ಮುಖಪುಟ ಬೆಂಗಳೂರಿನಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಘಟನೆಯನ್ನು 'ಮ್ಯಾಗ್ನೆಟಿಕ್ ಬಾಂಬ್' ಇಂದ ಸಂಭವಿಸಿದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಬೆಂಗಳೂರಿನಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಘಟನೆಯನ್ನು 'ಮ್ಯಾಗ್ನೆಟಿಕ್ ಬಾಂಬ್' ಇಂದ ಸಂಭವಿಸಿದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಮೂಲಕ: ಅಂಕಿತಾ ಕುಲಕರ್ಣಿ

ಜುಲೈ 12 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಬೆಂಗಳೂರಿನಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಘಟನೆಯನ್ನು 'ಮ್ಯಾಗ್ನೆಟಿಕ್ ಬಾಂಬ್' ಇಂದ ಸಂಭವಿಸಿದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ ಮ್ಯಾಗ್ನೆಟಿಕ್ ಬಾಂಬ್ ಸ್ಫೋಟದಿಂದಾಗಿ ಬೆಂಗಳೂರಿನಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ವೀಡಿಯೋ ತೋರಿಸುತ್ತದೆ ಎಂದು ಹೇಳುವ ವೈರಲ್ ಪೋಷ್ಟ್‌ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಸೆಂಟ್ರಲ್ ಬೆಂಗಳೂರಿನ ಡೆಪ್ಯುಟಿ ಕಮಿಷನರ್ ಆಫ್ ಪೋಲಿಸ್ ಅವರು ಈ ಹೇಳಿಕೆಯನ್ನು ತಳ್ಳಿಹಾಕಿದರು ಮತ್ತು ಬೆಂಕಿ ಆಕಸ್ಮಿಕವಾಗಿ ಸಂಭವಿಸಿದೆ ಎಂದು ಹೇಳಿದ್ದಾರೆ.

ಹೇಳಿಕೆ ಏನು?

ಬಸ್ಸಿಗೆ ಬೆಂಕಿ ಹೊತ್ತಿಕೊಂಡಿದ್ದು, ರಸ್ತೆಯ ಮಧ್ಯದಲ್ಲಿ ದಟ್ಟವಾದ ಕಡು ಹೊಗೆಯನ್ನು ಹೊರಸೂಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿರುವ ಬೆಂಗಳೂರಿನಲ್ಲಿ ವಾಹನವನ್ನು "ಮ್ಯಾಗ್ನೆಟಿಕ್ ಬಾಂಬ್‌" ಇಂದ ಟಾರ್ಗೆಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. 

ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ವೀಡಿಯೋವನ್ನು ಹಂಚಿಕೊಂಡ ಅಂತಹ ಒಂದು ಪೋಷ್ಟ್ ಹೀಗೆ ಬರೆದಿದೆ, “ಮ್ಯಾಗ್ನೆಟಿಕ್ ಬಾಂಬ್ ನಿಂದ ಭಾರತದ ಬೆಂಗಳೂರು ನಗರದಲ್ಲಿ ಡಿಆರ್‌ಡಿಒ (DRDO) ದ ೩ ಎಂಜಿನಿಯರ್‌ಗಳು ಪ್ರಯಾಣಿಸುತ್ತಿದ್ದ ಬಸ್ ಅನ್ನು ಟಾರ್ಗೆಟ್ ಮಾಡಿದೆ. ಎಲ್ಲಾ ಮೂವರು ಡಿಆರ್‌ಡಿಒ ಇಂಜಿನಿಯರ್‌ಗಳು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಘಟನೆಯು ಡಿಆರ್‌ಡಿಒ ಎಚ್‌ಎಎಲ್ ತೇಜಸ್ ವಿಮಾನ ಪರೀಕ್ಷಾ ಸೌಲಭ್ಯದಿಂದ ೪ ಕಿಮೀ ಪಶ್ಚಿಮದಲ್ಲಿ ನೆಡೆದಿದೆ." ಈ ಫ್ಯಾಕ್ಟ್-ಚೆಕ್ ಅನ್ನು ಬರೆಯುವ ಸಮಯದಲ್ಲಿ ಪೋಷ್ಟ್ ವೇದಿಕೆಯಲ್ಲಿ ೪೬,೪೦೦ ವೀಕ್ಷಣೆಗಳನ್ನು ಗಳಿಸಿದೆ. ಈ ಪೋಷ್ಟ್‌ನ ಆರ್ಕೈವ್ ಮಾಡಿದ ಆವೃತ್ತಿ ಮತ್ತು ಆದೇ ರೀತಿಯ ಪೋಷ್ಟ್ ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೈರಲ್ ಪೋಷ್ಟ್‌ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ವೈರಲ್ ವೀಡಿಯೋದಲ್ಲಿ ಸೆರೆಹಿಡಿಯಲಾದ ಘಟನೆಯು ಇಂಜಿನ್ ಅಧಿಕ ಬಿಸಿಯಾಗುವುದರಿಂದ ಬೆಂಕಿ ಹೊತ್ತಿಕೊಂಡ ಬಸ್ ಅನ್ನು ಚಿತ್ರಿಸುತ್ತದೆ ಎಂದು ಲಾಜಿಕಲಿ ಫ್ಯಾಕ್ಟ್ಸ್  ಕಂಡುಕೊಂಡಿದೆ. ಯಾವುದೇ ಬಾಂಬ್ ಸ್ಫೋಟ ಅಥವಾ ಸ್ಫೋಟ ಸಂಭವಿಸಿಲ್ಲ.

ನಾವು ಏನು ಕಂಡುಕೊಂಡಿದ್ದೇವೆ?

ಗೂಗಲ್ ಸರ್ಚ್ ಟೈಮ್ಸ್ ಆಫ್ ಇಂಡಿಯಾ, ಹಿಂದೂಸ್ತಾನ್ ಟೈಮ್ಸ್ ಮತ್ತು ಎನ್‌ಡಿಟಿವಿ ಪ್ರಕಟಿಸಿದ ವರದಿಗಳಿಗೆ ಕರೆದೊಯಿತು, ಇದು ಜುಲೈ ೯, ೨೦೨೪ ರಂದು ಸುಮಾರು ೯ ಗಂಟೆಗೆ ಬೆಂಗಳೂರಿನ ಮಹಾತ್ಮಾ ಗಾಂಧಿ (ಎಂಜಿ) ರಸ್ತೆ ಬಳಿಯ ಅನಿಲ್ ಕುಂಬ್ಳೆ ವೃತ್ತದಲ್ಲಿ ಕನಿಷ್ಠ ೩೦ ಸದಸ್ಯರನ್ನು ಹೊತ್ತ ಬಿಎಂಟಿಸಿ (ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್) ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಕಟಿಸಿದೆ. ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ ಎಂದು ವರದಿಗಳು ಸೇರಿಸಿದವು, ಮತ್ತು ಪ್ರಾಥಮಿಕ ತನಿಖೆಯು ಇಂಜಿನ್ ನ ಅಧಿಕ ಬಿಸಿಯಾಗಿರುವುದು ಬೆಂಕಿಗೆ ಕಾರಣವಾಗಿದೆ ಎಂದು ಸೂಚಿಸಿದೆ, ಆದರೆ ನಿಖರವಾದ ಕಾರಣವನ್ನು ಇನ್ನೂ ಕಂಡುಕೊಂಡಿಲ್ಲ. 

ಬೆಂಗಳೂರು ನಗರದ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ಡಿಸಿಪಿ) ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪೋಷ್ಟ್‌ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಕೂಡ ನಮಗೆ ಕಂಡುಬಂದಿದೆ, ಇದು ಬಾಂಬ್‌ನಿಂದ ಸ್ಫೋಟವಾಗಿಲ್ಲ ಎಂದು ಸ್ಪಷ್ಟಪಡಿಸಿದೆ. "ಇಂದು ಬೆಳಿಗ್ಗೆ ೦೮:೪೦ ರ ಸುಮಾರಿಗೆ ಎಂಜಿ ರಸ್ತೆಯ ಅನಿಲ್ ಕುಂಬ್ಳೆ ವೃತ್ತದ ಬಳಿ ಬಿಎಂಟಿಸಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಅಗ್ನಿಶಾಮಕ ದಳ ಬೆಂಕಿ ನಂದಿಸಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.  ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ಮ್ಯಾಗ್ನೆಟಿಕ್ ಬಾಂಬ್ ಬಗ್ಗೆ ಸುಳ್ಳು ವದಂತಿಗಳು ತಪ್ಪು ಮತ್ತು ಆಧಾರರಹಿತವಾಗಿವೆ (sic)," ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪೋಷ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಡಿಸಿಪಿ ಬೆಂಗಳೂರು ಸೆಂಟ್ರಲ್ ಅವರು ಹಂಚಿಕೊಂಡಿದ್ದಾರೆ. (ಮೂಲ: ಎಕ್ಸ್/ಡಿಸಿಪಿ  ಕೇಂದ್ರ ವಿಭಾಗ,ಉಪ ಪೊಲೀಸ್ ಆಯುಕ್ತ ಕೇಂದ್ರ ವಿಭಾಗ)

ಲಾಜಿಕಲಿ ಫ್ಯಾಕ್ಟ್ಸ್ ಸಹ ಉಪ ಪೊಲೀಸ್ ಆಯುಕ್ತ (ಕೇಂದ್ರ) ಶೇಖರ್ ಎಚ್ ತೆಕ್ಕಣ್ಣವರ್ ಅವರೊಂದಿಗೆ ಮಾತನಾಡಿದೆ, ಅವರು ಹೀಗೆ ಪುನರುಚ್ಚರಿಸಿದರು, “ಈ ಘಟನೆಯಲ್ಲಿ ಯಾವುದೇ ಮ್ಯಾಗ್ನೆಟಿಕ್ ಬಾಂಬ್ ಒಳಗೊಂಡಿಲ್ಲ. ಬಿಸ್ ಇಂದ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದೂ ಅವರು ತಿಳಿಸಿದ್ದಾರೆ."

ಬೆಂಕಿಯ ಕಾರಣವನ್ನು ಖಚಿತಪಡಿಸಿಕೊಳ್ಳಲು ನಾವು ಬೆಂಗಳೂರು ದಕ್ಷಿಣ ಅಗ್ನಿಶಾಮಕ ಠಾಣೆಯನ್ನು ಸಂಪರ್ಕಿಸಿದೆವು. ಅನಾಮಧೇಯರಾಗಿ ಉಳಿಯಲು ಬಯಸಿದ ಅಧಿಕಾರಿಯೊಬ್ಬರು ನಮಗೆ ಹೇಳಿದರು, "ಇಂಜಿನ್ ಅಧಿಕ ಬಿಸಿಯಾದ ಕಾರಣ ಬಸ್‌ಗೆ ಬೆಂಕಿ ಹೊತ್ತಿಕೊಂಡಿತು, ಇದು ಚಾಲಕ ಬಸ್ ಅನ್ನು ಪ್ರಾರಂಭಿಸಿದಾಗ ಶಾರ್ಟ್ ಸರ್ಕ್ಯೂಟ್‌ಗೆ ಕಾರಣವಾಯಿತು." ಅಪಘಾತದಲ್ಲಿ ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. 

ವೈರಲ್ ಪೋಷ್ಟ್‌ನಲ್ಲಿ ಹೇಳಿಕೊಂಡಂತೆ ಬೆಂಗಳೂರಿನಲ್ಲಿ ಮೂವರು ಡಿಆರ್‌ಡಿಒ (ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಷನ್) ಇಂಜಿನಿಯರ್‌ಗಳು ಸಾವನ್ನಪ್ಪಿದ್ದಾರೆ ಅಥವಾ ಸತ್ತಿದ್ದಾರೆ ಎಂದು ಭಯಪಡುವ ಯಾವುದೇ ಘಟನೆ ಇದೆಯೇ ಎಂದು ಕಂಡುಹಿಡಿಯಲು ನಾವು ಗೂಗಲ್‌ನಲ್ಲಿ ಸರ್ಚ್ ನೆಡೆಸಿದೆವು. ಆದರೆ, ಯಾವುದೇ ವರದಿಗಳು ಅಥವಾ ಅಧಿಕೃತ ಪತ್ರಿಕಾ ಪ್ರಕಟಣೆಗಳು ಅಂತಹ ಘಟನೆಯ ಬಗ್ಗೆ ಮಾತನಾಡುವುದಿಲ್ಲ.

ಮೇಲಿನ ಸಾಕ್ಷ್ಯವು ವೈರಲ್ ಕ್ಲಿಪ್‌ನಲ್ಲಿರುವ ಘಟನೆಯು ಅಪಘಾತವಾಗಿದೆ, ಬಾಂಬ್ ಸ್ಫೋಟವಲ್ಲ ಎಂದು ಸ್ಥಾಪಿಸುತ್ತದೆ. ವೈರಲ್ ಪೋಷ್ಟ್‌ಗಳಲ್ಲಿ ಹೇಳಿಕೊಂಡಂತೆ "ಮೂರು ಡಿಆರ್‌ಡಿಒ ಎಂಜಿನಿಯರ್‌ಗಳು ಸತ್ತಿದ್ದಾರೆ" ಅಥವಾ ಗಾಯಗೊಂಡಿದ್ದಾರೆ ಎಂದು ಯಾವುದೇ ಘಟನೆ ನಡೆದಿಲ್ಲ ಎಂದು ಇದು ಖಚಿತಪಡಿಸುತ್ತದೆ.

ತೀರ್ಪು

ಇಂಜಿನ್ ಅಧಿಕ ಬಿಸಿಯಾದ ಸಮಸ್ಯೆಯಿಂದ ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ಬಸ್‌ಗೆ ಬೆಂಕಿ ಹೊತ್ತಿಕೊಂಡ ವೀಡಿಯೋವನ್ನು 'ಮ್ಯಾಗ್ನೆಟಿಕ್ ಬಾಂಬ್ ಬ್ಲಾಸ್ಟ್' ದೃಶ್ಯಗಳನ್ನು ತೋರಿಸುತ್ತದೆ ಎಂಬ ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ