ ತಂದೆಯ ಪರವಾಗಿ ಪ್ರಭಾಕರ್ ರಾವ್ ಪ್ರಶಸ್ತಿ ಸ್ವೀಕರಿಸಿದಾಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು,  ಚಪ್ಪಾಳೆ ತಟ್ಟಲಿಲ್ಲ ಎಂದು ಹೇಳಲಾಗುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಮುಂದಿನ ಸಾಲಿನಲ್ಲಿ ಕುಳಿತಿದ್ದ ಗಣ್ಯರು ಚಪ್ಪಾಳೆ ತಟ್ಟುತ್ತಿರುವುದು ಕಂಡುಬಂದರೆ, ಖರ್ಗೆ ಅವರು ಚಪ್ಪಾಳೆ ತಟ್ಟುತ್ತಿಲ್ಲ ಎಂದು ಪೋಷ್ಟ್ ಹೇಳಿದೆ. ಮುರ್ಮು ಅವರಿಂದ ಪ್ರಭಾಕರ್ ರಾವ್ ಅವರು ಪ್ರಶಸ್ತಿ ಸ್ವೀಕರಿಸುತ್ತಿರುವುದನ್ನು ವೈರಲ್ ಚಿತ್ರ ತೋರಿಸುತ್ತದೆ.

ಹಲವಾರು ಬಳಕೆದಾರರು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಚಿತ್ರವನ್ನು ಹಂಚಿಕೊಂಡಿದ್ದು ಒಬ್ಬ ಬಳಕೆದಾರ ಹೀಗೆ ಬರೆದಿದ್ದಾರೆ, "ಪಿವಿ ನರಸಿಂಹರಾವ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡುವಾಗ ಮೊದಲ ಸಾಲಿನಲ್ಲಿ ಒಬ್ಬ ವ್ಯಕ್ತಿ ಮಾತ್ರ ಚಪ್ಪಾಳೆ ತಟ್ಟಲಿಲ್ಲ. ಅವರು ಚಪ್ಪಾಳೆ ತಟ್ಟದಿರುವುದು ಮಾತ್ರವಲ್ಲ, ಅವರು ತಮ್ಮ ಕೈಗಳನ್ನು ಕಣ್ಣಿಗೆ ಕಾಣುವಂತೆ ಇಡುತ್ತಿದ್ದಾರೆ ಮತ್ತು ಅವರು ಚಪ್ಪಾಳೆ ತಟ್ಟುತ್ತಿಲ್ಲ ಎಂದು ಸ್ಪಷ್ಟಪಡಿಸಿ (sic)."  ಪೋಷ್ಟ್ ಬರೆಯುವ ಸಮಯದಲ್ಲಿ ೮೯,೦೦೦ ವೀಕ್ಷಣೆಗಳು ಮತ್ತು ೧,೧೦೦ ಲೈಕ್ ಗಳನ್ನು ಗಳಿಸಿದೆ. ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ಹೇಳಿಕೆ ತಪ್ಪಾಗಿದೆ. ನರಸಿಂಹರಾವ್ ಅವರ ಹೆಸರನ್ನು ಘೋಷಿಸಿದಾಗ ಖರ್ಗೆಯವರು ಚಪ್ಪಾಳೆ ತಟ್ಟಿದರು ಎಂದು ಸಮಾರಂಭದ ವೀಡಿಯೋ ದೃಶ್ಯಾವಳಿ ತೋರಿಸುತ್ತದೆ.

ನಾವು ಸತ್ಯವನ್ನು ಕಂಡುಹಿಡಿದದ್ದು ಹೀಗೆ?
ವೈರಲ್ ಫೋಟೋವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಅದು ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಎಕ್ಸ್ ಹ್ಯಾಂಡಲ್‌ನಿಂದಲೂ ಹಂಚಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಸಮಾರಂಭದಲ್ಲಿ ಖರ್ಗೆ ಚಪ್ಪಾಳೆ ತಟ್ಟದ ಕ್ಷಣವನ್ನು ಚಿತ್ರ ಸೆರೆಹಿಡಿಯುತ್ತದೆ.

ವೈರಲ್ ಚಿತ್ರದಲ್ಲಿ ಖರ್ಗೆ ಚಪ್ಪಾಳೆ ತಟ್ಟುವುದನ್ನು ಕಾಣದಿದ್ದರೂ, ಕಾರ್ಯಕ್ರಮದ ತುಣುಕಿನಲ್ಲಿ ಅವರು ರಾವ್ ಅವರಿಗೆ ನೀಡಿದ ಗೌರವಕ್ಕೆ ಚಪ್ಪಾಳೆಯನ್ನು ತಟ್ಟಿದ್ದಾರೆ. 

ರಾವ್ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡಿದ ಸಮಾರಂಭದ ವೀಡಿಯೋವನ್ನು ನಾವು  ಕಂಡುಕೊಂಡೆವು, ಇದನ್ನು ಭಾರತದ ರಾಷ್ಟ್ರಪತಿಗಳ ಯೂಟ್ಯೂಬ್ ಚಾನೆಲ್‌ನಲ್ಲಿ ಮಾರ್ಚ್ ೩೧ ರಂದು ಹಂಚಿಕೊಳ್ಳಲಾಗಿದೆ. ೪೧ ನಿಮಿಷಗಳ ವೀಡಿಯೋದಲ್ಲಿ, ಮುಂದಿನ ಸಾಲಿನಲ್ಲಿ ಕುಳಿತಿರುವ ಖರ್ಗೆ ಮತ್ತು ಇತರ ರಾಜಕೀಯ ನಾಯಕರು ಚಪ್ಪಾಳೆ ತಟ್ಟುವುದನ್ನು ಕಾಣಬಹುದು. ರಾವ್ ಅವರ ಹೆಸರನ್ನು ಘೋಷಿಸಲಾಯಿತು, ಮತ್ತು ನಂತರ ಅವರ ಮಗ ಗೌರವವನ್ನು ಸ್ವೀಕರಿಸಲು ಮುಂದಾದರು

ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಸೇರಿದಂತೆ ಇತರರು ಚಪ್ಪಾಳೆ  ತಟ್ಟದಿದ್ದ ಸಮಯದ್ಲಲೂ ಕಾಂಗ್ರೆಸ್ ಅಧ್ಯಕ್ಷರು ಚಪ್ಪಾಳೆ ತಟ್ಟುವುದನ್ನು ಕಾಣಬಹುದು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಚಪ್ಪಾಳೆ ತಟ್ಟುತ್ತಿರುವುದನ್ನು ತೋರಿಸುವ ಸ್ಕ್ರೀನ್‌ಶಾಟ್. (ಮೂಲ: ಯೂಟ್ಯೂಬ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಪ್ರಧಾನಿ ಮೋದಿಯವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ಸಮಾರಂಭದ ನೇರ ಪ್ರಸಾರ ಕೂಡ ೨:೩೧ ನಿಮಿಷಗಳ ಮಾರ್ಕ್‌ನಲ್ಲಿ ಪ್ರಭಾಕರ್ ರಾವ್ ಅವರೊಂದಿಗೆ ಹ್ಯಾಂಡ್ ಶೇಕ್ ಮಾಡಲು ಖರ್ಗೆ ಎದ್ದಿರುವುದನ್ನು ತೋರಿಸುತ್ತದೆ.

ಪ್ರಭಾಕರ್ ರಾವ್ ಅವರು ಖರ್ಗೆ ಅವರೊಂದಿಗೆ ಹ್ಯಾಂಡ್ ಶೇಕ್  ಮಾಡುತ್ತಿರುವುದನ್ನು ನೇರ ಪ್ರಸಾರದಲ್ಲಿ ಸೆರೆಹಿಡಿಯುವ ಸ್ಕ್ರೀನ್‌ಶಾಟ್. (ಮೂಲ: ಯೂಟ್ಯೂಬ್/ಸ್ಕ್ರೀನ್‌ಶಾಟ್)

ತೀರ್ಪು
ಪಿ.ವಿ.ನರಸಿಂಹರಾವ್ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ ಭಾರತ ರತ್ನ ಸಮಾರಂಭದ ಚಿತ್ರವನ್ನು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಶ್ಲಾಘಿಸಲಿಲ್ಲ ಎಂಬ ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಸಮಾರಂಭದ ಇತರ ದೃಶ್ಯಗಳು ರಾವ್ ಅವರ ಹೆಸರನ್ನು ಘೋಷಿಸಿದಾಗ ಖರ್ಗೆ ಚಪ್ಪಾಳೆ ತಟ್ಟುವುದನ್ನು ತೋರಿಸುತ್ತವೆ. ಆದ್ದರಿಂದ ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ. 

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here.  

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ