ಮೂಲಕ: ಚಂದನ್ ಬೋರ್ಗೊಹೈನ್
ಡಿಸೆಂಬರ್ 15 2023
ರಾಜಸ್ಥಾನದ ಇತ್ತೀಚೀನ ಚುನಾವಣೆಯ ಎರಡು ವರ್ಷಗಳ ಮೊದಲು ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು ಇದು ಆಂಧ್ರಪ್ರದೇಶದಲ್ಲಿ ಸರಕು ಸಾಗಣೆ ಮಾಡುವ ರೈಲನ್ನು ತೋರಿಸುತ್ತದೆ.
ಇಲ್ಲಿನ ಹೇಳಿಕೆ ಏನು?
ಭಾರತದ ಐದು ರಾಜ್ಯಗಳಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಯ ಫಲಿತಾಂಶಗಳ ನಂತರ, ಭಾರತೀಯ ಜನತಾ ಪಕ್ಷವು (ಬಿಜೆಪಿ) ೧೯೯ ಸ್ಥಾನಗಳಲ್ಲಿ ೧೧೫ ರಷ್ಟು ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ದಾಖಲಿಸಿದ ರಾಜಸ್ಥಾನ ರಾಜ್ಯಕ್ಕೆ ಉತ್ತರ ಪ್ರದೇಶದಿಂದ ಟನ್‌ಗಟ್ಟಲೆ ಬುಲ್ಡೋಜರ್‌ಗಳನ್ನು ಕಳುಹಿಸಲಾಗಿತ್ತು ಎಂಬ ಹೇಳಿಕೆಯೊಂದಿಗೆ ವೀಡಿಯೋವಂದು ವೈರಲ್ ಆಗುತ್ತಿದೆ.
ಫೇಸ್‌ಬುಕ್‌ನಲ್ಲಿ ವೀಡಿಯೋವನ್ನು ಹಂಚಿಕೊಂಡ ಬಳಕೆದಾರರು, ರಾಜಸ್ಥಾನದಲ್ಲಿ ಕಾಂಗ್ರೆಸ್ ತನ್ನ ಐದು ವರ್ಷಗಳ ಆಡಳಿತದಲ್ಲಿ ಸೃಷ್ಟಿಸಿದ "ಕಸವನ್ನು ತೆರವುಗೊಳಿಸಲು" ಬುಲ್ಡೋಜರ್‌ಗಳು ಉತ್ತರ ಪ್ರದೇಶದಿಂದ ರಾಜಸ್ಥಾನಕ್ಕೆ ರೈಲು ಹೋಗುವುದನ್ನು ತೋರಿಸಿದೆ ಎಂದು ಬರೆದಿದ್ದಾರೆ. ಕೋಮು ಆರೋಪದ ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ವೀಕ್ಷಿಸಬಹುದು.
ಇಂತಹ ಹೇಳಿಕೆಗಳನ್ನು ಎಕ್ಸ್ ನಲ್ಲಿಯೂ ಸಹ ಹಂಚಿಕೊಳ್ಳಲಾಗಿದ್ದು, ಆರ್ಕೈವ್ ಮಾಡಿದ ಅವರುತ್ತಿಗಳನ್ನು ಇಲ್ಲಿ, ಇಲ್ಲಿ, ಮತ್ತು ಇಲ್ಲಿ ನೋಡಬಹುದು.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
(ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)
ಬುಲ್ಡೋಜರ್ಗಳ ಅರ್ಥ
ಯುಪಿಯಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರ ವಹಿಸಿಕೊಂಡ ಕೂಡಲೇ 'ಬುಲ್ಡೋಜರ್' ಮತ್ತು 'ಬುಲ್ಡೋಜರ್ ಆಕ್ಷನ್' ಎಂಬ ಪದಗಳು ಭಾರತೀಯ ರಾಜಕೀಯದಲ್ಲಿ ನ್ಯೂಸ್ ಮ್ಯಾಗಜೀನ್ ಔಟ್‌ಲುಕ್‌ನ ವರದಿಯ ಪ್ರಕಾರ ಆದಿತ್ಯನಾಥ್ ಅವರು 'ಬುಲ್ಡೋಜರ್ ರಾಜಕೀಯ' ವನ್ನು ೨೦೨೨ರ ಯುಪಿಯ ವಿಧಾನಸಭೆ ಚುನಾವಣೆಯ ಮುನ್ನ ತಂತ್ರವಾಗಿ ಬಳಸಿಕೊಂಡಿದ್ದರು ಎಂದು ಹೇಳುತ್ತದೆ.
ಇತ್ತೀಚಿನ ವರ್ಷಗಳಲ್ಲಿ, ಬುಲ್ಡೋಜರ್‌ಗಳು ರಾಜಕೀಯ ಸಾಧನವಾಗಿ ಹೊರಹೊಮ್ಮಿವೆ, ಹೆಚ್ಚಾಗಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಆಡಳಿತಾರೂಢ ಸರ್ಕಾರಗಳ ಉಲ್ಲಂಘನೆಯಾಗಿ ಕಂಡುಬರುವ ಕ್ರಮಗಳಿಗೆ ಶಿಕ್ಷೆಯಾಗಿ ಬಳಸಲಾಗುತ್ತದೆ. ಯೋಗಿ ಸರ್ಕಾರವು ಯುಪಿಯಲ್ಲಿ ನಡೆಯುತ್ತಿರುವ ಆಡಳಿತದಲ್ಲಿ 'ಅಕ್ರಮ' ಕಟ್ಟಡಗಳ ಮೇಲೆ ಬುಲ್ಡೋಜರ್‌ಗಳನ್ನು ಓಡಿಸಿದೆ ಮತ್ತು ಹಲವಾರು 'ಅಪರಾಧಿಗಳ' ಮನೆಗಳನ್ನು ನೆಲಸಮಗೊಳಿಸಿದೆ. ಹರಿಯಾಣ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ರಾಜ್ಯ ಸರ್ಕಾರಗಳು ಇದೇ ರೀತಿಯ ಕ್ರಮಗಳನ್ನು ಕೈಗೊಂಡಿವೆ. ನಾಗರಿಕ ಸಮಾಜದ ಗುಂಪುಗಳನ್ನು ಉಲ್ಲೇಖಿಸಿ, ಟೈಮ್ಸ್ ಮ್ಯಾಗಜಿನ್ "ಬುಲ್ಡೋಜರ್‌ಗಳು ಆಡಳಿತಾರೂಢ ಹಿಂದೂ ರಾಷ್ಟ್ರೀಯವಾದಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜಕಾರಣಿಗಳು ಸಾವಿರಾರು ಮುಸ್ಲಿಮರ ಮನೆಗಳು, ವ್ಯಾಪಾರಗಳು ಮತ್ತು ಪೂಜಾ ಸ್ಥಳಗಳನ್ನು ನಾಶಮಾಡಲು ಬಳಸುವ ಪ್ರಮುಖ ಕಾನೂನುಬಾಹಿರ ಸಾಧನವಾಗಿದೆ" ಎಂದು ಗಮನಿಸಿದೆ.
ವೀಡಿಯೋ ಎಲ್ಲಿಂದ ಬಂದಿದೆ?
ಕ್ಲಿಪ್‌ನ ಕೀಫ್ರೇಮ್‌ಗಳ ಒಂದರ ಮೇಲೆ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಇದು ವೈರಲ್ ವೀಡಿಯೋದ ದೀರ್ಘ ಆವೃತ್ತಿಗೆ ನಮ್ಮನ್ನು ಕರೆದುಕೊಂಡು ಹೋಯಿತು. ಅದು ನವೆಂಬರ್ ೨೬, ೨೦೨೧ ರಂದು ಯೂಟ್ಯೂಬ್ ನ 'GopiRailworld' ಎಂಬ ದೃಢೀಕೃತ ಚಾನಲ್ ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
"ಎರಡು ರೈಲುಗಳು ಬಿಓಎಂಏನ್ ರೇಕ್ ಸರಕು ರೈಲನ್ನು ಮೀರಿಸುತ್ತವೆ| ರೈಲಿನಲ್ಲಿ ಜೆಸಿಬಿ | ಡಬ್ಲ್ಯೂ ಎಪಿ-೭ ಸುಪರ್ಬ್ ಅಚ್ಛೇಲೆರಷನ್ I ಆರ್ " ಎಂಬ ಶೀರ್ಷಿಕೆಯ ಈ ವೀಡಿಯೋ ಸರಕು ರೈಲುಗಳು ಪ್ಲಾಟ್‌ಫಾರ್ಮ್ ಅನ್ನು ಬಿಟ್ಟು ತೆರಳುತ್ತಿರುವುದನ್ನು ತೋರಿಸುತ್ತದೆ ಹಾಗು ಮುಂದಿನ ಚಿತ್ರ ಅದು ರೈಲು ಹಳಿಯ ಮೇಲೆ ತೆರೆಳುತ್ತಿರುವುದನ್ನು ನೋಡಬಹುದು. ವೈರಲ್ ವೀಡಿಯೋ ಯೂಟ್ಯೂಬ್ ವೀಡಿಯೋದ ೦೩:೩೭ ಮಾರ್ಕ್‌ನ ಸುತ್ತಲೂ, ನಾವು "WAG-9H 31395 BHILAI ಜೊತೆಗೆ JCB's on BOMN ಟ್ರೈನ್" ಎಂಬ ಪಠ್ಯವನ್ನು ನೋಡಬಹುದು. ವೈರಲ್ ಕ್ಲಿಪ್‌ನಲ್ಲಿ ಅದೇ ಪಠ್ಯವು ಗೋಚರಿಸುತ್ತದೆ.
ವೈರಲ್ ಕ್ಲಿಪ್ ಮತ್ತು ಮೂಲ ಯೂಟ್ಯೂಬ್ ವೀಡಿಯೋದ ದೃಶ್ಯಗಳ ನಡುವಿನ ಹೋಲಿಕೆ. (ಮೂಲ: ಫೇಸ್‌ಬುಕ್/ಯೂಟ್ಯೂಬ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಯೂಟ್ಯೂಬ್ ವೀಡಿಯೋದ ವಿವರಣೆಯ ಪ್ರಕಾರ, ಆಂಧ್ರಪ್ರದೇಶದ ತೆನಾಲಿ ಜಂಕ್ಷನ್ ರೈಲು ನಿಲ್ದಾಣದಲ್ಲಿ ಇದನ್ನು ಚಿತ್ರೀಕರಿಸಲಾಗಿದೆ.
ಗೂಗಲ್ ಮ್ಯಾಪ್ಸ್ ನಲ್ಲಿ ಆಂಧ್ರಪ್ರದೇಶದ ತೆನಾಲಿ ಎಂಬ ಸ್ಥಳವನ್ನು ಜಿಒ ಲೊಕೇಟ್ ಮಾಡಲು ಸಾಧ್ಯವಾಯಿತು. ಬಿಳಿ-ಗುಲಾಬಿ ಬಣ್ಣದ ಕಟ್ಟಡ ಮತ್ತು 'ಜೀಸಸ್ ಹೀಲ್ಸ್' ಗೀಚುಬರಹವು ಯೂಟ್ಯೂಬ್ ವೀಡಿಯೋದ ಸುಮಾರು ೦೫:೩೪ ಟೈಮ್‌ಸ್ಟ್ಯಾಂಪ್ ನಲ್ಲಿ ಕಾಣಬಹುದು ಮತ್ತು ಅದನ್ನು ಗೂಗಲ್ ಸ್ಟ್ರೀಟ್ ವ್ಯೂನಲ್ಲಿಯೂ ಸಹ ಗುರುತಿಸಬಹುದಾಗಿದೆ.
ಯೂಟ್ಯೂಬ್ ಕ್ಲಿಪ್ ಮತ್ತು ಗೂಗಲ್ ಸ್ಟ್ರೀಟ್ ವ್ಯೂ ಚಿತ್ರದ ನಡುವಿನ ಹೋಲಿಕೆಗಳು. (ಮೂಲ: ಯೂಟ್ಯೂಬ್/ಗೂಗಲ್ ಮ್ಯಾಪ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ವೈರಲ್ ವೀಡಿಯೋ ಉತ್ತರ ಪ್ರದೇಶದಿಂದ ರಾಜಸ್ಥಾನಕ್ಕೆ ಬುಲ್ಡೋಜರ್‌ಗಳನ್ನು ಸಾಗಿಸುವ ರೈಲನ್ನು ತೋರಿಸುವುದಿಲ್ಲ ಆದರೆ ದಕ್ಷಿಣ ರಾಜ್ಯವಾದ ಆಂಧ್ರಪ್ರದೇಶದಲ್ಲಿ ಸಾಗುತ್ತಿರುವ ಸರಕು ರೈಲು ಎಂದು ಇದು ಸ್ಥಾಪಿಸುತ್ತದೆ. ಸರಕು ಸಾಗಣೆ ರೈಲಿನ ಮೂಲ ಮತ್ತು ಗಮ್ಯಸ್ಥಾನವನ್ನು ಸ್ವತಂತ್ರವಾಗಿ ಪರಿಶೀಲಿಸಲು ನಮಗೆ ಸಾಧ್ಯವಾಗದಿದ್ದರೂ, ವೈರಲ್ ವೀಡಿಯೋ ಕನಿಷ್ಠ ಎರಡು ವರ್ಷಗಳಿಂದ ಆನ್‌ಲೈನ್‌ನಲ್ಲಿ ಲಭ್ಯವಿದೆ. ಈ ವೀಡಿಯೋ ೨೦೨೩ರ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಸಂಬಂಧಿಸಿಲ್ಲ ಮತ್ತು ಆಂಧ್ರಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ, ಅಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷವು ವಿಜಯವನ್ನು ಗಳಿಸಿದೆ ಮತ್ತು ಬಿಜೆಪಿ ಅಲ್ಲ.
ತೀರ್ಪು
ನವೆಂಬರ್ ೨೦೨೧ ರಿಂದ ಆನ್‌ಲೈನ್‌ನಲ್ಲಿ ಲಭ್ಯವಿರುವ ಆಂಧ್ರಪ್ರದೇಶದ ಹಳೆಯ ವೀಡಿಯೋವನ್ನು ಇತ್ತೀಚೆಗೆ ಮುಕ್ತಾಯಗೊಂಡ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.
(ಅನುವಾದಿಸಿದವರು: ಅಂಕಿತಾ ಕುಲಕರ್ಣಿ )
Read this fact-check in English here.