ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ಸಿಪಿ ಗೆಲುವಿನ ಭವಿಷ್ಯ ನುಡಿದ ಆರ್‌ಎಸ್‌ಎಸ್? ಇಲ್ಲ, ವೈರಲ್ ಪತ್ರ ಫೇಕ್

ಮೂಲಕ: ರಾಜೇಶ್ವರಿ ಪರಸ
ಮೇ 31 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ಸಿಪಿ  ಗೆಲುವಿನ ಭವಿಷ್ಯ ನುಡಿದ ಆರ್‌ಎಸ್‌ಎಸ್? ಇಲ್ಲ, ವೈರಲ್ ಪತ್ರ ಫೇಕ್

ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ಸಿಪಿ ಗೆಲುವಿನ ಮುನ್ಸೂಚನೆ ನೀಡುವ 'ಆಂತರಿಕ ಸಮೀಕ್ಷೆ'ಯನ್ನು ಆರ್‌ಎಸ್‌ಎಸ್ ಬಿಡುಗಡೆ ಮಾಡಿದೆ ಎಂದು ಹೇಳಿಕೊಳ್ಳುವ ಸಾಮಾಜಿಕ ಮಾಧ್ಯಮ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ಆರ್‌ಎಸ್‌ಎಸ್ ಕ್ಷೇತ್ರದ ಪ್ರಚಾರ ಮುಖ್ಯಸ್ಥರೊಬ್ಬರು ಈ ಪತ್ರ ಫೇಕ್ ಎಂದು ಖಚಿತಪಡಿಸಿದ್ದಾರೆ. ಅಂತಹ ಯಾವುದೇ 'ಆಂತರಿಕ ಸಮೀಕ್ಷೆ' ಸಂಸ್ಥೆಯ ವೆಬ್‌ಸೈಟ್‌ನಲ್ಲಿ ನಮಗೆ ಕಂಡುಬಂದಿಲ್ಲ.

ಕ್ಲೈಮ್ ಐಡಿ 1a412f79

ಹೇಳಿಕೆ ಏನು?

ಸಾಮಾಜಿಕ ಮಾಧ್ಯಮ ಬಳಕೆದಾರರು ೨೦೨೪ ರ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ 'ಸಂಸ್ಥೆ ನಡೆಸಿದ ಆಂತರಿಕ ಸಮೀಕ್ಷೆ'ಯ ಆಧಾರದ ಮೇಲೆ ಪ್ರಸ್ತುತ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ಗೆಲುವನ್ನು ಊಹಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹೊರಡಿಸಿದ ಪತ್ರದ ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ.  

ಮೇ ೧೩, ೨೦೨೪ ರ ದಿನಾಂಕದ ಪತ್ರವು ವೈಎಸ್‌ಆರ್‌ಸಿಪಿ ಶೇಕಡಾ ೫೭.೧ ರಷ್ಟು ಮತಗಳೊಂದಿಗೆ ೧೫೯ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ತೋರಿಸುವ ಟೇಬಲ್ ಅನ್ನು ಒಳಗೊಂಡಿದೆ, ಆದರೆ ಅದರ ಪ್ರತಿಸ್ಪರ್ಧಿ ತೆಲುಗು ದೇಶಂ ಪಕ್ಷ (ಟಿಡಿಪಿ) ೧೫ ಸ್ಥಾನಗಳನ್ನು ಗೆಲ್ಲುತ್ತದೆ, ಶೇಕಡಾ ೩೬.೨ ರಷ್ಟು ಒಟ್ಟು ೧೭೫ ವಿಧಾನಸಭಾ ಸ್ಥಾನಗಳ ಪೈಕಿ ಮತ ಹಂಚಿಕೆ. ಮೇ ೧೩ ರಂದು ಆಂಧ್ರಪ್ರದೇಶ ರಾಜ್ಯ ಚುನಾವಣೆಗೆ ಮತ ಚಲಾಯಿಸಿದೆ.

ಏಪ್ರಿಲ್ ೨೫ ರಿಂದ ಮೇ ೫ ರವರೆಗೆ ನಡೆಸಲಾದ ಸಮೀಕ್ಷೆಯನ್ನು ಆಂಧ್ರಪ್ರದೇಶದ ಆರ್‌ಎಸ್‌ಎಸ್ ಕಾರ್ಯಕರ್ತರು ಮತ್ತು ಸ್ವಯಂಸೇವಕರೊಂದಿಗೆ ಚರ್ಚಿಸಿದ ನಂತರ ಬಿಡುಗಡೆ ಮಾಡಲಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಹೆಚ್ಚಿನ ಶೇಕಡಾವಾರು ಮಹಿಳಾ ಮತದಾರರು ಮತ್ತು ಕಲ್ಯಾಣ ಯೋಜನೆಗಳ ಅನುಷ್ಠಾನ ಸೇರಿದಂತೆ ವೈಎಸ್‌ಆರ್‌ಸಿಪಿ ಪಕ್ಷಕ್ಕಾಗಿ ಕೆಲಸ ಮಾಡಿದ ಕೆಲವು ಅಂಶಗಳನ್ನು ಇದು ಪಟ್ಟಿ ಮಾಡಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಸೈದ್ಧಾಂತಿಕ ಪೋಷಕರಾದ ಆರ್‌ಎಸ್‌ಎಸ್‌ನ ತೆಲಂಗಾಣ ಪ್ರಾಂತ್ಯದ ಅಧ್ಯಕ್ಷ ಶ್ರೀ ಬಾರ್ಲಾ ಸುಂದರ್ ರೆಡ್ಡಿ ಅವರು ಪತ್ರಕ್ಕೆ ಸಹಿ ಹಾಕಿದ್ದಾರೆ.

ಬಳಕೆದಾರರೊಬ್ಬರು ಈ ಉದ್ದೇಶಿತ ಆರ್‌ಎಸ್‌ಎಸ್ ಪತ್ರವನ್ನುಈ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: "ಮೊದಲ ಬಾರಿಗೆ, ಭಾರತೀಯ ಜನತಾ ಪಕ್ಷದ ಆತ್ಮ ಆರ್‌ಎಸ್‌ಎಸ್ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯ ನಿರ್ಗಮನ ಸಮೀಕ್ಷೆಯೊಂದಿಗೆ ಹೊರಬಂದಿದೆ ಮತ್ತು ಅದನ್ನು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದೆ." ಬಿಜೆಪಿ ಮತ್ತು ಟಿಡಿಪಿ ರಾಜ್ಯ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ವಿರುದ್ಧ ಜನಸೇನಾ ಪಕ್ಷದ ಜೊತೆಗೂಡಿ ಸ್ಪರ್ಧಿಸಿದ್ದವು.

ಆನ್‌ಲೈನ್‌ನಲ್ಲಿ ಪ್ರಸಾರವಾಗುವ ಹೇಳಿಕೆಯ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ವೈರಲ್ ಆಗಿರುವ ಪತ್ರ ಫೇಕ್ ಆಗಿದೆ.

ವಾಸ್ತವಾಂಶಗಳೇನು?

ನಾವು ಆರ್‌ಎಸ್‌ಎಸ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋದೆವು ಆದರೆ ಆಂಧ್ರಪ್ರದೇಶ ಚುನಾವಣೆಯ ಕುರಿತು ಅಂತಹ ಯಾವುದೇ ಸಮೀಕ್ಷೆ ಅಥವಾ ಪತ್ರ ಕಂಡುಬಂದಿಲ್ಲ. ಅಂತಹ ಸಮೀಕ್ಷೆಯನ್ನು ಪ್ರಕಟಿಸುವ ಯಾವುದೇ ಪತ್ರಿಕಾ ಪ್ರಕಟಣೆಯೂ ಇಲ್ಲ.  ವೆಬ್‌ಸೈಟ್‌ನಲ್ಲಿ 'ಆಂಧ್ರ ಪ್ರದೇಶ' ಮತ್ತು 'ಅಸೆಂಬ್ಲಿ ಚುನಾವಣೆ' ಎಂಬ ಕೀವರ್ಡ್ ಹುಡುಕಾಟವು ಯಾವುದೇ ಫಲಿತಾಂಶವನ್ನು ನೀಡಲಿಲ್ಲ. ಆಂಧ್ರಪ್ರದೇಶ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಗೆಲ್ಲುವ ಬಗ್ಗೆ ಸಂಘಟನೆಯ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿಯೂ ಕೂಡ ಎನನ್ನೂ ಪ್ರಕಟಿಸಿಲ್ಲ. 

ಆರ್‌ಎಸ್‌ಎಸ್ ಇಂತಹ ಸಮೀಕ್ಷೆ ಅಥವಾ ಚುನಾವಣೆಗಳ ಬಗ್ಗೆ 'ಎಕ್ಸಿಟ್ ಪೋಲ್' ನಡೆಸಿದೆ ಎಂಬ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ನಮಗೆ ಕಂಡುಬಂದಿಲ್ಲ.

ಲಾಜಿಕಲಿ ಫ್ಯಾಕ್ಟ್ಸ್ ಪತ್ರದಲ್ಲಿ ಕೆಳಗೆ ಸಹಿ ಮಾಡಿರುವ ಬಾರ್ಲಾ ಸುಂದರ್ ರೆಡ್ಡಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತು ಮತ್ತು ಆಂಧ್ರಪ್ರದೇಶ, ತೆಲಂಗಾಣ ಹಾಗು ಕರ್ನಾಟಕದ ಕ್ಷೇತ್ರ ಪ್ರಚಾರ ಪ್ರಮುಖ್ (ಪ್ರದೇಶ ಪ್ರಚಾರ ಮುಖ್ಯಸ್ಥ) ಆಯುಷ್ ನಡಿಂಪಲ್ಲಿ ಅವರಿಗೆ ಮರುನಿರ್ದೇಶಿಸಲಾಗಿತ್ತು. “ಆರ್‌ಎಸ್‌ಎಸ್‌ ನಿಂದ ಅಂತಹ ಯಾವುದೇ ಪತ್ರವನ್ನು ಬಿಡುಗಡೆ ಮಾಡಿಲ್ಲ, ಸಹಿ ಸಹ ನಕಲಿ ಎಂದು ತೋರುತ್ತದೆ, ಈ ಬಗ್ಗೆ ಯಾವ ಕಾನೂನು ಕ್ರಮ ಕೈಗೊಳ್ಳಬಹುದು ಎಂಬುದನ್ನು ನಮ್ಮ ತಂಡ ಪರಿಶೀಲಿಸುತ್ತಿದೆ” ಎಂದು ನಡಿಂಪಲ್ಲಿ ಹೇಳಿದರು. ಆರ್‌ಎಸ್‌ಎಸ್‌ ಅಂತಹ ರಾಜಕೀಯ ಸಮೀಕ್ಷೆಗಳನ್ನು ನಡೆಸುವುದಿಲ್ಲ ಎಂದು ಅವರು ಹೇಳಿದರು.

೨೦೨೪ ರ ಚುನಾವಣೆಗೆ ಎಲ್ಲಾ ಏಳು ಹಂತಗಳಲ್ಲಿನ ಮತದಾನವು ಮುಗಿಯುವವರೆಗೆ ಚುನಾವಣಾ ಆಯೋಗವು ಸುದ್ದಿ ವಾಹಿನಿಗಳು ಮತ್ತು ರಾಜಕೀಯ ಏಜೆನ್ಸಿಗಳು ನಿರ್ಗಮನ ಸಮೀಕ್ಷೆಗಳನ್ನು (ಎಕ್ಸಿಟ್ ಪೋಲ್) ನಡೆಸುವುದನ್ನು ನಿಷೇಧಿಸಿದೆ ಎಂಬುದು ಗಮನಿಸಬೇಕಾದ ಸಂಗತಿ. ಚುನಾವಣಾ ಆಯೋಗವು ಎಕ್ಸಿಟ್ ಪೋಲ್ ಫಲಿತಾಂಶವನ್ನು ಜೂನ್ ೧ ರಂದು ಸಂಜೆ ೬.೩೦ ರ ನಂತರ ಮಾತ್ರ ಪ್ರಕಟಿಸಲು ಸೂಚಿಸಿದೆ

೨೦೨೨ ರಲ್ಲಿಯೂ ಇದೇ ರೀತಿಯ ಆರ್‌ಎಸ್‌ಎಸ್‌ನ 'ಆಂತರಿಕ ಸಮೀಕ್ಷಾ ವರದಿ'ಯನ್ನು ತೆಲಂಗಾಣದಲ್ಲಿ ಮುನುಗೋಡು ಉಪಚುನಾವಣೆಗೂ ಮುನ್ನ ಪ್ರಸಾರ ಮಾಡಲಾಗಿತ್ತು. ಆ ಸಮಯದಲ್ಲಿ ,ಆರ್‌ಎಸ್‌ಎಸ್‌ ಉದ್ದೇಶಿತ ಪತ್ರವನ್ನು ಫೇಕ್ ಎಂದು ತಳ್ಳಿಹಾಕಿತು. ಸ್ಪಷ್ಟೀಕರಣದ ಟಿಪ್ಪಣಿಯಲ್ಲಿ, ಆರ್‌ಎಸ್‌ಎಸ್‌ "ತಾವು ರಾಜಕೀಯದಲ್ಲಿ ಭಾಗವಹಿಸುವುದಿಲ್ಲ ಅಥವಾ ರಾಜಕೀಯ ಸಮೀಕ್ಷೆಗಳನ್ನು ನಡೆಸುವುದಿಲ್ಲ" ಎಂದು ಹೇಳಿದೆ.

ತೀರ್ಪು

ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ಗೆಲುವಿನ ಬಗ್ಗೆ ಆರ್‌ಎಸ್‌ಎಸ್‌ ಭವಿಷ್ಯ ನುಡಿದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಡಿಜಿಟಲಿ ರಚಿಸಿರುವ ಪತ್ರವನ್ನು ಹರಿಬಿಡಲಾಗಿದೆ. ಆದರೆ, ಆ ಪತ್ರ ಫೇಕ್ ಎಂದು ಆರ್‌ಎಸ್‌ಎಸ್‌ ಖಚಿತಪಡಿಸಿದೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here

ಈ ವಾಸ್ತವಾಂಶವನ್ನು ಪರಿಶೀಲಿಸಿ

English , తెలుగు , ಕನ್ನಡ

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0
ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ.