ಮುಖಪುಟ ಇಲ್ಲ, ಅಕಾಸ ಏರ್ ಫ್ಲೈಟ್ ಅಟೆಂಡೆಂಟ್ ಸಂಸ್ಕೃತದಲ್ಲಿ ಸುರಕ್ಷತಾ ಬ್ರೀಫಿಂಗ್ ಅನ್ನು ನೀಡಲಿಲ್ಲ

ಇಲ್ಲ, ಅಕಾಸ ಏರ್ ಫ್ಲೈಟ್ ಅಟೆಂಡೆಂಟ್ ಸಂಸ್ಕೃತದಲ್ಲಿ ಸುರಕ್ಷತಾ ಬ್ರೀಫಿಂಗ್ ಅನ್ನು ನೀಡಲಿಲ್ಲ

ಮೂಲಕ: ಸೋಹಮ್ ಶಾ

ಜೂನ್ 13 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಇಲ್ಲ, ಅಕಾಸ ಏರ್ ಫ್ಲೈಟ್ ಅಟೆಂಡೆಂಟ್ ಸಂಸ್ಕೃತದಲ್ಲಿ ಸುರಕ್ಷತಾ ಬ್ರೀಫಿಂಗ್ ಅನ್ನು ನೀಡಲಿಲ್ಲ ಅಕಾಸ ಏರ್ ವಿಮಾನದಲ್ಲಿ ಪ್ರಕಟಣೆಯನ್ನು ಸಂಸ್ಕೃತದಲ್ಲಿ ನೀಡಲಾಗಿದೆ ಎಂದು ಹೇಳಿಕೆಯನ್ನು ಹಂಚಿಕೊಂಡ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್ . (ಮೂಲ: ಎಕ್ಸ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಅಕಾಸ ಏರ್ ಫ್ಲೈಟ್‌ನಲ್ಲಿ ಸುರಕ್ಷತಾ ಬ್ರೀಫಿಂಗ್ ಅನ್ನು ತೋರಿಸುವ ವೀಡಿಯೋಗೆ ಸಂಸ್ಕೃತದ ಆಡಿಯೋ ಅನ್ನು ಡಬ್ ಮಾಡಲಾಗಿದೆ. ವಿಮಾನ ಸಂಸ್ಥೆಯೂ ಸಹ ಸ್ಪಷ್ಟನೆ ನೀಡಿದೆ.

ಹೇಳಿಕೆ ಏನು?

ಸಾಮಾಜಿಕ ಮಾಧ್ಯಮಗಳಾದ ಎಕ್ಸ್ (ಹಿಂದೆ ಟ್ವಿಟರ್) ಮತ್ತು ಫೇಸ್‌ಬುಕ್‌ನಲ್ಲಿ ಹಲವಾರು ಪೋಷ್ಟ್ ಗಳು ಅಕಾಸ ಏರ್ ವಿಮಾನದಲ್ಲಿನ ಸುರಕ್ಷತೆಯ ಪ್ರಕಟಣೆಯನ್ನು ಭಾರತದ ಶಾಸ್ತ್ರೀಯ ಭಾಷೆಯಾದ ಸಂಸ್ಕೃತದಲ್ಲಿ ಮಾಡಲಾಗಿದೆ ಎಂದು ಹೇಳಿಕೊಂಡು  ವೀಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಈ ಪೋಷ್ಟ್ ಗಳ ಶೀರ್ಷಿಕೆ ಹೀಗಿದೆ "ಸಂಸ್ಕೃತದಲ್ಲಿ ವಿಮಾನ ಘೋಷಣೆ..!!" ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಎಕ್ಸ್ ಮತ್ತು ಫೇಸ್‌ಬುಕ್‌ ಪೋಷ್ಟ್ ಗಳ ಸ್ಕ್ರೀನ್‌ಶಾಟ್.
(ಮೂಲ: ಎಕ್ಸ್/ ಫೇಸ್‌ಬುಕ್/ಸ್ಕ್ರೀನ್‌ಶಾಟ್/ ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಲೈಟ್ ಅಟೆಂಡೆಂಟ್ ಅಕಾಸ ಏರ್ ವಿಮಾನದಲ್ಲಿ ಸುರಕ್ಷತಾ ಬ್ರೀಫಿಂಗ್ ನೀಡುತ್ತಿರುವುದನ್ನು ಚಿತ್ರಿಸುವ ವೀಡಿಯೋ, ಪ್ರಕಟಣೆಗಾಗಿ ಒಳಸೇರಿಸಿದ ಉಪಶೀರ್ಷಿಕೆಗಳನ್ನು ಒಳಗೊಂಡಿದೆ, ವಿಮಾನವನ್ನು ಅಕಾಸ ಏರ್ 059A ಎಂದು ಲೇಬಲ್ ಮಾಡಲಾಗಿದೆ. ಆದರೆ, ಆಡಿಯೋವನ್ನು ಡಬ್ ಮಾಡಲಾಗಿದೆ ಮತ್ತು ಸಂಸ್ಕೃತದಲ್ಲಿ ಅಂತಹ ಯಾವುದೇ ಪ್ರಕಟಣೆಯನ್ನು ಯಾವುದೇ ಅಕಾಸ ಏರ್ ಫ್ಲೈಟ್‌ನಲ್ಲಿ ಮಾಡಲಾಗಿಲ್ಲ.

ಸತ್ಯ ಏನು?

ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ವೀಡಿಯೋವನ್ನು ಮೂಲತಃ ಜೂನ್ ೬, ೨೦೨೪ ರಂದು 'SanskritSparrow' (ಇಲ್ಲಿ ಆರ್ಕೈವ್ ಮಾಡಲಾಗಿದೆ) ಎಂಬ ಪರಿಶೀಲಿಸಿದ ಇನ್‌ಸ್ಟಾಗ್ರಾಮ್ ಪುಟದಿಂದ ಪೋಷ್ಟ್ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಜೂನ್ ೮ ರಂದು ಕೊನೆಯದಾಗಿ ಎಡಿಟ್ ಮಾಡಲಾದ ವೀಡಿಯೋದೊಂದಿಗೆ ಹಂಚಿಕೊಂಡ ಶೀರ್ಷಿಕೆ ಹೀಗಿದೆ: “ದಿ ಮೇಲಿನ ವಿಷಯವು ಡಬ್ ಮಾಡಲಾದ ಧ್ವನಿ ಆಗಿದೆ. ಇದನ್ನು ಯಾವುದೇ ವಿಮಾನದಲ್ಲಿ ಘೋಷಿಸಲಾಗಿಲ್ಲ. @akasaair ನಿರ್ವಹಣೆ (sic) ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಪುಟವನ್ನು ಸಮಷ್ಟಿ ಗುಬ್ಬಿ ಅವರು ನಡೆಸುತ್ತಿದ್ದಾರೆ, ಅವರು ಸಂಸ್ಕೃತದಲ್ಲಿ ವಿಷಯ ಮತ್ತು ಅನುವಾದಗಳನ್ನು ಪೋಷ್ಟ್ ಮಾಡುತ್ತಾರೆ."

ಲಾಜಿಕಲಿ ಫ್ಯಾಕ್ಟ್ಸ್ ಗುಬ್ಬಿಯವರನ್ನು ಇನ್‌ಸ್ಟಾಗ್ರಾಮ್ ನಲ್ಲಿ ಸಂಪರ್ಕಿಸಿತು. "ಇದು ನನ್ನ ಧ್ವನಿಯಿಂದ ನಾನು ಮಾಡಿದ ರೀಲ್" ಎಂದು ಅವರು ದೃಢಪಡಿಸಿದರು ಮತ್ತು ಅವರು ಸ್ವತಃ ವೀಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ ಎಂದು ಹೇಳಿದರು. ಪೋಷ್ಟ್ ನ ಮೂಲ ಶೀರ್ಷಿಕೆಯು ಹೀಗಿತ್ತು, "ನಿಮ್ಮ ನೆಚ್ಚಿನ ಪ್ರಕಟಣೆ ಯಾವುದು? ನನ್ನದು: ನಮ್ಮನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು." ಕಾಮೆಂಟ್‌ಗಳಲ್ಲಿ ಬಳಕೆದಾರರು ಇದು ನಿಜವಾದ ವಿಮಾನದ ಪ್ರಕಟಣೆ ಎಂದು ತಪ್ಪಾಗಿ ನಂಬಿದ ನಂತರ ಅವರು ಶೀರ್ಷಿಕೆಯನ್ನು ಮಾರ್ಪಡಿಸಿದ್ದಾರೆ.

ಎಕ್ಸ್ ನಲ್ಲಿ ಅಧಿಕೃತ ಅಕಾಸ ಏರ್ ಖಾತೆಯು ವೈರಲ್ ವೀಡಿಯೋವನ್ನು ಹಂಚಿಕೊಂಡ  ಪೋಷ್ಟ್ ನಲ್ಲಿ ಕಾಮೆಂಟ್ ಮಾಡಿರುವುದನ್ನು ನಾವು ಕಂಡುಕೊಂಡೆವು. ಮೂಲ ಪೋಷ್ಟ್ ಅನ್ನು ಡಿಲೀಟ್ ಮಾಡಲಾಗಿದ್ದರೂ, ಎಕ್ಸ್ ನಲ್ಲಿನ ಏರ್‌ಲೈನ್‌ನಿಂದ ಸ್ಪಷ್ಟೀಕರಣವು ಹೀಗೆ ಹೇಳುತ್ತದೆ: “ನಮ್ಮ ವಿಮಾನಯಾನ ಪ್ರಕಟಣೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ವಿತರಿಸಲಾಗಿದೆ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ.ವೀಡಿಯೋದಲ್ಲಿನ ಪ್ರಕಟಣೆಯು ಅಧಿಕೃತವಾಗಿಲ್ಲ ಮತ್ತು ಅದನ್ನು ಹಂಚಿಕೊಳ್ಳಲಾದ ಡಬ್ಬಿಂಗ್  ವೀಡಿಯೋ ಎಂದು ತೋರುತ್ತಿದೆ." ಅಕಾಸ ಏರ್ ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯು SanskritSparrow ನ ರೀಲ್‌ನಲ್ಲಿ ಇದೇ ರೀತಿಯ ಕಾಮೆಂಟ್ ಅನ್ನು ಮಾಡಿದೆ.

ಇಂಡೋ-ಯುರೋಪಿಯನ್ ಭಾಷಾ ಕುಟುಂಬದ ಪ್ರಾಚೀನ ಭಾಷಾ ಭಾಗವಾದ ಸಂಸ್ಕೃತವನ್ನು ಭಾರತದಲ್ಲಿ ಸುಮಾರು ೨೫,೦೦೦ ಜನರು ಮಾತನಾಡುತ್ತಾರೆ.

೨೦೧೮ ರಲ್ಲಿ, ಇಂಡಿಯನ್ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​ಒಂದು ಸಲಹೆಯನ್ನು ನೀಡಿದ್ದು, ವಿಮಾನಯಾನ ಸಂಸ್ಥೆಗಳು ಸ್ಥಳೀಯ ಭಾಷೆಗಳನ್ನು ಬಳಸಿಕೊಂಡು ವಿಮಾನದಲ್ಲಿ ಪ್ರಕಟಣೆಗಳನ್ನು ಕಾರ್ಯಸಾಧ್ಯವಾದ ಮಟ್ಟಿಗೆ ಪರಿಗಣಿಸಬೇಕು ಎಂದು ಸಲಹೆ ನೀಡಿತು. ಆದರೆ, ಭಾರತದಲ್ಲಿ ಮಾತನಾಡುವ ಭಾಷೆಗಳ ಸಂಖ್ಯೆಯಿಂದಾಗಿ ಇದು ಪ್ರಾಯೋಗಿಕವಾಗಿಲ್ಲ ಎಂದು ವಿಮಾನಯಾನ ಅಧಿಕಾರಿಗಳು ಹೇಳಿದ್ದಾರೆ.

ತೀರ್ಪು

ಅಕಾಸ ಏರ್‌ಲೈನ್ಸ್ ಸಂಸ್ಕೃತದಲ್ಲಿ ವಿಮಾನದಲ್ಲಿ ಘೋಷಣೆ ಮಾಡಿದೆ ಎಂಬ ಹೇಳಿಕೆ ತಪ್ಪು. ವೈರಲ್ ವೀಡಿಯೋವನ್ನು ಕಂಟೆಂಟ್ ಕ್ರಿಯೇಟರ್ ಒಬ್ಬರು ರಚಿಸಿದ್ದಾರೆ ಮತ್ತು ಅದನ್ನು ಸಂಸ್ಕೃತ ಆಡಿಯೋದೊಂದಿಗೆ ಡಬ್ ಮಾಡಿದ್ದಾರೆ. ನಂತರ ಅದನ್ನು  ಸಂದರ್ಭರಹಿತ  ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಯಿತು.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ) 

Read this fact-check in English here.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ