ಮುಖಪುಟ ಹೊಸ ಅಂಬೇಡ್ಕರ್ ಪ್ರತಿಮೆಯನ್ನು ಕೆಡವುವುದಾಗಿ ಆಂಧ್ರದ ರಾಜಕಾರಣಿ ಪ್ರತಿಜ್ಞೆ ಮಾಡಿರುವ ಸುದ್ದಿ ತುಣುಕು ಫೇಕ್

ಹೊಸ ಅಂಬೇಡ್ಕರ್ ಪ್ರತಿಮೆಯನ್ನು ಕೆಡವುವುದಾಗಿ ಆಂಧ್ರದ ರಾಜಕಾರಣಿ ಪ್ರತಿಜ್ಞೆ ಮಾಡಿರುವ ಸುದ್ದಿ ತುಣುಕು ಫೇಕ್

ಮೂಲಕ: ರೋಹಿತ್ ಗುಟ್ಟಾ

ಜನವರಿ 30 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಹೊಸ ಅಂಬೇಡ್ಕರ್ ಪ್ರತಿಮೆಯನ್ನು ಕೆಡವುವುದಾಗಿ ಆಂಧ್ರದ ರಾಜಕಾರಣಿ ಪ್ರತಿಜ್ಞೆ ಮಾಡಿರುವ ಸುದ್ದಿ ತುಣುಕು ಫೇಕ್ ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಅಂಬೇಡ್ಕರ್ ಪ್ರತಿಮೆಯನ್ನು ಕೆಡವುವುದಾಗಿ ಟಿಡಿಪಿಯ ನಾಯಕರೊಬ್ಬರು ಪ್ರತಿಜ್ಞೆ ಮಾಡಿದ್ದಾರೆ ಎಂದು ಹೇಳುವ ಸಾಮಾಜಿಕ ಮಾಧ್ಯಮ ಪೋಷ್ಟ್ ನ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ಟಿಡಿಪಿ ನಾಯಕ ಡಿ ನರೇಂದ್ರ ಅಂತಹ ಯಾವುದೇ ಹೇಳಿಕೆ ನೀಡಿಲ್ಲ. ವೇ2ನ್ಯೂಸ್, ವೈರಲ್ ಸ್ಕ್ರೀನ್‌ಶಾಟ್‌ ಫೇಕ್ ಎಂದು ಸ್ಪಷ್ಟಪಡಿಸಿದೆ.

ನಿರೂಪಣೆ ಏನು?

ಹೈದರಾಬಾದ್ ಮೂಲದ ಮೊಬೈಲ್ ಸುದ್ದಿ ಅಪ್ಲಿಕೇಶನ್ ವೇ2ನ್ಯೂಸ್ ನಿಂದ ಸುದ್ದಿ ವರದಿಯ ಉದ್ದೇಶಿತ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ತೆಲುಗು ದೇಶಂ ಪಕ್ಷದ (ಟಿಡಿಪಿ) ಹಿರಿಯ ನಾಯಕ ಧೂಳಿಪಳ್ಳ ನರೇಂದ್ರ ಕುಮಾರ್ ಅವರು ವಿಜಯವಾಡದಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಅಂಬೇಡ್ಕರ್ ಪ್ರತಿಮೆಯನ್ನು ಕೆಡವಿ ಬೇರೆಡೆ ಪುನರ್ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ, ಶೀಘ್ರದಲ್ಲೇ ಅವರ ಪಕ್ಷ ಅಧಿಕಾರಕ್ಕೆ ಬಂದ ನಂತರ. ಸ್ಕ್ರೀನ್‌ಶಾಟ್‌ನಲ್ಲಿರುವ ಲೇಖನದ ಶೀರ್ಷಿಕೆಯು ತೆಲುಗಿನಲ್ಲಿ, “ನಾವು ಅಂಬೇಡ್ಕರ್ ಪ್ರತಿಮೆಯನ್ನು ಕೆಡವುತ್ತೇವೆ” ಎಂದು ಬರೆಯಲಾಗಿದೆ (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಆರ್ಕೈವ್ಅನ್ನು ಕಾಣಬಹುದು).

ಜನವರಿ ೧೯, ೨೦೨೩ ರಂದು ವಿಜಯವಾಡದಲ್ಲಿ ಹೊಸ ೨೦೬ ಅಡಿ ಎತ್ತರದ ಬಿಆರ್ ಅಂಬೇಡ್ಕರ್ ಪ್ರತಿಮೆಯನ್ನು ಉದ್ಘಾಟಿಸಿದ ನಂತರ ಈ ಪ್ರತಿಮೆ ಹೊರಹೊಮ್ಮಿತು. ಇದು ಇಲ್ಲಿಯವರೆಗಿನ ಅಂಬೇಡ್ಕರ್ ಅವರ ಅತ್ಯಂತ ಎತ್ತರದ ಪ್ರತಿಮೆ ಎಂದು ತಿಳಿದುಬಂದಿದೆ.

ಸಾಮಾಜಿಕ ಮಾಧ್ಯಮ ಪೋಷ್ಟ್ ನ ಸ್ಕ್ರೀನ್‌ಶಾಟ್‌ಗಳು (ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ವೇ2ನ್ಯೂಸ್ ಈ ವರದಿಯನ್ನು ಪ್ರಕಟಿಸಿಲ್ಲ ಅಥವಾ ಟಿಡಿಪಿ ನಾಯಕ ಅಂತಹ ಹೇಳಿಕೆಯನ್ನು ನೀಡಿಲ್ಲ.

ನಾವು ಕಂಡುಕೊಂಡಿದ್ದೇನು?

ಕಂಪನಿಯ ಲೋಗೋ ಕಾಣೆಯಾಗಿದ್ದರೂ, ಉದ್ದೇಶಿತ ಲೇಖನದ ಸ್ಕ್ರೀನ್‌ಶಾಟ್‌ನಲ್ಲಿ ಕಂಡುಬರುವ ಟೆಂಪ್ಲೇಟ್ ವೇ2ನ್ಯೂಸ್ ಆಗಿತ್ತು. ವೈರಲ್ ಸ್ಕ್ರೀನ್‌ಶಾಟ್‌ನಲ್ಲಿ ವಿವಿಧ ವ್ಯತ್ಯಾಸಗಳಿವೆ. ಸ್ಕ್ರೀನ್‌ಶಾಟ್‌ನಲ್ಲಿರುವ ಪಠ್ಯದ ಫಾಂಟ್ ವೇ2ನ್ಯೂಸ್ ತಮ್ಮ ವರದಿಗಳಲ್ಲಿ ಬಳಸುವುದ್ದಕ್ಕಿಂತ ಭಿನ್ನವಾಗಿದೆ. ವೇ2ನ್ಯೂಸ್ ಆಯಾ ಲೇಖನವನ್ನು ಚಿತ್ರದ ಕೆಳಗೆ ಲಿಂಕ್ ಮಾಡುತ್ತದೆ, ಆದರೆ ಉದ್ದೇಶಿತ ಸ್ಕ್ರೀನ್‌ಶಾಟ್‌ಗೆ ಅಂತಹ ಲಿಂಕ್ ಇಲ್ಲ. ಹೆಚ್ಚುವರಿಯಾಗಿ, ಈ ಆಪಾದಿತ ಕಾಮೆಂಟ್‌ಗಳನ್ನು ಉದ್ದೇಶಪೂರ್ವಕವಾಗಿ ಮಾಡಿದ ದಿನಾಂಕದ ಕುರಿತು ವರದಿಯು ಯಾವುದೇ ವಿವರಗಳನ್ನು ಹೊಂದಿಲ್ಲ.

ಮಾದರಿ ಲೇಖನಕ್ಕೆ ಹೋಲಿಸಿದಾಗ ಫೇಕ್ ಲೇಖನದಲ್ಲಿನ ವ್ಯತ್ಯಾಸಗಳು ಹೀಗಿವೆ. (ಮೂಲ: ಎಕ್ಸ್/ ವೇ2ನ್ಯೂಸ್ /ಸ್ಕ್ರೀನ್‌ಶಾಟ್‌)

ಹೆಚ್ಚುವರಿಯಾಗಿ, ೨೦೨೪ ರ ಜನವರಿ ೧೯ ರಂದು ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ವೇ2ನ್ಯೂಸ್ ಅವರು ಅಂತಹ ವರದಿಯನ್ನು ಪ್ರಕಟಿಸಿಲ್ಲ ಮತ್ತು ಅದು ಫೇಕ್ ಎಂದು ಸ್ಪಷ್ಟಪಡಿಸಿದರು."ಕೆಲವು ಕಿಡಿಗೇಡಿಗಳು ನಮ್ಮ ಲೋಗೋವನ್ನು ಬಳಸಿಕೊಂಡು #ವಾಟ್ಸಾಪ್‌ನಲ್ಲಿ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ ಮತ್ತು 'ಲಗತ್ತಿಸಲಾದ ಪೋಷ್ಟ್' ವೈರಲ್ ಆಗಿದೆ" ಎಂದು ಸಂಸ್ಥೆ ಹೇಳಿದೆ.

ಈ ಹೇಳಿಕೆ ಹೊರಹೊಮ್ಮಿದ ನಂತರ, ಟಿಡಿಪಿ ನಾಯಕ ಧೂಳಿಪಳ್ಳ ನರೇಂದ್ರ ಅವರು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ (ಎಸ್‌ಪಿ) ಜನವರಿ ೨೨, ೨೦೨೪ ರಂದು ದೂರು ಸಲ್ಲಿಸಿದರು. ಆಂಧ್ರಪ್ರದೇಶದ ಆಡಳಿತ ಪಕ್ಷವಾದ ವೈಎಸ್‌ಆರ್‌ಸಿಪಿ ಸದಸ್ಯರು ಅವರ ಬಗ್ಗೆ ತಪ್ಪು ಮಾಹಿತಿ, ಅವರು ಎಂದಿಗೂ ಮಾಡದ ಸುಳ್ಳು ಕಾಮೆಂಟ್‌ಗಳನ್ನು  ಹರಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. 

ತೀರ್ಪು 

ಪಕ್ಷ ಅಧಿಕಾರಕ್ಕೆ ಬಂದ ನಂತರ ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಅಂಬೇಡ್ಕರ್ ಪ್ರತಿಮೆಯನ್ನು ಕೆಡವುತ್ತೇವೆ ಎಂದು ತೆಲುಗು ದೇಶಂ ಪಕ್ಷದ ನಾಯಕರೊಬ್ಬರು ಹೇಳಿರುವುದಾಗಿ ಕಪೋಲಕಲ್ಪಿತ ಸುದ್ದಿಯ ತುಣುಕನ್ನು ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ