ಮುಖಪುಟ ವರದಕ್ಷಿಣೆ ಕೇಳಿದ್ದಕ್ಕೆ ವಧುವಿನ ತಂದೆ ವರನನ್ನು ಥಳಿಸುತ್ತಿರುವ, ಹಳೆಯ ವೀಡಿಯೋ ಸ್ಕ್ರಿಪ್ಟ್ ಮಾಡಿ ಅಭಿನಯಿಸಲಾಗಿದೆ

ವರದಕ್ಷಿಣೆ ಕೇಳಿದ್ದಕ್ಕೆ ವಧುವಿನ ತಂದೆ ವರನನ್ನು ಥಳಿಸುತ್ತಿರುವ, ಹಳೆಯ ವೀಡಿಯೋ ಸ್ಕ್ರಿಪ್ಟ್ ಮಾಡಿ ಅಭಿನಯಿಸಲಾಗಿದೆ

ಮೂಲಕ: ಅಂಕಿತಾ ಕುಲಕರ್ಣಿ

ಜುಲೈ 12 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ವರದಕ್ಷಿಣೆ ಕೇಳಿದ್ದಕ್ಕೆ ವಧುವಿನ ತಂದೆ ವರನನ್ನು ಥಳಿಸುತ್ತಿರುವ, ಹಳೆಯ ವೀಡಿಯೋ ಸ್ಕ್ರಿಪ್ಟ್ ಮಾಡಿ ಅಭಿನಯಿಸಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು False

೨೦೨೧ ರ ಹಳೆಯ ಸ್ಕ್ರಿಪ್ಟ್ ವೀಡಿಯೋವನ್ನು ನೈಜ ಘಟನೆ ಎಂದು ತಪ್ಪಾಗಿ ವರದಿ ಮಾಡಲಿಗದೆ.

ಸಂದರ್ಭ

ಹಲವಾರು ಸುದ್ದಿ ವಾಹಿನಿಗಳ ಮೇ ೯, ೨೦೨೩ ರ ವರದಿಯ ಪ್ರಕಾರ ವರದಕ್ಷಿಣೆಯಾಗಿ ಮೋಟರ್‌ಸೈಕಲ್ ಕೇಳಿದಕ್ಕೆ ವಧುವಿನ ತಂದೆ ವರನ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಹೇಳುತ್ತವೆ. ವಿವಾಹ ಸಮಾರಂಭದಲ್ಲಿ ವ್ಯಕ್ತಿಯೊಬ್ಬ ವರನನ್ನು ಥಳಿಸುತ್ತಿರುವ ವೀಡಿಯೋ ವೈರಲ್ ಮಾಡಲಾಗಿದೆ. ನ್ಯೂಸ್೧೮ ವೈರಲ್ಸ್, ಈ ಕ್ಲಿಪ್ ಅನ್ನು ಮೇ ೮, ೨೦೨೩ ರಂದು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿತ್ತು ಮತ್ತು ಅದರ ಶೀರ್ಷಿಕೆ, "ಅಳಿಯ ವರದಕ್ಷಿಣೆಯಾಗಿ ಮೋಟಾರ್‌ಸೈಕಲ್ ಕೇಳಿದನು ಮತ್ತು ಮಾವ ಅವನಿಗೆ ಎಲ್ಲರ ಮುಂದೆ ಚಪ್ಪಲಿಯಿಂದ ಥಳಿಸಿದನು" ಎಂದು ಹೇಳುತ್ತದೆ. ಯೂಟ್ಯೂಬ್ ವೀಡಿಯೋ ೨೨,೦೦೦ ವೀಕ್ಷಣೆಗಳನ್ನು ಹೊಂದಿದೆ.

ಎನ್ ಡಿ ಟಿವಿ ಹಿಂದಿ, ಜೀ ನ್ಯೂಸ್ , ಮತ್ತು ನ್ಯೂಸ್೨೪ ನಂತಹ ಹಲವಾರು ಇತರ ಸುದ್ದಿ ವಾಹಿನಿಗಳು ತಮ್ಮ ವೆಬ್‌ಸೈಟ್‌ನಲ್ಲಿ ವೀಡಿಯೋವನ್ನು ಅದೇ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಆದರೆ ಈ ಕೆಲವು ವೀಡಿಯೋಗಳನ್ನು ಡಿಲೀಟ್ ಮಾಡಲಾಗಿದೆ. ಈ ವೀಡಿಯೋವನ್ನು ಹೊಂದಿರುವ ಟ್ವಿಟ್ಟರ್ ಪೋಷ್ಟ್ ಒಂದು ೭,೯೨,೪೦೦ ವೀಕ್ಷಣೆಗಳನ್ನು ಮತ್ತು ೨೦೦ಕ್ಕೂ ಹೆಚ್ಚು ರಿಟ್ವೀಟ್‌ಗಳನ್ನು ಸ್ವೀಕರಿಸಿದೆ. 

ಒಂದು ನಿಮಿಷದ ವೀಡಿಯೋದಲ್ಲಿ ಮಾವ ವರನಿಗೆ ಕಪಾಳಮೋಕ್ಷ ಮಾಡುವುದನ್ನು ತೋರಿಸುತ್ತದೆ. ನಂತರ, ವರನು ವಧುವಿನೊಂದಿಗೆ ಬೀದಿಯಲ್ಲಿ ನಡೆದುಕೊಂಡು ಹೋಗುವುದನ್ನು ನಾವು ನೋಡಬಹುದು. 

ಆದರೆ, ಇದು ನೈಜ ಘಟನೆಯಲ್ಲ. ೨೦೨೧ ರಲ್ಲಿ ಸ್ಕ್ರಿಪ್ಟ್ ಮಾಡಿದ ವೀಡಿಯೋದ ಒಂದು ಭಾಗವಾಗಿದೆ. 

ವಾಸ್ತವವಾಗಿ

ವೀಡಿಯೋದಲ್ಲಿನ ಕೆಲವು ದೃಶ್ಯಗಳು ಮತ್ತು ಥಳಿಸಿಕೊಂಡ ನಂತರ ವರನ ಪ್ರತಿಕ್ರಿಯೆಯು ವೀಡಿಯೋ ಸ್ಕ್ರಿಪ್ಟ್ ಮಾಡಿರಬಹುದೆಂದು ಸೂಚಿಸುತ್ತದೆ. ವೀಡಿಯೋದಲ್ಲಿ ವರ ನಗುತ್ತಿರುವುದನ್ನು ನಾವು ನೋಡಬಹುದು, ಇಂತಹ ಸಣ್ಣ ಸೂಚನೆಗಳು ವೀಡಿಯೋದಲ್ಲಿ ಒಳಗೊಂಡಿರುವ ಜನರ ಪ್ರತಿಕ್ರಿಯೆಗಳು ನಕಲಿಯಾಗಿರಬಹುದು ಮತ್ತು ಸ್ಕ್ರಿಪ್ಟ್ ಆಗಿರಬಹುದು ಎಂದು ತೋರಿಸಿದೆ.

ಅದಲ್ಲದೆ, ಕೆಲವು ಟ್ವೀಟ್‌ಗಳ ಮೇಲಿನ ಕಾಮೆಂಟ್‌ಗಳು ಇದು ಯೂಟ್ಯೂಬ್ ಚಾನಲ್‌ನಿಂದ ರಚಿಸಲಾದ ಹಳೆಯ ವೀಡಿಯೋದ ಭಾಗವಾಗಿದೆ ಎಂದು ಸೂಚಿಸಿದೆ. ಈ ಕೀವರ್ಡ್‌ಗಳನ್ನು ಬಳಸಿಕೊಂಡು, ೭೮,೦೦೦ ಚಂದಾದಾರರನ್ನು ಹೊಂದಿರುವ ‘ಮೈಥಿಲಿ ಬಜಾರ್’ ನ ಯೂಟ್ಯೂಬ್ ಚಾನಲ್ ಅನ್ನು ನಾವು ಕಂಡುಕೊಂಡೆವು. ಈ ಚಾನೆಲ್ ಮೇ ೮, ೨೦೨೧ ರಂದು ಅಪ್ಲೋಡ್ ಆದ ವೀಡಿಯೋವೊಂದರ ಶೀರ್ಷಿಕೆ, "ವಿದಾಯ ಸಮಯದಲ್ಲಿ ವರನು ವಧುವನ್ನು ಏಕೆ ಹೊಡೆದನು ಮತ್ತು ವಧುವಿನ ತಂದೆ ವರನನ್ನು ಏಕೆ ಹೊಡೆದನು?" ಎಂದು ಹೇಳುತ್ತದೆ. 

ಮೂಲ ವೀಡಿಯೋ ನಾಲ್ಕು ನಿಮಿಷಗಳಷ್ಟು ಉದ್ದವಾಗಿದೆ. ಇದು ಮೂರು ಕಲಾವಿದರನ್ನು ಹೊಂದಿದೆ - ಸುನಿಲ್ ಸುಮನ್ ಹಾಗು ಮೋಹನ್ ಮಂಡಲ್ ರ ಮತ್ತು ವಧುವಿನ ತಂದೆಯಾಗಿ, ಪೂಜಾ ಮಿಶ್ರಾ ವಧುವಿನ ಪಾತ್ರವನ್ನು ನಿರ್ವಹಿಸಿದ್ದಾರೆ. 

ವೈರಲ್ ವೀಡಿಯೋವನ್ನು ಈ ಮೂಲ ವೀಡಿಯೋದಿಂದ ಕ್ರಾಪ್ ಮಾಡಲಾಗಿದೆ ಮತ್ತು ಸಮಯ ೨:೪೦ ರಿಂದ ೩:೪೦ ರವರೆಗೆ ನೋಡಬಹುದು.

'ಮೈಥಿಲಿ ಬಜಾರ್' ಚಾನಲ್ ಸಾಮಾನ್ಯವಾಗಿ ಯೂಟ್ಯೂಬ್ ಗಾಗಿ ಸ್ಕ್ರಿಪ್ಟ್ ಮಾಡಿ ವೀಡಿಯೋವನ್ನು ರಚಿಸುತ್ತದೆ. ವೀಡಿಯೋದಲ್ಲಿ ಚಿತ್ರಿಸಲಾದ ಘಟನೆಯು ಕಾಲ್ಪನಿಕವಾಗಿದ್ದು, ಎರಡು ವರ್ಷಗಳ ಹಿಂದೆ ಅಪ್‌ಲೋಡ್ ಮಾಡಲಾಗಿದೆ.

ತೀರ್ಪು

ವರದಕ್ಷಿಣೆಗಾಗಿ ಬೇಡಿಕೆಯಿಟ್ಟಿದ್ದಕ್ಕೆ ವ್ಯಕ್ತಿಯೊಬ್ಬ ಮದುವೆಯಲ್ಲಿ ವರನಿಗೆ ಚಪ್ಪಲಿಯಿಂದ ಥಳಿಸುವ ವೀಡಿಯೋ ಕ್ಲಿಪ್ ಅನ್ನು ೨೦೨೧ ರ ಹಳೆಯ ಸ್ಕ್ರಿಪ್ಟ್ ಮಾಡಿದ ವೀಡಿಯೋದಿಂದ ಎಡಿಟ್ ಮಾಡಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತೇವೆ.    

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ