ಮುಖಪುಟ ತೆಲಂಗಾಣದ ಕಾಂಗ್ರೆಸ್ ಸಮಾರಂಭದಲ್ಲಿ ಕೆಸಿಆರ್ ಪರ ಘೋಷಣೆಗಳನ್ನು ತೋರಿಸುವ ವೀಡಿಯೋ ಎಡಿಟ್ ಮಾಡಲಾಗಿದೆ

ತೆಲಂಗಾಣದ ಕಾಂಗ್ರೆಸ್ ಸಮಾರಂಭದಲ್ಲಿ ಕೆಸಿಆರ್ ಪರ ಘೋಷಣೆಗಳನ್ನು ತೋರಿಸುವ ವೀಡಿಯೋ ಎಡಿಟ್ ಮಾಡಲಾಗಿದೆ

ಮೂಲಕ: ರೋಹಿತ್ ಗುಟ್ಟಾ

ನವೆಂಬರ್ 6 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ತೆಲಂಗಾಣದ ಕಾಂಗ್ರೆಸ್ ಸಮಾರಂಭದಲ್ಲಿ ಕೆಸಿಆರ್ ಪರ ಘೋಷಣೆಗಳನ್ನು ತೋರಿಸುವ ವೀಡಿಯೋ ಎಡಿಟ್ ಮಾಡಲಾಗಿದೆ ಸಾಮಾಜಿಕ ಮಾಧ್ಯಮದಲ್ಲಿ ಕಂಡುಬಂದ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ತೆಲಂಗಾಣ ಕಾಂಗ್ರೆಸ್ ಸಂಸದ ರೇವಂತ್ ರೆಡ್ಡಿ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ ವೀಡಿಯೋವಿಗೆ ಘೋಷಣೆಗಳನ್ನು ಡಿಜಿಟಲ್ ಆಗಿ ಸೇರಿಸಲಾಗಿದೆ.

ಇಲ್ಲಿನ ಹೇಳಿಕೆಯೇನು?

ದಕ್ಷಿಣ ಭಾರತದ ರಾಜ್ಯವಾದ ತೆಲಂಗಾಣದಲ್ಲಿ ಭಾರತ್ ರಾಷ್ಟ್ರ ಸಮಿತಿ (BRS) ಅಧಿಕಾರದಲ್ಲಿದೆ ಮತ್ತು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (INC) ವಿರೋಧ ಪಕ್ಷದಲ್ಲಿದ್ದು, ರಾಜ್ಯದಲ್ಲಿ ನವೆಂಬರ್ ೩೦ ರಂದು ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಚುನಾವಣಾ ಪ್ರಚಾರಗಳು ಬಿಸಿಯಾಗುತ್ತಿದ್ದಂತೆ, ಪ್ರಮುಖವಾದ ರಾಜಕಾರಣಿಗಳ ಬಗ್ಗೆ ತಪ್ಪು ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಅವ್ಯಾಹತವಾಗಿ ಹರಿದಾಡುತ್ತಿದ್ದಾರೆ.

ತೆಲಂಗಾಣದಲ್ಲಿ ಕಾಂಗ್ರೆಸ್ ನಡೆಸಿದ ಚುನಾವಣಾ ಸಭೆಯಲ್ಲಿ ಈಗಿನ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಪರವಾಗಿ ಘೋಷಣೆಗಳನ್ನು ಕೂಗಲಾಗಿದೆ ಎಂದು ಹೇಳುವ ವೀಡಿಯೋ ಕ್ಲಿಪ್ ಅನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಳ್ಳಲಾಗಿದೆ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ಮತ್ತು ಸಂಸತ್ ಸದಸ್ಯ (ಎಂಪಿ) ರೇವಂತ್ ರೆಡ್ಡಿ ಅವರು ತಮ್ಮ ಭಾಷಣವನ್ನು ಪ್ರಾರಂಭಿಸುತ್ತಿದ್ದಂತೆಯೇ ರ‍್ಯಾಲಿಯಲ್ಲಿ ನೆರೆದಿದ್ದ ಪ್ರೇಕ್ಷಕರು ‘ಜೈ ಕೆಸಿಆರ್’ ಎಂದು ಕೂಗುತ್ತಿರುವುದನ್ನು ೩೨ ಸೆಕೆಂಡುಗಳ ವೀಡಿಯೋ ಕ್ಲಿಪ್ ತೋರಿಸುತ್ತದೆ. ವೀಡಿಯೋವನ್ನು ಹಂಚಿಕೊಳ್ಳುವ ಪೋಷ್ಟ್ ಗಾಲ ಆರ್ಕೈವ್‌ಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು. ವೀಡಿಯೋದಲ್ಲಿ ತೆಲುಗಿನಲ್ಲಿ ಬರೆಯಲಾದ ಪಠ್ಯವು, “ಕಾಂಗ್ರೆಸ್ ಪಾಲಮುರು ಸಭೆಯು ಕೆಸಿಆರ್ ಪರ ಘೋಷಣೆಗಳಿಂದ ನಲುಗಿತು (ಕನ್ನಡಕ್ಕೆ ಅನುವಾದಿಸಲಾಗಿದೆ)” ಎಂದು ಹೇಳುತ್ತದೆ. ಪಾಲಮುರು ಅಥವಾ (ಅವಿಭಜಿತ) ಮಹಬೂಬ್‌ನಗರ ತೆಲಂಗಾಣದ ಒಂದು ಜಿಲ್ಲೆ.

ಸಾಮಾಜಿಕ ಮಾಧ್ಯಮದಲ್ಲಿನ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು (ಮೂಲ: ಫೇಸ್‌ಬುಕ್/ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಕ್ಲಿಪ್ ಅನ್ನು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್ ಮತ್ತು ಯೂಟ್ಯೂಬ್ ನಲ್ಲಿ ಹಂಚಿಕೊಳ್ಳಲಾಗಿದೆ. ಅಂತಹ ಪೋಷ್ಟ್ ಗಳ ಆರ್ಕೈವ್‌ಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಆದರೆ, ಇದು ಎಡಿಟ್ ಮಾಡಿದ ವೀಡಿಯೋ ಕ್ಲಿಪ್ ಆಗಿದ್ದು, ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಕೆಸಿಆರ್ ಪರ ಘೋಷಣೆಗಳು ಕೇಳಿಸಿಕೊಂಡಿಲ್ಲ.

ನಾವು ಕಂಡುಹಿಡಿದುದ್ದೇನು?

ವೀಡಿಯೋದ ಒಳಗೆ ಕಂಡುಬಂದ ಪಠ್ಯವನ್ನು ಬಳಸಿಕೊಂಡು, ನಾವು ಇತ್ತೀಚೆಗೆ ಪಾಲಮೂರಿನಲ್ಲಿ ನಡೆದ ಕಾಂಗ್ರೆಸ್ ಸಾರ್ವಜನಿಕ ಸಭೆಗಳ ಬಗ್ಗೆ ಪರಿಶೀಲಿಸಿದ್ದೇವೆ. ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಕೊಲ್ಲಾಪುರದಲ್ಲಿ ಅಕ್ಟೋಬರ್ ೩೧ ರಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರೊಂದಿಗೆ ಕಾಂಗ್ರೆಸ್ ಸಾರ್ವಜನಿಕ ಸಭೆಯನ್ನು ಆಯೋಜಿಸಿತ್ತು ಎಂದು ನಾವು ಕಂಡುಕೊಂಡಿದ್ದೇವೆ. ಪಾಲಮುರು ಪ್ರದೇಶ ಎಂದೂ ಕರೆಯಲ್ಪಡುವ ಮಹಬೂಬ್‌ನಗರವನ್ನು ಒಳಗೊಂಡಿರುವ ಅನೇಕ ಜಿಲ್ಲೆಗಳಲ್ಲಿ ನಾಗರ್‌ಕರ್ನೂಲ್ ಒಂದಾಗಿದೆ.

TV9 ತೆಲುಗು ಮತ್ತು ETV ತೆಲಂಗಾಣ ಸೇರಿದಂತೆ ಹಲವಾರು ಸುದ್ದಿ ವಾಹಿನಿಗಳು ಈ ಈವೆಂಟ್‌ನ ಲೈವ್‌ಸ್ಟ್ರೀಮ್ ಅನ್ನು ತಮ್ಮ ಯೂಟ್ಯೂಬ್ ಚಾನೆಲ್‌ಗಳಲ್ಲಿ ಅಪ್‌ಲೋಡ್ ಮಾಡಿವೆ.

ಈಗ ವೈರಲ್ ಆಗಿರುವ ಕ್ಲಿಪ್ ಅನ್ನು TV9 ಲೈವ್‌ಸ್ಟ್ರೀಮ್‌ನಲ್ಲಿ ೩೦:೪೦ -೩೧:೦೩ ಟೈಮ್ ಸ್ಟ್ಯಾಂಪ್‌ಗಳ ನಡುವೆ ಸೆರೆಹಿಡಿಯಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಹಾಗೆಯೇ, ಅದೇ ದೃಶ್ಯವು ETV ಲೈವ್‌ಸ್ಟ್ರೀಮ್‌ನಲ್ಲಿ ೧೫:೦೦-೧೫:೩೩ ಸಮಯದ ಟೈಮ್ ಸ್ಟ್ಯಾಂಪ್‌ಗಳ ನಡುವೆ ನೋಡಬಹುದು. ಎರಡೂ ಲೈವ್‌ಸ್ಟ್ರೀಮ್‌ಗಳಲ್ಲಿ ಯಾವುದೇ ಕೆಸಿಆರ್ ಪರ ಘೋಷಣೆಗಳು ಕೇಳಿಸಿಕೊಂಡಿಲ್ಲ ಎಂದು ನಾವು ಗಮನಿಸಿದ್ದೇವೆ; ಸಭೆಗೆ ಬಂಡ ಜನರು ಒಂದೇ ಸಮನೆ ಕಿರುಚುವುದನ್ನು ಮಾತ್ರ ನಾವು ಕೇಳಬಹುದಿತ್ತು.

ಪ್ರಶ್ನಾರ್ಹ ಘಟನೆಯನ್ನು ಸೆರೆಹಿಡಿಯುವ ಮೂಲ ವೀಡಿಯೋಗಳಲ್ಲಿ ಯಾವುದೇ ನಿರ್ದಿಷ್ಟ ಘೋಷಣೆಗಳು ಕೇಳಿಸುವುದಿಲ್ಲವಾದ್ದರಿಂದ, ವೈರಲ್ ವೀಡಿಯೋದೊಂದಿಗೆ ಕೆಸಿಆರ್ ಪರ ಘೋಷಣೆಗಳನ್ನು ಎಡಿಟ್ ಮಾಡಿ ಸೇರಿಸಲಾಗಿದೆ ಎಂದು ಸ್ಪಷ್ಟವಾಗಿದೆ. 

ತೀರ್ಪು 

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಪರ ಘೋಷಣೆಗಳನ್ನು ರಾಜ್ಯದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಾರ್ವಜನಿಕ ಸಭೆಯ ವೀಡಿಯೋದಲ್ಲಿ ಡಿಜಿಟಲ್ ಆಗಿ ಸೇರಿಸಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ಫೇಕ್ ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು:ವಿವೇಕ್.ಜೆ)

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ