ಮೂಲಕ: ಸೋಹಮ್ ಶಾ
ಜನವರಿ 3 2024
ವೈರಲ್ ಸ್ಕ್ರೀನ್‌ಶಾಟ್ ಅನ್ನು ಆಲ್ಟೆರ್ ಮಾಡಲಾಗಿದೆ. ಕಪಿಲ್ ಸಿಬಲ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಅಂತಹ ಸಂದೇಶವನ್ನು ಪೋಷ್ಟ್ ಮಾಡಿಲ್ಲ.
ಹೇಳಿಕೆ ಏನು?
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್‌ನ ವಕೀಲರು ಹೇಳಿದ್ದಾರೆ ಎಂಬ ಹೇಳಿಕೆಯೊಂದಿಗೆ ಕಾಂಗ್ರೆಸ್‌ನ ಮಾಜಿ ನಾಯಕ ಕಪಿಲ್ ಸಿಬಲ್ ಅವರ ಎಕ್ಸ್ (ಹಿಂದಿನ ಟ್ವಿಟರ್) ಪೋಷ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ನಿವೃತ್ತ ಮೇಜರ್ ಜನರಲ್ ಹರ್ಷಾ ಕಾಕರ್ ಅವರು "ವಾಟ್ಸಾಪ್‌ನಿಂದ. ನನ್ನಿಂದ ಯಾವುದೇ ಕಾಮೆಂಟ್‌ಗಳಿಲ್ಲ" ಎಂಬ ಶೀರ್ಷಿಕೆಯೊಂದಿಗೆ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಪೋಷ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು.
ಕಪಿಲ್ ಸಿಬಲ್ ಅವರು ಹಂಚಿಕೊಂಡಿರುವ ಉದ್ದೇಶಿತ ಪೋಷ್ಟ್ ನ ಸ್ಕ್ರೀನ್‌ಶಾಟ್ ಅನ್ನು ತೋರಿಸುವ ಪೋಷ್ಟ್. (ಮೂಲ: ಎಕ್ಸ್ /@kakar_harsha/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ಈ ಸ್ಕ್ರೀನ್‌ಶಾಟ್ ಅನ್ನು ಮ್ಯಾನಿಪುಲೇಟೆಡ್ ಮಾಡಲಾಗಿದೆಹೇ ಹೊರತು ಸಿಬಲ್ ಅವರ ಪೋಷ್ಟ್ ಅಲ್ಲ ಎಂದು ನಾವು ಕಂಡುಕೊಂಡಿದ್ದೇವೆ.
ಸತ್ಯ ಏನು?
ಆಪಾದಿತ ಪೋಷ್ಟ್‌ನಲ್ಲಿರುವ ಪಠ್ಯದ ಫಾಂಟ್ ಗಾತ್ರವು ಚಿತ್ರದಲ್ಲಿನ ಖಾತೆಯ ಹೆಸರು, ದಿನಾಂಕ ಮತ್ತು ಸಮಯದಂತಹ ಇತರ ಅಂಶಗಳಿಗಿಂತ ಚಿಕ್ಕದಾಗಿದೆ ಎಂದು ನಾವು ಗಮನಿಸಿದ್ದೇವೆ. ಹೆಚ್ಚುವರಿಯಾಗಿ, ಫಾಂಟ್ ಗಾತ್ರವು ಪೋಷ್ಟ್‌ನ ಮೊದಲ ಮತ್ತು ಎರಡನೆಯ ಸಾಲುಗಳ ನಡುವೆ ಬದಲಾಗುತ್ತದೆ, ಇದು ನಿಜವಾದ ಎಕ್ಸ್ ಪೋಷ್ಟ್‌ಗೆ ಅಸಮಂಜಸವಾಗಿದೆ. ಇದಲ್ಲದೆ, ವೈರಲ್ ಸ್ಕ್ರೀನ್‌ಶಾಟ್‌ನಲ್ಲಿರುವ ಬಳಕೆದಾರಹೆಸರು ಸಿಬಲ್‌ನ ನಿಜವಾದ ಎಕ್ಸ್ ಖಾತೆಯ ಹ್ಯಾಂಡಲ್‌ಗಿಂತ ಭಿನ್ನವಾಗಿದೆ, ಏಕೆಂದರೆ ಸ್ಕ್ರೀನ್‌ಶಾಟ್‌ನಲ್ಲಿ 'K' ಮತ್ತು 'S' ಅಕ್ಷರಗಳು ದೊಡ್ಡಕ್ಷರವಾಗಿಲ್ಲ.
ವೈರಲ್ ಪೋಷ್ಟ್ ಮತ್ತು ಸಿಬಲ್ ಅವರ ನಿಜವಾದ ಎಕ್ಸ್ ಖಾತೆಯಿಂದ ಹಂಚಿಕೊಂಡ ಪೋಷ್ಟ್ ನ ಹೋಲಿಕೆ. (ಮೂಲ: ಸ್ಕ್ರೀನ್‌ಶಾಟ್/ಎಕ್ಸ್)
ನಾವು ಎಕ್ಸ್ ನಲ್ಲಿ ಕೀವರ್ಡ್ ಹುಡುಕಾಟವನ್ನು ಸಹ ನಡೆಸಿದ್ದೇವೆ ಮತ್ತು ಸಿಬಲ್ ಅಂತಹ ಪೋಷ್ಟ್ ಮಾಡಿದ ಯಾವುದೇ ಪುರಾವೆಗಳು ಕಂಡುಬಂದಿಲ್ಲ.
ಜುಲೈ ೨೯, ೨೦೨೦ ರಂದು ಸಿಬಲ್ ಅವರ ಏಕೈಕ ಎಕ್ಸ್ ಪೋಷ್ಟ್ ವಿಭಿನ್ನ ವಿಷಯಕ್ಕೆ ಸಂಬಂಧಿಸಿದೆ ಮತ್ತು ಫ್ಯಾಬ್ರಿಕೇಟೆಡ್ ಸ್ಕ್ರೀನ್‌ಶಾಟ್ ಸೂಚಿಸುವಂತೆ ೯:೦೫ a.m. ಕ್ಕೆ ೧೨:೦೫ ಕ್ಕೆ ಅಲ್ಲ.
ಹೆಚ್ಚುವರಿಯಾಗಿ, ಜುಲೈ ೨೯, ೨೦೨೦ ರಿಂದ ಸಿಬಲ್ ಅವರ ಎಕ್ಸ್ ಖಾತೆಯ ಯಾವುದೇ ದಾಖಲೆಗಳಿಲ್ಲ, ಮತ್ತು ಯಾವುದೇ ಪ್ರತಿಷ್ಠಿತ ಸುದ್ದಿ ಸಂಸ್ಥೆಗಳು ಸಿಬಲ್ ಅಂತಹ ಹೇಳಿಕೆಯನ್ನು ನೀಡಿರುವುದನ್ನು ವರದಿ ಮಾಡಿಲ್ಲ.
ಲಾಜಿಕಲಿ ಫ್ಯಾಕ್ಟ್ಸ್ ನೊಂದಿಗೆ ಮಾತನಾಡಿದ ಸಿಬಲ್, “ನಾನು ರಾಮಜನ್ಮಭೂಮಿ ಪ್ರಕರಣವನ್ನು ವಾದಿಸಲಿಲ್ಲ. ಇದನ್ನು ರಾಜೀವ್ ಧವನ್ ವಾದಿಸಿದ್ದರು. ೨೦೧೯ ರ ಚುನಾವಣೆಯ ನಂತರ ಅದನ್ನು ತೆಗೆದುಕೊಳ್ಳಬೇಕು ಎಂದು ಹೇಳಲು ನಾನು ನ್ಯಾಯಾಲಯಕ್ಕೆ ಹಾಜರಾಗಿದ್ದೇನೆ.
ಈ ಸ್ಕ್ರೀನ್‌ಶಾಟ್ ಅನ್ನು ಹಲವಾರು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ ಮತ್ತು ಅನೇಕ ಫ್ಯಾಕ್ಟ್ ಚೆಕ್ ಸಂಸ್ಥೆಗಳೂ ಸಹ ಇದನ್ನು ತಪ್ಪು ಎಂದು ಪರಿಗಣಿಸಿವೆ. ಜನವರಿ ೨೨, ೨೦೨೪ ರಂದು ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದ ಶಂಕುಸ್ಥಾಪನೆಯಿಂದಾಗಿ ಪೋಷ್ಟ್ ಮತ್ತೆ ಗಮನ ಸೆಳೆದಿದೆ.
ತೀರ್ಪು
ವೈರಲ್ ಸ್ಕ್ರೀನ್‌ಶಾಟ್ ಅನ್ನು ಮ್ಯಾನಿಪುಲೇಟೆಡ್ ಮಾಡಲಾಗಿದೆ ಕೂಡಿದೆ ಮತ್ತು ಕಪಿಲ್ ಸಿಬಲ್ ಎಂದಿಗೂ ಎಕ್ಸ್ ನಲ್ಲಿ ಅಂತಹ ಹೇಳಿಕೆಯನ್ನು ನೀಡಿಲ್ಲ. ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.
(ಅಪ್‌ಡೇಟ್: ಲಾಜಿಕಲಿ ಫ್ಯಾಕ್ಟ್ಸ್ ಗೆ ನೀಡಿರುವ ಕಬಿಲ್ ಸಿಬಲ್ ಅವರ ಕಾಮೆಂಟ್‌ನೊಂದಿಗೆ ಕಥೆಯನ್ನು ನವೀಕರಿಸಲಾಗಿದೆ.)
(ಅನುವಾದಿಸಿದವರು: ರಜಿನಿ ಕೆ.ಜಿ)
Read the english version here.