ಮೂಲಕ: ರಜಿನಿ ಕೆ.ಜಿ
ಜೂನ್ 30 2023
ಬುರ್ಖಾ ಧರಿಸಿದ್ದ ಮದ್ಯ ಕಳ್ಳಸಾಗಣೆದಾರರನ್ನು ಪೊಲೀಸರು ಹಿಡಿದಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಹಿಂದೂಗಳು ಮುಸ್ಲಿಮರಂತೆ ನಟಿಸುತ್ತಿದ್ದಾರೆ ಎಂದು ತಪ್ಪಾಗಿ ಹೇಳಿದ್ದಾರೆ.
ಸಂದರ್ಭ
೨೦೨೩ ರ ಕರ್ನಾಟಕ ವಿಧಾನಸಭಾ ಚುನಾವಣೆಯು ಮೇ ೧೦ ರಂದು ಮುಕ್ತಾಯಗೊಂಡಂತೆ, ಹೆಚ್ಚಿನ ಎಕ್ಸಿಟ್ ಪೋಲ್ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷದ ಗೆಲುವ ಬಗ್ಗೆ ಭವಿಷ್ಯ ನುಡಿದಿವೆ ಮತ್ತು ಕೆಲವು ಸಮೀಕ್ಷೆಗಳು ಹಂಗ್ ಅಸೆಂಬ್ಲಿಯ ಬಗ್ಗೆ ಭವಿಷ್ಯ ನುಡಿದಿವೆ. ಮೇ ೧೩ ರಂದು ಅಧಿಕೃತ ಫಲಿತಾಂಶ ಪ್ರಕಟವಾಗಲಿದೆ.
ಟ್ವಿಟರ್‌ನಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಹೇಳಿಕೊಂಡಿದೆ “೧ ಧರ್ಮವನ್ನು ಗುರಿಯಾಗಿಸಿಕೊಂಡು ಕರ್ನಾಟಕದಲ್ಲಿ ಹಿಜಾಬ್ ಧರಿಸಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದ ಹಿಂದೂಗಳ ಗುಂಪು ಸಿಕ್ಕಿಬಿದ್ದಿದೆ (sic)” ಎಂದು ಹೇಳಿಕೊಂಡಿದೆ. ಥ್ರೆಡ್‌ನಲ್ಲಿನ ಮತ್ತೊಂದು ಟ್ವೀಟ್ ಕಾಂಗ್ರೆಸ್‌ನ ಗೆಲುವನ್ನು ಮುನ್ಸೂಚಿಸುವ ಎಕ್ಸಿಟ್ ಸಮೀಕ್ಷೆಯ ಫಲಿತಾಂಶಗಳ ಚಿತ್ರವನ್ನು ಒಳಗೊಂಡಿದೆ ಮತ್ತು ಬಳಕೆದಾರರು ಅದನ್ನು "ದ್ವೇಷದ ಫಲಿತಾಂಶಗಳು ಸ್ಪಷ್ಟವಾಗಿವೆ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ.
ವೀಡಿಯೋದಲ್ಲಿ ಜನರು ತೆಲುಗಿನಲ್ಲಿ ಮಾತನಾಡುತ್ತಿದ್ದಾರೆ ಮತ್ತು ಪೊಲೀಸರು ತಮ್ಮ ಬುರ್ಖಾವನ್ನು ತೆಗೆಯುವಂತೆ ವ್ಯಕ್ತಿಯನ್ನು ಕೇಳುತ್ತಿದ್ದಾರೆ.
ಅದೇ ವೀಡಿಯೋವನ್ನು ಹಂಚಿಕೊಂಡಿರುವ ಟ್ವಿಟ್ಟರ್‌ನಲ್ಲಿನ ಹಲವಾರು ಪೋಷ್ಟ್ ಗಳು ಮುಸ್ಲಿಮರನ್ನು ಮಾನಹಾನಿ ಮಾಡಲು, “ಆರ್‌ಎಸ್‌ಎಸ್ ಭಯೋತ್ಪಾದಕರು” ಬುರ್ಖಾವನ್ನು ಧರಿಸಿದ್ದಾರೆ ಮತ್ತು ಕರ್ನಾಟಕ ಚುನಾವಣೆಯ ನಡುವೆ ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ ಎಂದು ಹೇಳಿಕೊಂಡಿವೆ.
ಕೆಲವು ಎಕ್ಸಿಟ್ ಪೋಲ್‌ಗಳು ಕರ್ನಾಟಕದಲ್ಲಿ ಕಾಂಗ್ರೆಸ್‌ನ ಗೆಲುವನ್ನು ಮುನ್ಸೂಚಿಸಿದಾಗಿನಿಂದ ಆರ್‌ಎಸ್‌ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ), ಹಿಂದೂ ಬಲಪಂಥೀಯ ಗುಂಪು, "ಪೊಲೀಸರ ಮೇಲೆ ಕಲ್ಲು ತೂರಾಟ ಮಾಡುವ ಮೂಲಕ ಮುಸ್ಲಿಮರನ್ನು ದೂಷಿಸಲು ಪ್ರಯತ್ನಿಸುತ್ತಿದೆ" ಎಂಬ ನಿರೂಪಣೆಯೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.
ಆದರೆ, ವೀಡಿಯೋ ಹಳೆಯದಾಗಿದೆ ಮತ್ತು ಕರ್ನಾಟಕ ರಾಜ್ಯ ಚುನಾವಣೆಗೆ ಸಂಬಂಧಿಸಿಲ್ಲ.
ವಾಸ್ತವವಾಗಿ
ವೈರಲ್ ವೀಡಿಯೋವಿನ ಸ್ಕ್ರೀನ್‌ಶಾಟ್‌ನ ರಿವರ್ಸ್ ಇಮೇಜ್ ಸರ್ಚ್ ಮೂಲಕ ಆಗಸ್ಟ್ ೮, ೨೦೨೦ ರಂದು ಸ್ಥಳೀಯ ಮಾಧ್ಯಮ ಸಂಸ್ಥೆಯಾದ ಈಟಿವಿ ಆಂಧ್ರ ಪ್ರದೇಶ (ETV Andhra Pradesh) ಪೋಷ್ಟ್ ಮಾಡಿದ ಯೂಟ್ಯೂಬ್ (YouTube ) ವರದಿಯನ್ನು ಕಂಡುಕೊಂಡೆವು. ವೈರಲ್ ಪೋಷ್ಟ್ ನಲ್ಲಿ ನೋಡಿದಂತೆ, ನಿಖರವಾದ ದೃಶ್ಯಗಳು ಯೂಟ್ಯೂಬ್ ವೀಡಿಯೋದಲ್ಲಿ ಒಂದು ನಿಮಿಷದ ಗುರುತುಗೆ ಹತ್ತಿರದಲ್ಲಿದೆ. ವೀಡಿಯೋ ವಿವರಣೆಯು "ಹಲವು ಮಂದಿಯನ್ನು ಬಂಧಿಸಲಾಗಿದೆ | ಬುರ್ಖಾ ಧರಿಸಿ ಅಕ್ರಮ ಮದ್ಯವನ್ನು ವರ್ಗಾಯಿಸಿದಕ್ಕೆ" ಎಂದು ಓದುತ್ತದೆ.
ದ್ವಿಚಕ್ರ ವಾಹನದಲ್ಲಿ ಬುರ್ಖಾ ಧರಿಸಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಚೆಕ್ ಪೋಸ್ಟ್‌ನಲ್ಲಿ ಆಂಧ್ರಪ್ರದೇಶ ಪೊಲೀಸರಿಗೆ ಪತ್ತೆಯಾಗಿದ್ದು, ಪೊಲೀಸರು ಒಟ್ಟು ೩೦೪ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದು, ಕಳ್ಳಸಾಗಣೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಆರು ಮಂದಿಯನ್ನು ಬಂಧಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವೀಡಿಯೋದಲ್ಲಿ ೦:೩೩ ನಿಮಿಷದಲ್ಲಿ, ಪೊಲೀಸರು ಜಪ್ತಿ ಮಾಡಿದ ಮದ್ಯದ ಬಾಟಲಿಗಳ ಮುಂದೆ ಒಬ್ಬ ವ್ಯಕ್ತಿ ಬುರ್ಖಾ ತೆಗೆದು ಕುಳಿತಿರುವುದನ್ನು ನಾವು ನೋಡಬಹುದು.
ಆದರೆ, ಕಲ್ಲು ತೂರಾಟದ ದೃಶ್ಯಗಳನ್ನು ಮೂಲ ವೀಡಿಯೋದಲ್ಲಿ ಅಥವಾ ವೈರಲ್ ಪೋಷ್ಟ್‌ನಲ್ಲಿ ಹೇಳುವಂತೆ ಗಮನಿಸಲಾಗುವುದಿಲ್ಲ.
ಕರ್ನೂಲ್‌ನಲ್ಲಿ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಫಕ್ಕೀರಪ್ಪ ಕಾಗಿನೆಲ್ಲಿ ಅವರು ಆಗಸ್ಟ್ ೧೬, ೨೦೨೦ ರಂದು ಪೋಷ್ಟ್ ಮಾಡಿದ ಟ್ವೀಟ್ ಅನ್ನು ಲಾಜಿಕಲಿ ಫ್ಯಾಕ್ಟ್ಸ್ ಕಂಡುಕೊಂಡಿದೆ.
“ಈ ವೀಡಿಯೋದಲ್ಲಿ ಬುರ್ಖಾ ಧರಿಸಿದ ವ್ಯಕ್ತಿ ತೆಲಂಗಾಣದಿಂದ ಆಂಧ್ರಪ್ರದೇಶಕ್ಕೆ ರಾಜ್ಯದಾದ್ಯಂತ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ. ತಪ್ಪು ಮಾಹಿತಿ ಹರಡುವುದನ್ನು ನಿಲ್ಲಿಸಿ" ಅವರು ಬರೆದಿದ್ದಾರೆ.
ಹೆಚ್ಚಿನ ಸಂಶೋಧನೆಯು ಈ ವೀಡಿಯೋ ೨೦೨೦ ರಿಂದ ಹಲವಾರು ಸಂಬಂಧವಿಲ್ಲದ ನಿರೂಪಣೆಗಳೊಂದಿಗೆ ಚಲಾವಣೆಯಲ್ಲಿದೆ ಎಂದು ನಮಗೆ ತೋರುತ್ತದೆ, ಅವುಗಳಲ್ಲಿ ಒಂದು ಅದನ್ನು ೨೦೨೨ ರಲ್ಲಿ ಕರ್ನಾಟಕದಲ್ಲಿ ಹಿಜಾಬ್ ವಿವಾದಕ್ಕೆ ಲಿಂಕ್ ಮಾಡಿದೆ.
೨೦೨೦ ರಲ್ಲಿ ಆಂಧ್ರಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಬೆಂಗಳೂರು ನಗರ ಪೊಲೀಸರು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಫ್ಯಾಕ್ಟ್ ಚೆಕ್ ಅನ್ನು ಪ್ರಕಟಿಸಿದ್ದಾರೆ.
ತೀರ್ಪು
ಆಂಧ್ರಪ್ರದೇಶದಲ್ಲಿ ಮದ್ಯವನ್ನು ಕಳ್ಳಸಾಗಣೆ ಮಾಡುತ್ತಿದ್ದ ಬುರ್ಖಾಧಾರಿ ಪುರುಷರನ್ನು ಪೊಲೀಸರು ಬಂಧಿಸಿದ ಹಳೆಯ ವೀಡಿಯೋವನ್ನು ಹಿಂದೂ ಪುರುಷರು ಮುಸ್ಲಿಂ ಮಹಿಳೆಯರಂತೆ ಯಾಮಾರಿಸಿ ಕರ್ನಾಟಕದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡುತ್ತಿದ್ದಾರೆ ಎಂದು ತಪ್ಪಾಗಿ ಹೇಳಲಾಗಿದೆ. ಆದ್ದರಿಂದ, ನಾವು ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.